logo
ಕನ್ನಡ ಸುದ್ದಿ  /  ಮನರಂಜನೆ  /  ‘ಆದಿವಾಸಿ ಹೆಣ್ಣುಮಗಳು ರಾಷ್ಟ್ರಪತಿ ಆಗಿರುವಾಗ, ನಾನೂ ಪ್ರಧಾನಿ ಆಗುವೆ!’; ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್‌ ಕೇಳಿದ ಲಾಯರ್‌ ಜಗದೀಶ್‌

‘ಆದಿವಾಸಿ ಹೆಣ್ಣುಮಗಳು ರಾಷ್ಟ್ರಪತಿ ಆಗಿರುವಾಗ, ನಾನೂ ಪ್ರಧಾನಿ ಆಗುವೆ!’; ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್‌ ಕೇಳಿದ ಲಾಯರ್‌ ಜಗದೀಶ್‌

Oct 21, 2024 09:23 AM IST

google News

ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್‌ ಕೇಳಿದ ಲಾಯರ್‌ ಜಗದೀಶ್‌

    • ಬಿಗ್‌ ಬಾಸ್‌ನಿಂದ ಆಚೆ ಬಂದ ಬಳಿಕ ಲಾಯರ್‌ ಜಗದೀಶ್‌ ತಮ್ಮ ಅಚ್ಚರಿಯ ಹೇಳಿಕೆಗಳ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ರಾಜಕೀಯದ ಬಗ್ಗೆ ಮಾತನಾಡುತ್ತ, ನಾನೂ ಸಿಎಂ, ಸಚಿವ, ಪ್ರಧಾನಿ ಆಗಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಅವಕಾಶ ನೀಡಿದರೆ, ಶಿಗ್ಗಾಂವಿ ಉಪ ಚುನಾವಣೆಗೂ ನಿಲ್ಲುವೆ ಎಂದಿದ್ದಾರೆ. 
ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್‌ ಕೇಳಿದ ಲಾಯರ್‌ ಜಗದೀಶ್‌
ಶಿಗ್ಗಾಂವಿ ಉಪ ಚುನಾವಣೆಗೆ ಟಿಕೆಟ್‌ ಕೇಳಿದ ಲಾಯರ್‌ ಜಗದೀಶ್‌

Bigg boss Kannada 11: ಬಿಗ್‌ಬಾಸ್‌ ಮನೆಯಲ್ಲಿದ್ದಷ್ಟು ದಿನ ಸಣ್ಣ ಸಣ್ಣ ವಿಚಾರಕ್ಕೂ ಹೆಚ್ಚು ಸುದ್ದಿಯಾದವರು ಲಾಯರ್‌ ಜಗದೀಶ್‌. ಆದರೆ, ಮೂರು ವಾರ ಕಳೆಯುವಷ್ಟರಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ದರಿಂದ ಮನೆಯಿಂದ ಎಕ್ಸಿಟ್‌ ಆದರು. ವಾರಾಂತ್ಯದ ಕಿಚ್ಚನ ಏಪಿಸೋಡ್‌ನಲ್ಲಿ ಕಾಣಿಸಿಕೊಂಡು, ಶೋನಲ್ಲಿ ತಾವು ಮಾಡಿದ ತಪ್ಪಿನ ಬಗ್ಗೆಯೂ ಅರಿವಾಗಿ ಸುದೀಪ್‌ ಬಳಿ ಕ್ಷಮಾಪಣೆ ಕೇಳಿದ್ದಾರೆ. "ಬಿಗ್ ಬಾಸ್‌ ಶೋನಲ್ಲಿ ನಾನು ನೀಡಿದ ಪರ್ಫಾಮೆನ್ಸ್‌ ನನಗೆ ಖುಷಿ ನೀಡಿದೆ. ಹೊಸ ಜಗದೀಶ್‌ನ ನೋಡುವುದಕ್ಕೆ ಖುಷಿ ಆಯ್ತು. ಆದರೆ ನನ್ನ ಕಡೆಯಿಂದಲೂ ತಪ್ಪಾಗಿದೆ ಕ್ಷಮಿಸಿ" ಎಂದಿದ್ದರು. ಈಗ ಇದೇ ಜಗದೀಶ್‌, ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕ ಲಾಯರ್‌ ಜಗದೀಶ್‌ ನಿನ್ನೆ ಸಂಜೆ 4;30ಕ್ಕೆ ಸುದ್ದಿಗೋಷ್ಠಿಗೆ ಆಹ್ವಾನಿಸಿದ್ದರು. ಆದರೆ, ಕಿಚ್ಚ ಸುದೀಪ್‌ ಅವರ ತಾಯಿ ನಿಧನರಾದ ಬೆನ್ನಲ್ಲೇ, ಸುದ್ದಿಗೋಷ್ಠಿಯನ್ನು ಮುಂದೂಡಿದ್ದರು. ಈ ವೇಳೆ ಕೆಲ ಮಾಧ್ಯಮಗಳಿಗೆ ಮಾತಿಗೆ ಸಿಕ್ಕಿದ್ದ ಜಗದೀಶ್‌, ಬಿಗ್‌ ಬಾಸ್‌ ಮಾತ್ರವಲ್ಲದೆ, ರಾಜಕೀಯದ ಬಗ್ಗೆಯೂ ಮಾತನಾಡಿದ್ದಾರೆ. ಮಾತಿನ ಭರದಲ್ಲಿ ಒಬ್ಬ ಟೀ ಮಾರುವವನು ಪ್ರಧಾನಿ ಆಗಬಹುದಾದರೆ, ನಾನ್ಯಾಕೆ ಆಗಬಾರದು. ನಾನೂ ಪ್ರಧಾನ ಮಂತ್ರಿ ಆಗಬೇಕೆಂದಿದ್ದೇನೆ" ಎಂದಿದ್ದಾರೆ ಜಗದೀಶ್‌.

ಉಪ ಚುನಾವಣೆಗೆ ಚಾನ್ಸ್‌ ಕೊಡಿ 

"ಬಿಗ್‌ ಬಾಸ್‌ ಮನೆಯಲ್ಲಿ ನಾನು ಮಾಡದ ಕೆಲಸ ಒಂದೊದಲ್ಲ. ಎಲ್ಲ ಕೆಲಸವನ್ನೂ ಮಾಡಿದ್ದೇನೆ. ಬಾತ್‌ರೂಮ್‌ ಕ್ಲೀನ್‌ ಮಾಡಿದ್ದೇನೆ. ಮನೆ ಗುಡುಸಿದ್ದೇನೆ.. ಯಾವ ಕೆಲಸವನ್ನು ಕೊಟ್ಟರೂ ಮಾಡುವ ಹಂತದಲ್ಲಿದ್ದೇನೆ. ಇದೀಗ ಉಪ ಚುನಾವಣೆಯ ಕಾವು ಜೋರಾಗಿದೆ. ಕಾಂಗ್ರೆಸ್‌ ಪಕ್ಷ ಅವಕಾಶ ಮಾಡಿಕೊಟ್ಟರೆ, ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಸವರಾಜ್‌ ಬೊಮ್ಮಾಯಿ ವಿರುದ್ಧ ನಿಲ್ಲುತ್ತೇನೆ. ಅಷ್ಟಕ್ಕೂ ನಾನು ಯಾವ ಪಕ್ಷದವನೂ ಅಲ್ಲ. ಬೆಂಬಲ ನೀಡಿದರೆ ಖಂಡಿತವಾಗಿ ಶಿಗ್ಗಾಂವಿಯಲ್ಲಿ ಚುನಾವಣೆ ಎದುರಿಸಲು ನಾನು ರೆಡಿ" ಎಂದಿದ್ದಾರೆ ಜಗದೀಶ್.

ಟೀ ಮಾರುವವರೇ ಪ್ರಧಾನಿ ಆಗಿರುವಾಗ..

ಬಿಗ್‌ ಬಾಸ್‌ ಶೋ ಆರಂಭದಲ್ಲಿಯೇ ನಾನು ಸುದೀಪ್‌ ಅವರ ಮುಂದೆಯೇ ಹೇಳಿದ್ದೆ. ಬಡವರ ಮಕ್ಕಳೂ ವಿಧಾನ ಸೌಧಕ್ಕೆ ಕಾಲಿಡಬೇಕು. ಶಾಸಕ , ಸಂಸದರಾಗಬೇಕು. ಆಗ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ. ಬಡವರ ಮಕ್ಕಳು ಅಧಿಕಾರ ಹಿಡಿಯಬೇಕು. ನಾನೂ ಸಾಮಾನ್ಯ ಕುಟುಂಬದಿಂದ ಬಂದವನೇ. ನಮ್ಮ ದೇಶದಲ್ಲಿ ಆದಿವಾಸಿ ಹೆಣ್ಣುಮಗಳನ್ನೇ ನಾವೇ ರಾಷ್ಟ್ರಪತಿ ಮಾಡಿರುವಾಗ, ಒಬ್ಬ ಚಹಾ ಮಾರುವವ ಪ್ರಧಾನ ಮಂತ್ರಿ ಆಗಿರುವಾಗ, ನಾನೇಕೆ ಪ್ರಧಾನಿ ಆಗಬಾರದು? ನಮ್ಮ ಗುರಿಯೂ ದೊಡ್ಡದೇ, ಅದೇ ಹಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ ಲಾಯರ್‌ ಜಗದೀಶ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ