ನೀನು ರೌಡಿನಾ, 25 ವರ್ಷದ ಹಿಂದೆಯೇ ನಿನ್ನ ಬಗ್ಗೆ ಗೊತ್ತಿತ್ತು; ನಿರ್ದೇಶಕ ಗುರುಪ್ರಸಾದ್ ಬಗ್ಗೆ ಮಾತನಾಡಿದ ಜಗ್ಗೇಶ್‌ಗೆ ಲಾಯರ್ ಜಗದೀಶ್ ಪಾಠ
Nov 04, 2024 10:28 AM IST
ನಿರ್ದೇಶಕ ಗುರುಪ್ರಸಾದ್ ಸಾವಿನಲ್ಲಿ ವಿಕೃತಿ ಮೆರೆಯಬೇಡಿ ಎಂದು ಬಿಗ್‌ಬಾಸ್ ಕನ್ನಡ 11 ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ನಟ ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Guruprasad death: ನಿರ್ದೇಶಕ ಗುರುಪ್ರಸಾದ್ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ ನಟ ಜಗ್ಗೇಶ್‌ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೊಬ್ಬರ ಸಾವಿನಲ್ಲಿ ವಿಕೃತಿ ಮೆರೆಯಬೇಡ, ನೀನು ರೌಡಿನಾ, 25 ವರ್ಷಗಳ ಹಿಂದೆಯೇ ನಿನ್ನ ಬಗ್ಗೆ ಗೊತ್ತಿತ್ತು ಎಂದು ಗರಂ ಆಗಿದ್ದಾರೆ
ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ದುರಂತ ಅಂತ್ಯ ಕಂಡಿದ್ದಾರೆ. ಗುರುಪ್ರಸಾದ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮೇಲ್ನೋಟಕ್ಕೆ ಆರ್ಥಿಕ ಸಮಸ್ಯೆ, ಸಿನಿಮಾ ಸೋಲಿನಿಂದ ಕಂಗೆಟ್ಟು ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ. ಗುರುಪ್ರಸಾದ್ ನಿಧನಕ್ಕೆ ಕನ್ನಡ ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ.
ನಿರ್ದೇಶಕ ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ಈ ನಡುವೆ ಗುರುಪ್ರಸಾದ್ ನಿರ್ದೇಶನದಲ್ಲಿ ಮಠ ಸಿನಿಮಾದಲ್ಲಿ ನಟಿಸಿದ್ದ ಜಗ್ಗೇಶ್, ಗುರುಪ್ರಸಾದ್ ಅವರ ಬಗ್ಗೆ ಆಡಿದ ಮಾತು ಎಲ್ಲರಿಗೂ ಬೇಸರ ತರಿಸಿದೆ. ನಾನು ಚಿತ್ರೀಕರಣಕ್ಕೆ ಮಧ್ಯಾಹ್ನ 2 ಗಂಟೆಗೆ ಬಂದ್ರೆ, ಅವನು 4 ಗಂಟೆಗೆ ಬರುತ್ತಿದ್ದ. ಕತ್ತಲು ಆಗ್ತಿದ್ದಂತೆ, ಏನು ಶೂಟ್ ಮಾಡೋದು ಅಂತ ಅವನಿಗೇ ತಿಳಿಯುತ್ತಿರಲಿಲ್ಲ. ಕುಡಿತದ ಚಟಕ್ಕೆ ದಾಸನಾಗುತ್ತಿದ್ದ, ಮೊದಲೆಲ್ಲಾ ಗುರುಪ್ರಸಾದ್ ಸೆಟ್‌ಗೆ ಪುಸಕ್ತಗಳನ್ನು ಹೊತ್ತು ತರುತ್ತಿದ್ದರು, ನಂತರ ಬಾಟಲ್ ಹಿಡಿದು ಬರುತ್ತಿದ್ದರು. ಮಾಧ್ಯಮಗಳಲ್ಲಿ ಅವನ ಹುಚ್ಚಾಟವನ್ನು ನೋಡುತ್ತಿದ್ದೆ, ರಂಗನಾಯಕದಂಥ ಕೆಟ್ಟ ಸಿನಿಮಾ ಮಾಡಿ ಜನರು ನನ್ನನ್ನು ಬೈಯ್ಯುವಂತ ಮಾಡಿ ಹೋದ, ಅವನಿಗೆ ಸೋರಿಯಾಸಿಸ್ ಇತ್ತು, ಹೇಳದೆ ಕೇಳದೆ ಬಂದು ನಾವು ಊಟ ಮಾಡುವ ತಟ್ಟೆಗೆ ಕೈ ಹಾಕುತ್ತಿದ್ದ ಎಂದು ಜಗ್ಗೇಶ್, ಗುರುಪ್ರಸಾದ್ ಬಗ್ಗೆ ಮಾತನಾಡಿದ್ದರು.
ಸತ್ತ ವ್ಯಕ್ತಿಯ ಬಗ್ಗೆ ವಿಕೃತಿ ಮೆರೆಯಬೇಡ
ಜಗ್ಗೇಶ್ ಮಾತನಾಡಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಿನಿಮಾ ಮಂದಿ, ಜನರು ಜಗ್ಗೇಶ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾರೇ ಅಗಲೀ, ಸಾವನ್ನಪ್ಪಿದ ವ್ಯಕ್ತಿಯ ಬಗ್ಗೆ ವಿಕೃತಿ ಮೆರೆಯಬಾರದು, ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಆ ವ್ಯಕ್ತಿಯೇ ಇಲ್ಲವೆಂದ ಮೇಲೆ ಏನು ಮಾತನಾಡಿ ಏನು ಪ್ರಯೋಜನ? ಎಂದು ಜಗ್ಗೇಶ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮಾಜಿ ಬಿಗ್‌ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಕೂಡಾ ಜಗ್ಗೇಶ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಏಕ ವಚನದಲ್ಲೇ ಜಗ್ಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು
ಜಗ್ಗೇಶ್, ಸತ್ತ ವ್ಯಕ್ತಿಯ ಬಗ್ಗೆ ಎಂಥ ವಿಶ್ಲೇಷಣೆ ನೀಡಿದ್ದಿ , ಸಾವಿನಲ್ಲೂ ವಿಕೃತಿ ಕಾಣಬಹುದು ಅನ್ನೋದನ್ನು ನಿನ್ನಿಂದ ಕಲಿಯಬೇಕು, ಯಾವ ಆಂಗಲ್‌ನಿಂದ ನಿನ್ನ ಮನುಷ್ಯ ಎಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ನಿನ್ನನ್ನು ನೀರು ರಾಘವೇಂದ್ರ ಸ್ವಾಮಿಗಳ ಭಕ್ತ ಎಂದು ಹೇಳಿಕೊಳ್ಳುತ್ತೀಯ, ಒಬ್ಬ ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ನಿರ್ದೇಶಕನ ಬಗ್ಗೆ ಈ ರೀತಿ ಮಾತನಾಡಲು ಹೇಗೆ ಮನಸ್ಸು ಬಂತು? ಮಠ ಸಿನಿಮಾದಲ್ಲಿ ಅವರು ನಿನಗೆ ಅವಕಾಶ ಕೊಡದೆ ಇದ್ದಿದ್ದರೆ ಜಗ್ಗೇಶ್ ಯಾರು ಎಂಬುದನ್ನೇ ಜನರು ಮರೆತುಬಿಡುತ್ತಿದ್ದರು. 25 ವರ್ಷಗಳ ಹಿಂದೆಯೇ ನಿನ್ನ ಯೋಗ್ಯತೆ ಗೊತ್ತಿತ್ತು. ನಿನ್ನ ಮಾತು ನನಗೆ ಇನ್ನೂ ಜೀರ್ಣವಾಗುತ್ತಿಲ್ಲ. ಕಾಲಾಯ ತಸ್ಮೈ ನಮಃ. ಇವತ್ತು ಯಮ ಗುರು ಮನೆ ಬಾಗಿಲಿನಲ್ಲಿ ಇದ್ದ, ನಾಳೆ ಯಾರ ಮನೆಗಾದರೂ ಬರಬಹುದು.
ನಿನಗೆ ಕಮ್ ಬ್ಯಾಕ್ ಕೊಟ್ಟ ಗುರು ಪ್ರಸಾದ್‌ಗೆ ಒಳ್ಳೆ ಬಳುವಳಿ ಕೊಟ್ಟೆ, ನಿನ್ನನ್ನು ಮನುಷ್ಯ ಅಂತ ಕರೆಯಲೂ ಬೇಸರವಾಗುತ್ತಿದೆ. ನಿನ್ನನ್ನು ಒಬ್ಬ ನಟ ಅಂತ ಕರ್ನಾಟಕ ಒಪ್ಪಿಕೊಂಡಿದ್ಯಲ್ಲ ನನಗೆ ನಾಚಿಕೆ ಆಗುತ್ತಿದೆ. ನೀನು ನಮ್ಮ ಸಮುದಾಯದನು, ರಾಘವೇಂದ್ರ ಸ್ವಾಮಿಯ ಭಕ್ತ ಕೂಡಾ, ಇನ್ಮುದೆ ಯಾರ ಬಗ್ಗೆಯೂ ಆ ರೀತಿ ಮಾತನಾಡಬೇಡ ಎಂದು ಲಾಯರ್ ಜಗದೀಶ್ ಜಗ್ಗೇಶ್‌ಗೆ ಪಾಠ ಮಾಡಿದ್ದಾರೆ.