logo
ಕನ್ನಡ ಸುದ್ದಿ  /  ಮನರಂಜನೆ  /  ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಢನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಢನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

Praveen Chandra B HT Kannada

Feb 19, 2024 05:57 PM IST

ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಡನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

    • Chetan Ahimsa: ನಟ ಚೇತನ್‌ ಅಹಿಂಸಾ "ಶಾಲೆಗಳಲ್ಲಿ ದೇವರ ಪೂಜೆ ಬೇಡ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರಿ ವಸತಿ ಶಾಲೆಗಳಲ್ಲಿ ಅಳವಡಿಸಿರುವ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷವಾಕ್ಯದ ಕುರಿತು ಪರವಿರೋಧ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಚೇತನ್‌ ಅಹಿಂಸಾರ ಈ ಹೇಳಿಕೆ ಹೊರಬಿದ್ದಿದೆ.
ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಡನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ
ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಡನಂಬಿಕೆ ಇಟ್ಟುಕೊಳ್ಳಿ; ನಟ ಚೇತನ್‌ ಅಹಿಂಸಾ ಅಭಿಪ್ರಾಯ

ಬೆಂಗಳೂರು: ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಕುರಿತು ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು, ಇದೇ ಸಮಯದಲ್ಲಿ ಬೀದರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಚೇತನ್‌ ಅಹಿಂಸಾ "ಶಾಲೆಗಳಲ್ಲಿ ದೇವರ ಪೂಜೆ ಬೇಡ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಕುರಿತು ಮಾಧ್ಯಮ ವರದಿಯೊಂದನ್ನು ಹಂಚಿಕೊಂಡಿರುವ ನಟ ಚೇತನ್‌ ತನ್ನ ಅಭಿಪ್ರಾಯವನ್ನು ಪುನರ್‌ ಉಚ್ಛರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

ಪೂಜಾ ಹೆಗ್ಡೆ ತುಳು ಹುಡುಗನ ಮದುವೆಯಾಗ್ತಾರ, ಕನ್ನಡ ಸಿನಿಮಾದಲ್ಲಿ ನಟಿಸ್ತಾರ? ಕಣಜಾರು ದೇಗುಲಕ್ಕೆ ಭೇಟಿ ನೀಡಿದ ತುಳುನಾಡಿನ ನಟಿ ಹೀಗಂದ್ರು

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್‌; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು

ಚೇತನ್‌ ಅಹಿಂಸಾ ಹೇಳಿದ್ದೇನು?

‘We do not need prayers in school; keep superstition & faith in your homes’ ಎಂದು ಚೇತನ್‌ ಅಹಿಂಸಾ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ "ಶಾಲೆಗಳಲ್ಲಿ ನಮಗೆ ಪ್ರಾರ್ಥನೆಯ ಅಗತ್ಯವಿಲ್ಲ; ನಿಮ್ಮ ಮೂಢನಂಬಿಕೆ ಮತ್ತು ನಂಬಿಕೆ ನಿಮ್ಮ ಮನೆಗಳಲ್ಲಿ ಇರಲಿ" ಎಂದು ಚೇತನ್‌ ಅಹಿಂಸಾ ಟ್ವೀಟ್‌ ಮಾಡಿದ್ದಾರೆ.

ಬೀದರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಚೇತನ್‌ ಅಹಿಂಸಾ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. "ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ. ಪೂಜೆ, ಪುನಸ್ಕಾರವೆಂಬ ಮೌಢ್ಯ ನಿಮ್ಮ ನಿಮ್ಮ ಮನೆ ದೇಗುಲಗಳಲ್ಲಿ ಇಟ್ಟುಕೊಳ್ಳಿ. ಶಾಲೆಗಳಲ್ಲಿ ಮುಖ್ಯವಾಗಿ ವೈಜ್ಞಾನಿಕತೆ ಪಾಲಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವೈಜ್ಞಾನಿಕತೆಯಿಂದಲೇ ಸತ್ಯ, ವೈಜ್ಞಾನಿಕ ನಡುವೆ ಸತ್ಯ" ಎಂದು ಚೇತನ್‌ ಅಭಿಪ್ರಾಯವನ್ನು ಉಲ್ಲೇಖಿಸಿ ಏಷ್ಯಾನೆಟ್‌ ಸುವರ್ಣಾ ವರದಿ ಮಾಡಿದೆ. ಅದೇ ವರದಿಯನ್ನು ಚೇತನ್‌ ಅಹಿಂಸಾ ಹಂಚಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಬೀದರ್‌ನಲ್ಲಿ ಚೇತನ್‌ ಅಹಿಂಸಾ

"ಕಳೆದ ರಾತ್ರಿ ಬೀದರ್‌ನ ಹುಮನಾಬಾದ್‌ನಲ್ಲಿ ಕಲ್ಯಾಣ ಕರ್ನಾಟಕದ ಸಮಾನತಾವಾದಿಗಳೊಂದಿಗೆ ನ್ಯಾಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. 15 ನೇ ಶತಮಾನದಲ್ಲಿ, ಬೀದರ್ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯಗಳ ನಡುವಿನ ಶಕ್ತಿ ಕೇಂದ್ರವಾಗಿತ್ತು - ಆ ಸಮಯದಲ್ಲಿ ಬೀದರ್ ಅನ್ನು ಯಾರು ನಿಯಂತ್ರಿಸುತ್ತಿದ್ದರೋ ಅವರು ಅಧಿಕಾರಕ್ಕೆ ಬರುತಿದ್ದರು. ಇಂದು ನಾವು ಆ ದೃಢವಾದ ಇತಿಹಾಸವನ್ನು ಅಧ್ಯಯನ ಮಾಡಬೇಕು ಮತ್ತು ಬೀದರ್‌ನಲ್ಲಿ ಸಮಾನತೆಯನ್ನು ಬಲಪಡಿಸಬೇಕು" ಎಂದು ಚೇತನ್‌ ಅಹಿಂಸಾ ಹೇಳಿದ್ದಾರೆ.

ವಸತಿ ಶಾಲೆಗಳಲ್ಲಿ ಹೊಸ ಘೋಷವಾಕ್ಯ

ಕರ್ನಾಟಕ ಸರ್ಕಾರಿ ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿಈ ಹಿಂದೆ ಇದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಘೋಷವಾಕ್ಯದ ಜಾಗದಲ್ಲಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷವಾಕ್ಯ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಈಗ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬ ಘೋಷವಾಕ್ಯದ ಜತೆಗೆ ಶಿಕ್ಷಕರನ್ನು ಗೌರವಿಸಿ ಎಂಬ ಘೋಷ ವಾಕ್ಯವೂ ಇದೆ. ಇದು ಕೂಡ ಚರ್ಚೆಗೀಡುಮಾಡಿದೆ. ಘೋಷವಾಕ್ಯದ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಚೇತನ್‌ ಅಹಿಂಸಾ ಅವರು "ಶಾಲೆಗಳಲ್ಲಿ ಪ್ರಾರ್ಥನೆ ಅಗತ್ಯವಿಲ್ಲ, ನಿಮ್ಮ ಮನೆಗಳಲ್ಲಿ ಮೂಡನಂಬಿಕೆ, ನಂಬಿಕೆಗಳನ್ನು ಇಟ್ಟುಕೊಳ್ಳಿ" ಎಂದು ಹೇಳಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು