Lucky Bhaskar OTT: ಒಟಿಟಿ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್‌’; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌?
ಕನ್ನಡ ಸುದ್ದಿ  /  ಮನರಂಜನೆ  /  Lucky Bhaskar Ott: ಒಟಿಟಿ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್‌’; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌?

Lucky Bhaskar OTT: ಒಟಿಟಿ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್‌’; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌?

Lucky Bhaskar OTT: ದುಲ್ಕರ್‌ ಸಲ್ಮಾನ್‌ ಮತ್ತು ಮೀನಾಕ್ಷಿ ಚೌಧರಿ ನಟಿಸಿರುವ ಲಕ್ಕಿ ಭಾಸ್ಕರ್‌ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿಯಾದ ಬಳಿಕ, ಈಗ ಒಟಿಟಿಯತ್ತ ಮುಖ ಮಾಡಿದೆ. ಈ ಬಹುನಿರೀಕ್ಷಿತ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ವೀಕ್ಷಣೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಒಟಿಟಿಗೆ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್‌’
ಒಟಿಟಿಗೆ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್‌’

Lucky Bhaskar OTT: ಮಲಯಾಳಂ ಸೂಪರ್‌ಸ್ಟಾರ್ ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಭಾಸ್ಕರ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರ ದೃಷ್ಟಿಯಿಂದ ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ಹೀಗಿರುವಾಗಲೇ ಈಗ ಇದೇ ಸಿನಿಮಾದಿಂದ ಬಿಗ್‌ ಬ್ರೇಕಿಂಗ್‌ ಸುದ್ದಿ ಹೊರಬಿದ್ದಿದೆ. ಈ ವರೆಗೂ ಈ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಉತ್ತರ ಸಿಕ್ಕಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಹಲವು ಭಾಷೆಗಳಲ್ಲಿ ನೋಡುಗರ ಕೈ ತಲುಪಲಿದೆ.

ತಿಂಗಳೊಳಗೆ ಒಟಿಟಿಗೆ ಆಗಮನ

ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಲಕ್ಕಿ ಭಾಸ್ಕರ್ ಚಿತ್ರವನ್ನು ವೆಂಕಿ ಅಟ್ಲೂರಿ ನಿರ್ದೇಶನ ಮಾಡಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಕಳೆದ ತಿಂಗಳು ಅಂದರೆ, ಅಕ್ಟೋಬರ್‌ 31ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿತ್ತು. ಈಗ ಇದೇ ಸಿನಿಮಾ ಒಂದು ತಿಂಗಳೊಳಗೇ ಒಟಿಟಿಗೆ ಆಗಮಿಸಲು ಸಜ್ಜಾಗಿದೆ.

ಯಾವಾಗ, ಯಾವ ಒಟಿಟಿಯಲ್ಲಿ ವೀಕ್ಷಣೆ?

ಲಕ್ಕಿ ಭಾಸ್ಕರ್‌ ಚಿತ್ರದ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಇದೀಗ ಇದೇ ಚಿತ್ರದ ಸ್ಟ್ರೀಮಿಂಗ್‌ ಯಾವಾಗಿನಿಂದ ಎಂಬ ವಿಚಾರವನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದೆ ನೆಟ್‌ಫ್ಲಿಕ್ಸ್‌. "ಅದೃಷ್ಟ ಎಂಬುದು ಕೈ ಹಿಡಿದರೆ, ಒಬ್ಬ ಮನುಷ್ಯ ಎಲ್ಲಿಯವರೆಗೂ ಹೋಗಬಹುದು?" ಎಂಬ ಕ್ಯಾಪ್ಷನ್‌ ನೀಡಿ, ಲಕ್ಕಿ ಭಾಸ್ಕರ್‌ ಸಿನಿಮಾವನ್ನು ಇದೇ ನವೆಂಬರ್‌ 28ರಿಂದ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ವೀಕ್ಷಿಸಬಹುದು. #LuckyBaskharOnNetflix ಎಂಬ ಹ್ಯಾಷ್‌ಟ್ಯಾಗ್‌ ಜತೆಗೆ ಸರ್ಪ್ರೈಸ್‌ ನೀಡಿದೆ ನೆಟ್‌ಫ್ಲಿಕ್ಸ್‌.

1980ರ ಕಾಲಘಟ್ಟದ ಕಥೆ

ಲಕ್ಕಿ ಭಾಸ್ಕರ್‌ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಓರ್ವ ಬ್ಯಾಂಕರ್. 1980 ಮತ್ತು 90ರ ಕಾಲಘಟ್ಟದಲ್ಲಿ ತೆರೆದುಕೊಳ್ಳುವ ಈ ಕಥೆ, ಓರ್ವ ಸಾಮಾನ್ಯ ಕ್ಯಾಷಿಯರ್‌ವೊಬ್ಬ ಹೀಗೂ ಬದಲಾವಣೆ ಕಾಣಬಹುದು. ಅದೃಷ್ಟ ಕೈ ಹಿಡಿದರೆ ಏನೆಲ್ಲ ಮಾಡಬಹುದು ಎಂಬುದನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹಣಕಾಸು ನಿರ್ವಹಣೆಯಂಥ ಗಂಭೀರ ವಿಚಾರವನ್ನು ಈ ಸಿನಿಮಾದಲ್ಲಿ ಮುಟ್ಟುವ ಪ್ರಯತ್ನ ಮಾಡಿದ್ದಾರೆ.

ವೆಂಕಿ ಅಟ್ಲೂರಿ ನಿರ್ದೇಶನದ ಲಕ್ಕಿ ಭಾಸ್ಕರ್‌ ಸಿನಿಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ದುಲ್ಕರ್ ಸಲ್ಮಾನ್ ಜೊತೆಗೆ ಮೀನಾಕ್ಷಿ ಚೌಧರಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ ಸಾಯಿ ಕುಮಾರ್, ಮಾನಸಾ ಚೌಧರಿ, ರಾಮ್ಕಿ, ಹೈಪರ್ ಆದಿ, ಸೂರ್ಯ ಶ್ರೀನಿವಾಸ್ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಾಗ ವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿರುವ ಈ ಚಿತ್ರಕ್ಕೆ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ.

Whats_app_banner