logo
ಕನ್ನಡ ಸುದ್ದಿ  /  ಮನರಂಜನೆ  /  Yash Radhika Pandit: ಆದಿಪುರುಷ್‌ ಗದ್ದಲದಲ್ಲಿ ರಾಮನಾಗಿ ಯಶ್‌, ಸೀತೆಯಾಗಿ ರಾಧಿಕಾ ಪಂಡಿತ್‌ ಕಾಣಿಸಿದ್ದು ಹೀಗೆ

Yash Radhika Pandit: ಆದಿಪುರುಷ್‌ ಗದ್ದಲದಲ್ಲಿ ರಾಮನಾಗಿ ಯಶ್‌, ಸೀತೆಯಾಗಿ ರಾಧಿಕಾ ಪಂಡಿತ್‌ ಕಾಣಿಸಿದ್ದು ಹೀಗೆ

Jun 22, 2023 02:16 PM IST

google News

ಆದಿಪುರುಷ್‌ ಗದ್ದಲದಲ್ಲಿ ರಾಮನಾಗಿ ಯಶ್‌, ಸೀತೆಯಾಗಿ ರಾಧಿಕಾ ಪಂಡಿತ್‌ ಕಾಣಿಸಿದ್ದು ಹೀಗೆ

    • ಆದಿಪುರುಷ್‌ ಸಿನಿಮಾ ವಿವಾದದ ಕೇಂದ್ರ ಬಿಂದುವಾಗುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ತರಹೇವಾರಿ ಟ್ರೋಲ್‌ಗೆ ಆಹಾರವಾಗುತ್ತಿದೆ ಪ್ರಭಾಸ್‌ ಸಿನಿಮಾ. ಇದೆಲ್ಲದರ ನಡುವೆ ನಟ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ರಾಮ ಸೀತೆಯ ಅವತಾರದಲ್ಲಿ ಎದುರಾಗಿದ್ದಾರೆ. ಅಭಿಮಾನಿಯ ಕೈ ಚಳಕದಲ್ಲಿ ಫೋಟೋವೊಂದು ಸೃಷ್ಟಿಯಾಗಿದೆ.  
ಆದಿಪುರುಷ್‌ ಗದ್ದಲದಲ್ಲಿ ರಾಮನಾಗಿ ಯಶ್‌, ಸೀತೆಯಾಗಿ ರಾಧಿಕಾ ಪಂಡಿತ್‌ ಕಾಣಿಸಿದ್ದು ಹೀಗೆ
ಆದಿಪುರುಷ್‌ ಗದ್ದಲದಲ್ಲಿ ರಾಮನಾಗಿ ಯಶ್‌, ಸೀತೆಯಾಗಿ ರಾಧಿಕಾ ಪಂಡಿತ್‌ ಕಾಣಿಸಿದ್ದು ಹೀಗೆ

Yash Radhika Pandit: ಸೋಷಿಯಲ್‌ ಮೀಡಿಯಾದಲ್ಲೀಗ ಆದಿಪುರುಷ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೋಡುಗರಿಂದ ಪಾಸಿಟಿವ್‌ ಪ್ರತಿಕ್ರಿಯೆಯ ಬದಲು ನೆಗೆಟಿವ್‌ ರೆಸ್ಪಾನ್ಸ್‌ ಪಡೆದುಕೊಂಡು ಟ್ರೋಲ್‌ ಆಗುತ್ತಿದೆ. ತಾವು ನೋಡಿದ ರಾಮಾಯಣಕ್ಕೂ ಈ ರಾಮಾಯಣಕ್ಕೂ ಹೋಲಿಕೆ ಮಾಡಿಕೊಂಡು, ಮನಸ್ಸಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಇನ್ನು ಕೆಲವರು, "ನಾನು ನನ್ನ ಮಕ್ಕಳಿಗೆ ಈ ರಾಮಾಯಣ ತೋರಿಸಲ್ಲ" ಎಂದೂ ಹೇಳಿಕೊಂಡವರಿದ್ದಾರೆ. ಹಳೇ ರಾಮಾಯಣದ ಪಾತ್ರಗಳನ್ನು ಶೇರ್‌ ಮಾಡಿಕೊಂಡು, ಇದು ನಿಮ್ಮ ಗಮನಕ್ಕೆ ಬರಲಿಲ್ಲವೇ ಎಂದೂ ಜರಿದಿದ್ದಾರೆ.

ಹೀಗೆ ರಾಶಿ ರಾಶಿ ನೆಗೆಟಿವ್‌ ಕಮೆಂಟ್‌ಗಳನ್ನು ಪಡೆದರೂ ಕಲೆಕ್ಷನ್‌ ವಿಚಾರದಲ್ಲಿ ಆದಿಪುರುಷ್‌ ಹಿಂದೆ ಬಿದ್ದಿಲ್ಲ. ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡ ಪ್ರಕಾರ 300 ಕೋಟಿಗೂ ಅಧಿಕ ಕಲೆಕ್ಷನ್‌ ಹರಿದು ಬಂದಿದೆಯಂತೆ. ಇದೆಲ್ಲದರ ನಡುವೆ ಯಶ್‌ ಮತ್ತು ರಾಧಿಕಾ ಪಂಡಿತ್‌ ಸಹ ಇದೇ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಹಾಗಂತ ಈ ಸ್ಟಾರ್‌ ಜೋಡಿ ಈ ಸಿನಿಮಾ ಬಗ್ಗೆ ಮಾತನಾಡಿಲ್ಲ. ಬದಲಿಗೆ ರಾಮ ಸೀತೆಯ ವೇಷ ಧರಿಸಿದರೆ ಈ ಜೋಡಿ ಹೇಗೆ ಕಾಣಿಸುತ್ತಿತ್ತು ಎಂಬುದಕ್ಕೆ ಫೋಟೋ ಸಮೇತ ಉತ್ತರವೊಂದು ಸಿಕ್ಕಿದೆ.

ಯಶ್‌ ಅವರ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ನಟ ಮತ್ತು ನಟಿಯನ್ನು ಗಮನದಲ್ಲಿಟ್ಟುಕೊಂಡು ರಾಮಾಯಣದ ರಾಮ ಮತ್ತು ಸೀತೆಯನ್ನು ಕಲ್ಪಿಸಿಕೊಂಡು ಇಬ್ಬರ ಫೋಟೋ ಎಡಿಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಇಬ್ಬರ ಫೋಟೋ ಎಲ್ಲೆಡೆ ವೈರಲ್‌ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ ಬಗೆಬಗೆ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ.

ಮನೆ ದೇವರ ದರ್ಶನ ಪಡೆದ ಯಶ್‌ ಕುಟುಂಬ

ಮೈಸೂರಿನ ನಂಜನಗೂಡಿನ ಶ್ರೀಕಂಠೇಶ್ವೇರ ಸ್ವಾಮಿಯ ದರ್ಶನ ಪಡೆದಿದೆ ಯಶ್‌ ಕುಟುಂಬ. ಅಂದಹಾಗೆ, ಕರೊನಾ ಸಮಯದಿಂದ ಇಲ್ಲಿಗೆ ಭೇಟಿ ನೀಡದ ಯಶ್‌, ಇದೀಗ ಮನೆ ದೇವರ ದರ್ಶನ ಪಡೆದಿದ್ದಾರೆ. ಮಡದಿ ಮಕ್ಕಳ ಜತೆಗೆ ಆಗಮಿಸಿದ ಯಶ್, ವಿಶೇಷ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದಾರೆ. ಹೀಗಿರುವಾಗಲೇ ಯಶ್‌ ಬಂದ ಸುದ್ದಿ ತಿಳಿಯುತ್ತಿದ್ದಂತೆ, ಸಾಗರೋಪಾದಿಯಲ್ಲಿ ಅವರ ಅಭಿಮಾನಿಗಳು ದೇವಸ್ಥಾನದತ್ತ ಹೆಜ್ಜೆ ಹಾಕಿದ್ದಾರೆ. ದೇವಸ್ಥಾನದಲ್ಲಿಯೇ ಕೆಲವರು ಅವರ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಇನ್ನು ಕೆಲವರು, ದೂರದಿಂದಲೇ ಅವರನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.

ಈ ನಡುವೆ, ಮಾತಿಗೆ ಸಿಕ್ಕ ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ಮೊದಲ ಸಲ ಮಾತನಾಡಿದ್ದಾರೆ. ಇನ್ನೂ ಒಂದಷ್ಟು ದಿನ ಕಾಯಲೇ ಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾದ ಬಗ್ಗೆ ಅಪ್‌ಡೇಟ್‌ ಮಾಹಿತಿ ನೀಡುವುದಾಗಿ ಯಶ್‌ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್‌ನಲ್ಲಿಯೂ ಯಶ್‌ ಸಿನಿಮಾ ಮಾಡ್ತಾರೆ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಯಶ್‌ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ.

ಫ್ಯಾನ್ಸ್‌ ಖುಷಿಪಡೋ ರೀತಿಯಲ್ಲಿಯೇ ಬರ್ತಿವಿ..

"ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ದೇಶ ಜಗತ್ತು ನೋಡ್ತಿದೆ. ಆ ಜವಾಬ್ದಾರಿ ನನಗಿದೆ. ದೇವರ ಸನ್ನಿಧಾನ, ಸುಮ್ಮನೇ ತೇಲಿಸುವುದು ಬೇಡ. ಆದಷ್ಟು ಬೇಗ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಎಲ್ಲರೂ ಖುಷಿ ಪಡೋ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಜನ ಫ್ರೀಯಾಗಿ ಸಿನಿಮಾ ನೋಡುವ ಹಾಗಿದ್ದರೆ, ಹೇಗೆ ಬೇಕೋ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರೋದು, ಅವ್ರು ಖುಷಿಪಡೋ ಕೆಲಸ ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ ಅದನ್ನು ಮಾಡ್ತೀವಿ" ಎಂದರು.

"ನಾನಂತೂ ಒಂದು ದಿನ ಒಂದು ಕ್ಷಣವನ್ನೂ ವೇಸ್ಟ್‌ ಮಾಡ್ತಿಲ್ಲ. ಅಷ್ಟು ಕೆಲಸ ಇದೆ. ಅಷ್ಟೊಂದು ಕೆಲಸ ಕೈ ಹಿಡಿತೀದೆ. ಆದಷ್ಟು ಬೇಗ ಬರ್ತಿವಿ ಎಂದು ಹೇಳಿದ್ದಾರೆ ಯಶ್‌. ಈ ನಡುವೆ ಬಾಲಿವುಡ್‌ಗೂ ಹೋಗ್ತಿದ್ದೀರಂತೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಶ್‌, ನಾನು ಎಲ್ಲೂ ಹೋಗಿಲ್ಲ, ಬಾಲಿವುಡ್‌ನವ್ರನ್ನೇ ನಾನು ಇರೋ ಕಡೆ ಕರೆಸ್ಕೊಂಡಿದೀನಿ ತಲೆಕೆಡೆಸ್ಕೋಬೇಡಿ" ಎಂದಿದ್ದಾರೆ ಯಶ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ