Komal New Movie Titled Rolex: ಕೋಮಲ್‌ ಈಗ ‘ರೋಲೆಕ್ಸ್’; ಲಾಂಗ್‌ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..
ಕನ್ನಡ ಸುದ್ದಿ  /  ಮನರಂಜನೆ  /  Komal New Movie Titled Rolex: ಕೋಮಲ್‌ ಈಗ ‘ರೋಲೆಕ್ಸ್’; ಲಾಂಗ್‌ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..

Komal New Movie Titled Rolex: ಕೋಮಲ್‌ ಈಗ ‘ರೋಲೆಕ್ಸ್’; ಲಾಂಗ್‌ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..

ನಟ ಕೋಮಲ್‌ ಕೆಲ ವರ್ಷಗಳ ಬಳಿಕ ಮತ್ತೆ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕಾಲಾಯ ನಮಃ ಸಿನಿಮಾದ ಮುಹೂರ್ತ ನೆರವೇರಿತ್ತು. ಇದೀಗ ರೋಲೆಕ್ಸ್‌ ಸಿನಿಮಾ ಒಪ್ಪಿದ್ದಾರೆ.

ಕೋಮಲ್‌ ಈಗ ‘ರೋಲೆಕ್ಸ್’; ಲಾಂಗ್‌ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..
ಕೋಮಲ್‌ ಈಗ ‘ರೋಲೆಕ್ಸ್’; ಲಾಂಗ್‌ ಗ್ಯಾಪ್‌ನ ಬಳಿಕ ಸಾಲು ಸಾಲು ಸಿನಿಮಾಗಳಿಗೆ ರುಜು..

Komal New Movie Titled Rolex: ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ 'ಕಾಲಾಯ ನಮಃ' ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

'ಬಿಲ್ ಗೇಟ್ಸ್' ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ರೋಲೆಕ್ಸ್' ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ. ಈ ಚಿತ್ರ ಕಟೆಂಟ್ ಬೆಸ್ಡ್ ಸಿನಿಮಾವಾಗಿದ್ದು ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಫೀನಿಕ್ಸ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್. ಸಿ. ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ 'ರೋಲೆಕ್ಸ್ ' ಸಿನಿಮಾ ಸೆಟ್ಟೇರಲಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.

 ನಿರ್ಮಾಪಕ ಅನಿಲ್ ಕುಮಾರ್ ಮತ್ತು ನಿರ್ದೇಶಕ ಶ್ರೀನಿವಾಸ್ ಮಂಡ್ಯ
ನಿರ್ಮಾಪಕ ಅನಿಲ್ ಕುಮಾರ್ ಮತ್ತು ನಿರ್ದೇಶಕ ಶ್ರೀನಿವಾಸ್ ಮಂಡ್ಯ

‘ಕಾಲಾಯ ನಮಃ’ ಸಿನಿಮಾದಲ್ಲಿ ಕೋಮಲ್ ಬಿಜಿ..

ನಟ ಕೋಮಲ್‌ ‘ಕಾಲಾಯ ನಮಃ’ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾವನ್ನು ಕೋಮಲ್‌ ಪತ್ನಿ ಅನುಸೂಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ಶೂಟಿಂಗ್‌ ಸಹ ಶುರುವಾಗಿದೆ. ಈ ಸಿನಿಮಾದ ಮುಹೂರ್ತದ ವೇಳೆ ಕೋಮಲ್‌ ಮಾತನಾಡಿದ್ದರು.

"ನನ್ನ ಟೈಮ್‌ ಸರಿ ಇಲ್ಲ ಅನ್ನೋ ಕಾರಣಕ್ಕೆ 5 ವರ್ಷ ಸಿನಿಮಾ ಸೇರಿ ಎಲ್ಲದರಿಂದ ಬ್ರೇಕ್ ತಗೊಂಡಿದ್ದೆ. ಈ ಕೇತು ದೆಸೆ ಸಮಯದಲ್ಲಿ ಏನೂ ಮಾಡಬಾರದು ಅಂತಾರೆ. ಹಾಗಾಗಿ ದೂವಿದ್ದೆ. ಆದರೆ, ಈ ಸಮಯ ನಿಲ್ಲುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ, ಯಾವಾಗ ಏನು ಆಗಬೇಕೋ ಅದು ಆಗಿಯೇ ತೀರುತ್ತದೆ. ಈ ಎಳೆಯನ್ನೇ ಸಿನಿಮಾ ಮಾಡಿದ್ದೇವೆ. ಅದಕ್ಕೆ ‘ಕಾಲಾಯ ನಮಃ’ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಈ ಸಿನಿಮಾದ ಜತೆ ಇನ್ನೂ 3-4 ಸಿನಿಮಾ ಸೈನ್‌ ಮಾಡಿದ್ದೇನೆ" ಎಂದಿದ್ದರು ಕೋಮಲ್.‌

ತಮ್ನ ಬಗ್ಗೆ ನಟ ಜಗ್ಗೇಶ್‌ ಮಾತನಾಡಿ, ''ಜ್ಯೋತಿಷ್ಯವನ್ನು ಯಾರು ನಂಬುತ್ತಾರೊ, ಬಿಡುತ್ತಾರೊ ನನಗೆ ಗೊತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ. ಕೋಮಲ್‌ಗೆ ಕೇತುದೆಸೆ ಇತ್ತು. ಆದ್ದರಿಂದ 2022 ರವರೆಗೂ ಯಾವ ಪ್ರಮುಖ ಕೆಲಸವನ್ನೂ ಮಾಡಬೇಡ ಎಂದು ಹೇಳಿದ್ದೆ. ಅಣ್ಣನ ಮಾತನ್ನು ಕೇಳಿ ಕೋಮಲ್‌, ಸಿನಿಮಾಗಳಿಂದ ಕೂಡಾ ದೂರ ಉಳಿದಿದ್ದ. ಬಹಳ ವರ್ಷಗಳ ನಂತರ ಈಗ ಕಾಲಭೈರವನ ದಯೆಯಿಂದ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ನನ್ನ‌ ಮಗ ಯತಿರಾಜ್ ಕೂಡಾ 'ಕಾಲಾಯ ನಮಃ' ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ಸಿನಿಮಾ ಗೆಲ್ಲುವ ಭರವಸೆ ಇದೆ'' ಎಂದು ಕೋಮಲ್‌ ಬಗ್ಗೆ ಮಾತನಾಡಿದ್ದರು.

Whats_app_banner