Lakshmi Baramma: ಸತ್ಯ ಹೇಳಲು ತಾನೇ ಬಂದ ಲಕ್ಷ್ಮೀ; ಕಾವೇರಿಗೆ ಕಾದಿದೆ ಬಿಗ್ ಶಾಕ್, ವೈಷ್ಣವ್‌ಗೆ ಇಂದೇ ತಿಳಿಯಲಿದೆ ಸತ್ಯ
ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂದಲದ ಗೂಡಾಗಿದೆ. ವೀಕ್ಷಕರು ದಿನಕ್ಕೊಂದೊಂದು ಕಥೆ ನೋಡಿ ಏನಾಗ್ತಾ ಇದೆ ಎಂದು ಕಂಡು ಹಿಡಿಯಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಾಣೆಯಾಗಿದ್ದಳು. ಅವಳು ಸತ್ತೇ ಹೋಗಿದ್ದಾಳೆ ಎಂದು ಕಾವೇರಿ ಅಂದುಕೊಂಡಿದ್ದಳು. ಆದರೆ ಈಗ ಲಕ್ಷ್ಮೀ ತಾನೇ ಸ್ವತಃ ಕೋರ್ಟ್‌ಗೆ ಬಂದಿದ್ದಾಳೆ. ಕಾವೇರಿಯನ್ನು ಕೀರ್ತಿಯ ಕೊಲೆ ಪ್ರಯತ್ನ ಮಾಡಿದ್ದಾಳೆ ಎಂದು ಅರೆಸ್ಟ್ ಮಾಡಲಾಗಿತ್ತು. ವೈಷ್ಣವ್‌ಗೆ ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು ಎಂಬ ಅನುಮಾನವೇ ಹೆಚ್ಚಾಗಿತ್ತು. ಹೀಗಿರುವಾಗ ತಾಯಿಯ ಬಗ್ಗೆ ಅನುಮಾನ ಪಡುವುದು ತಪ್ಪು ಎಂದು ಅವನು ಆರೀತಿ ಯೋಚನೆ ಕೂಡ ಮಾಡುತ್ತಿರಲಿಲ್ಲ. ಆದರೆ ಕಾವೇರಿ ವಿರುದ್ಧ ಬಂದ ಸಾಕ್ಷಿಗಳನ್ನು ನೋಡುತ್ತಿದ್ದರೆ ಅವನಿಗೆ ಅನುಮಾನಗಳು ಆರಂಭವಾಗಿತ್ತು.
ಇನ್ನು ಕೋರ್ಟ್‌ನಲ್ಲಿ ಲಕ್ಷ್ಮೀ ಸಾವಿನ ವಿಚಾರವಾಗಿ ಕೀರ್ತಿ ಆರೋಪಿ ಎಂದು ವಾದ ಮಂಡನೆ ಆಗುತ್ತಾ ಇತ್ತು. ಅದಕ್ಕೆ ಸರಿಯಾದ ಕಾರಣ ಕೂಡ ಇತ್ತು. ಯಾಕೆಂದರೆ ವೈಷ್ಣವ್ ಕೀರ್ತಿ ರೂಮಿಗೆ ಹೋದಾಗ ಅಲ್ಲಿ ರಾಣಿ ಬೊಂಬೆ ಇತ್ತು. ಆ ರಾಣಿ ಬೊಂಬೆ ಲಕ್ಷ್ಮೀಯದ್ದಾಗಿತ್ತು. ಆ ಬೊಂಬೆಯನ್ನು ಕೀರ್ತಿ ಇಟ್ಟುಕೊಂಡಿದ್ದಾಳೆ ಎಂದರೆ ಲಕ್ಷ್ಮೀ ಕಾಣೆಯಾಗಿರುವುದಕ್ಕೆ ಕೀರ್ತಿನೇ ಕಾರಣ ಎಂದು ಹೇಳಲಾಗುತ್ತಿತ್ತು.
ಲಕ್ಷ್ಮೀ ಮತ್ತೆ ಬಂದಿದ್ದಾಳೆ
ಅಂದು ನಾಟಕ ಮಾಡುವ ವೇಳೆ ಲಕ್ಷ್ಮೀ ತನ್ನ ರಾಣಿ ಬೊಂಬೆ ಈಗ ಸುಟ್ಟು ಹೋಗುತ್ತದೆ ಎಂದು ರಾವಣ ದಹನದ ವೇಳೆ ತನ್ನ ರಾಣಿ ಗೊಂಬೆಯನ್ನು ಬಚಾವ್ ಮಾಡಲು ಹೋಗುತ್ತಾಳೆ. ಆದರೆ ಆ ಸಮಯದಲ್ಲಿ ಅವಳಿಗೆ ಬೆಂಕಿ ತಗುಲಿ ಅವಳು ಸತ್ತು ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಈಗ ಮತ್ತೆ ಅವಳೇ ಕೋರ್ಟ್‌ಗೆ ಬಂದಿದ್ದಾಳೆ. ಅದನ್ನು ನೋಡಿ ಕಾವೇರಿಗೆ ಶಾಕ್ ಆಗಿದೆ. ಈಗ ಎಲ್ಲ ಸತ್ಯವನ್ನೂ ಇವಳು ಹೇಳಿಬಿಡುತ್ತಾಳೆ ಎಂದು ಅಂದುಕೊಂಡು ತುಂಬಾ ಹೆದರಿನಿಂತಿದ್ದಾಳೆ. ವೈಷ್ಣವ್‌ಗೆ ಇಷ್ಟು ದಿನದ ಬಳಿಕವಾದರೂ ಸತ್ಯ ಗೊತ್ತಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.