logo
ಕನ್ನಡ ಸುದ್ದಿ  /  ಮನರಂಜನೆ  /  ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರುಬಳಕೆ; Nr ಫಿಲಂ ಇನ್ಸಿಟ್ಯೂಟ್‌ ವಿದ್ಯಾರ್ಥಿಗಳೇ ಪಾತ್ರಧಾರಿಗಳು

ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರುಬಳಕೆ; NR ಫಿಲಂ ಇನ್ಸಿಟ್ಯೂಟ್‌ ವಿದ್ಯಾರ್ಥಿಗಳೇ ಪಾತ್ರಧಾರಿಗಳು

May 10, 2024 06:00 AM IST

google News

ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರುಬಳಕೆ; NR ಫಿಲಂ ಇನ್ಸಿಟ್ಯೂಟ್‌ ವಿದ್ಯಾರ್ಥಿಗಳೇ ಪಾತ್ರಧಾರಿಗಳು

    • ಡಾ ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರು ಬಳಕೆಯಾಗುತ್ತಿದೆ. ಎನ್‌ಆರ್‌ ಫಿಲಂ ಇನ್ಸಿಟ್ಯೂಟ್‌ನ ವಿದ್ಯಾರ್ಥಿಗಳೇ ನಟಿಸುತ್ತಿರುವ ಚಿತ್ರಕ್ಕೆ ಗಾಂಧಿನಗರ ಏಂಬ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದೆ.  
ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರುಬಳಕೆ; NR ಫಿಲಂ ಇನ್ಸಿಟ್ಯೂಟ್‌ ವಿದ್ಯಾರ್ಥಿಗಳೇ ಪಾತ್ರಧಾರಿಗಳು
ರಾಜ್‌ಕುಮಾರ್‌ ನಟನೆಯ ಗಾಂಧಿನಗರ ಚಿತ್ರದ ಶೀರ್ಷಿಕೆ ಮರುಬಳಕೆ; NR ಫಿಲಂ ಇನ್ಸಿಟ್ಯೂಟ್‌ ವಿದ್ಯಾರ್ಥಿಗಳೇ ಪಾತ್ರಧಾರಿಗಳು

Gandhinagar: ಡಾ. ರಾಜಕುಮಾರ್ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ಗಾಂಧಿನಗರ. ಹಲವು ವರ್ಷಗಳ ಬಳಿಕ ಅದೇ ಹೆಸರಿನ ಚಿತ್ರ ಆರಂಭವಾಗಿದೆ. ಇತ್ತೀಚಿಗೆ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಇಬ್ಬನಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕನ್ನಡ ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ನ ರುವಾರಿಗಳೂ ಆಗಿರುವ ಎಸ್.ಹೆಚ್ ನಾಗೇಶ್ ರೈತ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ‌‌.

ಅಂದಹಾಗೆ, ಡಾ. ರಾಜ್‌ಕುಮಾರ್‌ ನಟಿಸಿದ್ದ ಗಾಂಧಿನಗರ ಸಿನಿಮಾ 1968ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ 2003ರಲ್ಲಿಯೂ ಗಾಂಧಿನಗರ ಹೆಸರಿನ ಸಿನಿಮಾವೊಂದು ಕನ್ನಡದಲ್ಲಿ ನಿರ್ಮಾಣವಾಗಿತ್ತು. ಈಗ ಅದೇ ಹೆಸರಿನ ಶೀರ್ಷಿಕೆಯನ್ನೇ ಮರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ನಾಗೇಶ್‌. ಆರ್ ಫಿಲಂ  ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತಿರುವ ಬಾಲಾಜಿ ರಾವ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳೇ ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಚಿತ್ರರಂಗದ ಕಾರ್ಯಕ್ಷೇತ್ರವಾಗಿರುವ ಗಾಂಧಿನಗರಕ್ಕೂ ಗಾಂಧಿನಗರ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಿರುದ್ಯೋಗ ಸಮಸ್ಯೆಯ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಚಿತ್ರ. ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧಿ ಅವರ ಹೆಸರಿನ ಗಾಂಧಿನಗರ ಎಂಬ ಊರಿನಲ್ಲಿ ವಾಸವಿರುವ ವಿದ್ಯಾವಂತರು ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದಾಗ ಏನೆಲ್ಲಾ ಆಗುತ್ತದೆ? ಎಂಬುದೇ ಕಥಾ ಸಾರಾಂಶ.

ಇಲ್ಲಿ ಯಾರು ಗಾಂಧಿಗಳಿಲ್ಲ ಎಂಬ ಅಡಿಬರಹ ಈ ಚಿತ್ರಕ್ಕಿದೆ. ನಾನು ಕೆಲವು ವರ್ಷಗಳಿಂದ ಅಭಿನಯ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಹಲವು ವಿಭಾಗಗಳ ಬಗ್ಗೆ ತರಬೇತಿ ನೀಡುವ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ಅನ್ನು ನಡೆಸುತ್ತಿದ್ದೇ‌ನೆ. ಹಲವಾರು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ. ಈ ಚಿತ್ರದಲ್ಲಿ ಸಂಪೂರ್ಣವಾಗಿ ನಮ್ಮ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳೆ ಅಭಿನಯಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತಾರೆ ನಿರ್ದೇಶಕ ಎಸ್‌ಹೆಚ್‌ ನಾಗೇಶ್‌ ರೈತ ತಿಳಿಸಿದರು.

ಬೆಂಗಳೂರು, ಮೈಸೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ ಎಂದೂ ಹೇಳಿದರು ನಿರ್ದೇಶಕ ನಾಗೇಶ್. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ