logo
ಕನ್ನಡ ಸುದ್ದಿ  /  ಮನರಂಜನೆ  /  Nayanthara Body Shaming: ನಯನತಾರಾ ಡ್ರೆಸ್‌ಗೆ ಅಸಭ್ಯ ಕಮೆಂಟ್‌...ನೀವು ಅಮ್ಮನ ಎದೆಹಾಲು ಕುಡಿದಿಲ್ವಾ ಎಂದು ಪ್ರಶ್ನಿಸಿದ ಗಾಯಕಿ ಚಿನ್ಮಯಿ

Nayanthara Body Shaming: ನಯನತಾರಾ ಡ್ರೆಸ್‌ಗೆ ಅಸಭ್ಯ ಕಮೆಂಟ್‌...ನೀವು ಅಮ್ಮನ ಎದೆಹಾಲು ಕುಡಿದಿಲ್ವಾ ಎಂದು ಪ್ರಶ್ನಿಸಿದ ಗಾಯಕಿ ಚಿನ್ಮಯಿ

HT Kannada Desk HT Kannada

Dec 25, 2022 11:36 AM IST

google News

ನಯನತಾರಾ ಬಾಡಿಶೇಮಿಂಗ್‌ ಬಗ್ಗೆ ಗಾಯಕಿ ಪ್ರತಿಕ್ರಿಯೆ

    • ನಯನತಾರಾ ಧರಿಸಿದ್ದ ಟಾಪ್‌ ಕುರಿತು ಕೆಲವರು ಅಸಭ್ಯವಾಗಿ ಕಮೆಂಟ್‌ ಮಾಡಿದ್ದಾರೆ. ಈ ಕಮೆಂಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ತಮಿಳು ಗಾಯಕಿ, ಡಬ್ಬಿಂಗ್‌ ಕಲಾವಿದೆ ಚಿನ್ಮಯಿ ಶ್ರೀಪಾದ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದು ಜನರ ವಿರುದ್ಧ ಕಿಡಿ ಕಾರಿದ್ದಾರೆ.
ನಯನತಾರಾ ಬಾಡಿಶೇಮಿಂಗ್‌ ಬಗ್ಗೆ ಗಾಯಕಿ ಪ್ರತಿಕ್ರಿಯೆ
ನಯನತಾರಾ ಬಾಡಿಶೇಮಿಂಗ್‌ ಬಗ್ಗೆ ಗಾಯಕಿ ಪ್ರತಿಕ್ರಿಯೆ (PC: Nayanthara, Chinmayi Instagram)

ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಾಕುವ ಪೋಸ್ಟ್‌ಗೆ ನೆಟಿಜನ್ಸ್‌ ಪರ ವಿರೋಧ ಕಮೆಂಟ್‌ ಮಾಡುವುದು ಸಾಮಾನ್ಯ. ಆದರೆ ಕೆಲವರು ತೀರ ಕೆಳಮಟ್ಟದ ಕಮೆಂಟ್‌ಗಳನ್ನು ಮಾಡುವುದನ್ನು ಸೆಲೆಬ್ರಿಟಿಗಳು ಗಮನಿಸುತ್ತಾರೆ. ಕೆಲವರು ಇದನ್ನು ನೋಡಿಯೋ ನೋಡದವರಂತೆ ಸುಮ್ಮನಿದ್ದರೆ, ಇನ್ನೂ ಕೆಲವರು ಆ ಕಮೆಂಟ್‌ಗಳ ಸ್ಕ್ರಿನ್‌ ಶಾಟ್‌ ಹಂಚಿಕೊಂಡು ಸರಿಯಾದ ಉತ್ತರ ಕೊಡುತ್ತಾರೆ.

ಇದೀಗ ನಯನತಾರಾ ಫೋಟೋಗಳಿಗೆ ಫಾಲೋವರ್ಸ್‌ ಮಾಡಿರುವ ಪೋಸ್ಟ್‌ ನೋಡಿ ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ಇದೇ ವರ್ಷ ಜೂನ್‌ 9 ರಂದು ಮದುವೆಯಾಗಿದ್ದರು. ಇತ್ತೀಚೆಗೆ ಈ ಜೋಡಿ ಅವಳಿ ಮಕ್ಕಳಿಗೆ ಪೋಷಕರಾಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಇದು ಹೇಗೆ ಸಾಧ್ಯ ಎಂದು ಹಲವರ್ ಪ್ರಶ್ನಿಸಿದ್ದರು. ಆದರೆ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂಬ ವಿಚಾರ ನಂತರ ಬೆಳಕಿಗೆ ಬಂತು. ಮಕ್ಕಳನ್ನು ಪಡೆದ ನಂತರವೂ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ಮೊದಲಿನಂತೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಇತ್ತೀಚೆಗೆ ನಯನತಾರಾ ಡ್ರೆಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ ಮಾಡಿದ್ದರು. ತಮಿಳು ಗಾಯಕಿ ಚಿನ್ಮಯಿ, ಜನರ ಈ ನೀಚ ಮನಸ್ಥಿತಿ ವಿರುದ್ಧ ಬೇಸರ ಹೊರ ಹಾಕಿದ್ದಾರೆ.

ಚಿನ್ಮಯಿ ಶ್ರೀಪಾದ ಇನ್‌ಸ್ಟಾಗ್ರಾಮ್‌ ಸ್ಟೋರಿ

ನಯನತಾರಾ, ವಿಘ್ನೇಶ್‌ ಶಿವನ್‌ ಇತ್ತೀಚೆಗೆ 'ಕನೆಕ್ಟ್‌' ಚಿತ್ರದ ಪ್ರೀಮಿಯರ್‌ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೋ ನಂತರ ನಯನತಾರಾ ಅಲ್ಲಿ ಬಂದಿದ್ದ ಹಲವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಆದರೆ ಆ ಸಮಯದಲ್ಲಿ ನಯನತಾರಾ ಧರಿಸಿದ್ದ ಟಾಪ್‌ ಕುರಿತು ಕೆಲವರು ಅಸಭ್ಯವಾಗಿ ಕಮೆಂಟ್‌ ಮಾಡಿದ್ದಾರೆ. ಈ ಕಮೆಂಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ತಮಿಳು ಗಾಯಕಿ, ಡಬ್ಬಿಂಗ್‌ ಕಲಾವಿದೆ ಚಿನ್ಮಯಿ ಶ್ರೀಪಾದ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದು ಜನರ ವಿರುದ್ಧ ಕಿಡಿ ಕಾರಿದ್ದಾರೆ.

''ಹೀಗೆಲ್ಲಾ ಅಶ್ಲೀಲ ಕಮೆಂಟ್‌ ಮಾಡಿರುವವರು ತಮ್ಮ ತಾಯಿಯ ಎದೆ ಹಾಲು ಕುಡಿದು ಬೆಳೆದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಈ ರೀತಿ ಕೆಟ್ಟದಾಗಿ ಕಮೆಂಟ್‌ ಮಾಡುವ ವ್ಯಕ್ತಿಗಳಿಗೆ ಹೆಣ್ಣು ಮಕ್ಕಳು ಇದ್ದರೆ ಗತಿ ಏನು? ತಮ್ಮ ತಾಯಿ, ಅಕ್ಕ, ತಂಗಿ, ಹೆಣ್ಣು ಮಕ್ಕಳ ಬಗ್ಗೆ ಕೂಡಾ ಇವರು ಈ ರೀತಿ ಅಸಭ್ಯವಾಗಿ ಮಾತನಾಡುತ್ತಾರಾ? ಎಂದು ಚಿನ್ಮಯಿ ಶ್ರೀಪಾದ ಬೇಸರ ಹೊರ ಹಾಕಿದ್ದಾರೆ. ಇದೇ ವಿಚಾರವಾಗಿ ಚಿನ್ಮಯಿ ಜೊತೆ ಇನ್ನಿತರರು ಕೂಡಾ ಕಮೆಂಟ್‌ ಮಾಡಿ ಪುರುಷರ ಮನಸ್ಥಿತಿ ಬಗ್ಗೆ ಕಮೆಂಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಯನತಾರಾ ಅಥವಾ ವಿಘ್ನೇಶ್‌ ಶಿವನ್‌ ಈ ವಿಚಾರವಾಗಿ ಪ್ರತಿಕ್ರಿಯಿಸಿಲ್ಲ.

ಗಾಯಕಿ ಚಿನ್ಮಯಿ ಶ್ರೀಪಾದ ಇನ್‌ಸ್ಟಾಗ್ರಾಮ್‌ ಸ್ಟೋರಿ

'ಕನೆಕ್ಟ್‌' ಚಿತ್ರವನ್ನು ರೌಡಿ ಪಿಕ್ಚರ್ಸ್‌ ಬ್ಯಾನರ್‌ ಅಡ್ ವಿಘ್ನೇಶ್‌ ಶಿವನ್‌ ನಿರ್ಮಿಸಿದ್ದು ಅಶ್ವಿನ್‌ ಶರವಣನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ಸತ್ಯರಾಜ್‌, ಅನುಪಮ್‌ ಖೇರ್‌, ವಿನಯ್‌ ರೈ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಪೃಥ್ವಿ ಚಂದ್ರಶೇಖರ್‌ ಸಂಗೀತ ನೀಡಿದ್ದಾರೆ. ಡಿಸೆಂಬರ್‌ 22 ರಂದು ಸಿನಿಮಾ ತೆರೆ ಕಂಡಿತ್ತು. ಹಾರರ್‌, ಥ್ರಿಲ್ಲರ್‌ ಕಥೆ ಒಳಗೊಂಡಿರುವ ಈ ಸಿನಿಮಾ ವೀಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿದೆ. ಈಗಾಗಲೇ ಚಿತ್ರದ ಹಕ್ಕು ಓಟಿಟಿಗೆ ಮಾರಾಟವಾಗಿದ್ದು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ