SIIMA Awards 2024: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸಿನಿಮಾಗಳ ಮುಡಿಗೇರಿತು ಸೈಮಾ ಅವಾರ್ಡ್? ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
Sep 15, 2024 09:44 AM IST
ಸೈಮಾ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಸಿನಿಮಾ ಕಲಾವಿದರು.
- SIIMA Awards 2024 Winners List: 2024ನೇ ಸಾಲಿನ ಸೈಮಾ ಅವಾರ್ಡ್ಸ್ ಪ್ರಶಸ್ತಿ ಘೋಷಣೆ ಆಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ಸಲ ಕಳೆದ ವರ್ಷ ತೆರೆಕಂಡಿದ್ದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಆರು ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಅದೇ ರೀತಿ ಕಾಟೇರ ಸಿನಿಮಾ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
SIIMA Awards 2024: 2024ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ಅರಬ್ಬರ ನಾಡು ದುಬೈನಲ್ಲಿ ನಡೆದಿದೆ. ಸೌತ್ ಸಿನಿಮಾ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿಯೇ ಕಲರ್‌ಫುಲ್ ಇವೆಂಟ್ ನಡೆದಿದೆ. ಆ ಪೈಕಿ ಸ್ಯಾಂಡಲ್‌ವುಡ್‌ನ ಸಾಲು ಸಾಲು ಸಿನಿಮಾಗಳಿಗೆ ಪ್ರಶಸ್ತಿಗಳು ಅರಸಿ ಬಂದಿವೆ. ಆ ಪೈಕಿ ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸರಣಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಾಗಾದರೆ, ಯಾವ ಸಿನಿಮಾಕ್ಕೆ ಯಾವ ಪ್ರಶಸ್ತಿ ಸಿಕ್ಕಿದೆ ಇಲ್ಲಿದೆ ನೋಡಿ ಕನ್ನಡ ಸಿನಿಮಾ ವಿಭಾಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ.
ಯಾವೆಲ್ಲ ಸಿನಿಮಾಗಳಿಗೆ ಸಿಕ್ತು ಈ ಸಲದ ಸೈಮಾ 2024 ಪ್ರಶಸ್ತಿ
ಆರು ಪ್ರಶಸ್ತಿ ಗಿಟ್ಟಿಸಿಕೊಂಡ ಸಪ್ತ ಸಾಗರದಾಚೆ ಎಲ್ಲೋ
- ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)
- ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ವಿಲನ್- ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ಗಾಯಕ- ಕಪಿಲ್ (ಸಪ್ತ ಸಾಗರದಾಚೆ ಎಲ್ಲೊ)
- ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
- ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)
ಇದನ್ನೂ ಓದಿ: ಸೆಪ್ಟೆಂಬರ್ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು
ನಾಲ್ಕು ವಿಭಾಗಗಳಲ್ಲಿ ಕಾಟೇರ ಚಿತ್ರಕ್ಕೆ ಪ್ರಶಸ್ತಿ
- ಅತ್ಯುತ್ತಮ ಕನ್ನಡ ಸಿನಿಮಾ- ಕಾಟೇರ
- ಅತ್ಯುತ್ತಮ ಹೊಸ ನಟಿ- ಆರಾಧನಾ (ಕಾಟೇರ)
- ಅತ್ಯುತ್ತಮ ಸಂಗೀತ ನಿರ್ದೇಶಕ- ವಿ ಹರಿಕೃಷ್ಣ (ಕಾಟೇರ)
- ಅತ್ಯುತ್ತಮ ಗಾಯಕಿ: ಮಂಗ್ಲಿ (ಕಾಟೇರ)
- ಅತ್ಯುತ್ತಮ ಸಿನಿಮಾಟೊಗ್ರಫರ್- ಶ್ವೇತ ಪ್ರಿಯ (ಕೈವ)
- ಅತ್ಯುತ್ತಮ ಸಾಹಿತ್ಯ- ಡಾಲಿ ಧನಂಜಯ್ (ಟಗರುಪಲ್ಯ)
- ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
- ಅತ್ಯುತ್ತಮ ಭರವಸೆಯ ನಟಿ- ವೃಷಾ ಪಾಟೀಲ್ (ಲವ್)
- ಅತ್ಯುತ್ತಮ ಹೊಸ ನಟ- ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫಾ)
- ಅತ್ಯುತ್ತಮ ಹೊಸ ನಿರ್ದೇಶಕ- ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
- ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ: ಅಭುವನಸ ಫಿಲಮ್ಸ್
- ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
- ಸಿನಿಮಾ ರಂಗದಲ್ಲಿ ಅತ್ಯುತ್ತಮ ಸೇವೆ- ನಟ ಶಿವರಾಜ್ ಕುಮಾರ್
ಇದನ್ನೂ ಓದಿ: ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ