logo
ಕನ್ನಡ ಸುದ್ದಿ  /  ಮನರಂಜನೆ  /  Kanguva: 300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್

Kanguva: 300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್

Jun 21, 2023 05:53 PM IST

google News

300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್

    • ಕಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಕಂಗುವ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟನ ಎಂಟ್ರಿಯಾಗಿದೆ. ವಿಜಯ್‌ ಎದುರು ಖಳನಟನಾಗಿ ಕೆಜಿಎಫ್‌ ಸಿನಿಮಾ ಖ್ಯಾತಿಯ ಆಂಡ್ರಿವ್ಸ್‌ ಅಲಿಯಾಸ್‌ ಅವಿನಾಶ್‌ ಅಬ್ಬರಿಸಲಿದ್ದಾರೆ. 
300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್
300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್

Suriya New Movie Kanguva: ಸೂರ್ಯ (Suriya) ಅಭಿನಯದ ‘ಸೂರ್ಯ 42’ ಚಿತ್ರ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಿತ್ತು. ಘೋಷಣೆ ಬಳಿಕ ಸಾಕಷ್ಟು ಕುತೂಹಲಕ್ಕೆ ಕಾರಣವಾದ ಈ ಸಿನಿಮಾ 3ಡಿಯಲ್ಲಿ ಸಿದ್ಧವಾಗಲಿದೆ ಎಂದಾಗಲೇ ಅಭಿಮಾನಿ ವಲಯದಲ್ಲಿ ಕೌತುಕ ಸೃಷ್ಟಿಸಿತ್ತು. 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿಚಾರವೂ ಸದ್ದು ಮಾಡಿತ್ತು. ಆದರೆ, ಈ ಸಿನಿಮಾ ಶೀರ್ಷಿಕೆ ಏನು ಎಂಬ ವಿಚಾರ ಮಾತ್ರ ಹೊರಬಿದ್ದಿರಲಿಲ್ಲ. ಇತ್ತೀಚೆಗಷ್ಟೇ ಆ ಕುತೂಹಲ ತಣಿದಿತ್ತು. ಚಿತ್ರಕ್ಕೆ ‘ಕಂಗುವ’ (Kanguva) ಎಂದು ಶೀರ್ಷಿಕೆ ಅಂತಿಮವಾಗಿತ್ತು.

ಸ್ಟುಡಿಯೋ ಗ್ರೀನ್‌ ಅಡಿಯಲ್ಲಿ ಕೆ.ಇ. ಜ್ಞಾನವೇಲರಾಜ ನಿರ್ಮಿಸಿ, ಶಿವ ನಿರ್ದೇಶಿಸುತ್ತಿರುವ ಈ ಚಿತ್ರವು ಶುರುವಾದಾಗಿನಿಂದಲೂ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇದೇ ಬಳಗಕ್ಕೆ ಸ್ಯಾಂಡಲ್‌ವುಡ್‌ ನಟ, ಕೆಜಿಎಫ್‌ ಖ್ಯಾತಿಯ ಆಂಡ್ರಿವ್ಸ್‌ ಅಲಿಯಾಸ್‌ ಅವಿನಾಶ್‌ ಸೇರ್ಪಡೆಯಾಗಿದ್ದಾರೆ.

‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಕೊನೆಗೂ ‘ಕಂಗುವ’ ಅಂತಿಮವಾಗಿತ್ತು. ಕಂಗುವ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

ಕೆಜಿಎಫ್‌ ಮೂಲಕವೇ ಫೇಮಸ್‌

ಕೆಜಿಎಫ್ 1 ಮತ್ತು ಕೆಜಿಎಫ್ 2 ರಲ್ಲಿ ಆಂಡ್ರಿವ್ಸ್‌ ಪಾತ್ರವನ್ನು ನಿರ್ವಹಿಸಿದ ಅವಿನಾಶ್, ಆ ಪಾತ್ರದ ಮೂಲಕವೇ ಗುರುತಿಸಿಕೊಂಡಿದ್ದರು. ಇದೀಗ ಸೂರ್ಯ ಅವರ ಕಂಗುವ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ತೆಲುಗಿನಲ್ಲಿ ವಾಲ್ತೇರು ವೀರಯ್ಯ ಮತ್ತು ವೀರಸಿಂಹ ರೆಡ್ಡಿ ಸಿನಿಮಾಗಳಲ್ಲಿಯೂ ಅವಿನಾಶ್‌ ನಟಿಸಿದ್ದಾರೆ. ವಿಜಯ್‌ ಸೇತುಪತಿ ಜತೆಗಿನ ತಮಿಳು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಬಿಗ್ ಬಜೆಟ್‌ನ ಮತ್ತೊಂದು ತಮಿಳು ಸಿನಿಮಾದ ಭಾಗವಾಗಿದ್ದಾರೆ ಅವಿನಾಶ್.

ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ವಿಎಫ್ಎಕ್ಸ್‌ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.‌

ಮನರಂಜನೆಯ ಇನ್ನಷ್ಟು ಸುದ್ದಿಗಳು

ನಾನು ಎಲ್ಲೂ ಹೋಗಿಲ್ಲ, ಬಾಲಿವುಡ್‌ನವ್ರನ್ನೇ ನಾನು ಇರೋ ಕಡೆ ಕರೆಸ್ಕೊಂಡಿದಿನಿ ತಲೆಕೆಡಿಸ್ಕೋಬೇಡಿ; ಯಶ್

Yash 19: ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಬಿಡುಗಡೆ ಆಗಿ ವರ್ಷದ ಮೇಲೆ ಎರಡು ತಿಂಗಳಾಯಿತು. ಅದಾದ ಮೇಲೆ ಚಾಪ್ಟರ್‌ 3 ಸಿನಿಮಾ ಸಹ ಬರುವ ಸೂಚನೆ ನೀಡಿತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌. ಇದೆಲ್ಲದರ ನಡುವೆಯೇ ಆ ಸಿನಿಮಾದಲ್ಲಿ ಯಶ್‌ ನಟಿಸಲಿದ್ದಾರೆ, ಈ ಬಾಷೆಯ ನಿರ್ದೇಶಕರ ಜತೆಗೆ ಕೆಲಸ ಮಾಡಲಿದ್ದಾರೆ.. ಹೀಗೆ ಸರಣಿ ಸುದ್ದಿಗಳು ಹರಿದಾಡಿದ್ದೇ ಆಯಿತೇ, ವಿನಃ ಯಾವುದೂ ಅಧಿಕೃತ ಘೋಷಣೆ ಆಗಲಿಲ್ಲ. ಈ ನಡುವೆ ಮಲಯಾಳಂ ಸಿನಿಮಾ ನಿರ್ದೇಶಕಿ ಜತೆಗೆ ಯಶ್‌ ಸಿನಿಮಾ ಮಾಡಲಿದ್ದಾರೆ ಎಂಬುದೂ ಸುದ್ದಿಯಾಗಿತ್ತು. ಈಗ ಇದೆಲ್ಲದರ ಬಗ್ಗೆ ಸ್ವತಃ ಯಶ್‌ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ