logo
ಕನ್ನಡ ಸುದ್ದಿ  /  ಮನರಂಜನೆ  /  ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

May 07, 2024 12:05 PM IST

google News

ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

    • ಸಿನಿಮಾರಂಗದಲ್ಲಿ ಅವಕಾಶಕ್ಕಾಗಿ ನಟಿಯರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಈಗಾಗಲೇ ಎಷ್ಟೋ ನಟಿಯರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಇದೇ ಕಾಸ್ಟಿಂಗ್‌ ಕೌಚ್‌ ಬಗ್ಗೆ ಬಹುಭಾಷಾ ನಟಿ ರಮ್ಯಾ ಕೃಷ್ಣನ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 
ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್
ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

Ramya Krishnan: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ಹೀಗೆ  ಸೌತ್‌ನ ನಾಲ್ಕೂ ಭಾಷೆಗಳಲ್ಲಿ ಮಿಂಚಿದ ಸ್ಟಾರ್‌ ನಟಿಯರ ಸಾಲಿನಲ್ಲಿ ರಮ್ಯಾ ಕೃಷ್ಣ ಸಹ ಟಾಪ್‌ ಸ್ಥಾನದಲ್ಲಿ ನಿಲ್ಲುತ್ತಾರೆ. ಸೌತ್‌ ಸ್ಟಾರ್‌ ಹೀರೋಗಳ ಜತೆಗೆ ನಟಿಸಿದ ಖ್ಯಾತಿ ಇವರದ್ದು. ಹೀಗೆ ಒಂದಾದ ಮೇಲೊಂದು ಮೆಟ್ಟಿಲು ಏರುತ್ತ, ಇಂದಿಗೂ ಸ್ಟಾರ್‌ ನಟಿಯಾಗಿ ಮಿಂಚುತ್ತ, ಇದೀಗ ಪೋಷಕ ನಟಿಯಾಗಿಯೂ ಮುಂಚೂಣಿಯಲ್ಲಿದ್ದಾರೆ ರಮ್ಯಾ ಕೃಷ್ಣನ್. ಹೀಗಿರುವಾಗ ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್‌ ಕೌಚ್‌ ಬಗ್ಗೆಯೂ ನೀಡಿದ ಅವರ ಶಾಕಿಂಗ್‌ ಹೇಳಿಕೆ ವೈರಲ್‌ ಆಗಿದೆ. 

ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರು ಕಿರುಕುಳ ಅನುಭವಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳುವಂಥೆದ್ದೇನೂ ಇಲ್ಲ. ಈ ಹಿಂದೆಯೇ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಎಷ್ಟೋ ಮಂದಿ ಬಹಿರಂಗವಾಗಿಯೇ ಹೇಳಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಲೈಂಗಿಕ ಕಿರುಕುಳ ಅನುಭವಿಸಿದ ಬಗ್ಗೆ ಮೌನವನ್ನೂ ಮುರಿದಿದ್ದಾರೆ. ಈಗ ಕಾಸ್ಟಿಂಗ್‌ ಕೌಚ್‌ ಬಗ್ಗೆ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅಚ್ಚರಿಯ ಹೇಳಿಕೆ ಸಂಚಲನ ಸೃಷ್ಟಿಸಿದೆ.

ನಾಯಕಿ ಜತೆ ಪೋಷಕ ಪಾತ್ರಗಳಲ್ಲಿ ಮಿಂಚು..

1990ರಿಂದ ನಟಿ ರಮ್ಯಾ ಕೃಷ್ಣನ್ ಸ್ಟಾರ್ ನಾಯಕಿಯಾಗಿ ಮಿಂಚಿದವರು. ಬಹುತೇಕ ಎಲ್ಲ ಟಾಪ್ ಹೀರೋಗಳೊಂದಿಗೆ ನಟಿಸಿ ಜನಪ್ರಿಯತೆಯನ್ನೂ ಹೆಚ್ಚಿಸಿಕೊಂಡರು. ಆ ಕಾಲದಲ್ಲಿ ಬಿಕಿನಿ ಧರಿಸಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು ಈ ನಟಿ. ಹೀಗೆ ನಾಯಕಿಯಾಗಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ಪೋಷಕ ನಟಿಯಾಗಿಯೂ ಗಮನ ಸೆಳೆದರು. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಕಾಣಿಸಿಕೊಂಡ ಬಳಿಕ ರಮ್ಯ‌ ಕೃಷ್ಣನ್ ಅವರ ಸ್ಟಾರ್‌ಡಮ್ ಮತ್ತಷ್ಟು ಎತ್ತರಕ್ಕೇರಿತು.

ಗಂಡಸರಿಗೆ ಶರಣಾಗಬೇಕು

ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ಕೃಷ್ಣನ್, ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. "ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಬೇಕೆಂದರೆ ನಿರ್ದೇಶಕ- ನಿರ್ಮಾಪಕ ಅಥವಾ ಹೀರೋಗಳ ಮನದಾಸೆಯನ್ನು ಪೂರೈಸಬೇಕು ಎಂದು ರಮ್ಯಾ ಕೃಷ್ಣ ಹೇಳಿದ ಮಾತು ಸದ್ಯ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಆದರೆ, ನಾಯಕಿಯಾಗಬೇಕಾದರೆ ಎಲ್ಲೋ ಒಂದು ರಾಜಿ ಮಾಡಿಕೊಳ್ಳಬೇಕು. ಗಂಡಸರಿಗೆ ಶರಣಾಗಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ ರಮ್ಯಾ ಕೃಷ್ಣನ್. ಅದಕ್ಕಾಗಿಯೇ ಕೆಲವರು ಕೆಲವೊಮ್ಮೆ ಶರಣಾಗುವ ಸ್ಥಿತಿ ಬರುತ್ತದೆ. ಆದರೆ ನನ್ನ ವಿಚಾರದಲ್ಲಿ ಆ ಯಾವ ಪರಿಸ್ಥಿತಿಯೂ ಬರಲಿಲ್ಲ ಎಂದಿದ್ದಾರೆ ರಮ್ಯ ಕೃಷ್ಣನ್.

ರಮ್ಯಾ ಕೃಷ್ಣನ್ ಅಬಾರ್ಷನ್‌ ವದಂತಿ..

ಇತ್ತೀಚೆಗಷ್ಟೇ ರಮ್ಯಾ ಕೃಷ್ಣನ್ ಅವರ ಹೇಳೆ ಸುದ್ದಿಯೊಂದು ಮತ್ತೆ ಮುನ್ನೆಲೆಗೆ ಬಂದಿತ್ತು. ತಮಿಳಿನ ಖ್ಯಾತ ನಿರ್ದೇಶಕ ಕೆ. ಎಸ್‌ ರವಿಕುಮಾರ್‌ ಜತೆಗೆ ರಮ್ಯಾ ಕೃಷ್ಣ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಆಗಿನ ಕಾಲದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ವಿವಾಹಿತ ನಿರ್ದೇಶಕ ರವಿಕುಮಾರ್‌ ಜತೆಗೆ ರಮ್ಯಾ ಪ್ರೀತಿಯಲ್ಲಿದ್ದರು ಎಂದೂ ಗಾಸಿಪ್‌ಗಳು ಹರಿದಾಡಿದ್ದವು. ರವಿಕುಮಾರ್‌ ಅವರಿಂದ ಪ್ರಗ್ನೆಂಟ್‌ ಆಗಿದ್ದ ರಮ್ಯಾ, ಅಬಾರ್ಷನ್‌ಗಾಗಿ 75 ಲಕ್ಷ ಹಣಕ್ಕೂ ಡಿಮಾಂಡ್‌ ಮಾಡಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟತೆ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ