ಕನ್ನಡ ಸುದ್ದಿ  /  ಮನರಂಜನೆ  /  ತಾಳ್ಮೆ ಇದ್ದರೆ ಮನಸ್ಸಿನ ಆಸೆಗಳೆಲ್ಲಾ ನೆರವೇರುತ್ತದೆ; ಅಮಿತಾಬ್‌ ಬಚ್ಚನ್‌ ಕಲ್ಕಿ 2898 ಎಡಿ ಚಿತ್ರದ ಬಗ್ಗೆ ಹೀಗೆ ಪೋಸ್ಟ್‌ ಹಂಚಿಕೊಂಡಿದ್ದೇಕೆ

ತಾಳ್ಮೆ ಇದ್ದರೆ ಮನಸ್ಸಿನ ಆಸೆಗಳೆಲ್ಲಾ ನೆರವೇರುತ್ತದೆ; ಅಮಿತಾಬ್‌ ಬಚ್ಚನ್‌ ಕಲ್ಕಿ 2898 ಎಡಿ ಚಿತ್ರದ ಬಗ್ಗೆ ಹೀಗೆ ಪೋಸ್ಟ್‌ ಹಂಚಿಕೊಂಡಿದ್ದೇಕೆ

Amitabh Bachchan: ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ಹೊಸ ಪೋಸ್ಟ್‌ ಹಂಚಿಕೊಂಡಿರುವ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ತಾಳ್ಮೆ ಬಹಳ ಅಗತ್ಯ, ತಾಳ್ಮೆ ಇದ್ದರೆ ಮನದ ಎಲ್ಲಾ ಆಸೆಗಳು ನೆರವೇರುತ್ತದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ.

ತಾಳ್ಮೆ ಇದ್ದರೆ ಮನಸ್ಸಿನ ಆಸೆಗಳೆಲ್ಲಾ ನೆರವೇರುತ್ತದೆ; ಅಮಿತಾಬ್‌ ಬಚ್ಚನ್‌ ಕಲ್ಕಿ 2898 ಎಡಿ ಚಿತ್ರದ ಬಗ್ಗೆ ಹೀಗೆ ಪೋಸ್ಟ್‌ ಹಂಚಿಕೊಂಡಿದ್ದೇಕೆ
ತಾಳ್ಮೆ ಇದ್ದರೆ ಮನಸ್ಸಿನ ಆಸೆಗಳೆಲ್ಲಾ ನೆರವೇರುತ್ತದೆ; ಅಮಿತಾಬ್‌ ಬಚ್ಚನ್‌ ಕಲ್ಕಿ 2898 ಎಡಿ ಚಿತ್ರದ ಬಗ್ಗೆ ಹೀಗೆ ಪೋಸ್ಟ್‌ ಹಂಚಿಕೊಂಡಿದ್ದೇಕೆ

ಬಹುನಿರೀಕ್ಷಿತ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ ಆಗಿದೆ. ಚಿತ್ರದ ಬಗ್ಗೆ ಸಿನಿಮಾಭಿಮಾನಿಗಳು ಉತ್ತಮ ರಿವ್ಯೂ ಕೊಡುತ್ತಿದ್ದಾರೆ. ಪ್ರಭಾಸ್‌ ಅಭಿಮಾನಿಗಳಂತೂ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಕುಟುಂಬ ಸಮೇತ ಸಿನಿಮಾ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೀಕೆಂಡ್‌ನಲ್ಲಿ ಸಿನಿಮಾ ನೋಡಲು ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಈ ನಡುವೆ ಸಿನಿಮಾ ಕುರಿತು ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿರುವ ಅಮಿತಾಬ್‌ ಬಚ್ಚನ್‌

ಚಿತ್ರದಲ್ಲಿ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 2 ಟ್ರೇಲರ್‌ಗಳು ತೆರೆ ಕಂಡಿವೆ. ಟ್ರೇಲರ್‌ ನೋಡಿದವರು ಸಿನಿಮಾ ಥಿಯೇಟರ್‌ನಲ್ಲಿ ಬೆಳ್ಳಿ ಪರದೆ ಮೇಲೆ ಅಮಿತಾಬ್‌ ಪಾತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ನೋಡಿ. ಅಮಿತಾಬ್‌ ಬಚ್ಚನ್‌ ಪಾತ್ರವನ್ನು ಕೊಂಡಿಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅಮಿತಾಬ್‌ ಬಚ್ಚನ್‌ ಪಾತ್ರದ ಪರಕಾಯ ಪ್ರವೇಶ ನೋಡಿ ಚಪ್ಪಾಳೆ ತಟ್ಟುತ್ತಿದ್ದಾರೆ. ಇದುವರೆಗೂ ನೀವು ಅಭಿನಯಿಸಿರುವ ಪಾತ್ರಗಳಿಗಿಂತಲೂ ಇದು ಬಹಳ ವಿಭಿನ್ನವಾಗಿದೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಅಭಿಮಾನಿಗಳ ಮೆಚ್ಚುಗೆಗೆ ಬಿಗ್‌ ಬಿ ಕೂಡಾ ರಿಪ್ಲೇ ಮಾಡುವ ಮೂಲಕ ಧನ್ಯವಾದ ಅರ್ಪಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಸೆಯೊಂದು ನೆರವೇರಿದೆ ಎಂದ ಬಿಗ್‌ ಬಿ

ಹಾಗೇ ಅಮಿತಾಬ್‌ ಬಚ್ಚನ್‌, ತಾವು ಈ ಚಿತ್ರದಲ್ಲಿ ನಟಿಸಿದ ನಂತರ ತನ್ನ ಆಸೆಯೊಂದು ನೆರವೇರಿದೆ ಎಂದು ಹೇಳಿಕೊಂಡಿದ್ದಾರೆ. ಪ್ರತಿಯೊಬ್ಬ ನಟ-ನಟನಿಗೂ ಜೀವನದಲ್ಲಿ ಒಮ್ಮೆ ಇಂಥದ್ದೇ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಒಮ್ಮ ಆ ಪಾತ್ರದಲ್ಲಿ ನಟಿಸಿದರೆ ಅವರ ಆಸೆ ನೆರವೇರಿದಂತೆ. ಅದಕ್ಕಿಂತ ತೃಪ್ತಿ ಅವರಿಗೆ ಮತ್ತೊಂದಿಲ್ಲ. ಅದೇ ರೀತಿ ಅಮಿತಾಬ್‌ ಬಚ್ಚನ್‌ಗೆ ಕೂಡಾ ಕಲ್ಕಿ ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರ ಮಾಡಿದ್ದು ಬಹಳ ಖುಷಿಯಾಗಿದೆಯಂತೆ. ನನ್ನ ಆಸೆ ನೆರವೇರಿದೆ ಎಂಬ ಅರ್ಥದಲ್ಲಿ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ತಾಳ್ಮೆ ಇದ್ದರೆ ಎಲ್ಲವೂ ನೆರವೇರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದೊಂದೇ ಪೋಸ್ಟ್‌ ಸಾಕು ಅಮಿತಾಬ್‌ ಬಚ್ಚನ್‌ ಅವರಿಗೆ ಈ ಚಿತ್ರದ ಪಾತ್ರ ಎಷ್ಟು ತೃಪ್ತಿ ನೀಡಿದೆ ಎಂದು ಹೇಳೋಕೆ.

ಅಶ್ವಿನಿ ದತ್‌ ನಿರ್ಮಾಣದ ಸಿನಿಮಾ

ಕಲ್ಕಿ ಚಿತ್ರವನ್ನು ವೈಜಯಂತಿ ಮೂವೀಸ್‌ ಬ್ಯಾನರ್‌ ಅಡಿ ಸಿ ಅಶ್ವಿನಿ ದತ್‌ ನಿರ್ಮಿಸಿದ್ದಾರೆ. ನಾಗ್‌ ಅಶ್ವಿನ್‌ ಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಪ್ರಭಾಸ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌, ಶೋಭನಾ ಹಾಗೂ ಇನ್ನಿತರರು ನಟಿಸಿದ್ದಾರೆ. ವಿಜಯ್‌ ದೇವರಕೊಂಡ, ಕಮಲ ಹಾಸನ್‌, ದುಲ್ಕರ್‌ ಸಲ್ಮಾನ್‌ ಹಾಗೂ ಇತರರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಂತೋಷ್‌ ನಾರಾಯಣ್‌ ಸಂಗೀತ ನೀಡಿದ್ಧಾರೆ.