Shivarajkumar Tamil Movie: ಪೋಸ್ಟರ್ ಹಂಚಿಕೊಂಡು ಮತ್ತೆ ತಮಿಳಿಗೆ ಹೊರಟ ಶಿವಣ್ಣ; ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ಧನುಷ್‌ಗೆ ಸಾಥ್
Dec 09, 2022 11:26 AM IST
ಪೋಸ್ಟರ್ ಹಂಚಿಕೊಂಡು ಮತ್ತೆ ತಮಿಳಿಗೆ ಹೊರಟ ಶಿವಣ್ಣ; ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ಧನುಷ್‌ಗೆ ಸಾಥ್
- ನಟ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಚಿತ್ರದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಇದೀಗ ನಿಜವಾಗಿದೆ. ಸ್ವತಃ ಶಿವಣ್ಣ ಪೋಸ್ಟರ್ ಹಂಚಿಕೊಂಡು ಖಚಿತ ಪಡಿಸಿದ್ದಾರೆ.
Shivarajkumar Tamil Movie: ಸೆಂಚುರಿ ಸ್ಟಾರ್ ಶಿವಣ್ಣ ಕನ್ನಡ ಸಿನಿಮಾ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಉದಾಹರಣೆ ತುಂಬ ಕಡಿಮೆ. ನಟಿಸುವ ಸಾಕಷ್ಟು ಅವಕಾಶಗಳಿದ್ದರೂ, ಅದೆಲ್ಲವನ್ನು ಬದಿಗಿಟ್ಟು ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಹೀಗಿರುವಾಗ ಇತ್ತೀಚಿನ ಕೆಲ ತಿಂಗಳ ಹಿಂದೆ ರಜನಿಕಾಂತ್ ನಟಿಸುತ್ತಿರುವ ‘ಜೈಲರ್’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡರು. ಇದೀಗ ಮತ್ತೊಂದು ಸಿನಿಮಾದ ಸುದ್ದಿ ಅಧಿಕೃತವಾಗಿದೆ.
‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಜತೆಗೆ ಶಿವಣ್ಣ ನಟಿಸಲಿದ್ದಾರೆ ಎಂದಾಗಲೇ, ದೊಡ್ಡ ಮಟ್ಟದ ಕುತೂಹಲ ವ್ಯಕ್ತವಾಗಿತ್ತು. ಅದು ನಿಜವಾಗುತ್ತಿದ್ದಂತೆ, ಅಭಿಮಾನಿಗಳ ವಲಯ ಸಂಭ್ರಮಿಸಿತ್ತು. ಹೀಗಿರುವಾಗಲೇ ಅದೇ ಕಾಲಿವುಡ್ ಅಂಗಳದಿಂದ ಮತ್ತೊಂದು ಸುದ್ದಿ ಹೊರಬಿದ್ದಿತ್ತು. ನಟ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಚಿತ್ರದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ ಎಂದು. ಇದೀಗ ಆ ಸುದ್ದಿ ನಿಜವಾಗಿದೆ. ಸ್ವತಃ ಶಿವಣ್ಣ ಪೋಸ್ಟರ್ ಹಂಚಿಕೊಂಡು ಖಚಿತ ಪಡಿಸಿದ್ದಾರೆ.
ಸದ್ಯ ಸೆಂಚುರಿ ಸ್ಟಾರ್ ಶಿವಣ್ಣ ‘ವೇದ’ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಇನ್ನೇನು ಇದೇ ತಿಂಗಳು ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾದ ಜತೆಯಲ್ಲಿಯೇ ಹಲವು ಪ್ರಾಜೆಕ್ಟ್‌ಗಳಲ್ಲಿಯೂ ಶಿವರಾಜ್‌ಕುಮಾರ್ ಬಿಜಿಯಾಗಿದ್ದಾರೆ. ಇದೀಗ ಧನುಷ್ ಅವರ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಭಾಗವಾಗುತ್ತಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಧನುಷ್ ಅವರ ಹಿರಿಯಣ್ಣನ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಸತ್ಯಜ್ಯೋತಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಅರುಣ್ ಮಹೇಶ್ವರನ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸ್ವಾತಂತ್ರ್ಯ ಕಾಲಘಟ್ಟದ ಸಂದರ್ಭದಲ್ಲಿ ನಡೆಯುವ ಕಥೆ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇನ್ನು ಚಿತ್ರದ ತಾಂತ್ರಿಕ ವರ್ಗದ ವಿಚಾರಕ್ಕೆ ಬರುವುದಾದರೆ, ಶ್ರೇಯಸ್ ಕೃಷ್ಣ ಛಾಯಾಗ್ರಾಹಕರಾಗಿ ತಂಡದ ಭಾಗವಾಗಿದ್ದರೆ, ನಾಗೂರನ್ ಸಂಕಲನಕಾರರಾಗಿದ್ದಾರೆ. ಸಂಗೀತ ಸಂಯೋಜಕ ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ.
ಇತರೆ ಕನ್ನಡ ಸಿನಿಮಾ ಸುದ್ದಿಗಳು..
Googled Indian film of 2022: ಗೂಗಲ್‌ನ ಈ ವರ್ಷದ ಟಾಪ್ ಐದು ಭಾರತೀಯ ಸಿನಿಮಾಗಳಲ್ಲಿ ಕನ್ನಡದ ‘ಕೆಜಿಎಫ್ 2’ ಮತ್ತು ‘ಕಾಂತಾರ’
ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ 2022 ತುಂಬ ಮಹತ್ವದ್ದು. ಅನಿರೀಕ್ಷಿತ ಬೆಳವಣಿಗೆಗಳ ನಡುವೆ, ಮಹತ್ತರ ಮೈಲಿಗಲ್ಲುಗಳು ಸೃಷ್ಟಿಯಾಗಿವೆ. ಉತ್ತರದಲ್ಲಿ ಸೋಲು ಬೇತಾಳನಂತೆ ಬೆನ್ನು ಬಿದ್ದರೆ, ದಕ್ಷಿಣದಿಂದ ಗೆಲುವಿನ ಕಹಳೆ ಮೇಳೈಸಿದೆ. ಅದರಲ್ಲೂ ಕನ್ನಡದ ಕೀರ್ತಿ ಪತಾಕೆ ಇಡೀ ದೇಶದ ಗಮನ ಸೆಳೆದಿದೆ. ಕನ್ನಡದ ಎರಡು ಸಿನಿಮಾಗಳು ಈ ವರ್ಷದ ಗೂಗಲ್‌ನಲ್ಲಿ ಸ್ಥಾನ ಪಡೆದಿವೆ. ಹಾಗಾದರೆ ಗೂಗಲ್ ತಿಳಿಸಿರುವಂತೆ ಈ ವರ್ಷದ 5 ಟಾಪ್ ಸಿನಿಮಾಗಳ ಪಟ್ಟಿ ಮತ್ತು ವಿವರ ಇಲ್ಲಿದೆ.. ಕ್ಲಿಕ್ ಮಾಡಿ..
Komal New Movie Titled Rolex: ಕೋಮಲ್ ಈಗ ‘ರೋಲೆಕ್ಸ್’; ಲಾಂಗ್ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..
ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ 'ಕಾಲಾಯ ನಮಃ' ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕ್ಲಿಕ್ ಮಾಡಿ..