BBK 9 Update: 14ನೇ ವಾರಕ್ಕೆ ಅಮೂಲ್ಯ ಎಲಿಮಿನೇಶನ್‌, ಇಂದು ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರಕ್ಕೆ..ಡಿ. 31, ಜ.1ಕ್ಕೆ ಫೈನಲ್‌!
ಕನ್ನಡ ಸುದ್ದಿ  /  ಮನರಂಜನೆ  /  Bbk 9 Update: 14ನೇ ವಾರಕ್ಕೆ ಅಮೂಲ್ಯ ಎಲಿಮಿನೇಶನ್‌, ಇಂದು ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರಕ್ಕೆ..ಡಿ. 31, ಜ.1ಕ್ಕೆ ಫೈನಲ್‌!

BBK 9 Update: 14ನೇ ವಾರಕ್ಕೆ ಅಮೂಲ್ಯ ಎಲಿಮಿನೇಶನ್‌, ಇಂದು ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರಕ್ಕೆ..ಡಿ. 31, ಜ.1ಕ್ಕೆ ಫೈನಲ್‌!

ಮುಂದಿನ ವಾರ ಫೈನಲ್‌ ನಡೆಯಲಿದ್ದು ಈ ವಾರ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರ ಕಳಿಸಲಾಗುತ್ತಿದೆ. ಶನಿವಾರದ ಎಪಿಸೋಡ್‌ನಲ್ಲಿ ಅಮೂಲ್ಯ ಗೌಡ, ಮನೆಯಿಂದ ಹೊರ ಹೋದರೆ ಇಂದಿನ ಎಪಿಸೋಡ್‌ನಲ್ಲಿ ಮತ್ತಾವ ಸ್ಪರ್ಧಿ ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

14ನೇ ವಾರಕ್ಕೆ ಮನೆಯಿಂದ ಹೊರ ಹೋದ ಅಮೂಲ್ಯ ಗೌಡ
14ನೇ ವಾರಕ್ಕೆ ಮನೆಯಿಂದ ಹೊರ ಹೋದ ಅಮೂಲ್ಯ ಗೌಡ (PC: Colors Kannada)

ಕಿರುತೆರೆಪ್ರಿಯರ ಮೆಚ್ಚಿನ ಶೋ ಬಿಗ್‌ ಬಾಸ್‌ ಸೀಸನ್‌ 9, ಅಂತಿಮ ಹಂತಕ್ಕೆ ಬಂದಿದೆ. ಫೈನಲ್‌ಗೆ ಇನ್ನು ಒಂದು ವಾರ ಬಾಕಿ ಇದೆ. 9ನೇ ಸೀಸನ್‌ ಕಪ್‌ ಯಾರ ಪಾಲಾಗಬಹುದು ಎಂಬ ಲೆಕ್ಕಾಚಾರದಲ್ಲಿ ಇರುವಾಗಲೇ ಈ ವಾರ ಇಬ್ಬರು ಸ್ಪರ್ಧಿಗಳು ಹೊರ ಹೋಗಿದ್ದಾರೆ. ತಮ್ಮ ಮೆಚ್ಚಿನ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದು ವೀಕ್ಷಕರಿಗೂ ಬೇಸರ ಉಂಟು ಮಾಡಿದೆ.

ಸೋಮವಾರದವರೆಗೂ ಶುಕ್ರವಾರದವರೆಗೂ ದೊಡ್ಮನೆಯಲ್ಲಿ ನಾಮಿನೇಷನ್‌, ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಶನಿವಾರ ಹಾಗೂ ಭಾನುವಾರ 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್‌ ನಡೆಯುತ್ತದೆ. ಮನೆಯಲ್ಲಿ ಇಡೀ ದಿನ ನಡೆದ ವಿಚಾರಗಳನ್ನು ಕಿಚ್ಚ, ಸ್ಪರ್ಧಿಗಳೊಂದಿಗೆ ಚರ್ಚಿಸುತ್ತಾರೆ. ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್‌ ಮಾಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಆಶ್ಚರ್ಯ ಎನ್ನುವಂತೆ ಶನಿವಾರದ ಎಪಿಸೋಡ್‌ನಲ್ಲೇ ಎಲಿಮಿನೇಶನ್‌ ನಡೆದಿದೆ. ಬಿಗ್‌ ಬಾಸ್‌ ಸೀಸನ್‌ 9 ರ ಹದಿನಾಲ್ಕನೇ ವಾರಕ್ಕೆ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಹೊರ ಹೋಗಿದ್ದಾರೆ. ದೊಡ್ಮನೆಯಿಂದ ಹೊರ ಹೋದ ಸ್ಪರ್ಧಿಗಳಲ್ಲಿ ಅಮೂಲ್ಯ ಗೌಡ 12ನೆಯವರು.

ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಶನ್‌

ಮುಂದಿನ ವಾರ ಫೈನಲ್‌ ನಡೆಯಲಿದ್ದು ಈ ವಾರ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರ ಕಳಿಸಲಾಗುತ್ತಿದೆ. ಶನಿವಾರದ ಎಪಿಸೋಡ್‌ನಲ್ಲಿ ಅಮೂಲ್ಯ ಗೌಡ, ಮನೆಯಿಂದ ಹೊರ ಹೋದರೆ ಇಂದಿನ ಎಪಿಸೋಡ್‌ನಲ್ಲಿ ಮತ್ತಾವ ಸ್ಪರ್ಧಿ ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ. ಆದರೆ ಮೂಲಗಳ ಪ್ರಕಾರ ಪ್ರವೀಣರ ಗುಂಪಿನಲ್ಲಿದ್ದ ಅರುಣ್‌ ಸಾಗರ್‌ ಕೂಡಾ ಈಗಾಗಲೇ ಎಲಿಮಿನೇಟ್‌ ಆಗಿದ್ದು ಆ ಎಪಿಸೋಡ್‌ ಇಂದು ಪ್ರಸಾರವಾಗಲಿದೆ.

ಫೈನಲ್‌ಗೆ ಇಬ್ಬರ ಹೆಸರು ಘೋಷಿಸಿದ ಕಿಚ್ಚ

ಡಿಸೆಂಬರ್‌ 31 ಹಾಗೂ ಜನವರಿ 1 ರಂದು ಎರಡು ದಿನಗಳ ಕಾಲ ಬಿಗ್‌ ಬಾಸ್‌ 9 ಫೈನಲ್‌ ನಡೆಯಲಿದೆ. ಶನಿವಾರದ ಎಪಿಸೋಡ್‌ನಲ್ಲಿ ಒಟಿಟಿಯಲ್ಲಿ ವಿನ್ನರ್‌ ಆದ ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಅಡಿಗ ಇಬ್ಬರನ್ನೂ ಫೈನಲ್‌ ಸ್ಪರ್ಧಿಗಳು ಎಂದು ಸುದೀಪ್‌ ಅನೌನ್ಸ್‌ ಮಾಡಿದ್ದಾರೆ. ಈ ನಡುವೆ ಟಾಪ್‌ 5ರಲ್ಲಿ ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಬಿಟ್ಟು ಬೇರೆ ಯಾವ ಸ್ಪರ್ಧಿಗಳ ಇರಲಿದ್ದಾರೆ ಕಾದು ನೋಡಬೇಕು. ಸದ್ಯಕ್ಕೆ ಮನೆಯಲ್ಲಿ ರೂಪೇಶ್‌, ರಾಕೇಶ್‌ ಜೊತೆಗೆ ಆರ್ಯವರ್ಧನ್‌ ಗುರೂಜಿ, ದಿವ್ಯಾ ಉರುಡುಗ, ರೂಪೇಶ್‌ ರಾಜಣ್ಣ, ದೀಪಿಕಾ ದಾಸ್‌ ಹಾಗೂ ಅರುಣ್‌ ಸಾಗರ್‌ ಉಳಿದಿದ್ದಾರೆ. ಅರುಣ್‌ ಸಾಗರ್‌ ಎಲಿಮಿನೇಟ್‌ ಆಗಲಿದ್ದು ಬಹುಶ: ಮೂರನೇ ಸ್ಪರ್ಧಿ ಕೂಡಾ ಎಮಿಲಿನೇಶನ್‌ ಆಗಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇತರ ಸೀಸನ್‌ಗಳಂತೆ ಬಿಗ್‌ ಬಾಸ್‌ ಸೀಸನ್‌ 9 ಕೂಡಾ ಭಾರೀ ಕುತೂಹಲ ಕೆರಳಿಸಿದ್ದು ಈ ಬಾರಿ ಯಾರು ಈ ಸೀಸನ್‌ ವಿನ್‌ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Whats_app_banner