logo
ಕನ್ನಡ ಸುದ್ದಿ  /  ಮನರಂಜನೆ  /  ಅಮ್ಮ ಅಳಬೇಡಮ್ಮ, ಅಳುವಂತೆ ನಟಿಸಿದ ಅದಿತಿ ಪ್ರಭುದೇವ ಬಳಿ ಸಮಾಧಾನ ಮಾಡುವಂತೆ ಓಡೋಡಿ ಬಂದ ಮಗಳು ನೇಸರ, ಮಗ ಚಾಕೊಲೇಟ್‌

ಅಮ್ಮ ಅಳಬೇಡಮ್ಮ, ಅಳುವಂತೆ ನಟಿಸಿದ ಅದಿತಿ ಪ್ರಭುದೇವ ಬಳಿ ಸಮಾಧಾನ ಮಾಡುವಂತೆ ಓಡೋಡಿ ಬಂದ ಮಗಳು ನೇಸರ, ಮಗ ಚಾಕೊಲೇಟ್‌

Rakshitha Sowmya HT Kannada

Nov 09, 2024 09:10 PM IST

google News

ಅಳುವಂತೆ ನಟಿಸುವ ಅದಿತಿ ಪ್ರಭುದೇವ ಬಳಿ ಓಡೋಡಿ ಬಂದ ಮಗಳು ನೇಸರ, ಮುದ್ದಿನ ಶ್ವಾನ ಚಾಕೊಲೇಟ್

  • ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ತಮ್ಮ ಯೂಟ್ಯೂಬ್‌ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಬೇಬಿ ಕೇರ್‌ಗೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ ಹಂಚಿಕೊಂಡಿದ್ದಾರೆ. ಮಗಳೊಂದಿಗೆ ಆಟವಾಡುವ ಅದಿತಿ, ಅಳುವಂತೆ ನಟಿಸುವಾಗ ಒಂದು ಕಡೆಯಿಂದ ಮಗಳು ನೇಸರ ಹಾಗೂ, ಮತ್ತೊಂದು ಕಡೆಯಿಂದ ಮುದ್ದಿನ ಶ್ವಾನ ಚಾಕೊಲೇಟ್‌ ಸಮಾಧಾನ ಮಾಡುವಂತಿರುವ ವಿಡಿಯೋ ಗಮನ ಸೆಳೆಯುತ್ತಿದೆ.  

ಅಳುವಂತೆ ನಟಿಸುವ ಅದಿತಿ ಪ್ರಭುದೇವ ಬಳಿ ಓಡೋಡಿ ಬಂದ ಮಗಳು ನೇಸರ, ಮುದ್ದಿನ ಶ್ವಾನ ಚಾಕೊಲೇಟ್
ಅಳುವಂತೆ ನಟಿಸುವ ಅದಿತಿ ಪ್ರಭುದೇವ ಬಳಿ ಓಡೋಡಿ ಬಂದ ಮಗಳು ನೇಸರ, ಮುದ್ದಿನ ಶ್ವಾನ ಚಾಕೊಲೇಟ್ (PC: Aditi Prabhudeva Instagram,YouTube)

ಅದಿತಿ ಪ್ರಭುದೇವ ತಾಯ್ತನದ ಖುಷಿಯಲ್ಲಿದ್ದಾರೆ. ಸಿನಿಮಾ, ರಿಯಾಲಿಟಿ ಶೋ ಚಿತ್ರೀಕರಣದ ಜೊತೆಗೆ 7 ತಿಂಗಳ ಮಗಳು ನೇಸರಳ ಕಾಳಜಿ ಮಾಡುತ್ತಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಅಮ್ಮ, ಸಿನಿಮಾದಲ್ಲಿ ನಾಯಕಿ ರೋಲ್‌ ಎರಡನ್ನೂ ನಿಭಾಯಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಅದಿತಿ ಯೂಟ್ಯೂಬ್‌ ಚಾನೆಲ್‌ ಕೂಡಾ ಆರಂಭಿಸಿದ್ದಾರೆ. ಕುಕಿಂಗ್‌, ಸ್ಕಿನ್‌ ಕೇರ್‌, ಬೇಬಿ ಕೇರ್‌ ವಿಡಿಯೋಗಳನ್ನು ಅದಿತಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಬೇಬಿ ಫುಡ್‌ ಬಗ್ಗೆ ಮಾಹಿತಿ ಹಂಚಿಕೊಂಡ ಅದಿತಿ ಪ್ರಭುದೇವ

4 ದಿನಗಳ ಹಿಂದೆ ಮಗಳು, ಪತಿ ಹಾಗೂ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ್ದ ವಿಡಿಯೋ ಹಂಚಿಕೊಂಡಿದ್ದ ಅದಿತಿ ಪ್ರಭುದೇವ ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅದಿತಿ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌ ದೊರೆತಿರುವ ಸಂತೋಷವನ್ನು ಪತಿ ಹಾಗೂ ಮಗಳೊಂದಿಗೆ ಕೇಕ್‌ ಕತ್ತರಿಸುವ ಮೂಲಕ ಹಂಚಿಕೊಂಡಿದ್ದಾರೆ. ಮರುದಿನ ಬೆಳಗ್ಗೆ ಮಗಳಿಗೆ, ಬೇಯಿಸಿ ಮ್ಯಾಶ್‌ ಮಾಡಿದ ಆಪಲ್‌, ಡೇಟ್ಸ್‌ ಫುಡ್‌ ತಿನ್ನಿಸಿ, ತಮ್ಮ ಮೆಚ್ಚಿನ ಚಾಕೊಲೇಟ್‌(ಶ್ವಾನ)ಗೆ ಕೂಡಾ ತುತ್ತು ತಿನ್ನಿಸುತ್ತಾರೆ. ಮಗಳಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಿ, ತಲೆ ಬಾಚಿ ದೃಷ್ಟಿ ಬೊಟ್ಟು ಇಡುತ್ತಾರೆ. ಮಗಳ ಜೊತೆ ಮಗುವಾಗಿ ಅದಿತಿ ಆಟವಾಡಿದ್ದಾರೆ. ಕಣ್ಣು ಮುಚ್ಚಿಕೊಂಡು ಅಳುವಂತೆ ನಟಿಸುವಾಗ ಒಂದು ಕಡೆಯಿಂದ ಅವರ ಮುದ್ದಿನ ಶ್ವಾನ ಚಾಕೊಲೇಟ್‌, ಮತ್ತೊಂದು ಬದಿಯಿಂದ ನೇಸರ ಇಬ್ಬರೂ ಅಮ್ಮ ಅಳಬೇಡ ಎಂದು ಸಮಾಧಾನ ಮಾಡುವಂತೆ ಹತ್ತಿರ ಬರುತ್ತಾರೆ. ಈ ದೃಶ್ಯವಂತೂ ಮತ್ತೆ ಮತ್ತೆ ರಿವೈಂಡ್‌ ಮಾಡಿ ನೋಡುವಂತಿದೆ.

ವಿಡಿಯೋದಲ್ಲಿ ಅದಿತಿ, ಮಗಳಿಗೆ ಹಲ್ಲು ಬರುತ್ತಿರುವ ವಿಚಾರ ಹಾಗೂ ಆಗ ತಾನೇ ಹಲ್ಲು ಬರುವ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕೆಂದು ತಾಯಂದಿರಿಗೆ ಟಿಪ್ಸ್‌ ಕೊಟ್ಟಿದ್ದಾರೆ. ಮಕ್ಕಳಿಗೆ ಹಲ್ಲು ಬರುತ್ತಿದ್ದಂತೆ ಅವರಿಗೆ ಸ್ವಲ್ಪ ಸ್ವಲ್ಪ ಕಿರಿಕಿರಿ ಎನಿಸುತ್ತದೆ. ನಾನು ಅವಳ ವಸಡಿಗೆ ಮೃದುವಾಗಿ ಮಸಾಜ್‌ ಮಾಡುತ್ತೇನೆ. ಕೆಲವು ಮಕ್ಕಳು ಬಟ್ಟೆ ಕಚ್ಚಲು ಇಷ್ಟಪಡುತ್ತಾರೆ. ಆ ರೀತಿ ಕೊಡಬೇಕೆಂದಿದ್ದರೆ ಶುದ್ಧವಾದ ಬಟ್ಟೆ ಕೊಡಿ, ಮಕ್ಕಳನ್ನು ಮಲಗಿಸಿ ಫುಡ್‌ ತಿನ್ನಿಸಬೇಡಿ, ಕೂರಿಸಿದ ಭಂಗಿಯಲ್ಲಿ ತಿನ್ನಿಸಿ ಎಂದು ಬೇಬಿ ಕೇರ್‌ ಬಗ್ಗೆ ಅದಿತಿ ಪ್ರಭುದೇವ ಸಲಹೆ ನೀಡಿದ್ದಾರೆ. ಅದಿತಿ ವಿಡಿಯೋಗೆ ಫಾಲೋವರ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ

ಅದಿತಿ ಪ್ರಭುದೇವ 2016ರಲ್ಲಿ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಗುಂಡ್ಯಾನ ಹೆಂಡತಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದವರು. ನಂತರ ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಅವರಿಗೆ ಸಿನಿಮಾಗಳಲ್ಲಿ ಆಫರ್‌ ಹುಡುಕಿ ಬಂತು. ಧೈರ್ಯಂ, ಬಜಾರ್‌, ಸಿಂಗ, ರಂಗನಾಯಕಿ, ಓಲ್ಡ್‌ ಮಾಂಕ್‌, ತೋತಾಪುರಿ, ಗಜಾನನ ಅಂಡ್‌ ಗ್ಯಾಂಗ್‌, ತ್ರಿಬಲ್‌ ರೈಡಿಂಗ್‌, ಮ್ಯಾಟ್ನಿ ಸಿನಿಮಾಗಳಲ್ಲಿ ಅದಿತಿ ನಟಿಸಿದ್ದಾರೆ. ಲವ್‌ ಯು ಅಭಿ ಎಂಬ ವೆಬ್‌ ಸಿರೀಸ್‌ನಲ್ಲಿ ಕೂಡಾ ಅದಿತಿ ನಟಿಸಿದ್ದಾರೆ. ಅದಿತಿ ಅಭಿನಯದ ಮಾಫಿಯಾ, ಚೂ ಮಂತರ್‌, ದಿಲ್‌ಮಾರ್‌ ಸಿನಿಮಾಗಳು ಕಂಪ್ಲೀಟ್‌ ಆಗಿವೆ. ಅಂದೊಂದಿತ್ತು ಕಾಲ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

2022 ನವೆಂಬರ್ 28ರಂದು ಅದಿತಿ ಪ್ರಭುದೇವ ಹಾಗೂ ಯಶಸ್‌ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೇ ವರ್ಷ ಜನವರಿ 1 ರಂದು ಅದಿತಿ, ತಾವು ಅಮ್ಮನಾಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಏಪ್ರಿಲ್‌ 4ಕ್ಕೆ ಅದಿತಿ , ಮಗುವಿಗೆ ಜನ್ಮ ನೀಡಿದರು. ಮುದ್ದು ಮಗಳಿಗೆ ಅದಿತಿ, ನೇಸರ ಎಂದು ಹೆಸರಿಟ್ಟಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ