logo
ಕನ್ನಡ ಸುದ್ದಿ  /  ಮನರಂಜನೆ  /  ‘ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ, ಕಷ್ಟಪಟ್ಟೇ ಮೇಲೆ ಬರ್ತಿನಿ’; ಉಪೇಂದ್ರ ಪುತ್ರ ಆಯುಷ್‌ ಮಾತಿಗೆ ‘ತಂದೆಗೆ ತಕ್ಕ ಮಗ’ ಎಂದ ಫ್ಯಾನ್ಸ್

‘ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ, ಕಷ್ಟಪಟ್ಟೇ ಮೇಲೆ ಬರ್ತಿನಿ’; ಉಪೇಂದ್ರ ಪುತ್ರ ಆಯುಷ್‌ ಮಾತಿಗೆ ‘ತಂದೆಗೆ ತಕ್ಕ ಮಗ’ ಎಂದ ಫ್ಯಾನ್ಸ್

Jan 13, 2024 09:06 AM IST

‘ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ, ಕಷ್ಟಪಟ್ಟೇ ಮೇಲೆ ಬರ್ತಿನಿ’; ಉಪೇಂದ್ರ ಪುತ್ರ ಆಯುಷ್‌ ಮಾತಿಗೆ ‘ತಂದೆಗೆ ತಕ್ಕ ಮಗ’ ಎಂದ ಫ್ಯಾನ್ಸ್

    • Upendra Son Aayush Upendra: ಸ್ಟಾರ್‌ ಕಿಡ್‌ ಆದ್ರೂ ಆಯುಷ್‌ ಉಪೇಂದ್ರ, ತಮ್ಮ ಸ್ವಂತ ಸಾಮರ್ಥ್ಯದ ಮೇಲೆಯೇ ಮೇಲೆ ಬರಬೇಕು ಎನ್ನವ ಕನಸು ಹೊಂದಿದ್ದಾರೆ. ಆ ಕನಸಿನ ಬೆನ್ನತ್ತಿರುವ ಆಯುಷ್‌, ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಪ್ಪನ ಹೆಸರು ಬಳಸದೇ ಗುರುತಿಸಿಕೊಳ್ಳುವುದಾಗಿಯೂ ಮಾತನಾಡಿದ್ದಾರೆ. ಇಲ್ಲಿದೆ ಅವರ ಮಾತಿನ ಅಕ್ಷರರೂಪ.
‘ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ, ಕಷ್ಟಪಟ್ಟೇ ಮೇಲೆ ಬರ್ತಿನಿ’; ಉಪೇಂದ್ರ ಪುತ್ರ ಆಯುಷ್‌ ಮಾತಿಗೆ ‘ತಂದೆಗೆ ತಕ್ಕ ಮಗ’ ಎಂದ ಫ್ಯಾನ್ಸ್
‘ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ, ಕಷ್ಟಪಟ್ಟೇ ಮೇಲೆ ಬರ್ತಿನಿ’; ಉಪೇಂದ್ರ ಪುತ್ರ ಆಯುಷ್‌ ಮಾತಿಗೆ ‘ತಂದೆಗೆ ತಕ್ಕ ಮಗ’ ಎಂದ ಫ್ಯಾನ್ಸ್

Aayush Upendra: ಯುಐ (UI) ಟೀಸರ್‌ ಮೂಲಕ ಹೊಸ ಲೋಕವನ್ನು ಅನಾವರಣ ಮಾಡಿರುವ ರಿಯಲ್‌ ಸ್ಟಾರ್‌ ಉಪೇಂದ್ರ, ಮತ್ತೆ ಪ್ರೇಕ್ಷಕರ ತಲೆಗೆ ಹುಳ ಬಿಡುವ ಕೆಲಸ ಮಾಡಿದ್ದಾರೆ. ಈಗಾಗಲೇ ಆ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆಯೇ ಸಿಕ್ಕಿದೆ. ಈ ನಡುವೆ ಇದೇ ಸಿನಿಮಾದ ಬಗ್ಗೆ ಉಪೇಂದ್ರ ಪುತ್ರ ಆಯುಷ್‌ಗೆ ತುಂಬ ನಿರೀಕ್ಷೆಗಳಿವೆ. ಬರೀ ಅದಷ್ಟೇ ಅಲ್ಲ ತೆರೆಮರೆಯಲ್ಲಿ ಸಿನಿಮಾ ಎಂಟ್ರಿಗೂ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ ಆಯುಷ್.‌ ಇದೀಗ ಯುಐ ಚಿತ್ರದ ಟೀಸರ್‌ ಬಿಡುಗಡೆ ಸಂದರ್ಭದಲ್ಲಿ ಮಾಧ್ಯಮಗಳ ಜತೆಗೆ ಮಾತಿಗೆ ಸಿಕ್ಕಾಗ ಸಿನಿಮಾ ಕ್ಷೇತ್ರದ ಬಗ್ಗೆ ಆಯುಷ್‌ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಉಪೇಂದ್ರ ಸಿನಿಮಾರಂಗದಲ್ಲಿ ದೊಡ್ಡ ಹೆಸರು. ಕನ್ನಡಿಗರಷ್ಟೇ ಅಲ್ಲದೆ, ಪರಭಾಷಿಕರಿಗೂ ಅವರ ಬಗ್ಗೆ ಗೊತ್ತಿರುವ ಸಂಗತಿ. ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಮೈಲಿಗಲ್ಲುಗಳನ್ನು ನೀಡಿದ್ದಾರವರು. ಅವರ ಮಗನಾಗಿರುವ ಆಯುಷ್‌, ಅಪ್ಪನ ಬಗ್ಗೆ ಅಷ್ಟೇ ಅಭಿಮಾನ ಮತ್ತು ಗೌರವವನ್ನು ಹೊಂದಿದ್ದಾರೆ. ಆದರೆ, ಅವರ ಹೆಸರನ್ನು ಎಲ್ಲಿಯೂ ಬಳಸದೇ, ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಮೇಲೆ ಬರುವ ಬಗ್ಗೆ ಆಯುಷ್‌ ಹೇಳಿಕೊಂಡಿದ್ದಾರೆ. ಅಪ್ಪನ ಪ್ರಭಾವಳಿಯ ನೆರಳಲ್ಲಿ ನಾನು ಗುರುತಿಸಿಕೊಳ್ಳಲ್ಲ ಎಂದಿದ್ದಾರೆ.

ನನಗೆ ಅಪ್ಪನ ಇನ್‌ಪ್ಲೂಯೆನ್ಸ್‌ ಬೇಡ

ಅಪ್ಪ ಖ್ಯಾತ ನಟ ಮತ್ತು ನಿರ್ದೇಶಕ, ಅಮ್ಮ ಪ್ರಿಯಾಂಕಾ ಉಪೇಂದ್ರ ನಾಯಕಿ ಪ್ರಧಾನ ಸಿನಿಮಾಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಈ ಇಬ್ಬರ ಹೆಸರು ಬಳಸದೇ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುವುದಾಗಿ ಆಯುಷ್‌ ಹೇಳಿದ್ದಾರೆ. "ಈ ಪ್ರಪಂಚದಲ್ಲಿ ಸಾಕಷ್ಟು ಟ್ಯಾಲೆಂಟ್‌ ಇರೋ ಜನರಿದ್ದಾರೆ. ಅವರು ಈ ಸಿಲ್ವರ್‌ ಸ್ಕ್ರೀನ್‌ಗೆ ಅರ್ಹರಿದ್ದಾರೆ. ನಾವು ಈ ಫ್ಯಾಮಿಲಿಯಲ್ಲಿ ಹುಟ್ಟಿದ್ದೇವೆ ಎಂದ ಮಾತ್ರಕ್ಕೆ ಅದು ಸಾಧ್ಯವಿಲ್ಲ. ಅಪ್ಪನ ನಿರ್ದೇಶನ, ಅವರು ಸಾಗಿ ಬಂದ ಹಾದಿಯನ್ನು ಯಾರೂ ಮುಟ್ಟೋದಕ್ಕೂ ಆಗಲ್ಲ. ಅವರಿಗೆ ಯಾರು ಬೇಕೋ ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ"

ಕಷ್ಟಪಟ್ಟುಕೊಂಡೇ ಮೇಲೆ ಬರ್ತಿನಿ

ನಾನಂತೂ ನನ್ನ ಪಾಡಿಗೆ ನಾನಿರ್ತಿನಿ. ನಿರ್ದೇಶನ, ಎಡಿಟಿಂಗ್‌, ಸಿನಿಮಾಟೋಗ್ರಫಿ ಇಷ್ಟವಾದರೆ ಅದರಲ್ಲಿ ನಾನು ಮುಂದುವರೀತಿನಿ. ನನಗೆ ಯಾರ ಸಪೋರ್ಟ್‌ ಬೇಡ. ನಾನು ಕಷ್ಟಪಟ್ಟು ಬರ್ತಿನಿ. ಇನ್‌ಫ್ಲೂಯೆನ್ಸ್‌ ಇರಬಹುದು, ಆದರೆ ನನ್ನ ದಾರಿಯೇ ಬೇರೆ. ಅಪ್ಪ ಹೇಳುವಂತೆ ನಾನು ಒಬ್ಬ ಸಿಎಂ, ಅಂದರೆ ಕಾಮನ್‌ ಮ್ಯಾನ್.‌ ಈಗಾಗಲೇ ಕಾಲೇಜಿನಲ್ಲಿ ಡೈರೆಕ್ಷನ್‌, ಎಡಿಟಿಂಗ್‌, ವಿಎಫ್‌ಎಕ್ಸ್‌, ನಟನೆ ತರಬೇತಿ ಪಡೆಯುತ್ತಿದ್ದೇನೆ. ಕಾಲೇಜು ಮುಗೀತಿದ್ದಂತೆ, ತೋಟದಲ್ಲಿ ಬಿಜಿನೆಸ್‌ ನಡೀತಿದೆ ಅದರ ಜವಾಬ್ದಾರಿಯನ್ನೂ ನಾನೇ ವಹಿಸಿಕೊಂಡಿದ್ದೇನೆ.

ಅಭಿಮಾನಿಗಳ ಬಗ್ಗೆ ಹೀಗಂದ್ರು ಆಯುಷ್

ಅಭಿಮಾನಿಗಳಿಗೆ ಎಷ್ಟು ಪ್ರೀತಿ ತೋರಿಸ್ತಾರೆ. ಯಾವತ್ತೂ ಅವರಿಗೆ ಹರ್ಟ್‌ ಮಾಡಬೇಡ, ಪ್ರತಿ ಸಲ ಅವರು ನಿನ್ನ ಜತೆಗಿರ್ತಾರೆ. ನೀನು ಅವರ ಜತೆಯಲ್ಲಿಯೇ ಇರು. ಅವರು ನಿನ್ನನ್ನು ಕರೆದುಕೊಂಡು ಹೋಗ್ತಾರೆ. ಪ್ರೀತಿ ತೋರಿಸ್ತಾರೆ. ಅವರ ಅಭಿಮಾನಿಗಳು ನನಗೂ ಅಷ್ಟೇ ಪ್ರೀತಿ ತೋರಿಸ್ತಾರೆ. ಸದ್ಯ ಅಪ್ಪ ಮತ್ತು ಅಭಿಮಾನಿಗಳೇ ನನಗೆ ಸ್ಪೂರ್ತಿ. ಅದೇ ಹಾದಿಯಲ್ಲಿಯೇ ನಾನೂ ಸಾಗುತ್ತೇನೆ" ಎಂದಿದ್ದಾರೆ ಆಯುಷ್.‌ ಆಯುಷ್‌ ಅವರ ಈ ಮಾತುಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ