ನನ್ನ ಪಾಲಿಗೆ ಇದೊಂದು ಚೈನ್ ಅಷ್ಟೇ ಎಂದು ತಾಳಿಯನ್ನು ಕೆಳಗೆ ಎಸೆದ ತಾಂಡವ್ ಕೆನ್ನೆಗೆ ಬಾರಿಸಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 1ರ ಎಪಿಸೋಡ್‌ನಲ್ಲಿ ನಾನು ಶ್ರೇಷ್ಠಾಳನ್ನು ಪ್ರೀತಿಸುತ್ತಿದ್ದೇನೆ ಎಂದು ತಾಂಡವ್ ಎಲ್ಲರ ಮುಂದೆ ಧೈರ್ಯವಾಗಿ ಹೇಳುತ್ತಾನೆ. ತಾಳಿಯನ್ನು ಕೈಯಲ್ಲಿ ಹಿಡಿದು ಇದು ನನ್ನ ಪಾಲಿಗೆ ಏನೂ ಅಲ್ಲ ಎಂದು ಬಿಸಾಡುತ್ತಾನೆ. ಭಾಗ್ಯಾ ಕೋಪದಿಂದ ತಾಂಡವ್ ಕೆನ್ನೆಗೆ ಬಾರಿಸುತ್ತಾಳೆ.
Bhagyalakshmi Kannada Serial: ಫಕೀರ ಹೇಳಿದಂತೆ ಭಾಗ್ಯಾಗೆ ಎಲ್ಲವೂ ಗೊತ್ತಾಗಿದೆ. ಗಂಡನ ಮೋಸ ಭಾಗ್ಯಾಗೆ ಗೊತ್ತಾಗಿರುವ ವಿಚಾರ ಕೂಡಾ ಮನೆಯವರಿಗೆ ತಿಳಿದಾಗಿದೆ. ಎಲ್ಲಾ ವಿಚಾರ ಗೊತ್ತಿದ್ದರೂ ಅತ್ತೆ, ಮಾವ, ತಂಗಿ ಯಾರೂ ನನ್ನ ಬಳಿ ಏನೂ ಹೇಳಿಕೊಳ್ಳಲಿಲ್ಲ ಎಂದು ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಿದ್ದಾಳೆ. ಗಂಡ ತಾಂಡವ್‌ಗೆ ಕೂಡಾ ಇಷ್ಟು ವರ್ಷಗಳು ಸುಮ್ಮನಿದ್ದು 18 ವರ್ಷಗಳ ನಂತರ ಹೆಂಡತಿ ಇಷ್ಟ ಇಲ್ಲ ಎಂದು ಹೇಳುತ್ತಿರುವುದಕ್ಕೆ ಭಾಗ್ಯಾ ಇನ್ನಷ್ಟು ಶಾಕ್ ಆಗಿದ್ದಾಳೆ.
ಭಾಗ್ಯಾ ಮುಂದೆ ಕೈ ಮುಗಿದು ಕ್ಷಮೆ ಕೇಳಿದ ಕುಸುಮಾ
ನೀವಿಬ್ಬರೂ ನನಗೆ ಮೋಸ ಮಾಡಿದಿರಿ, ಫ್ರೆಂಡ್ಸ್ ಅಂತ ಹೇಳಿಕೊಂಡು ನಮ್ಮೆಲ್ಲರಿಗೂ ಮೋಸ ಮಾಡಿದಿರಿ, ನಿನಗೆ ನಾನು ಏನು ಅನ್ಯಾಯ ಮಾಡಿದ್ದೆ ಎಂದು ಶ್ರೇಷ್ಠಾ ಬಳಿ ಕೇಳುತ್ತಾಳೆ. ನಾನೊಬ್ಬಳೇ ಇಷ್ಟಪಟ್ಟಿಲ್ಲ ತಾಂಡವ್ ಕೂಡಾ ನನ್ನ ಇಷ್ಟಪಟ್ಟಿದ್ದಾರೆ ನಾವಿಬ್ಬರೂ ಮದುವೆ ಆಗೇ ಆಗುತ್ತೇವೆ ಎನ್ನುತ್ತಾಳೆ. ನೀವು ಮದುವೆ ಆಗಲು ಬಿಡುವವರು ಯಾರು? ಯಾವುದೇ ಹೆಣ್ಣು ತನ್ನ ಗಂಡನನ್ನು ಮತ್ತೊಂದು ಹೆಣ್ಣಿನ ಜೊತೆ ಊಹಿಸಿಕೊಳ್ಳೋಕೆ ಕೂಡಾ ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ನಾನು ಇಷ್ಟ ಇಲ್ಲ ಎಂದಾದರೆ ಅದನ್ನು ಮದುವೆಗೆ ಮೊದಲು ಹೇಳಬೇಕಿತ್ತು, ಮದುವೆ ಆಗಿ ಇಷ್ಟು ವರ್ಷಗಳ ನಂತರ ಹೇಳಿದರೆ ನಾನು ಹೇಗೆ ಸಹಿಸಿಕೊಳ್ಳುವುದು ಎಂದು ತಾಂಡವ್‌ಗೆ ಕೇಳುತ್ತಾಳೆ.
ಅದನ್ನು ನಿನ್ನ ಅತ್ತೆಗೆ ಕೇಳು, ನನ್ನ ಅಮ್ಮ ತನಗೆ ತಕ್ಕಂಥ ಸೊಸೆಯನ್ನು ಆರಿಸಿ ತಂದಳೇ ಹೊರತು, ನನಗೆ ತಕ್ಕ ಹೆಂಡತಿಯನ್ನು ತರಲಿಲ್ಲ. ಮದುವೆಗೆ ಮೊದಲು ನನ್ನ ಬಳಿ ಈ ಮದುವೆ ನಿನಗೆ ಇಷ್ಟಾನಾ? ಹುಡುಗಿ ಇಷ್ಟಾನಾ ಅಂತ ಒಂದು ಮಾತೂ ಕೇಳಲಿಲ್ಲ. ನಿನ್ನನ್ನು ನಾನು ಆಗಲೂ ಇಷ್ಟಪಟ್ಟಿಲ್ಲ, ಈಗಲೂ ಇಷ್ಟಪಟ್ಟಿಲ್ಲ. ನಾನು ಇಷ್ಟಪಟ್ಟಿದ್ದು ಶ್ರೇಷ್ಠಾಳಂಥ ಹೆಣ್ಣನ್ನೇ ಹೊರತು , ನಿನ್ನಂಥ ಹಳ್ಳಿ ಗುಗ್ಗುವನ್ನಲ್ಲ ಎನ್ನುತ್ತಾನೆ. ನೋಡಿದ್ರಾ ಅತ್ತೆ ನಿಮ್ಮ ಮಗನಿಗೆ ನಾನು ಇಷ್ಟ ಇರಲಿಲ್ಲವಂತೆ ಇಷ್ಟೆಲ್ಲಾ ಗೊತ್ತಿದ್ದರೂ ನೀವು ಏಕೆ ಹೇಳಲಿಲ್ಲ? ಆ ರೀತಿ ಹೇಳಿದ್ದರೆ ನಾನೇ ಮದುವೆ ನಿಲ್ಲಿಸುತ್ತಿದ್ದೆ ಎನ್ನುತ್ತಾಳೆ. ಸುನಂದಾ ಕೂಡಾ ತಾಂಡವ್ ಮಾತು ಕೇಳಿ ಬೇಸರ ವ್ಯಕ್ತಪಡಿಸುತ್ತಾಳೆ. ಎಲ್ಲರೂ ಸೇರಿ ನನ್ನ ಮಗಳ ಜೀವನ ಹಾಳು ಮಾಡಿದಿರಿ ಎನ್ನುತ್ತಾಳೆ. ನನಗೆ ಅವನು ಒಂದು ಮಾತು ಕೂಡಾ ಹೇಳಲಿಲ್ಲ. ಭಾಗ್ಯಾ ನಿಜಕ್ಕೂ ಚಿನ್ನದಂಥ ಹುಡುಗಿ, ಅವಳಂಥ ಹುಡುಗಿಯನ್ನು ನಾನು ಇದುವರೆಗೂ ನೋಡಿಲ್ಲ, ಸಾಧ್ಯವಾದರೆ ನನ್ನನ್ನು ಕ್ಷಮಿಸಿ ಎಂದು ಕುಸುಮಾ, ಸೊಸೆ ಬಳಿ ಕ್ಷಮೆ ಕೇಳುತ್ತಾಳೆ.
ತಾಳಿಯನ್ನು ಎಸೆದ ತಾಂಡವ್‌ಗೆ ಕಪಾಳಮೋಕ್ಷ ಮಾಡಿದ ಭಾಗ್ಯಾ
ಈಗಲೂ ಕಾಲ ಮಿಂಚಿಲ್ಲ ನನ್ನ ಮಗ ತಾಂಡವ್ ನನ್ನ ಮಾತು ಕೇಳುತ್ತಾನೆ. ಭಾಗ್ಯಾ ಈಗ ಅವನು ಇಷ್ಟಪಟ್ಟಂತೆ ಬದಲಾಗಿದ್ದಾಳೆ. ಕಾರ್ ಡ್ರೈವ್ ಮಾಡುತ್ತಾಳೆ, ಕೆಲಸಕ್ಕೆ ಹೋಗುತ್ತಾಳೆ, ಮನೆ ನಡೆಸುತ್ತಾಳೆ, ಡ್ಯಾನ್ಸ್ ಮಾಡುತ್ತಾಳೆ, ಈಗಲಾದರೂ ಶ್ರೇಷ್ಠಾಳನ್ನು ಬಿಟ್ಟು ಬಾ ಎಂದು ಕುಸುಮಾ ಹೇಳುತ್ತಾಳೆ. ಆದರೆ ತಾಂಡವ್ ಅದಕ್ಕೆ ಒಪ್ಪುವುದಿಲ್ಲ. ನೀನು ಎಷ್ಟೇ ಹೇಳಿದರೂ ಭಾಗ್ಯಾ ಮೇಲೆ ನನಗೆ ಪ್ರೀತಿ ಹುಟ್ಟುವುದಿಲ್ಲ. ನಾನು ಇಷ್ಟಪಟ್ಟಿದ್ದು ಶ್ರೇಷ್ಠಾಳನ್ನು, ಅದು ಕೇವಲ ಇಷ್ಟವಲ್ಲ, ಅದನ್ನು ಪ್ರೀತಿ ಎಂದು ಕರೆಯುತ್ತಾರೆ ಎನ್ನುತ್ತಾನೆ.
ಇಷ್ಟೆಲ್ಲಾ ಕಾರಣ ಆಗಿರುವ ಶ್ರೇಷ್ಠಾಳನ್ನು ಪೂಜಾ ಬೈಯ್ಯುತ್ತಾಳೆ. ಆಗ ಶ್ರೇಷ್ಠಾ ಪೂಜಾಗೆ ಹೊಡೆಯಲು ಬಂದಾಗ ಭಾಗ್ಯಾ ಅಡ್ಡ ಬರುತ್ತಾಳೆ. ಇನ್ನೊಬ್ಬರ ಜೀವನ ಹಾಳು ಮಾಡುವುದು ತಪ್ಪು. ನಿನಗೆ ತಾಳಿ ಬೆಲೆ ಗೊತ್ತಾ ಎಂದು ಕೇಳುತ್ತಾಳೆ. ನಿಂದು ಊರಲ್ಲೇ ಎಲ್ಲೂ ಇರದ ಇಲ್ಲದ ತಾಳಿನಾ ಎಂದು ಶ್ರೇಷ್ಠಾ ಕೇಳುತ್ತಾಳೆ. ಅವಳ ಮಾತಿಗೆ ಕೋಪಗೊಂಡ ಭಾಗ್ಯಾ, ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾಳೆ. ಭಾಗ್ಯಾ ಮೇಲೆ ಕೋಪಗೊಳ್ಳುವ ತಾಂಡವ್, ಸಾಕು ಬಾಯಿ ಮುಚ್ಚು ಯಾವಾಗಲೂ ತಾಳಿ ತಾಳಿ ಎಂದು ಸಾಯುತ್ತೀಯ, ನಿನ್ನ ಪ್ರಕಾರ ಅದು ಮಾಂಗಲ್ಯ, ತಾಳಿ, ನನ್ನ ಪ್ರಕಾರ ಅದು ಏನೂ ಅಲ್ಲ, ನನ್ನ ಪ್ರಕಾರ ಇದು ಒಂದು ಚೈನ್ ಅಷ್ಟೇ, ನನ್ನ ಜೀವನದಲ್ಲಿ ಇದು ಏನೂ ಅಲ್ಲ ಎಂದು ತಾಳಿಯನ್ನು ಕೆಳಗೆ ಎಸೆಯುತ್ತಾನೆ. ತಾಂಡವ್ ವರ್ತನೆಗೆ ಕೋಪಗೊಂಡ ಭಾಗ್ಯಾ , ತಾಂಡವ್ ಕೆನ್ನೆಗೆ ಬಾರಿಸುತ್ತಾಳೆ.
ಭಾಗ್ಯಾಗೆ ಹೆದರಿ ತಾಂಡವ್ ಶ್ರೇಷ್ಠಾಳನ್ನು ಬಿಡುತ್ತಾನಾ? ಅಥವಾ ಕೋಪಕ್ಕೆ ಭಾಗ್ಯಾಳನ್ನು ಬಿಟ್ಟು ಶ್ರೇಷ್ಠಾ ಜೊತೆಗೆ ಹೋಗುತ್ತಾನಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ