Viral News: ಉಪ್ಪಿ ಜತೆ ನಟಿ ಪ್ರೇಮ ಕುರಿತ ವದಂತಿಗೂ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ ಹಾಡಿಗೂ ಇದೆಯಂತೆ ನಂಟು
Feb 06, 2024 05:08 PM IST
Viral News: ಉಪ್ಪಿ ಜತೆ ನಟಿ ಪ್ರೇಮ ಕುರಿತ ವದಂತಿಗೂ ಓ ನಲ್ಲ ನೀನಲ್ಲ ಹಾಡಿಗೂ ಇದೆಯಂತೆ ನಂಟು
- ಸೋಷಿಯಲ್ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಉಪೇಂದ್ರ ಸಿನಿಮಾದ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಹುಟ್ಟಿಗೂ "ಉಪೇಂದ್ರ ಮತ್ತು ನಟಿ ಪ್ರೇಮ ನಡುವೆ ಏನೋ ಇದೆ ಎಂಬ ಗಾಸಿಪ್"ಗೂ ಕಾರಣವಿದೆ ಎಂಬ ಅಂಶ ಬಹಿರಂಗಗೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ " ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ" ಎಂಬ ಹಾಡು ಸಖತ್ ವೈರಲ್ ಆಗುತ್ತಿದೆ. ಆದರೆ, ಈ ಹಾಡು 25 ವರ್ಷ ಹಿಂದಿನದ್ದು ಎನ್ನುವ ಸಂಗತಿ ಈಗಾಗಲೇ ಬಹಿರಂಗಗೊಂಡಿದೆ. ಉತ್ತರ ಕರ್ನಾಟಕದ ಯುವಕನೊಬ್ಬ ತನ್ನ ರೀಲ್ಸ್‌ಗೆ ಈ ಹಾಡನ್ನು ಅಪ್ಲೋಡ್ ಮಾಡಿದ ಬಳಿಕ ಈ ಹಳೆಯ ಹಾಡು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಹಾಡಿನ ಹಿಂದಿರುವ ರಹಸ್ಯವನ್ನು ಸಂಗೀತ ನಿರ್ದೇಶಕ ಗುರುಕಿರಣ್ ಈಗಾಗಲೇ ಬಹಿರಂಗಪಡಿಸಿದ್ದಾರೆ. ಈ ಹಾಡಿಗೂ ಉಪೇಂದ್ರ ಜತೆ ನಟಿ ಪ್ರೇಮ ನಡುವೆ ಏನೋ ಇದೆ ಎಂಬ ಗಾಸಿಪ್‌ಗೂ ನಂಟು ಇದೆ ಎಂಬ ವಿಚಾರವೂ ಇದೇ ಸಂದರ್ಭದಲ್ಲಿ ಬಹಿರಂಗಗೊಂಡಿದೆ.
ಉಪೇಂದ್ರ ಸಿನಿಮಾದ ಹಾಡು ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ರೀಲ್ಸ್ ತೆರೆದರೂ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ ಎಂಬ ಹಾಡೇ ಕೇಳುತ್ತಿತ್ತು. ಬ್ಯಾಚುಲರ್ಸ್‌ಗಳಂತೂ ಪ್ರತಿಯೊಂದು ವಿಡಿಯೋಗೂ, ರೀಲ್ಸ್‌ಗೂ ಇದೇ ಹಾಡನ್ನು ಹಾಕುತ್ತಿದ್ದರು. ಫಿಲ್ಮಿಫಸ್ಟ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಗುರುಕಿರಣ್ ಅವರು ಈ ಹಾಡಿನ ಹುಟ್ಟಿನ ಕುರಿತು ಸಾಕಷ್ಟು ವಿವರ ನೀಡಿದ್ದಾರೆ.
ಉಪ್ಪಿ ಜತೆ ನಟಿ ಪ್ರೇಮ ಕುರಿತ ವದಂತಿ
ರಿಯಲ್ ಸ್ಟಾರ್ ಉಪೇಂದ್ರ ಅವರು ಕನ್ನಡ ಚಿತ್ರರಂಗಕ್ಕೆ ಡೈರೆಕ್ಟರ್ ಕ್ಯಾಪ್ ಹಾಕಿಕೊಂಡು ಎಂಟ್ರಿ ನೀಡಿದ್ದರು. ಬಳಿಕ ಇವರೇ ಹಲವು ಸಿನಿಮಾಗಳಿಗೆ ಹೀರೋ ಆಗಿದ್ದರು. ಈ ಸಂದರ್ಭದಲ್ಲಿ ನಟಿ ಪ್ರೇಮ ಜತೆ ಉಪೇಂದ್ರರಿಗೆ ಏನೋ ಇದೆ ಎಂಬ ಗುಸುಗುಸು ಹರಡಿತ್ತು.ಈ ವದಂತಿ ಸುಳ್ಳು ಎನ್ನುವುದು ಇಡೀ ಚಿತ್ರರಂಗಕ್ಕೆ ಗೊತ್ತಿತ್ತು. ಆದರೆ, ಇಂತಹ ವದಂತಿ ಹೊರಗಡೆ ಹಬ್ಬುತ್ತಿತ್ತು. ಇದೇ ಸಂದರ್ಭದಲ್ಲಿ ಇಂತಹ ವದಂತಿಗಳಿಗೆ ಹಾಡಿನ ಮೂಲಕವೇ ಉತ್ತರ ನೀಡಲು ಉಪೇಂದ್ರ ಬಯಸಿದ್ದರಂತೆ.
ಉಪೇಂದ್ರ ಸಿನಿಮಾದಲ್ಲಿ ಮೂವರು ಹೀರೋಯಿನ್‌ಗಳಿದ್ದರು. ಪ್ರೇಮಾ, ರವೀನಾ ಟಂಡನ್, ದಾಮಿನಿ ಎಂಬ ಮೂವರು ನಾಯಕಿಯರನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿತ್ತು. ಈ ನಾಯಕಿಯರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಹಾಡುಗಳನ್ನು ಉಪೇಂದ್ರ ಸಿನಿಮಾದಲ್ಲಿ ಹೊಸೆಯಳಾಗಿತ್ತು. ನಟಿ ಪ್ರೇಮಾರನ್ನು ಗಮನದಲ್ಲಿಟ್ಟುಕೊಂಡು " ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀ ನಲ್ಲ" ಎಂಬ ಹಾಡನ್ನು ಬರೆಯಲಾಗಿತ್ತೆಂದು ಅವರು ಹೇಳಿದ್ದಾರೆ. ಈ ಮೂಲಕ ಪ್ರೇಮ ಮತ್ತು ಉಪೇಂದ್ರರ ನಡುವೆ ಏನೂ ಇಲ್ಲ ಎಂದು ಹಾಡಿನ ಮೂಲಕ ಉತ್ತರ ನೀಡಲಾಗಿತ್ತು.
"ಏನಿಲ್ಲ ಎಂಬ ಪದ ಎರಡು ಅರ್ಥ ಧ್ವನಿಸುತ್ತದೆ. ಏನೇನಿಲ್ಲ ಮತ್ತು ಏನೇನೂ ಇಲ್ಲ ಎಂಬ ಎರಡು ಅರ್ಥ ಬರುತ್ತದೆ. ಈ ಹಾಡು ಕಂಪೋಸ್ ಮಾಡೋಕ್ಕೆ ಉಪೇಂದ್ರ ಸೇರಿದಂತೆ ಸುಮಾರು ಹತ್ತು ಜನರು ಮಂಗಳೂರಿಗೆ ಹೋಗಿದ್ದರು. ಅಲ್ಲಿ ರೆಸಾರ್ಟ್‌ನಲ್ಲಿ ಕುಳಿತು ಟ್ಯೂನ್ ಹಾಕಲು ಆರಂಭಿಸಿದ್ದರು. ಅಲ್ಲೇ ಕುಳಿತು ಏನಿಲ್ಲ ಏನಿಲ್ಲ, ಮಸ್ತ್ ಮಸ್ತ್ ಹುಡುಗಿ ಬಂದ್ಲು ಮುಂತಾದ ಹಾಡುಗಳನ್ನು ರಚಿಸಿದೆವು" ಎಂದು ಗುರುಕಿರಣ್ ಹೇಳಿದ್ದಾರೆ.