ಶ್ರೀಮುರಳಿ ಅಭಿನಯದ ಬಘೀರ ರಿಲೀಸ್‌ ದಿನಾಂಕ ಅನೌನ್ಸ್;‌ ಅಕ್ಟೋಬರ್‌ನಲ್ಲಿ ತೆರೆ ಕಾಣ್ತಿದೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ-sandalwood news roaring star srimurali starring bagheera movie release date announced kannada film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀಮುರಳಿ ಅಭಿನಯದ ಬಘೀರ ರಿಲೀಸ್‌ ದಿನಾಂಕ ಅನೌನ್ಸ್;‌ ಅಕ್ಟೋಬರ್‌ನಲ್ಲಿ ತೆರೆ ಕಾಣ್ತಿದೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ

ಶ್ರೀಮುರಳಿ ಅಭಿನಯದ ಬಘೀರ ರಿಲೀಸ್‌ ದಿನಾಂಕ ಅನೌನ್ಸ್;‌ ಅಕ್ಟೋಬರ್‌ನಲ್ಲಿ ತೆರೆ ಕಾಣ್ತಿದೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ

2021 ರಲ್ಲಿ ಅನೌನ್ಸ್‌ ಮಾಡಲಾಗಿದ್ದ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಚಿತ್ರೀಕರಣ ಮುಗಿದಿದೆ. ಹೊಂಬಾಳೆ ಫಿಲ್ಮ್ಸ್‌ ಈಗ ಸಿನಿಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದು ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸಿದ್ದಾರೆ.

ಶ್ರೀಮುರಳಿ ಅಭಿನಯದ ಬಘೀರ ರಿಲೀಸ್‌ ದಿನಾಂಕ ಅನೌನ್ಸ್;‌ ಅಕ್ಟೋಬರ್‌ನಲ್ಲಿ ತೆರೆ ಕಾಣ್ತಿದೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ
ಶ್ರೀಮುರಳಿ ಅಭಿನಯದ ಬಘೀರ ರಿಲೀಸ್‌ ದಿನಾಂಕ ಅನೌನ್ಸ್;‌ ಅಕ್ಟೋಬರ್‌ನಲ್ಲಿ ತೆರೆ ಕಾಣ್ತಿದೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ (PC: Hombale Films)

ಮದಗಜ ನಂತರ ಶ್ರೀಮುರಳಿ , ಬಘೀರ ಚಿತ್ರವನ್ನು ಅನೌನ್ಸ್‌ ಮಾಡಿದ್ದರು. ಸಿನಿಮಾ ಹೆಸರೇ ವಿಭಿನ್ನವಾಗಿದ್ದರಿಂದ ಬಹಳ ಕುತೂಹಲ ಕೆರಳಿಸಿತ್ತು. ಬಹಳ ದಿನಗಳ ಕಾಯುವಿಕೆ ನಂತರ ಇದೀಗ ರೋರಿಂಗ್‌ ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಬಘೀರ ಚಿತ್ರತಂಡ ರಿಲೀಸ್‌ ದಿನಾಂಕ ಅನೌನ್ಸ್‌ ಮಾಡಿದೆ.

2022ರಲ್ಲಿ ಬಘೀರ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು

ಬಘೀರ ಎಂದರೆ ಕಪ್ಪು ಚಿರತೆ. ಕೆಲವು ವರ್ಷಗಳ ಹಿಂದೆ ಹಿಂದಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಂಗಲ್‌ ಬುಕ್‌ ಕಾರ್ಟೂನ್‌ನಲ್ಲಿ ಬಘೀರ ಎಂಬ ಹೆಸರು ಬಹಳ ಪ್ರಸಿದ್ಧಿ ಪಡೆದಿತ್ತು. ಇದೇ ಹೆಸರನ್ನು ಶ್ರೀಮುರಳಿ ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2021 ರಲ್ಲಿ ಈ ಸಿನಿಮಾ ಅನೌನ್ಸ್‌ ಮಾಡಲಾಯ್ತು. ಡಿಸೆಂಬರ್‌ 20 ಮುರಳಿ ಜನ್ಮ ದಿನದಂದು ಚಿತ್ರದ ಮೊದಲ ಲುಕ್‌ ಬಿಡುಗಡೆ ಮಾಡಲಾಗಿತ್ತು. 2022 ಮೇ ತಿಂಗಳಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಸಿನಿಮಾ ಅಪ್‌ಡೇಟ್‌ ತಿಳಿಯಲು ಮುರಳಿ ಅಭಿಮಾನಿಗಳು ಕಾಯುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ ಶ್ರೀಮುರಳಿಗೆ ಪೆಟ್ಟಾಗಿದ್ದು, ಅತ್ತಿಗೆ ಸ್ಪಂದನಾ ವಿಜಯ್‌ ನಿಧನ ಸೇರಿದಂತೆ ಇನ್ನಿತರ ಕಾರಣಗಳಿಂದ ಸಿನಿಮಾ ತಡವಾಗುತ್ತಾ ಬಂತು. ಇದೀಗ ಚಿತ್ರತಂಡ ಕೊನೆಗೂ ರಿಲೀಸ್‌ ದಿನಾಂಕ ಘೋಷಣೆ ಮಾಡಿದೆ.

ಅಕ್ಟೋಬರ್‌ 31ಕ್ಕೆ ಘರ್ಜಿಸಲು ಬರುತ್ತಿದ್ದಾನೆ ಬಘೀರ

ಬುಧವಾರ ರಾತ್ರಿ ಹೊಂಬಾಳೆ ಫಿಲ್ಮ್ಸ್‌ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟರ್‌ನೊಂದಿಗೆ ಬಿಡುಗಡೆ ದಿನಾಂಕ ಅನೌನ್ಸ್‌ ಮಾಡಿದೆ. ಅಕ್ಟೋಬರ್‌ 31 ರಂದು ಸಿನಿಮಾ ತೆರೆ ಕಾಣುತ್ತಿದೆ. ಕನ್ನಡ ಮಾತ್ರವಲ್ಲ ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. ಸಿನಿಮಾ ರಿಲೀಸ್‌ ದಿನಾಂಕ ಘೋಷಣೆ ಮಾಡಿದ್ದನ್ನು ಕಂಡು ಕೆಲವು ಅಭಿಮಾನಿಗಳು ಖುಷಿ ಆದರೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ರಿಲೀಸ್‌ ದಿನಾಂಕ ಘೋಷಣೆ ಮಾಡಿದ್ದೇಕೆ? ದಯವಿಟ್ಟು ಪ್ರಮೋಷನ್‌ ಸರಿಯಾಗಿ ಮಾಡಿ. ಶ್ರೀ ಮುರಳಿ ಸಿನಿಮಾ ಹಿಟ್‌ ಆಗಬೇಕು ಎಂದು ಮನವಿ ಮಾಡುತ್ತಿದ್ದಾರೆ. ಬಹಳ ದಿನಗಳ ನಂತರ ಮೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರಶಾಂತ್‌ ನೀಲ್‌ ಕಥೆ ಬರೆದಿರುವ ಸಿನಿಮಾ

ಬಘೀರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ವಿಜಯ ಕಿರಗಂದೂರು ನಿರ್ಮಾಣ ಮಾಡಿದ್ದು ಡಾ ಸೂರಿ ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಬರೆದಿರುವುದು ವಿಶೇಷ. ಬಿ ಅಜನೀಶ್‌ ಲೋಕನಾಥ್‌, ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ಜೊತೆಗೆ ರುಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಕಾಶ್‌ ರಾಜ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

mysore-dasara_Entry_Point