logo
ಕನ್ನಡ ಸುದ್ದಿ  /  ಮನರಂಜನೆ  /  ತರುಣ್‌ ಸುಧೀರ್‌ ನಿರ್ಮಾಣದ ಹೊಸ ಸಿನಿಮಾ ಘೋಷಣೆ; ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಸಿನಿಮಾ ಘೋಷಣೆ; ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ

Suma Gaonkar HT Kannada

Dec 12, 2024 12:34 PM IST

google News

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಸಿನಿಮಾ ಘೋಷಣೆ

    • ತರುಣ್ ಸುದೀರ್ ಇದೀಗ ತಮ್ಮ ನಿರ್ಮಾಣದಲ್ಲಿ ಬರಲಿರುವ ಹೊಸ ಸಿನಿಮಾದ ಬಗ್ಗೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ ಎಂಬ ಶೀರ್ಷಿಕೆ ಇರುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 
ತರುಣ್‌ ಸುಧೀರ್‌ ನಿರ್ಮಾಣದ ಹೊಸ ಸಿನಿಮಾ ಘೋಷಣೆ
ತರುಣ್‌ ಸುಧೀರ್‌ ನಿರ್ಮಾಣದ ಹೊಸ ಸಿನಿಮಾ ಘೋಷಣೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ದಿ ಹೀರೋ ಸಿನಿಮಾದ ಕುರಿತು ಅನಿಶ್ಚಿತತೆ ಮುಂದುವರೆದಿರುವ ಸನ್ನಿವೇಶದಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಿರ್ದೇಶಕ ತರುಣ್‌ ಸುಧೀರ್‌ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ಪುನೀತ್‌ ರಂಗಸ್ವಾಮಿ ನಿರ್ದೇಶನದ ಹೊಸ ಚಿತ್ರವೊಂದಕ್ಕೆ ತರುಣ್‌ ಸುಧೀರ್‌ ಪ್ರೊಡಕ್ಷನ್‌ ಹೌಸ್‌ ಸಾಥ್‌ ನೀಡುತ್ತಿದೆ.

ತರುಣ್ ಸುದೀರ್ ಇದೀಗ ತಮ್ಮ ನಿರ್ಮಾಣದಲ್ಲಿ ಬರಲಿರುವ ಹೊಸ ಸಿನಿಮಾದ ಬಗ್ಗೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇಂದು ಅಂದರೆ ಡಿಸೆಂಬರ್ 12ರಂದು 12 ಗಂಟೆ 12 ನಿಮಿಷಕ್ಕೆ ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ ಎಂದಿದ್ದಾರೆ.

ಪೋಸ್ಟರ್‌ನಲ್ಲಿ ಅಪಘಾತದ ದೃಷ್ಯ ಕಾಣಿಸುತ್ತದೆ. ಕೈಗೆ ಬೇಡಿ ತೊಟ್ಟಿಕೊಂಡಿರುವ ಯಾರೋ ಅನಾಮಿಕ ಕೈಯ್ಯಲ್ಲಿ ಸೆಲ್‌ ಫೋನ್ ಹಿಡಿದಿದ್ದಾನೆ. ಸುತ್ತ ಮುತ್ತ ಬೆಂಕಿ ಹೊತ್ತಿ ಉರಿಯುತ್ತಿದೆ. ಆದರೆ ಕೈಗಿರುವ ಬಲ ನೋಡಿದರೆ ಅನಾಮಿಕ ವ್ಯಕ್ತಿ ಬದುಕಿದ್ದಾನೆ ಎಂದು ಅರ್ಥವಾಗುತ್ತದೆ. ಸುತ್ತ ಮುತ್ತಲೂ ದಾರಿಯೇ ಇಲ್ಲದೇ ಕಾಡೇ ಆವರಿಸಿಕೊಂಡಂತೆ ಇದೆ.

ಸಿನಿಮಾ ತಂಡದಲ್ಲಿ ಯಾರಿದ್ದಾರೆ?

ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ. ತರುಣ್ ಸುದೀರ್ ಹಾಗೂ ಅಟ್ಲಾಂಟ್‌ ನಾಗೇಂದ್ರ ಈ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಲಿದ್ದಾರೆ. ರಚನೆ ಮತ್ತು ನಿರ್ದೇಶನ ಪುನೀರ್ ರಂಗಸ್ವಾಮಿ. ಛಾಯಾಗ್ರಹಣ -ಸುಧಾಕರ್ ಎಸ್‌ ರಾಜ್. ಸಂಕಲನ ಕೆ ಎಂ. ಪ್ರಕಾಶ್‌. ಕಲೆ -ಜಿ ರಾಜಶೇಕರ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ಕೈ ಜೋಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ