ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್‌ ತಂಡ, ಸಿಕ್ಕ ಬಹುಮಾನ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್‌ ತಂಡ, ಸಿಕ್ಕ ಬಹುಮಾನ ಏನು?

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್‌ ತಂಡ, ಸಿಕ್ಕ ಬಹುಮಾನ ಏನು?

25 ವಾರಗಳಿಂದ ನಗುವಿನ ಟಾನಿಕ್‌ ನೀಡುತ್ತ ಬಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶೋಗೆ ತೆರೆ ಬಿದ್ದಿದೆ. ಶನಿವಾರ (ಅ. 19 ) ಮತ್ತು ಭಾನುವಾರ (ಅ. 20) ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಅದ್ಭುತ ಫರ್ಫಾರ್ಮನ್ಸ್‌ ನೀಡಿದ ಅನು ವಾರಿಯರ್ಸ್‌ ತಂಡ ಕಪ್‌ ಎತ್ತಿ ಹಿಡಿದಿದೆ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್‌ ತಂಡ
ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಾಗಿ ಹೊರಹೊಮ್ಮಿದ ಅನುಶ್ರೀ ವಾರಿಯರ್ಸ್‌ ತಂಡ

Comedy Khiladigalu Premier League Grand Finale: ಜೀ ಕನ್ನಡ ವಾಹಿನಿಯಲ್ಲಿ ಕಳೆದ ಆರು ತಿಂಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಕಾಣುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ತೆರೆ ಬಿದ್ದಿದೆ. ಭಾನುವಾರ ಐದು ತಂಡಗಳ ಪೈಕಿ ಒಂದು ವಿಜೇತ ತಂಡದ ಘೋಷಣೆ ಆಗಿದೆ. ಈ ಮೂಲಕ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನ ಮೊದಲ ಸೀಸನ್‌ನ ವಿನ್ನರ್‌ ಆಗಿ ಅನುಶ್ರೀ ವಾರಿಯರ್ಸ್‌ ತಂಡ ಕಪ್‌ ಎತ್ತಿ ಹಿಡಿದಿದೆ. ಮೆಂಟರ್‌ ಹರೀಶ್‌ ಅಂಡ್ ಟೀಮ್‌ ಗೆದ್ದು ಬೀಗಿದೆ.

ಕಿರುತೆರೆ ಪ್ರೇಕ್ಷಕನಿಗೆ ನಗುವಿನ ಹೂರಣವನ್ನೇ ಬಡಿಸಿದ ಈ ಶೋ, ಈ ಸಲ ಹೊಸ ರೂಪದಲ್ಲಿ ನೋಡುಗರ ಮನರಂಜಿಸಿತ್ತು. ಪ್ರತಿ ಸಲ ಒಂದಷ್ಟು ಸ್ಪರ್ಧಿಗಳು, ಮೂವರು ತೀರ್ಪುಗಾರರು, ಓರ್ವ ನಿರೂಪಕರು ಇರುತ್ತಿದ್ದರು. ಆದರೆ ಈ ಸಲದ ಶೋನ ಪರಿಕಲ್ಪನೆಯನ್ನೇ ಬದಲಿಸಲಾಗಿತ್ತು. ನಿರೂಪಕರೇ ಈ ಶೋನ ತೀರ್ಪುಗಾರರಾಗಿದ್ದರು. ಮಹಾಗುರುವಾಗಿ ಎಂದಿನಂತೆ ಜಗ್ಗೇಶ್‌ ಕಾಣಿಸಿಕೊಂಡಿದ್ದರು. ಹಾಗಾದರೆ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ವಿಜೇತರಿಗೆ ಸಿಕ್ಕಿದ್ದೇನು? ಮತ್ತೆ ಯಾರ್ಯಾರಿಗೆಲ್ಲ ಯಾವ್ಯಾವ ಅವಾರ್ಡ್‌ ಪಡೆದುಕೊಂಡ್ರು? ಇಲ್ಲಿದೆ ಮಾಹಿತಿ.

ವಿಜೇತರಿಗೆ ಟ್ರೋಫಿ ಜತೆಗೆ ಚಿನ್ನದ ನಾಣ್ಯ

25 ವಾರಗಳಿಂದ ನಗುವಿನ ಟಾನಿಕ್‌ ನೀಡುತ್ತ ಬಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌, ಶನಿವಾರ (ಅ. 19 ) ಮತ್ತು ಭಾನುವಾರ (ಅ. 20) ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ನಗುವಿನ ರಸದೌತಣವನ್ನೇ ನೀಡಿದೆ. ಆ ಪೈಕಿ ಭಾನುವಾರ ಅದ್ಭುತ ಫರ್ಫಾರ್ಮನ್ಸ್‌ ನೀಡಿದ ಅನು ವಾರಿಯರ್ಸ್‌ ತಂಡಕ್ಕೆ ವೈಟ್‌ ಗೋಲ್ಡ್‌ ಕಡೆಯಿಂದ ಒಂದು ಲಕ್ಷ ಮೌಲ್ಯದ ಚಿನ್ನದ ನಾಣ್ಯ ಸಿಕ್ಕಿದೆ. ಜತೆಗೆ ಈ ಸೀಸನ್‌ ವಿನ್ನರ್‌ ಆಗಿರುವ ಇದೇ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಇನ್ನುಳಿದಂತೆ ಎಲ್ಲ ತಂಡದ ಕ್ಯಾಪ್ಟನ್‌ಗಳಿಗೂ ವೈಟ್‌ ಗೋಲ್ಡ್‌ ಕಡೆಯಿಂದ ವಿಶೇಷ ಬಹುಮಾನ ನೀಡಲಾಗಿದೆ.

ಬೆಸ್ಟ್‌ ಎಂಟರ್‌ಟೇನರ್‌ ಅವಾರ್ಡ್‌ ಯಾರಿಗೆ?

ಮಾಸ್ಟರ್‌ ಆನಂದ್‌ ಸನ್‌ ರೈಸರ್ಸ್‌ನಿಂದ, ಆಂಕರ್‌ ಅನುಶ್ರೀ ಅವರ ಅನು ವಾರಿಯರ್ಸ್‌, ಶ್ವೇತಾ ಚೆಂಗಪ್ಪ ಅವರ ರಾಯಲ್‌ ಚಂಗಪ್ಪ ಬುಲ್ಡೋಜರ್ಸ್‌, ಅಕುಲ್‌ ಬಾಲಾಜಿ ಅವರ ಅಕುಲ್‌ ಟೈಟನ್ಸ್‌, ಕುರಿ ಪ್ರತಾಪ್‌ ಕುರಿ ಸೂಪರ್‌ಕಿಂಗ್ಸ್‌ ತಂಡಗಳು ಅದ್ಭುತ ಫರ್ಫಾರ್ಮನ್ಸ್‌ ನೀಡಿವೆ. ಆ ಪೈಕಿ ಗೆದ್ದು ಬೀಗಿದ್ದು ಮಾತ್ರ ಅನು ವಾರಿಯರ್ಸ್‌ ತಂಡದ ಹರೀಶ್‌ ತಂಡ. ವಿಶೇಷ ಏನೆಂದರೆ ಬೆಸ್ಟ್‌ ಎಂಟರ್‌ಟೇನರ್‌ ಅವಾರ್ಡ್‌ ಅನ್ನು ಜಗಪ್ಪ ಪಡೆದುಕೊಂಡಿದ್ದಾರೆ.

ಇದು ನಮ್ಮ ಗೆಲುವಲ್ಲ ಎಂದ ಹರೀಶ್‌..

ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ಇದು ನಮ್ಮೊಬ್ಬರ ಗೆಲುವಲ್ಲ. ಇಡೀ ತಂಡದ ಗೆಲುವು. ಇಡೀ ಜೀ ಗೆದ್ದಿದೆ. ನಾವು ಯಾವತ್ತೂ ಕಾಂಪಿಟೇಷನ್‌ ಅಂತ ಮಾಡಿಲ್ಲ. ಎಲ್ಲರೂ ಕೂಡಿಕೊಂಡೇ ಸ್ಕಿಟ್‌ ಮಾಡಿದ್ದೇವೆ. ಎಲ್ಲರ ಸಹಕಾರ ಸಿಕ್ಕಿದೆ. ನಾನು ಕ್ಯಾಪ್ಟನ್ಸ್‌ ಅನ್ನುವುದಕ್ಕಿಂತ ಎಲ್ಲರೂ ಸೇರಿ ಗೆದ್ದಿದ್ದೇವೆ ಎಂದು ಹೇಳಿದ್ದಾರೆ ಅನು ವಾರಿಯರ್ಸ್‌ ತಂಡ ಕ್ಯಾಪ್ಟನ್‌ ಹರೀಶ್‌.

Whats_app_banner