logo
ಕನ್ನಡ ಸುದ್ದಿ  /  Entertainment  /  Sruthi Hariharan New Venture In Film Industry

Sruthi Hariharan: ಹೊಸ ಸಾಹಸಕ್ಕೆ ಮುಂದಾದ ಶ್ರುತಿ ಹರಿಹರನ್‌...ವಿಚಾರ ಕೇಳಿ ಥ್ರಿಲ್‌ ಆದ ಸಿನಿಪ್ರಿಯರು

HT Kannada Desk HT Kannada

Feb 03, 2023 02:43 PM IST

ಡೈರೆಕ್ಟರ್‌ ಕ್ಯಾಪ್‌ ತೊಡಲು ರೆಡಿಯಾದ ಶ್ರುತಿ ಹರಿಹರನ್

    • ಅನೇಕ ಸಿನಿಮಾಗಳಲ್ಲಿ ಶ್ರುತಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ಮಲಯಾಳಂ, ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡಾ ಶ್ರುತಿ ನಟಿಸಿದ್ದಾರೆ. ಸದ್ಯಕ್ಕೆ ಶ್ರುತಿ 'ಸ್ಟ್ರಾಬೆರಿ' ಹಾಗೂ 'ಸಾರಾಂಶ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಡೈರೆಕ್ಟರ್‌ ಕ್ಯಾಪ್‌ ತೊಡಲು ರೆಡಿಯಾದ ಶ್ರುತಿ ಹರಿಹರನ್
ಡೈರೆಕ್ಟರ್‌ ಕ್ಯಾಪ್‌ ತೊಡಲು ರೆಡಿಯಾದ ಶ್ರುತಿ ಹರಿಹರನ್ (PC: Sruthi Hariharan)

ಮಗು ಆದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಶ್ರುತಿ ಹರಿಹರನ್‌ ಇದೀಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯಕ್ಕೆ ಶ್ರುತಿ ಹರಿಹರನ್‌ ಎರಡು ಸಿನಿಮಾಗಳಲ್ಲಿ ಬ್ಯುಸಿ ಇದ್ಧಾರೆ. ಜೊತೆಗೆ ಅವರು ಹೊಸ ಸಾಹಸಕ್ಕೂ ಮುಂದಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Ramana Avatara Trailer: ಎಲ್ಲರ ಲೈಫ್‌ನ ರಾಮಾಯಣ ಹೇಳಲು ಬಂದ ಮಾಡರ್ನ್‌ ರಾಮ; ‘ರಾಮನ ಅವತಾರ’ ಟ್ರೇಲರ್‌ ಬಿಡುಗಡೆ

May OTT Movies: ಮೇ ತಿಂಗಳಲ್ಲಿ ಒಟಿಟಿಯನ್ನು ಆಳಲಿವೆ ಈ 5 ಸೂಪರ್‌ ಹಿಟ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌; ಲಿಸ್ಟ್‌ ಹೀಗಿದೆ

‘ನಮ್ಮಪ್ಪನೇ ಎರಡು ಮದುವೆ ಆಗಿರುವಾಗ, ನಾನ್ಯಾಕೆ ಹೆದರಲಿ!’ ಭಾವಿ ಪತಿ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವರಲಕ್ಷ್ಮೀ ಶರತ್‌ಕುಮಾರ್ ಮಾತು

‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

ಸಾಮಾನ್ಯವಾಗಿ ಚಿತ್ರರಂಗಕ್ಕೆ ನಟ-ನಟಿಯಾಗಿ ಬಂದ ಅನೇಕರು ಒಮ್ಮೆ ಒಂದು ಸಿನಿಮಾವನ್ನಾದರೂ ನಿರ್ದೇಶನ ಮಾಡಬೇಕು ಎಂದುಕೊಳ್ಳುತ್ತಾರೆ. ಇದೀಗ ಶ್ರುತಿ ಅವರಿಗೂ ಸಿನಿಮಾ ನಿರ್ದೇಶನ ಮಾಡುವ ಆಸೆಯಂತೆ. ಕನ್ನಡ ಚಿತ್ರರಂಗದಲ್ಲಿ ಹುಡುಕಿದರೆ ಬೆರಳೆಣಿಕೆಷ್ಟು ಮಹಿಳಾ ನಿರ್ದೇಶಕಿಯರಿದ್ದಾರೆ. ಇದೀಗ ಶ್ರುತಿ ಹರಿಹರನ್‌ ನಿರ್ದೇಶನದತ್ತ ಆಸಕ್ತಿ ತೋರುತ್ತಿರುವುದನ್ನು ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಶ್ರುತಿ ಹರಿಹರನ್‌ ಯಾವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಏನಿರಬಹುದು..? ಕಲಾವಿದರು ಯಾರಿರಬಹುದು ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಶ್ರುತಿ, ಎಲ್ಲಾ ತಯಾರಿ ಮಾಡಿಕೊಂಡೇ ನಿರ್ದೇಶನಕ್ಕೆ ಇಳಿಯುತ್ತಿದ್ದಾರಂತೆ.

ಶ್ರುತಿ ಹರಿಹರನ್ ಡ್ಯಾನ್ಸರ್‌ ಆಗಿ ಚಿತ್ರರಂಗಕ್ಕೆ ಬಂದರು. ನಂತರ ಇವರಿಗೆ ನಾಯಕಿಯಾಗಿ ನಟಿಸುವ ಅವಕಾಶ ದೊರೆಯಿತು. 2012 ರಲ್ಲಿ ತೆರೆ ಕಂಡ ಮಲಯಾಳಂನ 'ಸಿನಿಮಾ ಕಂಪನಿ' ಎಂಬ ಸಿನಿಮಾ ಮೂಲಕ ಶ್ರುತಿ ನಾಯಕಿಯಾದರು. ಶ್ರುತಿ ಮೂಲತ: ತಮಿಳು ಕುಟುಂಬಕ್ಕೆ ಸೇರಿದವರು. ಇವರು ಹುಟ್ಟಿದ್ದು ಕೇರಳದಲ್ಲಿ. ನಂತರದ ದಿನಗಳಲ್ಲಿ ಇವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ಶ್ರುತಿ ಡ್ಯಾನ್ಸ್‌ನಲ್ಲೂ ಎತ್ತಿದ ಕೈ. ಕನ್ನಡದಲ್ಲಿ ಇವರು ನಟಿಸಿದ ಮೊದಲ ಚಿತ್ರ 'ಲೂಸಿಯಾ'. ಚಿತ್ರದಲ್ಲಿ ನೀನಾಸಂ ಸತೀಶ್‌ಗೆ ಶ್ರುತಿ ನಾಯಕಿಯಾಗಿದ್ದರು.

ನಂತರ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ನಾತಿಚರಾಮಿ, ಬ್ಯೂಟಿಫುಲ್ ಮನಸುಗಳು, ರಾಟೆ, ಮಾದ ಮತ್ತು ಮಾನಸಿ, ದ್ಯಾವ್ರೇ, ತಾರಕ್‌ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶ್ರುತಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ಮಲಯಾಳಂ, ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡಾ ಶ್ರುತಿ ನಟಿಸಿದ್ದಾರೆ. 2017ರಲ್ಲಿ ಶ್ರುತಿ ಹರಿಹರನ್‌ ತಾವು ಪ್ರೀತಿಸುತ್ತಿದ್ದ ರಾಮ್‌ ಕುಮಾರ್‌ ಎಂಬುವರನ್ನು ಮದುವೆಯಾದರು. ಆದರೆ ಶ್ರುತಿ ತಾವು ಮದುವೆಯಾಗಿರುವ ವಿಚಾರನ್ನು ಸೀಕ್ರೇಟ್‌ ಆಗಿ ಇಟ್ಟಿದ್ದರು. ಮಿ ಟೂ ವಿವಾದದ ಸಮಯದಲ್ಲಿ ಈ ವಿಚಾರ ರಿವೀಲ್‌ ಆಗಿತ್ತು.

ಶ್ರುತಿ ಹರಿಹರನ್ ಹಾಗೂ ರಾಮ್‌ ಕುಮಾರ್‌ ದಂಪತಿಗೆ ಹೆಣ್ಣು ಮಗುವಿದೆ. ಮಗುವಿಗೆ ಜಾನಕಿ ಎಂದು ಹೆಸರಿಟ್ಟಿದ್ದಾರೆ. ತಮ್ಮ ಪತಿ ಹಾಗೂ ಮಗಳ ಫೋಟೋಗಳನ್ನು ಶ್ರುತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಶ್ರುತಿ 'ಸ್ಟ್ರಾಬೆರಿ' ಹಾಗೂ 'ಸಾರಾಂಶ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೆರೆ ಕಂಡಿದ್ದ ಹೆಡ್‌ ಬುಷ್‌ ಚಿತ್ರದಲ್ಲಿ ಕೂಡಾ ಶ್ರುತಿ ನಟಿಸಿದ್ದರು. ಇದೀದ ಇವರು ಸಿನಿಮಾ ನಿರ್ದೇಶನ ಮಾಡುತ್ತಿರುವ ವಿಚಾರ ಗಮನ ಸೆಳೆದಿದ್ದು ಸಿನಿಪ್ರಿಯರು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು