logo
ಕನ್ನಡ ಸುದ್ದಿ  /  ಮನರಂಜನೆ  /  Interval Kannada Movie: ಗಣಪತಿ ಹಬ್ಬಕ್ಕೆ ಚಂದನ್‌ ಶೆಟ್ಟಿ ಕಂಠದಲ್ಲಿ ಬಂತು ಇಂಟರ್‌ವಲ್‌ ಚಿತ್ರದ ಹಾಡು

Interval Kannada Movie: ಗಣಪತಿ ಹಬ್ಬಕ್ಕೆ ಚಂದನ್‌ ಶೆಟ್ಟಿ ಕಂಠದಲ್ಲಿ ಬಂತು ಇಂಟರ್‌ವಲ್‌ ಚಿತ್ರದ ಹಾಡು

Sep 12, 2024 12:05 PM IST

google News

ಗಣಪತಿ ಹಬ್ಬಕ್ಕೆ ಚಂದನ್‌ ಶೆಟ್ಟಿ ಕಂಠದಲ್ಲಿ ಬಂತು ಇಂಟರ್‌ವಲ್‌ ಚಿತ್ರದ ಹಾಡು

    • Chandan Shetty: ಚಂದನ್‌ ಶೆಟ್ಟಿ ಕಂಠದಲ್ಲಿ ಇಂಟರ್‌ವಲ್‌ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಗಣೇಶನ ಹಬ್ಬಕ್ಕೆ ರಿಲೀಸ್‌ ಆದ ಈ ಹಾಡಿನಲ್ಲಿ ಗಣಪನನ್ನೇ ಜಪಿಸಿದ್ದಾರೆ ಚಂದನ್‌ ಶೆಟ್ಟಿ. 
ಗಣಪತಿ ಹಬ್ಬಕ್ಕೆ ಚಂದನ್‌ ಶೆಟ್ಟಿ ಕಂಠದಲ್ಲಿ ಬಂತು ಇಂಟರ್‌ವಲ್‌ ಚಿತ್ರದ ಹಾಡು
ಗಣಪತಿ ಹಬ್ಬಕ್ಕೆ ಚಂದನ್‌ ಶೆಟ್ಟಿ ಕಂಠದಲ್ಲಿ ಬಂತು ಇಂಟರ್‌ವಲ್‌ ಚಿತ್ರದ ಹಾಡು

Interval Movie Song: ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಚಿತ್ರ ಇಂಟರ್ ವಲ್. ಹೊಸ ನಿರ್ದೇಶಕ ಭರತ್ ವರ್ಷ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯುವ ಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಇದೀಗ ಇದೇ ಇಂಟರ್‌ವಲ್‌ ಸಿನಿಮಾದ ಮೊದಲ ಹಾಡು ಆನಂದ್ ಆಡಿಯೋ ಮೂಲಕ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಈ ಹಾಡಿಗೆ ನೋಡುಗರಿಂದ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದೆ.

ಗಣೇಶ ಹಬ್ಬದ ಈ ಸಂದರ್ಭದಲ್ಲಿ ಬಿಡುಗಡೆ ಆಗಿರುವ ಹಾಡಿನಲ್ಲಿಯೂ ಗಣೇಶನ ನಾಮಸ್ಮರಣೆ ಮಾಡಲಾಗಿದೆ. ಅಂದರೆ, ಈ ಹಾಡು ವಿಘ್ನ ನಿವಾರಕನಿಗೆ ಸಂಬಂಧಿಸಿದ್ದು. ಗಣೇಶನ ಜತೆ ಯುವ ಸಮುದಾಯಕ್ಕಿರುವ ಅವಿನಾಭಾವ ಬಂಧವನ್ನು, ಈ ಹಾಡಿನ ಮೂಲಕ ಕಟ್ಟಿಕೊಟ್ಟಿದೆ ಚಿತ್ರತಂಡ. ಗಣೇಶನ ಸುತ್ತ ಸೃಷ್ಟಿಯಾಗಿರುವ ಪ್ರಸಿದ್ಧ ಹಾಡುಗಳ ಸಾಲಿನಲ್ಲಿ ಈ ಹಾಡೂ ಸೇರ್ಪಡೆಗೊಳ್ಳಲಿದೆ ಎಂಬ ಭರವಸೆ ಚಿತ್ರತಂಡದ್ದು. ಅಂದಹಾಗೆ, ಭರತವರ್ಷ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾ ಮೂಡಿಬಂದಿದೆ.

ಚಂದನ್‌ ಶೆಟ್ಟಿ ಧ್ವನಿ

ಇಂಟರ್ ವಲ್ ಚಿತ್ರದ ಈ ಹಾಡಿಗೆ ಚಂದನ್ ಶೆಟ್ಟಿ ಧ್ವನಿ ನೀಡಿದರೆ, ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ. ಗಣ ಗಣ ಗಣಪತಿ ಫಂಕ್ಷನ್ ಹಲೋ ಎವ್ರಿಬಡಿ ಸ್ವಲ್ಪ ಅಟೆನ್ಷನ್.. ಎಂದು ಶುರುವಾಗುವ ಈ ಹಾಡು, ಬಹುತೇಕರ ಬದುಕಿನ ಗತವೈಭವವನ್ನು ತೆರೆದಿಡಲಿದೆ. ಇದರೊಂದಿಗೆ ಸಿನಿಮಾದ ಒಂದಷ್ಟು ಪಾತ್ರಗಳೂ ಕೂಡಾ ಈ ಹಾಡಿನ ಮೂಲಕ ಪರಿಚಯವಾಗಿವೆ. ಇಂಜಿನಿಯರಿಂಗ್ ಮುಗಿಸಿಕೊಂಡು, ಕೆಲಸ ಅರಸಿ ಹೊರಡುವ ಯುವಕರ ಗುಂಪೊಂದರ ಹೋರಾಟದ ಕಥನವನ್ನು ಈ ಚಿತ್ರ ಒಳಗೊಂಡಿದೆ.

ನಾಯಕನಾಗಿ ಸೀರಿಯಲ್‌ ನಟ ಶಶಿರಾಜ್‌

ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಖಿ ಬರೆದಿದ್ದಾರೆ. ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೂ ಮುಗಿದಿವೆ. ಈಗಾಗಲೇ ಅನೇಕ ಸೀರಿಯಲ್ಲುಗಳಲ್ಲಿ ನಟಿಸಿ, ತಮ್ಮದೇ ವಿಶಿಷ್ಟ ಮ್ಯಾನರಿಸಂ ಮತ್ತು ನಟನಾ ಶೈಲಿಯಿಂದ ಗಮನ ಸೆಳೆದಿರುವವರು ಶಶಿರಾಜ್ (ಬಾಲಾ), ಇಂಟರ್ ವಲ್ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಇನ್ನುಳಿದಂತೆ ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಖಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಶೀಘ್ರದಲ್ಲಿ ಈ ಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ