logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಪ್ರೇತವಾದ ಸಿಹಿ, ಹುಚ್ಚಿಯಾದ ಸೀತಾ, ರಾಮ್‌ಗೆ ಇನ್ನೊಂದು ಮದುವೆ! ಹಾರರ್‌ ಕಥೆಯಾಗಿ ಬದಲಾಯ್ತು ಸೀತಾ ರಾಮ ಸೀರಿಯಲ್

Seetha Rama Serial: ಪ್ರೇತವಾದ ಸಿಹಿ, ಹುಚ್ಚಿಯಾದ ಸೀತಾ, ರಾಮ್‌ಗೆ ಇನ್ನೊಂದು ಮದುವೆ! ಹಾರರ್‌ ಕಥೆಯಾಗಿ ಬದಲಾಯ್ತು ಸೀತಾ ರಾಮ ಸೀರಿಯಲ್

Nov 26, 2024 11:55 AM IST

google News

ಸೀತಾ ರಾಮ ಹೊಸ ಪ್ರೋಮೋ ಬಿಡುಗಡೆ

    • Seetha Rama Serial: ಸೀತಾ ರಾಮ ಸೀರಿಯಲ್‌ನ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಮೊದಲ ಪ್ರೋಮೋದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಿಹಿಯ ನೋವಿನಲ್ಲಿಯೇ ಸೀತಾ ಮತ್ತು ರಾಮ ಕಾಲ ಕಳೆಯುತ್ತಿದ್ದಾರೆ. ಸೀತಾ ಹುಚ್ಚಿಯಾದರೆ, ರಾಮ ಕುಗ್ಗಿ ಹೋಗಿದ್ದಾನೆ. ಸಿಹಿ ಪ್ರೇತವಾಗಿ, ತನ್ನ ತದ್ರೂಪಿ ಸುಬ್ಬಿಯನ್ನು ಭೇಟಿ ಮಾಡಿದ್ದಾಳೆ. 
ಸೀತಾ ರಾಮ ಹೊಸ ಪ್ರೋಮೋ ಬಿಡುಗಡೆ
ಸೀತಾ ರಾಮ ಹೊಸ ಪ್ರೋಮೋ ಬಿಡುಗಡೆ (Zee Kannada)

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಸಿಹಿಯ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಶ್ಯಾಮ್‌ ಮತ್ತು ಶಾಲಿನಿಯ ಹಿಡಿತದಿಂದ ತಪ್ಪಿಸಿಕೊಂಡು, ಸೀತಮ್ಮ ಮತ್ತು ರಾಮ್‌ ಜೊತೆಗೆ ಹಾಯಾಗಿದ್ದಾಳೆ. ಆದರೆ, ಮುಂದಿನ ಭವಿಷ್ಯ ನೆನಪಿಸಿಕೊಂಡರೆ ಇಲ್ಲಿ ಅಚ್ಚರಿಗಳ ಗುಚ್ಛವೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಜೀ ಕನ್ನಡ ವಾಹಿನಿ, ಸೀತಾ ರಾಮ ಧಾರಾವಾಹಿಯ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿತ್ತು. ಆ ಪ್ರೋಮೋದಲ್ಲಿ ಸೀತಾ ರಾಮನ ಜತೆಗಿದ್ದ ಸಿಹಿ, ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಈಗ ಅದರ ಮುಂದುವರಿದ ಭಾಗದ ಪ್ರೋಮೋ ಬಿಡುಗಡೆ ಆಗಿದೆ.

ಸಿಹಿ ಒಬ್ಬಳೇ ಇದ್ದ ಪ್ರಪಂಚಕ್ಕೆ ಇದೀಗ ಸುಬ್ಬಿಯ ಎಂಟ್ರಿಯಾಗಿದೆ. ಅಂದರೆ, ಸಿಹಿಯನ್ನೇ ಹೋಲುವ ಹುಡುಗಿಯ ಆಗಮನವಾಗಿದೆ. ಶ್ರಾವಣಿಯ ಪರ್ಸ್‌ ಎಗರಿಸಿ ಆಕೆಯ ಕೈಗೆ ಸಿಕ್ಕಿಬಿದ್ದ ಹುಡುಗಿಯನ್ನು ಕಂಡು ಶ್ರಾವಣಿಗೂ ದಿಗ್ಬ್ರಮೆಯಾಗಿದೆ. ಹೀಗಿರುವಾಗ ಅಮ್ಮನಿಲ್ಲದ ಆ ಪುಟಾಣಿ ಸುಬ್ಬಿ ಸೀತಾಳ ಮಡಿಲು ಸೇರುವುದು ಹೇಗೆ? ಸಿಹಿ ಸುಬ್ಬಿ ಒಂದಾಗ್ತಾರಾ? ಹೀಗೆ ಕಥೆ ಹೊಸ ಮಗ್ಗುಲಿಗೆ ಹೊರಳುತ್ತಿದೆ. ಹೀಗಿರುವಾಗಲೇ ಹೊಸ ಪ್ರೋಮೋವೊಂದನ್ನು ಹೊರತಂದ ಜೀ ಕನ್ನಡ ವಾಹಿನಿ, ವೀಕ್ಷಕರಿಗೂ ಶಾಕ್‌ ನೀಡಿದೆ. ಹಾಗಾದರೆ ಹೊಸ ಪ್ರೋಮೋದಲ್ಲಿ ಏನಿದೆ?

ಹೊಸ ಪ್ರೋಮೋದಲ್ಲಿ ಅಚ್ಚರಿಯ ಸಂಗತಿ

ಸೀತಾ ರಾಮ ಸೀರಿಯಲ್‌ನ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಮೊದಲ ಪ್ರೋಮೋದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಿಹಿಯ ನೋವಿನಲ್ಲಿಯೇ ಸೀತಾ ಮತ್ತು ರಾಮ ಕಾಲ ಕಳೆಯುತ್ತಿದ್ದಾರೆ. ಮತ್ತೊಂದು ಕಡೆ, ಸಿಹಿ ಇಲ್ಲದ ಜೀವನವನ್ನು ಸೀತಾ ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ. ಮಾನಸಿಕವಾಗಿ ಜರ್ಜರಿತಗೊಂಡಿದ್ದಾಳೆ. ಗೊಂಬೆಯೊಂದನ್ನು ಕೈಯಲ್ಲಿ ಹಿಡಿದು, ಹುಚ್ಚಿಯಂತೆ ವರ್ತಿಸುತ್ತಿದ್ದಾಳೆ. ಸೀತಾಳ ಸ್ಥಿತಿ ನೋಡಿ ರಾಮ್‌ ಕಣ್ಣೀರಿಡುತ್ತಿದ್ದಾನೆ. ಇನ್ನೊಂದು ಕಡೆ, ಭಾರ್ಗವಿಯೂ ಇದೇ ಚಾನ್ಸು ಎಂದು ಭಾವಿಸಿ, ರಾಮನ ಎರಡನೇ ಮದುವೆಗೆ ಪ್ಲಾನ್‌ ಹಾಕಿದ್ದಾಳೆ.

ಹುಚ್ಚಿಯಾದ ಸೀತಾ

ಬಿಳಿ ಫ್ರಾಕ್‌ ಧರಿಸಿ ಏಂಜಲ್‌ ಲುಕ್‌ನಲ್ಲಿ ಪ್ರೇತವಾಗಿ ಸಿಹಿ ದೇಸಾಯಿ ಮನೆ ಪ್ರವೇಶಿಸಿದ್ದಾಳೆ. ನಾನು ಹೇಗೆ ಒಳಗೆ ಬಂದೆ.. ಯಾಕೆ ನನ್ನ ಫೋಟೋಕ್ಕೆ ಹಾರ ಹಾಕಿದ್ದಾರೆ? ಅಪ್ಪ ಯಾಕೆ ನಾನು ನಿಮಗೆ ಕಾಣಿಸ್ತಿಲ್ಲ. ಅಯ್ಯೋ ಏನಾಗಿದೆ ನನಗೆ? ಇತ್ತ ರೂಮ್‌ನಲ್ಲಿ ಗೊಂಬೆಯೊಂದನ್ನು ಕೈಯಲ್ಲಿ ಹಿಡಿದು ಕೂತ ಸೀತಾ, ನನ್ನ ಜಾಣಮರಿ ಅಲ್ವಾ ನೀನು. ಮಲ್ಕೋಬೇಕಪ್ಪ. ಅಷ್ಟೊತ್ತಿಗೆ ಕೋಣೆಗೆ ರಾಮನ ಎಂಟ್ರಿಯಾಗಿದೆ. ಇದು ನನ್ನ ಮಗು, ನಾನು ಯಾರಿಗೂ ಬಿಟ್ಟುಕೊಡಲ್ಲ.. ಸಿಹಿ ನೀನು ಯಾವತ್ತೂ ನನ್ನ ಜತೆಯಲ್ಲಿಯೇ ಇರ್ತಿಯಾ.. ಎಂದು ಮಗು ಹಿಡಿದು ಹೊರ ಓಡಿದ್ದಾಳೆ.

ಸಿಹಿ- ಸುಬ್ಬಿ ಮುಖಾಮುಖಿ

ಸೀತಾಳನ್ನು ನೋಡ್ತಿದ್ದರೆ ಹುಚ್ಚಿ ಆಗ್ತಿದ್ದಾಳೆ ಅಂತ ಅನಿಸ್ತಿದೆ. ನಮ್ಮ ರಾಮ್‌ಗೆ ಇನ್ನೊಂದು ಮದುವೆ ಮಾಡಿಸಬೇಕು ಎಂದು ಭಾರ್ಗವಿ ಮಾವಯ್ಯನ ಮುಂದೆ ಹೇಳಿಕೊಂಡಿದ್ದಾಳೆ. ಇವರಿಬ್ಬರ ಮಾತನ್ನು ಪ್ರೇತವಾಗಿ ಬದಲಾದ ಸಿಹಿ ಕೇಳಿಸಿಕೊಂಡಿದ್ದಾಳೆ. ನಾನು ಸೀತಮ್ಮನಿಗೆ ಕಾಣಿಸಬೇಕು ಅಂದ್ರೆ ಏನ್‌ ಮಾಡಬೇಕು? ಅಂತ ವಿಚಾರ ಮಾಡುತ್ತಲೇ ಸರ್ಕಸ್‌ ಮಾಡುತ್ತಿದ್ದ ಸುಬ್ಬಿ ಸಿಹಿ ಕಣ್ಣಿಗೆ ಬಿದ್ದಿದ್ದಾಳೆ. ಯಾರ ಕಣ್ಣಿಗೂ ಕಾಣದ ಸಿಹಿ, ಸುಬ್ಬಿಗೆ ಕಾಣಿಸಿದ್ದಾಳೆ. ಸಿಹಿ - ಸುಬ್ಬಿ ಇಬ್ಬರ ಹೆಸರೂ ತಿಳಿದುಕೊಂಡಿದ್ದಾರೆ. ಸೇಮ್‌ ಟು ಸೇಮ್‌ ಇರುವುದನ್ನೂ ನೋಡಿ ಅಚ್ಚರಿಗೊಂಡಿದ್ದಾರೆ. ಹಾಗಾದರೆ ಸಿಹಿ ಮನಸ್ಸಲ್ಲಿರೋ ಪ್ರಶ್ನೆಗೆ ಉತ್ತರವಾಗ್ತಾಳಾ ಸುಬ್ಬಿ? ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ