ಬಿಗ್‌ಬಾಸ್‌ ಕನ್ನಡ 11: ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ ಪಡೆದ ತ್ರಿವಿಕ್ರಮ್‌ ಉಗ್ರಂ ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ?
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ ಪಡೆದ ತ್ರಿವಿಕ್ರಮ್‌ ಉಗ್ರಂ ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ?

ಬಿಗ್‌ಬಾಸ್‌ ಕನ್ನಡ 11: ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ ಪಡೆದ ತ್ರಿವಿಕ್ರಮ್‌ ಉಗ್ರಂ ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ?

ಬಿಗ್‌ಬಾಸ್‌ ಕನ್ನಡ ಸೀಸನ್‌ 11: ಎರಡನೇ ಬಾರಿಗೆ ತ್ರಿವಿಕ್ರಮ್ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದರೆ ನನ್ನನ್ನು ನಾಮಿನೇಟ್‌ ಮಾಡಬಾರದು ಎಂದು ಕಂಡಿಷನ್‌ ಹಾಕಿ ಮಂಜು ತ್ರಿವಿಕ್ರಮ್‌ನನ್ನು ಆಯ್ಕೆ ಮಾಡಿದ್ದಾರೆ. ತ್ರಿವಿಕ್ರಮ್‌, ಮಂಜುಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾದು ನೋಡಬೇಕು.

ಬಿಗ್‌ಬಾಸ್‌ ಕನ್ನಡ 11: ನಾಮಿನೇಟ್‌ ಮಾಡುವುದಿಲ್ಲ ಎಂದು ಮಂಜುಗೆ ಕೊಟ್ಟ ಮಾತು ಕೊಟ್ಟು ತ್ರಿವಿಕ್ರಮ್‌ 2ನೇ ಬಾರಿ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ.
ಬಿಗ್‌ಬಾಸ್‌ ಕನ್ನಡ 11: ನಾಮಿನೇಟ್‌ ಮಾಡುವುದಿಲ್ಲ ಎಂದು ಮಂಜುಗೆ ಕೊಟ್ಟ ಮಾತು ಕೊಟ್ಟು ತ್ರಿವಿಕ್ರಮ್‌ 2ನೇ ಬಾರಿ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. (PC: Colors Kannada Facebook)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಐದನೇ ವಾರದ ಮುಕ್ತಾಯದ ಹಂತದಲ್ಲಿದೆ. ಈ 40 ದಿನಗಳಲ್ಲಿ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಯಮುನಾ ಶ್ರೀನಿಧಿ, ರಂಜಿತ್‌, ಲಾಯರ್‌ ಜಗದೀಶ್‌, ಹಂಸ, ಮಾನಸಾ ಈಗಾಗಲೇ ಎಲಿಮಿನೇಟ್‌ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೋಗಬಹುದು ಎಂದು ವೀಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಉಳಿದ 60 ದಿನಗಳಲ್ಲಿ ಮನೆಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

2ನೇ ಬಾರಿ ಕ್ಯಾಪ್ಟನ್‌ ಆಗಿ ಆಯ್ಕೆಯಾದ ತ್ರಿವಿಕ್ರಮ್

ಈ ಬಾರಿ ತ್ರಿವಿಕ್ರಮ್‌ 2ನೇ ಬಾರಿ ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಪ್ರತಿ ವಾರ ಒಬ್ಬೊಬ್ಬರು ಮನೆಯ ಕಾಪ್ಟನ್‌ ಆಗಬೇಕು. ಕ್ಯಾಪ್ಟನ್‌ ಆಗಿ ಸಹ ಸ್ಪರ್ಧಿಗಳ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಬೇಕು. ಮನೆಯಲ್ಲಿ ಜಗಳಗಳು ಆಗದಂತೆ ನೋಡಿಕೊಳ್ಳಬೇಕು. ಅದು ಬಹಳ ಕಷ್ಟದ ಕೆಲಸ. ಹಾಗೇ ಕ್ಯಾಪ್ಟನ್‌ ಆಗುವುದು ಕೂಡಾ ಸುಲಭದ ಮಾತಲ್ಲ. ಟಾಸ್ಕ್‌ನಲ್ಲಿ ಗೆದ್ದು ಆ ಪಟ್ಟ ಅಲಂಕರಿಸಬೇಕು. ಕ್ಯಾಪ್ಟನ್‌ ಆದವರಿಗೆ ವಿಶೇಷ ಸ್ಥಾನಮಾನ ಇರುತ್ತದೆ. ನಾಮಿನೇಷನ್‌ನಿಂದ ಕ್ಯಾಪ್ಟನ್‌ ಹೊರಗೆ ಇರುತ್ತಾರೆ. ಮನೆಯಲ್ಲಿ ಅವರಿಗಾಗಿ ಪ್ರತ್ಯೇಕ ರೂಮ್‌ ವ್ಯವಸ್ಥೆ ಇರುತ್ತದೆ. ಅಲ್ಲೇ ಉಳಿದುಕೊಳ್ಳಬೇಕು. ಕಳೆದ ವಾರ ಹನುಮಂತ ಮನೆಯ ಕ್ಯಾಪ್ಟನ್‌ ಆಗಿದ್ದರು. ಅದರೆ ಅವರು ಕ್ಯಾಪ್ಟನ್‌ ರೂಮನ್ನು ಸರಿಯಾಗಿ ಬಳಸಿಕೊಂಡಿರಲಿಲ್ಲ. ಈ ವಿಚಾರವಾಗಿ ಬಿಗ್‌ಬಾಸ್‌, ಗುರುವಾರದ ಎಪಿಸೋಡ್‌ನಲ್ಲಿ ಹನುಮಂತನ ಜೊತೆ ಫನ್ನಿಯಾಗಿ ಮಾತನಾಡಿದ್ದರು.‌

ಮ್ಯಾಚ್‌ ಫಿಕ್ಸಿಂಗ್‌ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ವೀಕ್ಷಕರು

ಕ್ಯಾಪ್ಟನ್‌ಶಿಪ್‌ ಟಾಸ್ಕ್‌ ಫೈನಲ್‌ನಲ್ಲಿ ಭವ್ಯಾ ಗೌಡ ಕೂಡಾ ತ್ರಿವಿಕ್ರಮ್‌ ಜೊತೆ ಪ್ರಬಲ ಪೈಪೋಟಿ ನೀಡಿ ಸ್ಪರ್ಧೆಗೆ ನಿಂತಿದ್ದರು. ಈ ವಾರ ಭವ್ಯಾ-ತ್ರಿವಿಕ್ರಮ್‌ ಇಬ್ಬರಲ್ಲಿ ಕ್ಯಾಪ್ಟನ್‌ ಅಗಲು ಯಾರು ಅರ್ಹರಲ್ಲ ಎನ್ನಲು ಬಿಗ್‌ಬಾಸ್‌ ಮತ್ತೊಂದು ಟಾಸ್ಕ್‌ ನೀಡಿದ್ದರು. ಅದರ ಪ್ರಕಾರ ಮೋಕ್ಷಿತಾ, ಗೌತಮಿ ಜಾದವ್‌, ಶಿಶಿರ್‌ ಸೇರಿದಂತೆ ಕೆಲವು ಸ್ಪರ್ಧಿಗಳು ಭವ್ಯಾ ಗೌಡ ಫೋಟೋಗೆ ಮಸಿ ಬಳಿಯುತ್ತಾರೆ. ಅದರಲ್ಲಿ ಉಗ್ರಂ ಮಂಜು ಭವ್ಯಾ ಟೀಮ್‌ನಲ್ಲಿದ್ದುಕೊಂಡೇ ಅವರ ವಿರುದ್ಧ ನಿಂತಿದ್ದಾರೆ. ನಾನು ಮೊದಲ ಬಾರಿ ಮಸಿ ಬಳಿಯುವಾಗಲೇ ಅವರು ನನಗೆ ರಿಕ್ವೆಸ್ಟ್‌ ಮಾಡಬಹುದಿತ್ತು, ಆದರೆ ಅವರಿಗೆ ಸೆಲ್ಫ್‌ ಕಾನ್ಫಿಡೆನ್ಸ್‌ ಇಲ್ಲ ಇದೇ ಕಾರಣಕ್ಕೆ ನಾನು ಮೂರು ಬಾರಿ ಅವರಿಗೆ ಮಸಿ ಬಳಿಯಬೇಕಾಯ್ತು ಎಂದು ಉಗ್ರಂ ಮಂಜು ಮಾತಿಗೆ ಭವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

ತ್ರಿವಿಕ್ರಮ್‌ ಬಳಿ ಒಪ್ಪಂದ ಮಾಡಿಕೊಂಡ ಮಂಜು

ಅಷ್ಟೇ ಅಲ್ಲ ಮಂಜು ಮ್ಯಾಚ್‌ ಫಿಕ್ಸಿಂಗ್‌ ಗೇಮ್‌ಗೆ ಗೌತಮಿ ಹಾಗೂ ಮೋಕ್ಷಿತಾ ಕೂಡಾ ಬೆಂಬಲ ನೀಡಿದ್ದು ವೀಕ್ಷಕರಿಗೆ ಬೇಸರ ತರಿಸಿದೆ. ಪ್ರತಿ ಬಾರಿ ಭವ್ಯಾ ಗೌಡ ಟಾಸ್ಕ್‌ನಲ್ಲಿ ಬೆಸ್ಟ್‌ ನೀಡುವುದಿಲ್ಲ ಎಂಬ ದೂರು ಇತ್ತು. ಆದರೆ ಈ ಬಾರಿ ಅವರು ಒಳ್ಳೆ ಫರ್ಮಾನೆನ್ಸ್‌ ನೀಡಿದ್ದರು. ಅವರ ತಂಡ ಗೆಲ್ಲುವಲ್ಲಿ ಭವ್ಯಾ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಂಜು, ತ್ರಿವಿಕ್ರಮ್‌ ಜೊತೆ ನಿನ್ನನ್ನು ಆಯ್ಕೆ ಮಾಡಿದರೆ ಈ ವಾರ ನನ್ನನ್ನು ನಾಮಿನೇಟ್‌ ಮಾಡಬಾರದು ಎಂದು ಒಪ್ಪಂದ ಮಾಡಿಕೊಂಡು ಭವ್ಯಾ ಗೌಡ ವಿರುದ್ಧ ನಿಂತು ಆತನಿಗೆ ಓಟು ಮಾಡಿದ್ದಾರೆ. ಇದೀಗ ತ್ರಿವಿಕ್ರಮ್‌ 2ನೇ ಬಾರಿಗೆ ಕ್ಯಾಪ್ಟನ್‌ ಆಗಿ ಆಯ್ಕೆ ಆಗಿದ್ದಾರೆ. ಮಂಜುಗೆ ಕೊಟ್ಟ ಮಾತನ್ನು ತ್ರಿವಿಕ್ರಮ್‌ ಉಳಿಸಿಕೊಳ್ತಾರಾ? ಇಲ್ಲವಾ ಎಂಬುದನ್ನು ಮುಂದಿನ ವಾರ ಕಾದು ನೋಡಬೇಕು. 

Whats_app_banner