ಶುಗರ್ ಲೋ ಆಗಿ ತಂಗಿ ಸುಧಾ ಮನೆಗೆ ಹೋದ ಗೌತಮ್ ದಿವಾನ್‌ಗೆ ಅಮ್ಮನ ಗುರುತು ಸಿಗುತ್ತಾ? ಅಮೃತಧಾರೆ ಸೀರಿಯಲ್‌ನಲ್ಲಿ ಭಾವನಾತ್ಮಕ ತೊಳಲಾಟ
Nov 08, 2024 09:47 AM IST
ಶುಗರ್ ಲೋ ಆಗಿ ತಂಗಿ ಸುಧಾ ಮನೆಗೆ ಹೋದ ಗೌತಮ್ ದಿವಾನ್
- ಜೀ ವಾಹಿನಿಯ ಅಮೃತಧಾರೆಯಲ್ಲಿ ಕಾಕತಾಳೀಯವಾಗಿ ಗೌತಮ್ ದಿವಾನ್ ಅವರು ಸುಧಾಳ ಮನೆಗೆ ಹೋಗುವಂತೆ ಆಗಿದೆ. ಬಿಪಿ ಲೋ ಆಗಿ ತಲೆತಿರುಗಿದ್ದ ಇವರಿಗೆ ಸಹೋದರಿಯ ಆರೈಕೆ ಸಿಕ್ಕಿದೆ. ಅಮ್ಮ ಪಕ್ಕದಲ್ಲಿದ್ದರೂ ಗುರುತಿಸಲಾಗದಂತಹ ಭಾವನಾತ್ಮಕ ಸನ್ನಿವೇಶ ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ಇರಲಿದೆ.
ಅಮೃತಧಾರೆ ಧಾರಾವಾಹಿ ನವೆಂಬರ್ 08ರ ಕಥೆ: ಗೌತಮ್ ದಿವಾನ್ ಕಾರಿನಲ್ಲಿ ಏನೋ ಯೋಚಿಸುತ್ತ ಸಾಗುತ್ತಿದ್ದಾರೆ. ಆದರೆ, ಯಾಕೋ ಕಣ್ಣು ಕತ್ತಲಿಟ್ಟಂತೆ ಆಗುತ್ತದೆ. ಈ ಸಮಯದಲ್ಲಿ ಕಾರನ್ನು ಕಷ್ಟಪಟ್ಟು ಬದಿಯಲ್ಲಿ ನಿಲ್ಲಿಸುತ್ತಾರೆ. ಇನ್ನೊಂದೆಡೆ ಸುಧಾ ಮನೆಯಿಂದ ನೀರು ತರಲೆಂದು ಹೊರ ಹೋಗುತ್ತಾರೆ. ಸುಧಾಳ ಪುಟಾಣಿ ಮಗಳು ಮನೆಯಲ್ಲಿ ಏನೋ ತಡಕಾಡುವಾಗ ಸುಧಾರ ಫ್ಯಾಮಿಲಿ ಫೋಟೋ ಸಿಗುತ್ತದೆ. ಆ ಫೋಟೋ ಫ್ರೇಮ್ ತೆಗೆದು ಮೇಲಿಡುತ್ತಾಳೆ. ಮತ್ತೊಂದೆಡೆ ಕಾರಿನಲ್ಲಿ ಗೌತಮ್ ಟ್ಯಾಬ್ಲೆಟ್‌ಗಾಗಿ ತಡಕಾಡುತ್ತಾರೆ. ಆ ಸಮಯದಲ್ಲಿ ನೀರಿನ ಕೊಡ ಹಿಡಿದುಕೊಂಡು ಸುಧಾ ಅಲ್ಲೇ ಸಾಗುತ್ತಾರೆ. ಭೂಮಿಕಾ ಕಾಲ್ ಮಾಡಿದ್ರೂ ತೆಗೆಯಲಾಗುವುದಿಲ್ಲ. ಸ್ಟಿಯರಿಂಗ್ ವೀಲ್‌ನಲ್ಲೇ ವಾಲುತ್ತಾರೆ. ಇವರ ತಲೆ ತಾಗಿ ಹಾರ್ನ್ ಜೋರಾಗಿ ಹೊಡೆದುಕೊಳ್ಳುತ್ತದೆ. ಅಲ್ಲೇ ಸಾಗುತ್ತಿರುವ ಸುಧಾ ನೋಡುತ್ತಾರೆ. "ಅಣ್ಣಾ ಎದ್ದೇಳಿ ಅಣ್ಣಾ" ಎನ್ನುತ್ತಾಳೆ. ಆಗ ಅಲ್ಲಿದ್ದ ಇನ್ನೊಬ್ಬರು "ಇವರಿಗೆ ಶುಗರ್ ಲೋ ಆಗಿದೆ. ಮನೆಯಿಂದ ಸ್ವಲ್ಪ ಸಕ್ಕರೆ ನೀರು ತಂದು ಕೊಡಿ" ಎಂದು ಹೇಳುತ್ತಾನೆ. ಅದೇ ರೀತಿ ಗೌತಮ್‌ಗೆ ಆಕೆ ಸಕ್ಕರೆ ನೀರು ತಂದು ಕೊಡುತ್ತಾಳೆ. ಗೌತಮ್ ಸರಿಯಾಗುತ್ತಾರೆ. ಈ ಮೂಲಕ ಸಹೋದರಿ ನೆರವಾಗುತ್ತಾರೆ.
ಸುಮ್ನೆ ಒಂದು ಪ್ರಶ್ನೆ: ಅಂದಹಾಗೆ ಗೌತಮ್‌ಗೆ ಈಗಾಗಲೇ ಶುಗರ್ ಸಮಸ್ಯೆ ಇದೆ. ಹೆವಿ ಸ್ವೀಟ್ ತಿನ್ನುವ ಅಭ್ಯಾಸವೂ ಇದೆ. ಇದೇ ಸಮಯದಲ್ಲಿ ತಂಗಿ ನೀಡಿರುವ ಸಜ್ಜಪ್ಪ ಕೂಡ ತಿಂದಿದ್ದಾರೆ. ಈ ಸಮಯದಲ್ಲಿ ಶುಗರ್ ಲೋ ಆಗಲು ಹೇಗೆ ಸಾಧ್ಯ? ಸೀರಿಯಲ್‌ನಲ್ಲಿ ನೀಡಿರುವ ಮಾಹಿತಿಯನ್ನು ಇಷ್ಟೊಂದು ಡೀಪ್ ಆಗಿ ವಿಶ್ಲೇಷಿಸಬಾರದು ಅಂತೀರಾ? ಓಕೆ.
ಸಹೋದರಿ ಸುಧಾಳ ಮನೆಯಲ್ಲಿ ಗೌತಮ್
ಈ ಸಮಯದಲ್ಲಿ ನಾನು ಹೊರಡುವೆ ಎಂದಾಗ "ಇಲ್ಲೇ ನಮ್ಮ ಮನೆ ಇದೆ. ಸುಧಾರಿಸಿಕೊಂಡು ಹೋಗಿ ಅಣ್ಣಾ" ಎಂದು ಸುಧಾ ಹೇಳುತ್ತಾರೆ. ನಿಮಗ್ಯಾಕೆ ತೊಂದರೆ ಎಂದರೂ ಕೇಳದೆ ಕರೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಸುಧಾಳ ಮಗಳು ತಿಂಡಿ ಹುಡುಕುತ್ತ ಯಾವುದೋ ಟಿಫಿನ್ ಬಾಕ್ಸ್ ಅನ್ನು ಸುಧಾ ಗೌತಮ್ ಫ್ಯಾಮಿಲಿ ಫೋಟೋಗೆ ಅಡ್ಡ ಇಡುತ್ತಾಳೆ.
ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತ ಇರುತ್ತಾರೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾರೆ. "ಪಾರ್ಥ ಇದ್ದಾರ, ಕರೀರಿ" ಎಂದು ಅಕ್ಕ ಹೇಳಿದಾಗ ಅಪೇಕ್ಷಾ ಎಂದಿನ ಪೊಗರಿನಲ್ಲಿ "ಅವರು ಮಲಗಿದ್ದಾರೆ" ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಪಾರ್ಥ ಬರುತ್ತಾನೆ. "ಗೌತಮ್ ಬಂದಿಲ್ಲ, ಅವರ ಶೆಡ್ಯೂಲ್ ಬಗ್ಗೆ ಗೊತ್ತಾ?" ಎಂದು ಕೇಳುತ್ತಾರೆ. "ನಾನು ಹೋಗಿ ನೋಡಿಕೊಂಡು ಬರ್ತಿನಿ" ಎಂದು ಪಾರ್ಥ ಹೇಳುತ್ತಾನೆ. ಅಪೇಕ್ಷಾ ಮೂತಿ ತಿರುಗಿಸುತ್ತಾಳೆ. ದಿಢೀರ್ ಅಂತ ಬಾಗಿಲು ಹಾಕುತ್ತಾಳೆ. ಇದಾದ ಬಳಿಕ ಭೂಮಿಕಾ ಆನಂದ್‌ಗೆ ಕಾಲ್ ಮಾಡುತ್ತಾರೆ. ಆತನೂ ಆತಂಕ ವ್ಯಕ್ತಪಡಿಸುತ್ತಾರೆ. ಇದೇ ಸಮಯದಲ್ಲಿ ಸಜ್ಜಪ್ಪ ತಿಂದಾಗ ಅಮ್ಮನ ನೆನಪಾದ ಕಥೆಯನ್ನೂ ಹೇಳುತ್ತಾರೆ.
ರಮಾಕಾಂತ್‌ಗೆ ಟೆನ್ಷನ್, ಶಕುಂತಲಾದೇವಿ ಕ್ರಿಮಿನಲ್ ಪ್ಲ್ಯಾನ್
ಇನ್ನೊಂದೆಡೆ ರಮಾಕಾಂತ್‌ಗೆ ಟೆನ್ಷನ್ ಆಗುತ್ತದೆ. ತನ್ನ ಅಕ್ಕನಲ್ಲಿ ಭಯ ತೋಡಿಕೊಳ್ಳುತ್ತಾನೆ. "ಕಣ್ಣು ಬಿಟ್ರೆ ಕಣ್ಣ ಮುಂದೆ ಕಾಣುತ್ತಾಳೆ. ಕಣ್ಣು ಮುಚ್ಚಿದರೆ ಭಯವಾಗುತ್ತದೆ. ಅವಳು ಬಂದರೆ ನಮಗೆ ಪ್ರಾಬ್ಲಂ" ಎಂದು ಹೇಳುತ್ತಾನೆ. "ಇಷ್ಟು ದಿನ ಅವಳು ಹೇಗೆ ದೂರ ಇದ್ಲೋ, ಇನ್ನು ಮುಂದೆಯೂ ಹಾಗೆಯೇ ಇರುತ್ತಾಳೆ" ಎಂದು ಶಕುಂತಲಾದೇವಿ ಹೇಳುತ್ತಾರೆ.
ಇನ್ನೊಂದೆಡೆ ಸುಧಾಳ ಮನೆಯಲ್ಲಿ ಗೌತಮ್ ವಿಶ್ರಾಂತಿ ಪಡೆಯುತ್ತ ಇದ್ದಾರೆ. ಅಲ್ಲೇ ಮುಂದೆ ಆ ಕಡೆ ಮುಖ ಮಾಡಿ ಅಮ್ಮ ಮಲಗಿದ್ದಾರೆ. ಆ ಸಮಯದಲ್ಲಿ ಅವಲಕ್ಕಿಗೆ ಕಾಯಿ ತುರಿ ಹಾಕಿದ್ದೇನೆ ಎಂದು ಸುಧಾ ನೀಡುತ್ತಾರೆ. ಗೌತಮ್ ಬೇಡವೆಂದರೂ ಆಕೆ ಕೇಳುವುದಿಲ್ಲ. "ನೀವು ಯಾರೂ ಅಂತ ಗೊತ್ತಿಲ್ಲ. ಬಾಯ್ತುಂಬ ಅಣ್ಣಾ ಅನ್ನುತ್ತಿದ್ದೀ" ಎಂದು ಗೌತಮ್ ಭಾವುಕರಾಗುತ್ತಾರೆ. ಅವಲಕ್ಕಿ ತಿನ್ನುತ್ತಿರುವಾಗ ಸುಧಾಳ ಮಗಳು ಬರುತ್ತಾಳೆ. "ಯಾರಮ್ಮ ಇವಳು" ಎಂದು ಮಗಳು ಕೇಳಿದಾಗ "ಇವರು ಅಣ್ಣಾ" ಎನ್ನುತ್ತಾರೆ. "ಅಣ್ಣಾ ಅಂದರೆ ನನಗೆ ಮಾವ" ಎಂದು ಚೂಟಿಯಗಿ ಮಾತನಾಡುತ್ತಾಳೆ.
ಭೂಮಿಕಾ ಟೆನ್ಷನ್‌ನಲ್ಲಿದ್ದಾರೆ. ಮತ್ತೆ ಮತ್ತೆ ಕಾಲ್ ಮಾಡುತ್ತಾರೆ. ಆ ಸಮಯದಲ್ಲಿ ಮಲ್ಲಿ ಬರುತ್ತಾಳೆ. ಯಾಕೆ ಟೆನ್ಷನ್ ಮಾಡಿಕೊಂಡಿದ್ದೀರಿ ಎಂದು ಕೇಳುತ್ತಾಳೆ. ಅವಳಿಗೆ ಭಾವ ಬಂದಿಲ್ಲ ಎನ್ನುವ ವಿಚಾರ ಹೇಳುತ್ತಾಳೆ.
ಸುಧಾಳ ಮನೆಯಲ್ಲಿ ಹೀಗೆ ಕೂತು ಮಾತನಾಡುವಾಗ ಮನೆಯ ಕುಟುಂಬದ ಕುರಿತು ಮಾತನಾಡುತ್ತಾರೆ. ಅಮ್ಮನಿಗೆ ಹುಷಾರಿಲ್ಲ ಎಂದು ಹೇಳುತ್ತಾರೆ. ಐದೇ ನಿಮಿಷದಲ್ಲಿ ಊಟ ರೆಡಿ ಮಾಡಿ ಎಂದು ಒತ್ತಾಯ ಮಾಡುತ್ತಾರೆ ಸುಧಾ. ಇಲ್ಲವೆನ್ನವಾಗಲು ಆಗುವುದಿಲ್ಲ. ಈ ಸಮಯದಲ್ಲಿ ಸುಧಾ ಮಗಳು ಮಾತನಾಡುತ್ತ ಇರುತ್ತಾಳೆ. "ನಿಮ್ಮ ಅಮ್ಮ ಇದ್ದಾರ" "ಅಮ್ಮಾ ಇದ್ದಾರೆ, ಆದರೆ, ಎಲ್ಲಿದ್ದಾರೆ ಗೊತ್ತಿಲ್ಲ" ಎನ್ನುತ್ತಾರೆ ಗೌತಮ್. "ನೀವು ದೇವರ ಮುಂದೆ ಬೇಡಿಕೊಳ್ಳಿ, ಅಮ್ಮ ಸಿಗುತ್ತಾರೆ" ಎಂದು ಪುಟಾಣಿ ಹೇಳುತ್ತಾಳೆ. ಸುಧಾ ನೀಡಿದ ಅಡುಗೆ ತಿಂದಾಗ ಗೌತಮ್‌ಗೆ ಹಳೆಯ ನೆನಪುಗಳು ಕಾಡುತ್ತವೆ. ಅಮ್ಮನ ನೆನಪಾಗುತ್ತದೆ. ಈ ಮೂಲಕ ಅಮ್ಮ ನೀಡಿದ ತುತ್ತು ಈಗ ಗೌತಮ್‌ಗೆ ನೆನಪಾಗುತ್ತದೆ. ಅಮ್ಮನ ಪ್ರೀತಿ, ಆಹಾರದ ರುಚಿಯೊಂದಿಗೆ ಭಾವುಕ ಸಂಬಂಧವೊಂದನ್ನು ಸೀರಿಯಲ್ ತಂಡ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದೆ.