logo
ಕನ್ನಡ ಸುದ್ದಿ  /  ಮನರಂಜನೆ  /  ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’; ಅನಾರೋಗ್ಯದ ನಡುವೆಯೂ ಪ್ರೇಕ್ಷಕನಿಗೆ ಶಿವಣ್ಣನ ಧನ್ಯವಾದ

ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’; ಅನಾರೋಗ್ಯದ ನಡುವೆಯೂ ಪ್ರೇಕ್ಷಕನಿಗೆ ಶಿವಣ್ಣನ ಧನ್ಯವಾದ

Nov 26, 2024 06:52 AM IST

google News

ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’

    • Bhairathi Ranagal: ‘ಭೈರತಿ ರಣಗಲ್‍’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಬೇರೆ ಊರುಗಳಿಗೂ ಹೋಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಮಾತನಾಡಿಸಿ ಬರುತ್ತಿದೆ ಚಿತ್ರತಂಡ. ಅದರಂತೆ, ಒಂದಷ್ಟು ಥಿಯೇಟರ್‌ಗಳಿಗೆ ಭೇಟಿ ನೀಡಿದ್ದಾರೆ ಶಿವರಾಜ್‌ಕುಮಾರ್.‌
ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’
ಊರೂರು ಸುತ್ತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಭೈರತಿ ರಣಗಲ್’

Bhairathi Ranagal: ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರವು ನವೆಂಬರ್ 15ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಬೇರೆ ಊರುಗಳಿಗೂ ಹೋಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಮಾತನಾಡಿಸಿ ಬರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಕಳೆದ ಮೂರು ದಿನಗಳಿಂದ ‘ಭೈರತಿ ರಣಗಲ್‍’ ಚಿತ್ರತಂಡದವರು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದಾರೆ.

ಶನಿವಾರ, ನವೆಂಬರ್ 23ರಂದು ಚಿತ್ರದುರ್ಗದ ಪ್ರಸನ್ನ ಮತ್ತು ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರಗಳಿಗೆ ಭೇಟಿ ನೀಡಿದ ಚಿತ್ರಂಡವು, ಭಾನುವಾರ (ನವೆಂಬರ್ 24) ಶಿವಮೊಗ್ಗದ ಮಲ್ಲಿಕಾರ್ಜುನ ಮತ್ತು ಶಿರಸಿಯ ನಟರಾಜ ಚಿತ್ರಮಂದಿರಗಳಿಗೆ ಭೇಟಿ ನೀಡಿದೆ. ಇಂದು ಮಧ್ಯಾಹ್ನ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಚಿತ್ರ ನೋಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಊರುಗಳಿಗೆ ಚಿತ್ರತಂಡ ಭೇಟಿ ನೀಡಲಿದೆ.‌

ವಿದೇಶಗಳಲ್ಲಿಯೂ ಚಿತ್ರಕ್ಕೆ ಮೆಚ್ಚುಗೆ

ಇನ್ನು, ಚಿತ್ರವು ಈಗಾಗಲೇ ನವೆಂಬರ್ 21ರಂದು ಯು.ಎ.ಇ, ಒಮಾನ್‍ ಮತ್ತು ಖತಾರ್ ದೇಶಗಳಲ್ಲಿ ಬಿಡುಗಡೆಯಾಗಿ ಅಲ್ಲಿನ ಅನಿವಾಸಿ ಕನ್ನಡಿಗರಿಂದ ಮೆಚ್ಚುಗೆ ಪಡೆದಿದೆ. ಅಷ್ಟೇ ಅಲ್ಲ, ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್‍ ಆಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳು ನಾಡುಗಳಲ್ಲಿ ಇದೇ ನವೆಂಬರ್ 29ರಂದು ಬಿಡುಗಡೆಯಾಗುತ್ತಿದೆ.

ಶಿವಣ್ಣನ ಚಿತ್ರಕ್ಕೆ ನಾನಿ, ಶಿವಕಾರ್ತಿಕೇಯನ್‌ ಸಾಥ್

ಇದರ ಮೊದಲ ಹಂತವಾಗಿ ಇತ್ತೀಚೆಗೆ ತೆಲುಗು ನಟ ನಾನಿ ಮತ್ತು ತಮಿಳು ನಟ ಶಿವಕಾರ್ತಿಕೇಯನ್‍, ಎರಡೂ ಭಾಷೆಗಳ ಟ್ರೇಲರ್‌ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತೆಲುಗು ಅವತರಣಿಕೆಯನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ಮೈರಾ ಕ್ರಿಯೇಷನ್ಸ್ ಬಿಡುಗಡೆ ಮಾಡಿದರೆ, ತಮಿಳು ನಾಡಿನಲ್ಲಿ ಎ.ಪಿ ಇಂಟರ್‍ನ್ಯಾಷನಲ್‍ ಸಂಸ್ಥೆಯು ತಮಿಳು ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದೆ.

‘ಭೈರತಿ ರಣಗಲ್‍’ ಚಿತ್ರವು ‘ಮಫ್ತಿ’ಯ ಪ್ರೀಕ್ವೆಲ್‍ ಆಗಿದ್ದು ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್‍ನಡಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವು ಮೊದಲ ವಾರ 15 ಕೋಟಿ ರೂ. ಗಳಿಸಿವುದರ ಜೊತೆಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ನರ್ತನ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಭೈರತಿ ರಣಗಲ್‍’ ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

ನ. 29ಕ್ಕೆ ತೆಲುಗು ತಮಿಳು ವರ್ಷನ್‌

ಕರ್ನಾಟಕದಲ್ಲಿ ನವೆಂಬರ್‌ 15ರಂದು ತೆರೆಕಂಡಿದ್ದ ಭೈರತಿ ರಣಗಲ್‌ ಸಿನಿಮಾ, ದೊಡ್ಡ ಮಟ್ಟದಲ್ಲಿ ತೆಲುಗು ತಮಿಳಿನಲ್ಲಿ ರಿಲೀಸ್‌ ಆಗಿರಲಿಲ್ಲ. ಆದರೆ ಇದೀಗ ಇದೇ ನವೆಂಬರ್‌ 29ರಂದು ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಅಲ್ಲಿನ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ರಿಲೀಸ್‌ ಆಗಲಿದೆ. ಅದರಂತೆ ಈಗಾಗಲೇ ತೆಲುಗು ಮತ್ತು ತಮಿಳು ವರ್ಷನ್‌ ಟ್ರೇಲರ್‌ ಸಹ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ.

ಅನಾರೋಗ್ಯದ ನಡುವೆಯೂ ಸುತ್ತಾಟ

ಶಿವರಾಜ್‌ಕುಮಾರ್‌ ಅನಾರೋಗ್ಯಕ್ಕೀಡಾಗಿದ್ದಾರೆ. ಈ ನಡುವೆಯೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಭೈರತಿ ರಣಗಲ್‌ ಸಿನಿಮಾ ಪ್ರಚಾರದಲ್ಲಿ ಊರೂರು ಸುತ್ತುತ್ತಿದ್ದಾರೆ. ಜತೆಗೆ ನಿತ್ಯ ಟ್ರೀಟ್‌ಮೆಂಟ್‌ ಸಹ ನಡೆಯುತ್ತಿದೆ. ಇನ್ನೇನು ಕೆಲ ದಿನಗಳ ಬಳಿಕ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿಯೇ ಒಂದು ತಿಂಗಳ ಕಾಲ ಚಿಕಿತ್ಸೆ ಮುಗಿಸಿಕೊಂಡು ಮರಳಿ ತವರಿಗೆ ಆಗಮಿಸಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ