Bigg Boss Kannada 11: ಬಾಯಲ್ಲಿ ಬರೋ ಮಾತು ಹೇಗಿರಬೇಕು? ವಾರಾಂತ್ಯದಲ್ಲಿ ಕಿಚ್ಚನ ಗುಡುಗು, ನಡುಗಿದ ಮಾನಸಾ, ಚೈತ್ರಾ, ಹಂಸಾ!
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಾಯಲ್ಲಿ ಬರೋ ಮಾತು ಹೇಗಿರಬೇಕು? ವಾರಾಂತ್ಯದಲ್ಲಿ ಕಿಚ್ಚನ ಗುಡುಗು, ನಡುಗಿದ ಮಾನಸಾ, ಚೈತ್ರಾ, ಹಂಸಾ!

Bigg Boss Kannada 11: ಬಾಯಲ್ಲಿ ಬರೋ ಮಾತು ಹೇಗಿರಬೇಕು? ವಾರಾಂತ್ಯದಲ್ಲಿ ಕಿಚ್ಚನ ಗುಡುಗು, ನಡುಗಿದ ಮಾನಸಾ, ಚೈತ್ರಾ, ಹಂಸಾ!

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಮೂರನೇ ವಾರ, ಕಿಚ್ಚನ ಪಂಚಾಯ್ತಿಯಲ್ಲಿ ಯಾವುದೇ ಆಕ್ಟಿವಿಟಿ ಮಾಡದೇ, ನೇರವಾಗಿ ಎಲ್ಲ ಸ್ಪರ್ಧಿಗಳ ಮೇಲೆ ಹರಿಹಾಯ್ದಿದ್ದಾರೆ ಸುದೀಪ್‌. ಯಾರನ್ನೂ ಬಿಡದೇ ಎಲ್ಲರಿಗೂ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಾಗಾದರೆ, ಈ ವಾರದ ಕಿಚ್ಚನ ಪಂಚಾಯ್ತಿಯ ಹೈಲೈಟ್‌ಗಳೇನು?

ಕಿಚ್ಚನ ವಾರಾಂತ್ಯದ ಪಂಚಾಯ್ತಿಯಲ್ಲಿ ಮಹಿಳಾ ಸ್ಪರ್ಧಿಗಳ ಬೆಂಡೆತ್ತಿದ ಸುದೀಪ್
ಕಿಚ್ಚನ ವಾರಾಂತ್ಯದ ಪಂಚಾಯ್ತಿಯಲ್ಲಿ ಮಹಿಳಾ ಸ್ಪರ್ಧಿಗಳ ಬೆಂಡೆತ್ತಿದ ಸುದೀಪ್ (image\ JioCinema)

Bigg Boss Kannada 11 October 20th Episode: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇದೀಗ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಮೂರನೇ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌, ಸ್ಪರ್ಧಿಗಳ ಜತೆಗೆ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ. ಅದಕ್ಕೆ ಕಾರಣ; ಕಳೆದ ವಾರದ ಘಟನೆಗಳು. ಪ್ರಾಮಾಣಿಕತೆಯ ಪಾಠ ಮಾಡುವುದಲ್ಲದೆ, ಮನೆ ಮಂದಿಗೆ ನೀವೇಷ್ಟು ಸರಿ ಇದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಾಚೆಗೆ ಮನೆಯ ಮಹಿಳಾ ಸ್ಪರ್ಧಿಗಳಾದ ಹಂಸಾ, ಚೈತ್ರಾ, ಮಾನಸಾ, ಭವ್ಯ, ಐಶ್ವರ್ಯಾ ಅವರನ್ನೂ ಬೆಂಡೆತ್ತಿದ್ದಾರೆ. ಹಾಗಂತ ಪುರುಷ ಸ್ಪರ್ಧಿಗಳನ್ನು ಸುಮ್ಮನೆ ಬಿಟ್ಟಿಲ್ಲ, ಅವರ ಕಿವಿಯನ್ನೂ ಹಿಂಡಿದ್ದಾರೆ ಕಿಚ್ಚ ಸುದೀಪ್.‌

ಒಂದಿಡೀ ವಾರ ಮನೆಯಲ್ಲಿ ಏನೇ ನಡೆದರೂ, ಗಲಾಟೆ, ಕಿತ್ತಾಟವಾದರೂ, ವೀಕ್ಷಕ ಕಾಯುವುದು ಕಿಚ್ಚನ ಪಂಚಾಯ್ತಿಯನ್ನು. ಅಲ್ಲಿ ತಮ್ಮ ಪ್ರಬುದ್ಧ ಮಾತುಗಳಿಂದಲೇ ಎಲ್ಲರಿಗೂ ತಲುಪಿಸಬೇಕಿರುವುದನ್ನು ತಲುಪಿಸುತ್ತಾರೆ. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಆ ಪರಿಸ್ಥಿತಿಯನ್ನು ನಿಭಾಯಿಸಿರುತ್ತಾರೆ. ಇದೀಗ ಮೂರನೇ ವಾರ, ಯಾವುದೇ ಆಕ್ಟಿವಿಟಿ ಮಾಡದೇ, ನೇರವಾಗಿ ಎಲ್ಲ ಸ್ಪರ್ಧಿಗಳ ಮೇಲೆ ಹರಿಹಾಯ್ದಿದ್ದಾರೆ. ಯಾರನ್ನೂ ಬಿಡದೇ ಎಲ್ಲರಿಗೂ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಾಗಾದರೆ, ಈ ವಾರದ ಕಿಚ್ಚನ ಪಂಚಾಯ್ತಿಯ ಹೈಲೈಟ್‌ಗಳೇನು?

ಚಪ್ಪಲಿ ಬಿಸಾಕಿದ ಮಂಜುಗೆ ಕ್ಲಾಸ್‌

ಉಗ್ರಂ ಮಂಜು ಬಗ್ಗೆ ಸುದೀಪ್‌ ಕೊಂಚ ಬಿರುಸಾಗಿದ್ದಾರೆ. ಒಬ್ಬ ವ್ಯಕ್ತಿ ಬಗ್ಗೆ ಚಪ್ಪಲಿ ಬಿಸಾಕಿದರೆ ಅದರ ಅರ್ಥ ಏನು ಎಂಬುದನ್ನು ತಿಳಿಸಿದ್ದಾರೆ. ಬಳಿಕ ಮಾನಸಾ ಕಡೆ ತಿರುಗಿದ ಸುದೀಪ್‌, ಏನಾಯ್ತು ಮಾನಸ ಎಂದಿದ್ದಾರೆ. ಆಗ, "ನನಗೆ ಆ ಕ್ಷಣಕ್ಕೆ ಏನು ಅನಿಸಿತೋ ಅದನ್ನು ಹೇಳಿದ್ದೇನೆ ಎಂದಿದ್ದಾರೆ. ಸರಿಯಾದ ಉತ್ತರ ಸಿಗದಿದ್ದಕ್ಕೆ ಕೊಂಚ ಖಾರವಾದ ಸುದೀಪ್‌, ತಂದೆ ಸ್ಥಾನದಲ್ಲಿರುವ ಇಬ್ಬ ವ್ಯಕ್ತಿಗೆ ಹೋಗೋ ಬಾರೋ ಅಂದರೆ ಅವರ ವಯಸ್ಸಿಗೆ ಕಿಮ್ಮತ್ತಿಲ್ವಾ?

ನಿಮ್ಮನ್ನೇಕೆ ಈ ಮನೆಯಲ್ಲಿ ಇಟ್ಟುಕೊಳ್ಳಬೇಕು?

ಅವರು ಆ ರೀತಿ ಮಾತನಾಡಿದ್ದಕ್ಕೆ ಮನೆಯಿಂದ ಹೊರ ಹೋದರು ನಿಜ. ನೀವೂ ಸಹ ಒಂದಷ್ಟು ತಪ್ಪು ಮಾತನಾಡಿದ್ದೀರಾ. ಹಾಗಾದರೆ ನಿಮ್ಮನ್ನೇಕೆ ಈ ಮನೆಯಲ್ಲಿ ಇಟ್ಟುಕೊಳ್ಳಬೇಕು. ಎದುರಿನವರು ಹೇಗಿರ್ತಾರೋ ಗೊತ್ತಿಲ್ಲ. ನಾವು ಗೌರವ ಕೊಡುವುದು ನಮ್ಮ ವ್ಯಕ್ತಿತ್ವ ತೋರಿಸುತ್ತೆ ಅಲ್ವಾ? ಎಂದು ಮಾನಸಾಗೆ ಚಳಿ ಬಿಡಿಸಿದರು. ಬಳಿಕ ಚೈತ್ರಾಗೆ ತಾವಾಡಿದ ಮಾತೇನು ಎಂದು ಕೇಳಿದರು. ಅದಕ್ಕೆ ಬೆಪ್ಪಾಗಿ ಕೂತ ಅವರು, ತುಟಿ ಬಿಚ್ಚಲಿಲ್ಲ.

ಒಬ್ಬ ಅಪ್ಪನಿಗೆ ಹುಟ್ಟಿದ್ರೆ.. ಪದ ಎಷ್ಟು ಸರಿ?

ಜಗದೀಶ್‌ ಅವರ ಬಾಯಲ್ಲಿ ಬಂದ ಮಾತು ತಪ್ಪು ನಿಜ. ನಿಮ್ಮ ಬಾಯಿಂದ ಮಾತು ಏನು? ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಎಂಬ ಪದ ನಿಮ್ಮ ಬಾಯಲ್ಲಿ ಬಂತು. ನೀವು ಅವರ ತಾಯಿಗೆ ಬೈದ್ರಿ ತಾನೇ? ಹೀಗಿರುವಾಗ ನೀವು ಹೆಣ್ಣುಮಕ್ಕಳಿಗೆ ಗೌರವ ಕೊಡಿ ಅಂತ ಈ ರೀತಿ ಹೇಳುತ್ತಿದ್ದೀರಿ. ಒಂದು ವೇಳೆ ಇದೇ ಮಾತು ಈ ಮನೆಯಲ್ಲಿ ಗಂಡಸರ ಬಾಯಿಂದ ಬಂದಿದ್ದರೆ, ಏನಾಗುತ್ತಿತ್ತು? ಹೀಗೆ ಬಹುತೇಕ ಇಡೀ ಮನೆ ಮಂದಿಗೆ ಕಿಚ್ಚ ಸುದೀಪ್‌ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

Whats_app_banner