‘ಅತ್ತಿಗೆಮ್ಮಾ ಒಂದ್ ಮಾತು ಹೇಳಿ ಇನ್ನೊಂದ್ ಸಲ ಬಾಸ್ ಬಗ್ಗೆ ಪೋಸ್ಟ್ ಹಾಕ್ಬಾರ್ದು ಹಂಗೆ ರುಬ್ತಿವಿ’; ದರ್ಶನ್ ಫ್ಯಾನ್ಸ್ ಕೆಂಡ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಕೋಲ್ಡ್ ವಾರ್ ಇನ್ನೂ ನಿಂತಂತೆ ಕಾಣುತ್ತಿಲ್ಲ. ಇಬ್ಬರೂ ಕಾನೂನು ರೀತಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಈ ನಡುವೆ ದರ್ಶನ್ ಅಭಿಮಾನಿಗಳೂ ಸಹ ವಿಜಯಲಕ್ಷ್ಮೀ ಅವರ ಬೆನ್ನಿಗೆ ನಿಂತಿದ್ದಾರೆ.
Darshan: ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ನಡುವಿನ ಸಮರ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಕಿಡಿ ಹೊತ್ತಿಸಿದ್ದಾರೆ. ದರ್ಶನ್ ಜತೆ 10 ವರ್ಷಗಳನ್ನು ಕಳೆದ ಖುಷಿಯಲ್ಲಿ ಪವಿತ್ರಾ ಗೌಡ, ದಚ್ಚು ಜತೆಗಿನ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದೇ ಈ ರಾದ್ಧಾಂತಕ್ಕೆ ಕಾರಣ. ಈ ನಡುವೆ ದರ್ಶನ್ ಫ್ಯಾನ್ಸ್ ಸಹ ಕೊಂಚ ಗರಂ ಆಗಿದ್ದಾರೆ. ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತು, ಪವಿತ್ರಾ ಗೌಡ ಅವರ ವಿರುದ್ಧ ಕಹಳೆ ಮೊಳಗಿಸಿದ್ದಾರೆ.
ಇತ್ತೀಚೆಗಷ್ಟೇ ದರ್ಶನ್ ಜತೆ ಕಳೆದ ಸುಮಧುರ 10 ವರ್ಷಗಳ ಕ್ಷಣವನ್ನು ಕಿರು ವಿಡಿಯೋ ತುಣುಕು ರೂಪದಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು ಪವಿತ್ರಾ ಗೌಡ. ಈ ವಿಡಿಯೋ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗಮನಕ್ಕೂ ಬಂದಿತ್ತು. ಕೂಡಲೇ ಪವಿತ್ರಾ ಗೌಡ ಮತ್ತವರ ಪತಿ ಮತ್ತು ಮಗುವಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬೇರೊಬ್ಬರ ಗಂಡನ ಜತೆಗೆ ತನ್ನ ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಪ್ರಜ್ಞೆ ಇರಬೇಕು ಎಂದು ಟಾಂಗ್ ಕೊಟ್ಟಿದ್ದರು.
ವಿಜಯಲಕ್ಷ್ಮೀ ಪೋಸ್ಟ್ ಏನಾಗಿತ್ತು?
ವಿವಾಹಿತ ಪುರುಷನೆಂದು ತಿಳಿದರೂ ಅವಳು ಇನ್ನೂ ತನ್ನ ವೈಯಕ್ತಿಕ ಅಗತ್ಯಗಳಿಗೆ ಈ ರೀತಿ ಮಾಡುವುದು ಸರಿಯಲ್ಲ. ಈ ಫೋಟೋಗಳು ಸ್ಪಷ್ಟವಾಗಿದೆ. ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು. ನಾನು ಸಾಮಾನ್ಯವಾಗಿ ಯಾರ ವೈಯಕ್ತಿಕ ವಿಷಯಗಳ ಕುರಿತು ಮಾತನಾಡಲು ಸೋಷಿಯಲ್ ಮೀಡಿಯಾ ಬಳಕೆ ಮಾಡಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ. ಕಾನೂನು ಕ್ರಮಕ್ಕೂ ನಾನು ಮುಂದಾಗುತ್ತೇನೆ ಎಂದಿದ್ದರು.
ದರ್ಶನ್ ಫ್ಯಾನ್ಸ್ ವಲಯದಲ್ಲಿ ಆಕ್ರೋಶ
ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವಿನ ಈ ಕೋಲ್ಡ್ ವಾರ್, ದರ್ಶನ್ ಅಭಿಮಾನಿ ಬಳಗದಲ್ಲೂ ಕೊಂಚ ಬಿರುಸು ಪಡೆದುಕೊಂಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಅವರ ಪರವಾಗಿ ದರ್ಶನ್ ಫ್ಯಾನ್ಸ್ ಬೆನ್ನಿಗೆ ನಿಂತಿದ್ದಾರೆ.
"ಅತ್ತಿಗೆಮ್ಮಾ ನೀವು ಏನು ತಲೆ ಕೆಡಿಸಿಕೊಳ್ಳಬೇಡಿ ಒಂದೇ ಒಂದು ಮಾತು ಹೇಳಿ ಇನೊಂದು ಸಲ ಬಾಸ್ ಬಗ್ಗೆ ಪೋಸ್ಟ್ ಹಾಕಬಾರದು ಹಂಗೆ ರುಬ್ತಿವಿ" ಎಂದು ಕಾಮೆಂಟ್ ಹಾಕುತ್ತಿದ್ದಾರೆ.
"ಪವಿತ್ರ ಗೌಡ ಅವರು ಪೋಸ್ಟ್ ಹಾಕೋಕು ಮುಂಚೆನೇ ಕಾಮೆಂಟ್ ಆಫ್ ಮಾಡಿದ್ದಾರೆ ಅದರಲ್ಲೇ ಗೊತ್ತಾಗುತ್ತೆ ಪವಿತ್ರ ಗೌಡ ಅವರು ಇದನ್ನೆಲ್ಲಾ ಉದ್ದೇಶ ಪೂರ್ವಕವಾಗಿ ಮಾಡ್ತಾ ಇದಾರೆ ಅಂತಾ" ಎಂದೂ ಕೆಲವರು ಪ್ರತಿಕ್ರಿಯಿಸಿದ್ದಾರೆ.
"ವಿಜಯಲಕ್ಷ್ಮಿ ಅವರೇ ಅವಳು ಹಣ,, ಆಸ್ತಿಗೆ ದರ್ಶನ್ ಅವರ ಜೊತೆ ಇರೋದು.... ಆದರೇ ನೀವು ದರ್ಶನ್ ಅವರು ಸ್ಟಾರ್ ಆಗೋಕೂ ಮುಂಚೆನೇ ಸಪ್ತಪದಿ ತುಳಿದು ಭಾರತ ದೇಶದ ಸಂಸ್ಕೃತಿ ಪ್ರಕಾರ ಮದುವೆ ಆಗಿದ್ದೀರಿ ಹೆದರಬೇಡಿ ಅವಳಿಗೆ ಚಪ್ಪಲಿಯಲ್ಲಿ ಹೊಡೆದು ಆಚೆ ಹಾಕಿ"
"ಕಾಲಾಯ ತಸ್ಮೈ ನಮಃ • ನಿಮ್ಮಗೆ ಅನ್ಯಾಯ ಆಗಿದ್ದರೆ ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಬಿಡಿ"
"ಡೋಂಟ್ ವರಿ ಅತ್ತಿಗೆ ನಿಮ್ಮೊಂದಿಗೆ ನಾವ್ ಇದೆವೆ ಯಾರು ಎನ್ ಮಾಡೋಕೊಳ್ಳೇಕೆ ಆಗೋಲ್ಲ ಜೈ ಡಿ ಬಾಸ್"
"ಅತ್ತಿಗೆ ಕನ್ನಡಿಗರು ಮತ್ತೆ ಬಾಸ್ ಅಭಿಮಾನಿಗಳು ನಿಮ್ಮ ಜೋತೆ ಸದಾ ಇರ್ತೀವಿ ಅತ್ತಿಗೆ"