ನೀವು ಮತ್ತೆ ಮಗುವಾಗಿ ನಮ್ಮ ಮಡಿಲು, ಮನೆ ಸೇರಿದ್ದೀರಿ; ಅಂಬರೀಶ್ ಪುಣ್ಯತಿಥಿಗೆ ಸುಮಲತಾ ಅಂಬರೀಶ್ ಪೋಸ್ಟ್
Nov 24, 2024 12:55 PM IST
ಅಂಬರೀಶ್ ಪುಣ್ಯತಿಥಿಗೆ ಸುಮಲತಾ ಅಂಬರೀಶ್ ಪೋಸ್ಟ್
- Sumalatha Ambareesh: ನಟ, ರಾಜಕಾರಣಿ, ದಿವಗಂತ ಅಂಬರೀಶ್ ಭೌತಿಕವಾಗಿ ನಮ್ಮ ನಡುವೆ ಇಲ್ಲವಾಗಿ ಆರು ವರ್ಷಗಳು ಕಳೆದಿವೆ. ಈ ಆರನೇ ಪುಣ್ಯ ಸ್ಮರಣಿ ನಿಮಿತ್ತ ಪತ್ನಿ ಸುಮಲತಾ ಅಂಬರೀಶ್ ಪೊಸ್ಟ್ ಹಂಚಿಕೊಂಡು, ಮತ್ತೆ ನೀವು ನಮ್ಮ ಮನೆ ಸೇರಿದ್ದೀರಿ ಎಂದಿದ್ದಾರೆ.
Ambareesh 6th Death Anniversary: ಸ್ಯಾಂಡಲ್‌ವುಡ್ ಕರ್ಣ, ರೆಬೆಲ್‌ಸ್ಟಾರ್ ಅಂಬರೀಶ್ ನಮ್ಮ ನಡುವೆ ಭೌತಿಕವಾಗಿ ಇಲ್ಲವಾಗಿ ಇಂದಿಗೆ 6 ವರ್ಷಗಳು ಉರುಳಿದವವು. 2018ರ ನವೆಂಬರ್ 24ರಂದು ಹಿರಿಯ ನಟ ಅಂಬರೀಶ್ ಹೃದಯಾಘಾತದಿಂದ ಹಿನ್ನೆಲೆಯಲ್ಲಿ ನಿಧನರಾಗಿದ್ದರು. ಇದೀಗ ಅವರ ಆರನೇ ಪುಣ್ಯ ಸ್ಮರಣೆ ನಿಮಿತ್ತ, ಪತಿಯನ್ನು ವಿಶೇಷವಾಗಿ ನೆನಪು ಮಾಡಿಕೊಂಡಿದ್ದಾರೆ ಸುಮಲತಾ ಅಂಬರೀಶ್.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಅಂಬರೀಶ್ ಸಮಾಧಿ ಬಳಿ ತೆರಳಿ, ಪೂಜೆ ಸಲ್ಲಿಸಿದ್ದಾರೆ. ಜತೆಗೆ ಪತಿ ಅಂಬರೀಶ್ ಅವರ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸುಮಲತಾ, ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ.. ಸದಾ ಜನರ ಮಧ್ಯೆ ಇದ್ದು, ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ"
ನೀವು ಮರಳಿ ಬಂದಿದ್ದೀರಿ..
"ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ" ಎಂದು ಪೋಸ್ಟ್ ಹಾಕಿದ್ದಾರೆ. ಕೊನೆಯಲ್ಲಿ " ಪ್ರತಿ ಹೃದಯದ ಬಡಿತದಲ್ಲಿಯೂ ನೀವು ಜೀವಂತವಾಗಿದ್ದೀರಿ. ಪ್ರತಿ ಉಸಿರಿನಲ್ಲೂ, ಎಲ್ಲೆಲ್ಲೂ ಬೆರೆತಿದ್ದೀರಿ. ಅಷ್ಟೇ ಅಲ್ಲ ಈಗ ನಮ್ಮ ಮನೆಗೆ ಮಗುವಿನ ರೂಪದಲ್ಲಿ ಮರಳಿದ್ದೀರಿ" ಎಂದೂ ಹೇಳಿದ್ದಾರೆ ಸುಮಲತಾ ಅಂಬರೀಶ್.
ಇತ್ತೀಚೆಗಷ್ಟೇ ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ ದಂಪತಿಗೆ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಗಂಡು ಮಗು ಹುಟ್ಟಿದ ಬಳಿಕ, ಜೂನಿಯರ್ ಅಂಬರೀಶ್ ಹುಟ್ಟಿ ಬಂದ ಎಂದೇ ಅಭಿಮಾನಿಗಳು ಶುಭ ಹಾರೈಸಿದ್ದರು. ಈಗ ಸ್ವತಃ ಸುಮಲತಾ ಸಹ ಅದೇ ಮಾತನ್ನೇ ಪುನರುಚ್ಚರಿಸಿದ್ದಾರೆ. ಇತ್ತ ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ದಂಡೂ ಹರಿದು ಬರುತ್ತಿದ್ದು, ಪೂಜೆ ನೆರವೇರಿಸುತ್ತಿದ್ದಾರೆ.