logo
ಕನ್ನಡ ಸುದ್ದಿ  /  ಮನರಂಜನೆ  /  ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ ಕಲ್ಕಿ 2898 Ad ಸಿನಿಮಾ

ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ ಕಲ್ಕಿ 2898 AD ಸಿನಿಮಾ

Jun 27, 2024 01:25 PM IST

google News

ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ Kalki 2898 AD ಸಿನಿಮಾ

    • ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೈಪ್‌ ಕ್ರಿಯೇಟ್‌ ಮಾಡಿರುವ ಕಲ್ಕಿ 2898 ಎಡಿ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಹಲವು ಕಲಾವಿದರು ನಟಿಸಿದ್ದಾರೆ. ಆದರೆ, ಇದೇ ಬಹುಕೋಟಿ ವೆಚ್ಚದ ಚಿತ್ರದಲ್ಲಿ ಕನ್ನಡದ ಒಬ್ಬೇ ಒಬ್ಬ ಕಲಾವಿದನಿಗೂ ಅವಕಾಶ ಸಿಕ್ಕಿಲ್ಲ ಎಂಬುದು ವಿಪರ್ಯಾಸ. ಈ ಬಗ್ಗೆ ಜಾಲತಾಣದಲ್ಲಿಯೂ ಚರ್ಚೆ ನಡೆದಿದೆ.  
ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ Kalki 2898 AD ಸಿನಿಮಾ
ಕರುನಾಡಿಂದ ಕಾಸಷ್ಟೇ ಬೇಕು! ಈ ಒಂದು ವಿಷಯದಲ್ಲಿ ಕನ್ನಡಿಗರನ್ನು ಕೆರಳಿ ಕೆಂಡವಾಗಿಸಿದ ಪ್ರಭಾಸ್‌ ನಟನೆಯ Kalki 2898 AD ಸಿನಿಮಾ

Kalki 2898 AD cast: ಇಡೀ ಭಾರತವೇ ಹೆಮ್ಮೆ ಪಡುವಂಥ, ಗರ್ವಪಡುವಂಥ ಸಿನಿಮಾ ಇಂದು ಬಿಡುಗಡೆ ಆಗಿದೆ. ಅದೇ ಕಲ್ಕಿ 2898 ಎಡಿ. 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಎಲ್ಲವೂ ಊಹೆಗೆ ನಿಲುಕದ ವಿಷಯಗಳೇ. ಕಾಲ್ಪನಿಕ ಪ್ರಪಂಚವನ್ನೇ ಕಣ್ಮುಂದೆ ತರುವುದು ಯಾವುದೇ ಒಬ್ಬ ಸಿನಿಮಾ ಮೇಕರ್‌ಗೆ ಅದು ಸುಲಭದ ವಿಷಯವಲ್ಲ. ಕಣ್ಣಿಗೆ ಕಾಣಿಸಿದ್ದನ್ನು, ನೋಡಿದ್ದನ್ನು ಅದ್ಹೇಗೋ ದೃಶ್ಯರೂಪಕ್ಕೆ ಇಳಿಸಿಬಿಡಬಹುದು. ಆದರೆ, ನಮ್ಮ ಊಹೆಯನ್ನೇ ನೋಡುಗನ ಎದೆಗಿಸಿಳಿಸುವುದು ಸಾಮಾನ್ಯ ವಿಷಯವಲ್ಲ. ಅಂಥ ಒಂದು ಮಹೋನ್ನತ ಸಾಹಸ ಕಲ್ಕಿ 2898 ಎಡಿ ಸಿನಿಮಾ. ಹೀಗೆ ಎಲ್ಲೆಡೆಯಿಂದ ಬಹುಪರಾಕ್‌ ಪಡೆದುಕೊಳ್ಳುತ್ತಿರುವ ಈ ಸಿನಿಮಾ ಮೇಲೆ ಕನ್ನಡಿಗರು ಅದ್ಯಾಕೋ ಕೊಂಚ ಮುನಿಸಿಕೊಂಡಿದ್ದಾರೆ!

ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ರಿಚ್‌ ಆಗಿಯೇ ಮೂಡಿಬಂದಿರುವ ಕಲ್ಕಿ ಸಿನಿಮಾ, ಪಾತ್ರವರ್ಗದಿಂದ ಹಿಡಿದು ಮೇಕಿಂಗ್‌,. ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ನಿಂದಲೂ ಒಂದು ಕೈ ಮೇಲೆಯೇ ಇದೆ. ಈ ಸಿನಿಮಾದ ಪಾತ್ರಧಾರಿಗಳಷ್ಟೇ ಕಲಾನಿರ್ದೇಶಕನ ಪಾತ್ರವೂ ಇಲ್ಲಿ ದೊಡ್ಡದಿದೆ. ಒಂದು ನಿರ್ದೇಶಕನ ಮನಸ್ಸಿನಲ್ಲಿನ ದೃಶ್ಯವನ್ನು ಕಾಲ್ಪನಿಕವಾಗಿ ಕಟ್ಟಿಕೊಡುವುದು ಸುಲಭದ ವಿಚಾರವಲ್ಲ. ಅದನ್ನು ಅಷ್ಟೇ ನೈಜವಾಗಿ ನೋಡುಗನನ್ನು ಆಕರ್ಷಿಸಿದೆ ಅನಿಲ್‌ ಜಾಧವ್‌ ಮತ್ತು ಸಂತೋಷ್‌ ಶೆಟ್ಟಿ ಅವರ ಕಲಾನಿರ್ದೇಶನದ ಕೆಲಸ.

ಕನ್ನಡಿಗರಿಗೆ ಅವಮಾನ!

ಇದೀಗ ವಿಷಯಕ್ಕೆ ಬರೋಣ. ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ದಕ್ಷಿಣ ಭಾರತದ ಹೆಮ್ಮೆ ಎಂದೇ ಕರೆಸಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಇಲ್ಲಿನವರೇ ಸೇರಿ ಮಾಡಿದ ಸಿನಿಮಾಯಿದು. ಬಾಲಿವುಡ್‌ನ ಸ್ಟಾರ್‌ ಕಲಾವಿದರಾದ ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ದಿಶಾ ಪಟಾಣಿ, ಮೃಣಾಲ್‌ ಠಾಕೂರ್‌ ಹೊರತುಪಡಿಸಿ, ಬಹುತೇಕರು ದಕ್ಷಿಣದವರೇ. ತೆಲುಗಿನ ಜತೆಗೆ ತಮಿಳಿನ ಸ್ಟಾರ್‌ ನಟ ಉಳಗನಾಯಗನ್‌ ಕಮಲ್‌ ಹಾಸನ್‌ ಸಹ ಇಲ್ಲಿ ಖಳನಟನಾಗಿದ್ದಾರೆ. ಮಾಲಿವುಡ್‌ ಚಿತ್ರರಂಗದಿಂದ ದುಲ್ಖರ್‌ ಸಲ್ಮಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ನ ಒಬ್ಬೇ ಒಬ್ಬ ಕಲಾವಿದರೂ ಈ ಪ್ಯಾನ್‌ ಇಂಡಿಯಾ ಚಿತ್ರದ ಭಾಗವಾಗಿಲ್ಲ.

ಕಲ್ಕಿಯಲ್ಲಿ ಕನ್ನಡ ನಟರಿಗಿಲ್ಲ ಅವಕಾಶ!

ಕಲ್ಕಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ, ಈ ವರೆಗೂ ರಿವೀಲ್‌ ಆಗದ ಒಂದಷ್ಟು ವಿಚಾರಗಳು ಚಿತ್ರ ತೆರೆ ಕಂಡ ಬಳಿಕ ಹೊರಬೀಳುತ್ತಿವೆ. ಆ ಪೈಕಿ ಬೇರೆ ಬೇರೆ ಭಾಷೆಯ ಕಲಾವಿದರನ್ನೂಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಎಂದ ಬಳಿಕ, ಚಿತ್ರತಂಡ ಎಲ್ಲ ಭಾಷೆಯ ಪ್ರಮುಖ ಸ್ಟಾರ್‌ ನಟನನ್ನು ಚಿತ್ರಕ್ಕೆ ಕರೆತರುವುದು ಸಹಜ. ಅದರಂತೆ ಮಲಯಾಳಂ ಚಿತ್ರರಂಗವನ್ನು ದುಲ್ಖರ್‌ ಸಲ್ಮಾನ್‌ ಪ್ರತಿನಿಧಿಸಿದೆ, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಮೃಣಾಲ್‌ ಠಾಕೂರ್ ಬಾಲಿವುಡ್‌ ಪ್ರತಿನಿಧಿಸಿದ್ದಾರೆ. ಕಮಲ್‌ ಹಾಸನ್‌ ಕಾಲಿವುಡ್‌ಗೆ, ಆದರೆ ಸ್ಯಾಂಡಲ್‌ವುಡ್‌ಗೆ ಯಾರು?

ಕರುನಾಡಿಂದ ಕಾಸಷ್ಟೇ ಬೇಕಾ?

ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಕೆಲವರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ನಿಮಗೆ ಬರೀ ಕಾಸಷ್ಟೇ ಬೇಕೇ ಹೊರತು, ಇಲ್ಲಿನ ಕಲಾವಿದರನ್ನೂ ಸಿನಿಮಾದಲ್ಲಿ ಬಳಸಿಕೊಳ್ಳಬಹುದಿತ್ತಲ್ಲವೇ ಎಂದು ಪ್ರಶ್ನೆ ಮಾಡತೊಡಗಿದ್ದಾರೆ. ಸೌತ್‌ನ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಕೆಲವರು ಕಲ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದವರು ಏಕಿಲ್ಲ ಎಂದು ನಿರ್ಮಾಣ ಸಂಸ್ಥೆಯ ವಿರುದ್ಧ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗಿನ ಸಿನಿಮಾಗಳಿಗೆ ಕರ್ನಾಟಕದಲ್ಲಿಯೂ ದೊಡ್ಡ ಮಾರುಕಟ್ಟೆ ಇದೆ. ಇಲ್ಲಿಂದಲೂ ಕೋಟಿ ಕೋಟಿ ಹಣವನ್ನು ತೆಲುಗು ಸಿನಿಮಾಗಳು ಬಾಚಿಕೊಳ್ಳುತ್ತವೆ. ಕನ್ನಡ ಅವತರಣಿಕೆಗಿಂತ ಹೆಚ್ಚು ಮೂಲ ತೆಲುಗು ಚಿತ್ರವನ್ನೇ ಇಲ್ಲಿನ ಪ್ರೇಕ್ಷಕ ನೋಡುತ್ತಾನೆ. ಅದೇ ರೀತಿ ಕಲ್ಕಿ ಚಿತ್ರಕ್ಕೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡ ಓಪನಿಂಗ್‌ ಸಿಕ್ಕಿದೆ.

ಯಾವ ಚಿತ್ರರಂಗದಿಂದ ಯಾರೆಲ್ಲ ನಟಿಸಿದ್ದಾರೆ..

ಕಮಲ್‌ ಹಾಸನ್‌ (ಕಾಲಿವುಡ್‌)

ಅಮಿತಾಬ್‌ ಬಚ್ಚನ್‌ (ಬಾಲಿವುಡ್‌)

ದೀಪಿಕಾ ಪಡುಕೋಣೆ (ಬಾಲಿವುಡ್‌)

ದಿಶಾ ಪಟಾಣಿ (ಬಾಲಿವುಡ್‌)

ದುಲ್ಕರ್ ಸಲ್ಮಾನ್ (ಮಾಲಿವುಡ್‌)

ವಿಜಯ್ ದೇವರಕೊಂಡ (ಟಾಲಿವುಡ್)

ಮೃಣಾಲ್ ಠಾಕೂರ್ (ಬಾಲಿವುಡ್)

S. S. ರಾಜಮೌಳಿ (ಟಾಲಿವುಡ್‌)

ರಾಮ್ ಗೋಪಾಲ್ ವರ್ಮಾ(ಟಾಲಿವುಡ್)‌

ಕೀರ್ತಿ ಸುರೇಶ್‌ (ಕಾಲಿವುಡ್‌)

ಅನ್ನಾ ಬೆನ್‌ (ಮಾಲಿವುಡ್‌)

ಸ್ವಸ್ಥ ಚಟರ್ಜಿ (ಬೆಂಗಾಲಿ ನಟ)

ಶೋಭನಾ (ಮಾಲಿವುಡ್‌)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ