logo
ಕನ್ನಡ ಸುದ್ದಿ  /  ಮನರಂಜನೆ  /  ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರನ ‘ಕ್ಲಿಕ್‌’ ಚಿತ್ರದ ಟ್ರೇಲರ್‌ ಅನಾವರಣ

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರನ ‘ಕ್ಲಿಕ್‌’ ಚಿತ್ರದ ಟ್ರೇಲರ್‌ ಅನಾವರಣ

Jan 27, 2024 10:52 AM IST

google News

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರನ ಕ್ಲಿಕ್‌ ಚಿತ್ರದ ಟ್ರೇಲರ್‌ ಅನಾವರಣ

    • ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರ ಪವನ್‌ ಇದೀಗ ಕ್ಲಿಕ್‌ ಹೆಸರಿನ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರನ ಕ್ಲಿಕ್‌ ಚಿತ್ರದ ಟ್ರೇಲರ್‌ ಅನಾವರಣ
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರನ ಕ್ಲಿಕ್‌ ಚಿತ್ರದ ಟ್ರೇಲರ್‌ ಅನಾವರಣ

Click movie Trailer: ಕೆಜಿಎಫ್‌, ಸಲಾರ್‌ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ನಾಯಕನಾಗಿ ಅಭಿನಯಿಸಿರುವ ಕ್ಲಿಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ದೊಡ್ಡ ಪರದೆಯಲ್ಲಿ ಕ್ಲಿಕ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ವಿಶೇಷ. ಇದೇ ಮೊದಲ ಬಾರಿಗೆ ವಿದೇಶದ ಬಿಗ್ ಸ್ಕ್ರೀನ್ ಮೂಲಕ ಅನಾವರಣಗೊಂಡ ಟ್ರೇಲರ್ ಎಂಬುದು ಕ್ಲಿಕ್ ಚಿತ್ರದ ಹೆಚ್ಚುಗಾರಿಕೆ.

ಹೀಗೆ ವಿದೇಶದ ಸ್ಕ್ರೀನ್‌ ಮೇಲೆ ಮೂಡಿದ ಈ ಚಿತ್ರದ ಟ್ರೇಲರ್‌ಅನ್ನು ಚಿತ್ರತಂಡ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಿ ಬಿಡುಗಡೆ ಮಾಡಿದೆ. ಸಲಾರ್ ಸಿನಿಮಾ ಖ್ಯಾತಿಯ ನಟ ನವೀನ್ ಶಂಕರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಮಾತನಾಡಿದ ಅವರು, ಮಕ್ಕಳಲ್ಲಿರುವ ಟ್ಯಾಲೆಂಟ್ ಪೋಷಕರು ಗುರುತಿಸಬೇಕೆಂದು ಇದರಲ್ಲಿ ತೋರಿಸಿದ್ದಾರೆ. ಮೊದಲ ಬಾರಿ ನೋಡುತ್ತಲೇ ಇಷ್ಟವಾಗುವ ಟ್ರೇಲರ್ ಎಂದರು.

ಮತ್ತೊಬ್ಬ ಅತಿಥಿ, ಕ್ಲಾಂತ ನಾಯಕ ವಿಘ್ನೇಶ್ ಮಾತನಾಡಿ, ಚಿತ್ರದಲ್ಲಿ ಒಳ್ಳೇ ಮೆಸೇಜ್ ಇದೆ. ಮಕ್ಕಳ ಮನಸ್ಥಿತಿ ಬಗ್ಗೆ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದಲ್ಲಿ ಲೀಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಲ್ಲಿ ಲಲ್ಲಿ ಆನಂದ್ ಮಾತನಾಡುತ್ತ ತಮ್ಮ ಮಕ್ಕಳು ಹಾಳಾಗಬಾರದು, ಹಾಗಾಗಬೇಕು, ಹೀಗಾಗಬೇಕು ಅಂತ ಹೇಳ್ತಾರೇ ವಿನಃ ಅವರಲ್ಲಿ ಯಾವ ಟ್ಯಾಲೆಂಟ್ ಇದೆ ಅಂತ ಗುರುತಿಸುವ ಪ್ರಯತ್ನವನ್ನು ಯಾರೂ ಮಾಡಲ್ಲ. ನಾನೂ ಅಂಥ ಒಬ್ಬ ತಂದೆಯಾಗಿ ನಟಿಸಿದ್ದೇನೆ. ಒಳ್ಳೆ ಸಬ್ಜೆಕ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದರು.

ಜೀವನದಲ್ಲಿ ನಾವು ಯಾವ ಕೆಲಸ ಮಾಡ್ತೀವೋ ಅದರಲ್ಲಿ ಕ್ಲಿಕ್ ಆಗಬೇಕು. ನಮ್ಮ ಆಸೆಗಿಂತಲೂ ಮಕ್ಕಳ ಮನದಲ್ಲೇನಿದೆ. ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಅಂತ ಗುರುತಿಸಿ ಅದನ್ನು ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡ್ತಾರೆಂಬುದು ಚಿತ್ರದಲ್ಲಿದೆ ಎಂದರು ನಟಿ ಚಂದ್ರಕಲಾ ಮೋಹನ್.

ಗಿರ್ಮಿಟ್ ಸಿನಿಮಾದಲ್ಲಿ ಪವನ್ ಅಭಿನಯ ನೋಡಿ ಆತನೇ ನಮ್ಮ ಕಥೆಗೆ ಹೀರೋ ಅಂತ ಸೆಲೆಕ್ಟ್ ಮಾಡಿಕೊಂಡೆವು. ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ ಎಂದರು. ಶಶಿಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ವಿಶ್ವಾಸ್ ಕೌಶಿಕ್ ಸಂಗೀತ ನೀಡಿದ್ದಾರೆ. ಆಕಾಶ್ ಪರ್ವ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಜೀವನ್ ಗೌಡ ಅವರ ಛಾಯಾಗ್ರಹಣ, ವಿನಯ್ ಕುಮಾರ್ ಅವರ ಸಂಕಲನವಿದೆ ಎಂದರು ನಿರ್ಮಾಪಕ ಶಶಿಕಿರಣ್.

ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಡಾಕ್ಟರ್- ಇಂಜಿನಿಯರ್ ಆಗಬೇಕೆಂದು ಬಯಸುತ್ತಾರೆ. ಆದರೆ ಮಕ್ಕಳ ಇಚ್ಛೆಗೆ ತಕ್ಕಂತೆ ಅವರಿಗೆ ಆಯ್ಕೆ ಮಾಡಲು ಬಿಡಬೇಕು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮೂಲತಃ ಬೆಂಗಳೂರಿನವರಾದ ಶಶಿಕಿರಣ್, ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಇದ್ದರೂ, ಮನೆಯವರ ಸಲಹೆಯ ಮೇರೆಗೆ ಇಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರಿದರು. ಆದರೂ ಶಶಿಗೆ ಸಿನಿಮಾ ಕಡೆಯೇ ಸೆಳೆತವಿತ್ತು.

ದೊಡ್ಡ ಮಟ್ಟದಲ್ಲಿ ನನ್ನ ಕನಸು ಈಡೇರಿದ ಖುಷಿಯಲ್ಲಿದ್ದೇನೆ. ರವಿ ಬಸ್ರೂರು ಅವರು ಪವನ್ ನನ್ನ ಮಗ ಅಂತ ತಗೋಬೇಡಿ. ಆಡಿಷನ್ ಮಾಡಿಯೇ ಸೆಲೆಕ್ಟ್ ಮಾಡಿ" ಅಂತ ಹೇಳಿದ್ದರು. ಪವನ್ ಅವರಿಗೆ ನಟನೆಯಲ್ಲಿ ಸೆಳೆಯುವ ಪವರ್ ಇದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲವಿದೆ ಎನ್ನುತ್ತಾರೆ ನಿರ್ಮಾಪಕ ಶಶಿಕಿರಣ್.

ಟೆಕ್ಕಿ ಶಶಿಕಿರಣ್ ಅವರು ಶರಣ್ಯ ಫಿಲಂಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದು ವರುಣ್ ರಾಘವೇಂದ್ರ ಕೋ ಪ್ರೊಡ್ಯೂಸರ್ ಆಗಿ ಕೈಜೋಡಿಸಿದ್ದಾರೆ. ಮಾಸ್ಟರ್ ಪವನ್ ಜೊತೆ ಮಾಸ್ಟರ್‌ ಕಾರ್ತಿಕ್ , ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಕ್ಲಿಕ್ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ