Seetha Rama Serial: ರಾಮನ ಮೇಲಿನ ಸಿಟ್ಟಿಗೆ ಸೀತಾಳ ಮನೆ ಮೇಲೆ ಬಿತ್ತು ಭಾರ್ಗವಿಯ ವಕ್ರದೃಷ್ಟಿ! ಮತ್ತೆ ಕಳ್ಳಾಟಕ್ಕಿಳಿದ ದೇಸಾಯಿ ಮನೆ ಸೊಸೆ
Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್ ದಿನದಿಂದ ದಿನಕ್ಕೆ ಮಗ್ಗುಲು ಬದಲಿಸುತ್ತಿದೆ. ಕೌತುಕ ಸೃಷ್ಟಿಸುತ್ತ ಮುನ್ನಡೆಯುತ್ತಿದೆ. ಸೀತಾಳ ಮನೆ ಮಾರಾಟಕ್ಕೆ ಬಂದಿದೆ. ಮತ್ತೊಂದು ಕಡೆ ಇದೇ ವಿಚಾರ ರಾಮನಿಗೂ ಗೊತ್ತಾಗಿದೆ. ಇಲ್ಲೂ ಕಳ್ಳಾಟವಾಡಲು ಭಾರ್ಗವಿ ಸಂಚು ರೂಪಿಸಿದ್ದಾಳೆ.
Seetha Rama Serial: ಸಿಹಿ ಶಾಲೆಯಲ್ಲಿ ಕಲ್ಚರಲ್ ಕಾರ್ಯಕ್ರಮಗಳು ನಡೆಯುತ್ತಿವೆ. ಆ ಕಾರ್ಯಕ್ರಮಕ್ಕೆ ನೀನು ಬರಲೇಬೇಕು ಫ್ರೆಂಡ್ ಅಂತ ನೇರವಾಗಿ ರಾಮನ ಮನೆಗೇ ಪತ್ರ ಬರೆದಿದ್ದಾಳೆ ಸಿಹಿ. ಅಚ್ಚರಿಯ ರೀತಿಯಲ್ಲಿ ಆ ಪತ್ರ ರಾಮನ ಕೈ ಸೇರಿದೆ. ಸಿಹಿ ಬರೆದ ಮುದ್ದಾದ ಅಕ್ಷರಗಳನ್ನು ಕಂಡು, ಪದೇ ಪದೆ ಅದನ್ನೇ ಓದಿ ನಗಾಡಿದ್ದಾನೆ ರಾಮ. ಕಾಕತಾಳೀಯ ಎಂಬಂತೆ ಅದೇ ಶಾಲೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿ ಬರುವಂತೆ ತಾತನಿಂದಲೂ ರಾಮನಿಗೆ ಆದೇಶ ಬಂದಿದೆ.
ಇತ್ತ ಮಾವಯ್ಯನ ಬಗ್ಗೆ ಕಿಡಿ ಕಾರುತ್ತಿದ್ದಾಳೆ ಭಾರ್ಗವಿ. ಪತಿ ವಿಶ್ವನ ಮುಂದೆ ತನ್ನ ಕೋಪತಾಪವನ್ನು ಹೊರಗೆಡವುತ್ತಿದ್ದಾಳೆ. 50 ಲಕ್ಷದ ಪ್ರಾಪರ್ಟಿ ಖರೀದಿ ಮಾಡುವ ವಿಚಾರವಾಗಿ ಮಾವನ ಬಳಿ ಕೇಳಿದರೆ, ರಾಮನ ಜತೆ ಮಾತಾಡು ಎಂದಿದ್ದಾನೆ ನಿಮ್ಮ ಅಪ್ಪ ಎಂದು ಸೂರ್ಯ ಪ್ರಕಾಶ್ ಬಗ್ಗೆ ಮಾತನಾಡುತ್ತಿದ್ದಾಳೆ ಭಾರ್ಗವಿ. ಪತ್ನಿ ಈ ಮಾತುಗಳನ್ನು ಅಷ್ಟೇ ಸಮಾಧಾನದಿಂದ ಕೂತು ಕೇಳಿ, ರಾಮನ ಬಳಿ ಕೇಳಿದ್ರಾಯ್ತಲ್ಲ ಎಂದಿದ್ದಾನೆ.
ಈ ನಡುವೆ ಪ್ರಿಯಾ ಮತ್ತು ಅಶೋಕನ ನಡುವೆ ಲಂಚ್ ಸಮಯದಲ್ಲಿ ಮಾತುಕತೆ ನಡೆದಿದೆ. ಇಬ್ಬರೂ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಅಡುಗೆ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ. ಇದೇ ವೇಳೆ ಇನ್ಮೇಲೆ ಸೀತಾ ನನ್ನ ಜತೆಗೇ ಇರ್ತಾಳಲ್ವ, ಅವಳಿಂದ ಅಡುಗೆ ಕಲಿತೀನಿ ಎಂದಿದ್ದಾಳೆ ಪ್ರಿಯಾ. ಪ್ರಿಯಾಳ ಈ ಮಾತು ಅಶೋಕನಿಗೆ ಕೊಂಚ ಅನುಮಾನ ತರಿಸಿದೆ. ಬಳಿಕ ಉತ್ತರಿಸಿದ ಪ್ರಿಯಾ, ಸೀತಾಳ ಮನೆಯನ್ನು ಬ್ಯಾಂಕ್‌ನವರು ಹರಾಜು ಹಾಕ್ತಿದ್ದಾರೆ ಎಂದಿದ್ದಾಳೆ.
ಸೀತಾಳ ಮನೆ ಹರಾಜು ಆಗ್ತಿರೋದ್ರಿಂದ, ಬೇರೆ ಮನೆ ಸಿಗುವವರೆಗೂ ಅವಳು ನಮ್ಮನೆಯಲ್ಲಿ ಇರ್ತಾಳೆ ಎಂಬ ವಿಚಾರವನ್ನು ಅಶೋಕ ಬಳಿ ಹೇಳಿದ್ದಾಳೆ. ಇದೇ ವಿಚಾರವನ್ನು ನೇರವಾಗಿ ರಾಮ್ ಮುಂದೆಯೂ ಪ್ರಸ್ತಾಪಿಸಿದ್ದಾನೆ ಅಶೋಕ. ಸೀತಾ ಅವರೇ ಮನೆ ಬಿಟ್ಟುಕೊಡಲು ರೆಡಿಯಾಗಿದ್ದಾರೆ ಎಂದೂ ಹೇಳಿದ್ದಾನೆ. ಇತ್ತ ರಾಮ್ ತಲೆಯಲ್ಲಿ ಹತ್ತು ಹಲವು ವಿಚಾರಗಳು ಓಡಾಡುತ್ತಿವೆ. ನಾನೇ ಸೆಟಲ್ ಮಾಡ್ತಿನಿ ಎಂದ್ರೂ ಸೀತಾ ಇದಕ್ಕೆ ಒಪ್ಪಲ್ಲ ಎಂದು ಮನಸ್ಸಿನಲ್ಲಿಯೇ ಪ್ರಶ್ನೆ ಮಾಡಿಕೊಂಡಿದ್ದಾನೆ.
ಮತ್ತೊಂದು ಕಡೆ, ಭಾರ್ಗವಿ ನೇರವಾಗಿ ಚರಣ್ ಡಿಯನ್ನು ಭೇಟಿ ಮಾಡಿದ್ದಾಳೆ. ರಾಮನ ಮೇಲಿನ ಸಿಟ್ಟಿಗೆ ಚರಣ್ ಜತೆಗೆ ಮತ್ತೊಂದು ಅವ್ಯವಹಾರಕ್ಕೆ ಕೈ ಜೋಡಿಸಿದ್ದಾಳೆ. ಅದಕ್ಕೆ ಆತನೂ ಸಹ ಒಪ್ಪಿಗೆ ಸೂಚಿಸಿದ್ದಾನೆ. ಅಷ್ಟಕ್ಕೂ ಹಣದ ಹೂಡಿಕೆ ಎಲ್ಲಿ ಮಾಡಬೇಕು ಎಂದೂ ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ಭಾರ್ಗವಿ, ನಿಮ್ಮ ಸೀತಾ ಮಾತೆಯ ಮನೆ ಹರಾಜಿಗೆ ಬಂದಿದೆ. ಆ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡು ಎಂದಿದ್ದಾಳೆ. ಅದಕ್ಕೆ ಎಷ್ಟೇ ಕೋಟಿ ಆದ್ರೂ ಪರವಾಗಿಲ್ಲ, ಅದನ್ನು ಖರೀದಿಸು ಎಂದಿದ್ದಾಳೆ.
ಅಷ್ಟಕ್ಕೂ ಭಾರ್ಗವಿಯ ಪ್ಲಾನ್ ಏನು? ಇತ್ತ ಹರಾಜಿಗಿಟ್ಟ ಸೀತಾಳ ಮನೆಯನ್ನು ರಾಮ ಉಳಿಸಿಕೊಳ್ಳುತ್ತಾನಾ? ಆತನ ಮುಂದಿನ ನಡೆ ಏನು? ಸಿಹಿಯ ಶಾಲಾ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಆಗಮನವೂ ಆಗಲಿದೆ. ಅಚ್ಚರಿಯ ರೀತಿಯಲ್ಲಿ ಹಾಜರಿ ಹಾಕಲಿದ್ದಾನೆ ರಾಮ. ಹೀಗೆ ಒಂದಷ್ಟು ಕೌತುಕದ ಹೂರಣವನ್ನೇ ವೀಕ್ಷಕರಿಗೆ ನೀಡುತ್ತಿದೆ ಸೀತಾ ರಾಮ ಸೀರಿಯಲ್.