logo
ಕನ್ನಡ ಸುದ್ದಿ  /  ಮನರಂಜನೆ  /  ಮಕ್ಕಳ ದಿನಾಚರಣೆಯಂದು ಮಕ್ಕಳ ಸಿನಿಮಾ ಘೋಷಿಸಿದ ಶಿವರಾಜ್‌ಕುಮಾರ್‌; ಎ ಫಾರ್‌ ಆನಂದ್‌ ಫಸ್ಟ್‌ ಲುಕ್‌ ರಿಲೀಸ್‌

ಮಕ್ಕಳ ದಿನಾಚರಣೆಯಂದು ಮಕ್ಕಳ ಸಿನಿಮಾ ಘೋಷಿಸಿದ ಶಿವರಾಜ್‌ಕುಮಾರ್‌; ಎ ಫಾರ್‌ ಆನಂದ್‌ ಫಸ್ಟ್‌ ಲುಕ್‌ ರಿಲೀಸ್‌

Rakshitha Sowmya HT Kannada

Nov 14, 2024 01:43 PM IST

google News

ಶಿವರಾಜ್‌ಕುಮಾರ್‌ ಮಕ್ಕಳ ಸಿನಿಮಾ ಘೋಷಿಸಿದ್ದು ಎ ಫಾರ್‌ ಆನಂದ್‌ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಗೀತಾ ಶಿವರಾಜ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ

  • ಮಕ್ಕಳ ದಿನಾಚರಣೆ ವಿಶೇಷ ದಿನದಂದು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಎ ಫಾರ್‌ ಆನಂದ್‌ ಎಂಬ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಜೊತೆಗೆ ಚಿತ್ರದ ಫಸ್ಟ್‌ ಲುಕ್‌ ಕೂಡಾ ರಿಲೀಸ್‌ ಆಗಿದೆ. ಸಿನಿಮಾವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ. 

ಶಿವರಾಜ್‌ಕುಮಾರ್‌ ಮಕ್ಕಳ ಸಿನಿಮಾ ಘೋಷಿಸಿದ್ದು ಎ ಫಾರ್‌ ಆನಂದ್‌ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಗೀತಾ ಶಿವರಾಜ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ
ಶಿವರಾಜ್‌ಕುಮಾರ್‌ ಮಕ್ಕಳ ಸಿನಿಮಾ ಘೋಷಿಸಿದ್ದು ಎ ಫಾರ್‌ ಆನಂದ್‌ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿ ಗೀತಾ ಶಿವರಾಜ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ (PC: Shivarajkumar Instagram)

ಇಂದು ದೇಶಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರು ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಿ ಶುಭ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ಸೆಂಚರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ. ಲಾಂಗ್‌ ಬಿಟ್ಟು ಶಿವಣ್ಣ ಪೆನ್ನು, ಬೆತ್ತ ಹಿಡಿದಿದ್ದಾರೆ.

ಭೈರತಿ ರಣಗಲ್‌ ರಿಲೀಸ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್‌

ಭೈರತಿ ರಣಗಲ್‌ ಚಿತ್ರದಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿ ಚಿತ್ರದಲ್ಲಿ ಡಾನ್ ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗ ಮಾಸ್‌ನಿಂದ ಮೇಷ್ಟ್ರು ಆಗಿ ಬದಲಾಗುತ್ತಿದ್ದಾರೆ. ನವೆಂಬರ್‌ 15, ಶುಕ್ರವಾರ ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗುತ್ತಿದ್ದು ದೊಡ್ಮನೆ ದೊರೆ, ಶಿವ ಸೈನ್ಯ ಕಟ್ಟಿಕೊಂಡು ಸಿನಿಮಾಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ , ಮಕ್ಕಳ ದಿನಾಚರಣೆಯಂದು ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ.‌

ಇಂದು ಮಕ್ಕಳ‌ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. 'ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ಶಿವಣ್ಣ ಈಗ ಬಹಳ ವರ್ಷಗಳ ನಂತರ ಮತ್ತೆ ಶಿಕ್ಷಕರಾಗುತ್ತಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ. ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕಲು ಘೋಸ್ಟ್ ಸೂತ್ರಧಾರ ಶ್ರೀ‌ನಿ‌ ಸಜ್ಜಾಗಿದ್ದಾರೆ. ಶ್ರೀನಿ, ಬೇರೆ ರೀತಿಯ ಕಥೆಯೊಂದನ್ನು ತಯಾರಿಸಿಕೊಂಡು ಕನ್ನಡ ಸಿನಿಮಾಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರಕ್ಕೆ A ಫಾರ್‌ ಆನಂದ್‌ ಎಂದು ಹೆಸರಿಡಲಾದೆ. ಜೊತೆಗೆ ಚಿತ್ರದ ಫಸ್ಟ್‌ಲುಕ್‌ ಕೂಡಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಎ ಫಾರ್‌ ಆನಂದ್‌ ಫಸ್ಟ್‌ಲುಕ್‌ ರಿಲೀಸ್

ಇಂದು ಬಿಡುಗಡೆ ಆಗಿರುವ ಫಸ್ಟ್‌ಲುಕ್‌ನಲ್ಲಿ ಮಕ್ಕಳ ಟ್ರೈನ್‌ ಮೇಲೆ ಶಿವಣ್ಣ ಬೆತ್ತ ಹಿಡಿದು ಏನೋ ತೋರಿಸುತ್ತಿದ್ದಾರೆ. ಅವರ ಹಿಂದೆ ಮಕ್ಕಳ ಗುಂಪು ಏನನ್ನೋ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಶಿವಣ್ಣ ಪಕ್ಕದಲ್ಲಿ ಒಂದು ಮುದ್ದಾದ ನಾಯಿಯೂ ಇದೆ. ಈ ಸಿನಿಮಾಗೆ ಮೊದಲು ದೊಡ್ಡವರೆಲ್ಲಾ ಜಾಣರಲ್ಲ ಎಂದು ಹೆಸರಿಡಲಾಗಿತ್ತು. ಆದರೆ ನಂತರ A ಫಾರ್‌ ಆನಂದ್‌ ಎಂದು ಬದಲಿಸಲಾಗಿದೆ. ದಿ ಲಿಟ್ಲ್ ಗರ್ಲ್ ಅಟ್ ದಿ ವಿಂಡೋ ಜಪಾನಿನ ಪ್ರಸಿದ್ಧ ಕಾದಂಬರಿಯನ್ನು ಆಧರಿಸಿ ತೊತ್ತೋಚಾನ್ ಎಂಬ ಸಿನಿಮಾ ಮಾಡಲಾಗಿದ್ದು, ಈ ಚಿತ್ರವನ್ನು ಶ್ರೀನಿವಾಸ್‌ ಕನ್ನಡಕ್ಕೆ ರೀಮೇಕ್‌ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ.

ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. A ಫಾರ್‌ ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಈ ಸಿನಿಮಾಗೆ ಇದೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ