logo
ಕನ್ನಡ ಸುದ್ದಿ  /  ಮನರಂಜನೆ  /  Gurudatha Ganiga: 2 ನೇ ಸಿನಿಮಾ ತಯಾರಿಯಲ್ಲಿ ಅಂಬಿ ನಿಂಗ್‌ ವಯಸ್ಸಾಯ್ತೋ ನಿರ್ದೇಶಕ ಗುರುದತ್‌ ಗಾಣಿಗ

Gurudatha Ganiga: 2 ನೇ ಸಿನಿಮಾ ತಯಾರಿಯಲ್ಲಿ ಅಂಬಿ ನಿಂಗ್‌ ವಯಸ್ಸಾಯ್ತೋ ನಿರ್ದೇಶಕ ಗುರುದತ್‌ ಗಾಣಿಗ

HT Kannada Desk HT Kannada

Oct 13, 2023 06:30 AM IST

google News

2 ನೇ ಸಿನಿಮಾ ನಿರ್ದೇಶನಕ್ಕೆ ಮುಂದಾದ ಅಂಬಿ ನಿಂಗ್‌ ವಯಸ್ಸಾಯ್ತೋ ನಿರ್ದೇಶಕ ಗುರುದತ್‌ ಗಾಣಿಗ

  • Gurudatha Ganiga: 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನಂತರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಯುವ ನಿರ್ದೇಶಕ ಗುರುದತ್‌ ಗಾಣಿಗ ಈಗ 2ನೇ ಸಿನಿಮಾ ತಯಾರಿಯಲ್ಲಿದ್ದಾರೆ. 

2 ನೇ ಸಿನಿಮಾ ನಿರ್ದೇಶನಕ್ಕೆ ಮುಂದಾದ ಅಂಬಿ ನಿಂಗ್‌ ವಯಸ್ಸಾಯ್ತೋ ನಿರ್ದೇಶಕ ಗುರುದತ್‌ ಗಾಣಿಗ
2 ನೇ ಸಿನಿಮಾ ನಿರ್ದೇಶನಕ್ಕೆ ಮುಂದಾದ ಅಂಬಿ ನಿಂಗ್‌ ವಯಸ್ಸಾಯ್ತೋ ನಿರ್ದೇಶಕ ಗುರುದತ್‌ ಗಾಣಿಗ

Gurudatha Ganiga: ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿನಯದ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ'. 2018ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಸುದೀಪ್‌ ಕೂಡಾ ನಟಿಸಿದ್ದರು. ಅಂಬರೀಶ್‌ ಯುವಕನಾಗಿದ್ದ ಪಾತ್ರಕ್ಕೆ ಕಿಚ್ಚ ಬಣ್ಣ ಹಚ್ಚಿದ್ದರು. ಚಿತ್ರದಲ್ಲಿ ಸುಹಾಸಿನಿ, ಶ್ರುತಿ ಹರಿಹರನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇತ್ತು.

5 ವರ್ಷಗಳ ಗ್ಯಾಪ್‌ ಬಳಿಕ ಮತ್ತೆ ನಿರ್ದೇಶನ

ಅಂದು ಅಂಬಿ, ಸುದೀಪ್‌ ಸೇರಿದಂತೆ ಸ್ಟಾರ್ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದು ಯುವ ನಿರ್ದೇಶಕ ಗುರುದತ್ ಗಾಣಿಗ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದರು ಗುರುದತ್. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಗುರುದತ್‌, ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದರು, ಸ್ಯಾಂಡಲ್‌ವುಡ್‌ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಮೊದಲ ನಿರ್ದೇಶನದಲ್ಲೇ ಅಂಬರೀಶ್‌, ಸುದೀಪ್ ಅವರಂಥ ದೊಡ್ಡ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದ ಗುರುದತ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಪ್ರಿಯರಿಗೆ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಗ್ಯಾಪ್‌ ಬಳಿಕ ಗುರುದತ್‌ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಸುಮಾರು 5 ವರ್ಷಗಳ ಬಳಿಕ ಗುರುದತ್ ಗಾಣಿಗ ವಿಭಿನ್ನ ಸಿನಿಮಾ ಮೂಲಕ ಮತ್ತೆ ಸಿನಿಮಾಭಿಮಾನಿಗಳ ಮುಂದೆ ಬರಲು ರೆಡಿ ಆಗುತ್ತಿದ್ದಾರೆ. ಈ ಬಾರಿ ಗುರುದತ್‌ ಯಾವ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಕುತೂಹಲವೂ ಹೆಚ್ಚಾಗಿದೆ. ಮೂಲಗಳ ಪ್ರಕಾರ ಗುರುದತ್‌ ಸ್ಟಾರ್ ನಟರೊಬ್ಬರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರಂತೆ.

ಶೀಘ್ರದಲ್ಲೇ ಟೈಟಲ್‌ ಅನೌನ್ಸ್‌

ಈಗಾಗಲೇ ಗುರುದತ್‌ ಹೊಸ ಸಿನಿಮಾಗೆ ಎಲ್ಲಾ ತಯಾರಿ ಮಾಡಿದ್ದು ಸದ್ಯದಲ್ಲೇ ಸಿನಿಮಾ ಟೈಟಲ್ ಮತ್ತು ನಾಯಕನನ್ನು ಅನೌನ್ಸ್ ಮಾಡಲು ಪ್ಲಾನ್ ಮಾಡಿದ್ದಾರೆ. ವಿಭಿನ್ನ ಕಾನ್ಸೆ‌ಪ್ಟ್‌ನ ಸಿನಿಮಾ ಮೂಲಕ ಗುರುದತ್‌ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 2ನೇ ಸಿನಿಮಾ ಕೂಡಾ ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ. ಅಂಬಿ ನಿಂಗ್‌ ವಯಸ್ಸಾಯ್ತೋ ಸಿನಿಮಾ ಬಳಿಕ ಗುರುದತ್‌ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂದು ಕೆಲವರ ಪ್ರಶ್ನೆಯಾಗಿತ್ತು. ಆದರೆ ಅವರು ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.

ಅಂಬರೀಶ್‌ ಸಿನಿಮಾ ಬಳಿಕ ನಿರ್ದೇಶಕ ಗುರುದತ್‌ ನಿರ್ಮಾಣದ ಕಡೆ ಮುಖ ಮಾಡಿದ್ದರು. ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಚೊಚ್ಚಲ ನಿರ್ಮಾಣದ ಪ್ರಯತ್ನಕ್ಕೂ ಕೈ ಹಾಕಿದ್ದಾರೆ ಗುರುದತ್‌. ಈ ನಡುವೆ ತಮ್ಮ 2ನೇ ನಿರ್ದೇಶನದ ಚಿತ್ರದ ತಯಾರಿಯಲ್ಲಿದ್ದಾರೆ. ಮೊದಲ ಸಿನಿಮಾದಲ್ಲೇ ಮೋಡಿ ಮಾಡಿದ್ದ ಈ ಯುವ ಪ್ರತಿಭೆ ಯಾವ ನಟನಿಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ