Seetha Rama Serial: ಆಗಬಾರದ್ದೇ ಆಗೋಯ್ತು, ಸೀತಾ ರಾಮ ಸೀರಿಯಲ್‌ನಲ್ಲಿ ದುಷ್ಟರು ಉರುಳಿಸಿದ ದಾಳಕ್ಕೆ ಬಲಿಯಾದ ಸಿಹಿ!
Dec 02, 2024 02:50 PM IST
Seetha Rama Serial: ಆಗಬಾರದ್ದೇ ಆಗೋಯ್ತು, ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಸಾವು!
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಸಾವಾಗಿದೆ. ದುಷ್ಟರು ಉರುಳಿಸಿದ ದಾಳಕ್ಕೆ ಜೀವ ಚೆಲ್ಲಿದ್ದಾಳೆ ಪುಟಾಣಿ. ಈ ಮೂಲಕ ಸೀರಿಯಲ್ ಇದೀಗ ಮಗ್ಗಲು ಬದಲಿಸಿದೆ. ವೀಕ್ಷಕರಿಗೂ ಹೊಸ ಟ್ವಿಸ್ಟ್ ಸಿಕ್ಕಿದೆ.
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಇತ್ತೀಚಿನ ಕೆಲ ದಿನಗಳಿಂದ ರೋಚಕ ಎನಿಸುವ ಟ್ವಿಸ್ಟ್‌ಗಳು ನೋಡುಗರ ಎದೆ ನಡುಗಿಸುತ್ತಿದೆ. ಸಿಹಿಯ ಸಾವಿನ ಪ್ರೋಮೋ ಬಂದಾಗಲೇ, ವೀಕ್ಷಕ ಬಳಗ ಧಾರಾವಾಹಿ ನಿರ್ದೇಶಕರಿಗೆ ಹಿಡಿ ಶಾಪ ಹಾಕಿತ್ತು. ಆ ಸಿಹಿ ಅನ್ನೋ ಪಾತ್ರದ ಮೇಲಿನ ಗಾಢ ಪ್ರೀತಿಯದು. ಈ ನಡುವೆ, ಆ ಸಾವಿನ ಸಂಚಿಕೆ ಇದೀಗ ಪ್ರಸಾರಕ್ಕೆ ಅಣಿಯಾಗಿದೆ. ನಿತ್ಯದ ಪ್ರೋಮೋ ಬಿಡುಗಡೆ ಆಗಿದೆ. ಅದರಲ್ಲಿ, ಸಿಹಿಗೆ ಅಪಘಾತವಾಗಿದೆ.
ಈ ವರೆಗೂ ಈ ಸೀರಿಯಲ್‌ನಲ್ಲಿ ಪುಟಾಣಿ ಸಿಹಿ ವಿಚಾರಕ್ಕೆ ಕಥೆ ಬೇರೆ ಬೇರೆ ಮಗ್ಗುಲಲ್ಲಿ ಮುಂದಡಿ ಇಡುತ್ತಿದೆ. ಇಲ್ಲಿಯವರೆಗೂ ಸಿಹಿಯ ಹುಟ್ಟಿನ ರಹಸ್ಯವೇ ದೊಡ್ಡ ಕಗ್ಗಂಟಾಗಿತ್ತು. ಇದೀಗ, ಕೋರ್ಟ್ ಮುಂದೆಯೇ ಅದು ಇತ್ಯರ್ಥಗೊಂಡಿದೆ. ಸಿಹಿ, ಸೀತಾ ರಾಮನ ಮಗಳೇ ಎಂದು ತೀರ್ಪು ನೀಡಿದೆ. ಇದೆಲ್ಲ ಮುಗೀತು, ಇನ್ಮುಂದೆ ಸುಖಿ ಜೀವನ ಎಂದುಕೊಳ್ಳುವಷ್ಟರಲ್ಲಿಯೇ ಸಿಹಿ ಸಾವಿನ ಸುದ್ದಿ ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಬರ ಸಿಡಿಲು ಬಡಿದಂತಾಗಿದೆ.
ಕೊನೆಗೂ ಸಿಹಿ ಇಲ್ಲವಾದಳು..
ಹೌದು, ಸಿಹಿ ಸಾವಿಗೆ ಕಾರಣ ಬೇರಾರು ಅಲ್ಲ ಭಾರ್ಗವಿ ದೇಸಾಯಿ. ಈ ಮೊದಲು ಸೀತಾಳ ಹತ್ಯೆಗೆ ಭಾರ್ಗವಿ ಸಂಚು ರೂಪಿಸಿದ್ದಾಳೆ ಎಂಬರ್ಥದಲ್ಲಿಯೇ ಕಥೆ ಸಾಗಿತ್ತು. ಇದೀಗ ಸಿಹಿ ಮತ್ತು ಸೀತಾ ಇಬ್ಬರನ್ನೂ ಮುಗಿಸಲು ಭಾರ್ಗವಿ ಸಂಚು ರೂಪಿಸಿದಂತಿದೆ. ದೇಸಾಯಿ ಮನೆಯಲ್ಲೀಗ, ಸೀತಾಳ ಬರ್ತಡೇಯನ್ನು ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಬೇಕು ಎಂಬ ನಿಟ್ಟಿನಲ್ಲಿ ರಾಮ್ ಪ್ಲಾನ್ ಮಾಡಿದ್ದಾನೆ. ಶಾಪಿಂಗ್ ಸಹ ಮುಗಿದಿದೆ.
ಈ ನಡುವೆ, ಇದೀಗ ಹೊರಬಿದ್ದ ಪ್ರೋಮೋದಲ್ಲಿ, ಸಿಹಿಗೆ ಬಾಯಾರಿಕೆಯಾಗಿದೆ. ಅದಕ್ಕೆಂದು ಅಮ್ಮನ ಬಳಿ ಹೇಳಿ, ನೀರು ಕುಡಿಯಲು ಹೋಗಿದ್ದಾಳೆ. ಅಷ್ಟರಲ್ಲಿ, ಇತ್ತ ಇನ್ನೊಂದು ಕೋಣೆಯಲ್ಲಿ, ವಾಣಿಯ ಕಥೆ ಮುಗಿಸಿದವಳೇ ನಾನು ಎಂದು ಭಾರ್ಗವಿ ಫೋನ್‌ನಲ್ಲಿ ಇನ್ನಾರಿಗೋ ಹೇಳಿದ್ದಾಳೆ. ಭಾರ್ಗವಿ ಆಡಿದ ಆ ಮಾತು ಹೊರಗೆ ನೀರು ಕುಡಿಯುತ್ತಿದ್ದ ಸಿಹಿ ಕಿವಿಗೆ ಬಿದ್ದಿದೆ. ಕೈಯಲ್ಲಿನ ಗ್ಲಾಸ್ ಕೆಳಕ್ಕೆ ಬಿದ್ದು, ಪುಡಿ ಪುಡಿಯಾಗಿದೆ.
ಕಿವಿಗೆ ಬಿದ್ದ ಭಾರ್ಗವಿಯ ಮಹಾಗುಟ್ಟೇ, ಸಿಹಿ ಜೀವಕ್ಕೆ ಉರುಳಾಯ್ತಾ?
ಅಷ್ಟೊತ್ತಿಗೆ ಭಾರ್ಗವಿ ಹೊರಬಂದಿದ್ದಾಳೆ. ತಾನಾಡಿದ ಮಾತನ್ನು ಸಿಹಿ ಕೇಳಿಸಿಕೊಂಡಿದ್ದಾಳೆ, ಇನ್ನೇನು ಆಕೆ ಈ ಎಲ್ಲವನ್ನು ಸೀತಾ ಮತ್ತು ರಾಮ್ ಮುಂದೆ ಹೇಳಿಬಿಡ್ತಾಳೆ ಎಂದು ಆತಂಕಗೊಂಡಿದ್ದಾಳೆ. ಅಷ್ಟರಲ್ಲಿ ಸೀತಮ್ಮನನ್ನು ಕರೆದುಕೊಂಡು, ಹೊರ ನಡೆದಿದ್ದಾಳೆ ಸಿಹಿ. ಸಿಹಿ ಹೀಗೆ ಹೊರನಡೆದ ವಿಚಾರವನ್ನು ಇನ್ನ್ಯಾರಿಗೋ ಫೋನ್‌ನಲ್ಲಿ ವಿವರಿಸಿದ ಭಾರ್ಗವಿ, ತಡ ಮಾಡಬೇಡಿ ಎಂದೂ ಹೇಳಿದ್ದಾಳೆ. ಇತ್ತ ಸೀತಾ, ರಾಮ ಮತ್ತು ಸಿಹಿ ಒಟ್ಟಿಗೆ ಇದ್ದಾಗ. ಭೀಕರ ಅಪಘಾತ ಸಂಭವಿಸಿದೆ. ಕಾರ್ ಗುದ್ದಿದ ರಭಸಕ್ಕೆ ಸಿಹಿ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾಳೆ. ಅಪಘಾತದ ಹೊಡೆತಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ರಾಮ ಮತ್ತು ಸೀತಾ ಅಕ್ಷರಶಃ ಕಣ್ಣೀರಾಗಿದ್ದಾರೆ.
ಸೀತಾ ರಾಮ ಸೀರಿಯಲ್ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)