ಕನ್ನಡ ಸುದ್ದಿ  /  ಮನರಂಜನೆ  /  Garadi Trailer: ಇಂದು ರಾಣೆಬೆನ್ನೂರಿನಲ್ಲಿ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡ್ತಾರೆ ನಟ ದರ್ಶನ್‌; ನವೆಂಬರ್‌ 10ಕ್ಕೆ ಗರಡಿ ಗಮ್ಮತ್ತು

Garadi Trailer: ಇಂದು ರಾಣೆಬೆನ್ನೂರಿನಲ್ಲಿ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡ್ತಾರೆ ನಟ ದರ್ಶನ್‌; ನವೆಂಬರ್‌ 10ಕ್ಕೆ ಗರಡಿ ಗಮ್ಮತ್ತು

Praveen Chandra B HT Kannada

Nov 01, 2023 09:16 AM IST

Garadi Trailer: ಇಂದು ರಾಣೆಬೆನ್ನೂರಿನಲ್ಲಿ ಗರಡಿ ಟ್ರೈಲರ್‌ ಬಿಡುಗಡೆ ಮಾಡ್ತಾರೆ ದರ್ಶನ್‌

    • Garadi Movie Trailer: ಕನ್ನಡ ರಾಜ್ಯೋತ್ಸವದಂದು ಸ್ಯಾಂಡಲ್‌ವುಡ್‌ನ ಹೊಸ ಸಿನಿಮಾವೊಂದರ ಟ್ರೈಲರ್‌ ಬಿಡುಗಡೆಯಾಗಲಿದೆ. ಯೋಗರಾಜ್‌ ಭಟ್ಟರ ಗರಡಿ ಚಿತ್ರದ ಟ್ರೈಲರ್‌ ರಾಣೆಬೆನ್ನೂರಿನಲ್ಲಿ ಬಿಡುಗಡೆಯಾಗಲಿದೆ. ಕನ್ನಡ ನಟ ದರ್ಶನ್‌ ಈ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ.
Garadi Trailer: ಇಂದು ರಾಣೆಬೆನ್ನೂರಿನಲ್ಲಿ ಗರಡಿ  ಟ್ರೈಲರ್‌ ಬಿಡುಗಡೆ ಮಾಡ್ತಾರೆ ದರ್ಶನ್‌
Garadi Trailer: ಇಂದು ರಾಣೆಬೆನ್ನೂರಿನಲ್ಲಿ ಗರಡಿ ಟ್ರೈಲರ್‌ ಬಿಡುಗಡೆ ಮಾಡ್ತಾರೆ ದರ್ಶನ್‌

ಬೆಂಗಳೂರು: ಯೋಗರಾಜ್‌ ಭಟ್‌ ನಿರ್ದೇಶನದ ಚಿತ್ರಗಳಿಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ. ಭಟ್ಟರ ಸಾಹಿತ್ಯ, ಹಾಡುಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. ಯೋಗರಾಜ್‌ ಭಟ್ಟರ ಬತ್ತಳಿಕೆಯಲ್ಲಿ ಮೂಡಿ ಬರುತ್ತಿರುವ ಗರಡಿ ಸಿನಿಮಾವು ಇದೇ ನವೆಂಬರ್‌ 10ರಂದು ವಿಶ್ವದ್ಯಾಂತ ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಇಂದು ಸಂಜೆ ರಾಣೆಬೆನ್ನೂರಿನಲ್ಲಿ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ. ಬಳಿಕ ಯೂಟ್ಯೂಬ್‌ ಸೇರಿದಂತೆ ಸೋಷಿಯಲ್‌ ಮೀಡಿಯಾಗಳಲ್ಲಿ ಗರಡಿ ಚಿತ್ರದ ಟ್ರೈಲರ್‌ ವೀಕ್ಷಿಸಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ವಿವರ

ಇಂದು ಸಂಜೆ ರಾಣೆಬೆನ್ನೂರಿನ ಮುನ್ಸಿಪಲ್‌ ಗ್ರೌಂಡ್‌ನಲ್ಲಿ ನಟ ದರ್ಶನ್‌ ಅವರು ನಟ ಬಿಸಿ ಪಾಟೀಲ್‌ ನಿರ್ಮಾಣದ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ. ಚಿತ್ರತಂಡವು ಗರಡಿ ಚಿತ್ರದ ಟ್ರೈಲರ್‌ ರಿಲೀಸ್‌ಗಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಸೆನ್ಸಾರ್‌ ಮಂಡಳಿಯಿಂದ ಯಾವುದೇ ಕಟ್‌ ಇಲ್ಲದೆ ಗರಡಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ರಾಣೆಬೆನ್ನೂರಿನಲ್ಲಿ ಇಂದು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.

ಚಿಕ್ಕಣ್ಣರ ಪ್ರಮೋಷನ್‌

ನಟ ಚಿಕ್ಕಣ್ಣ ಅವರು ಆಂಕರ್‌ ಪಾತ್ರದಲ್ಲಿ ಗರಡಿ ಚಿತ್ರದ ಪ್ರಮೋಷನ್‌ ಮಾಡಿದ್ದಾರೆ. ಇದೀಗ ಬಂದ ಬಿಸಿಬಿಸಿ ಸುದ್ದಿ. ನವೆಂಬರ್‌ 1ರಂದು ಗರಡಿ ಚಿತ್ರದ ಟ್ರೈಲರ್‌ ಅನ್ನು ಡಿಬಾಸ್‌ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ. ಗರಡಿ ಚಿತ್ರದ ತುಂಬಾ ಧೂಳೇಬ್ಬಿಸುತ್ತಿರುವ ನಾಯಕ ಸೂರಿಯು ಚಿತ್ರವು ಸಕಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಆಗಲಿದೆ ಎಂದಿದ್ದಾರೆ ಎಂದೆಲ್ಲ ಚಿಕ್ಕಣ್ಣ ನ್ಯೂಸ್‌ ಆಂಕರ್‌ ಸ್ಟೈಲ್‌ನಲ್ಲಿ ಹೇಳುವ ವಿಡಿಯೋ ಮಜವಾಗಿದೆ.

ಕನ್ನಡ ಚಿತ್ರರಂಗಕ್ಕೆ ಹೊಸ ಪೈಲ್ವಾನ್‌ ಪ್ರವೇಶ

ನಟ ಸೂರ್ಯ ಅವರು ಗರಡಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪ್ರವೇಶ ಮಾಡಿದ್ದಾರೆ. ನಟ ದರ್ಶನ್‌ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ನವೆಂಬರ್‌ 10ರಂದು ಗರಡಿ ಸಿನಿಮಾ ಬಿಡುಗಡೆ

ಇದೇ ನವೆಂಬರ್‌ 10ರಂದು ಕನ್ನಡ ಗರಡಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸೌಮ್ಯ ಫಿಲಂಸ್‌ ಹಾಗೂ ಕೌರವ ಪ್ರೊಡಕ್ಷನ್‌ ಹೌಸ್‌ ಲಾಂಛನದಲ್ಲಿ ವನಜಾ ಪಾಟೀಲ್‌ ನಿರ್ಮಿಸಿದ್ದಾರೆ. ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುರೇಶ್‌ ಸಂಕಲನ, ನಿರಂಜನ್‌ ಬಾಬು ಛಾಯಾಗ್ರಹಣವಿದೆ. ಸೃಷ್ಟಿ ಪಾಟೀಲ್‌ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರಿಲಯೆನ್ಸ್‌ ಎಂಟರ್‌ಟ್ಮೆಂಟ್‌ ಗರಡಿ ಚಿತ್ರದ ವಿತರಣಾ ಹಕ್ಕು ಪಡೆದಿದೆ.

ಗರಡಿ ಚಿತ್ರದ ತಾರಾಗಣ

ಸೂರ್ಯ ನಾಯಕನಟನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋನಾಲ್‌ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರು, ರಾಘವೇಂದ್ರ, ಚೆಲುವರಾಜ್, ತೇಜಸ್ವಿನಿ ಪ್ರಕಾಶ್, ನಯನ ಸೇರಿದಂತೆ ಹಲವು ಕಲಾವಿದದರು ಈ ಚಿತ್ರದಲ್ಲಿದ್ದಾರೆ. ಈಗಾಗಲೇ ಯೋಗರಾಜ್‌ ಭಟ್‌ ಸಾಹಿತ್ಯವಿರುವ ಗರಡಿ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಹಿಟ್‌ ಆಗಿವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ