ತಂಗಿ ಮಾಡಿದ ಗರಿಗರಿ ಸಜ್ಜಪ್ಪ ಸಿಹಿತಿಂಡಿ ಡುಮ್ಮಸರ್ ಹೊಟ್ಟೆ ಸೇರಿತು, ಅಮ್ಮನ ಕೈರುಚಿ ನೆನಪಿಸಿಕೊಂಡ ಗೌತಮ್- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಮನೆಯಿಂದ ಸುಧಾ ನೀಡಿರುವ ಸಜ್ಜಪ್ಪ ತಿಂಡಿ (Stuffed Sweetened Coconut Pastry) ಗೌತಮ್‌ಗೆ ತಲುಪಿದೆ. ಈ ಸಜ್ಜಪ್ಪ ತಿಂಡಿ ತಿಂದಾಗ ಗೌತಮ್‌ಗೆ ಅಮ್ಮನ ನೆನಪಾಗಿದೆ. ಈ ಮೂಲಕ ಡುಮ್ಮಸರ್‌ಗೆ ತಂಗಿಯ ಕೈರುಚಿ ತಲುಪಿದೆ.
- ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಮನೆಯಿಂದ ಸುಧಾ ನೀಡಿರುವ ಸಜ್ಜಪ್ಪ ತಿಂಡಿ (Stuffed Sweetened Coconut Pastry) ಗೌತಮ್‌ಗೆ ತಲುಪಿದೆ. ಈ ಸಜ್ಜಪ್ಪ ತಿಂಡಿ ತಿಂದಾಗ ಗೌತಮ್‌ಗೆ ಅಮ್ಮನ ನೆನಪಾಗಿದೆ. ಈ ಮೂಲಕ ಡುಮ್ಮಸರ್‌ಗೆ ತಂಗಿಯ ಕೈರುಚಿ ತಲುಪಿದೆ.
(1 / 8)
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ಗೆ ತನ್ನ ತಂಗಿ ಮತ್ತು ತಾಯಿ ಜೀವಂತವಾಗಿದ್ದಾರೆ ಎಂಬ ಮಾಹಿತಿ ತಲುಪಿದ್ದಾರೆ. ತನ್ನ ತಾಯಿ ಮತ್ತು ತಂಗಿಯನ್ನು ನೋಡಲು ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಸುಧಾ ಮತ್ತು ಆಕೆಯ ತಾಯಿ ಮತ್ತು ಮಗಳು ಬಡತನದ ಜೀವನ ನಡೆಸುತ್ತಿದ್ದಾರೆ.
(2 / 8)
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ಗೆ ತನ್ನ ತಂಗಿ ಮತ್ತು ತಾಯಿ ಜೀವಂತವಾಗಿದ್ದಾರೆ ಎಂಬ ಮಾಹಿತಿ ತಲುಪಿದೆ. ತನ್ನ ತಾಯಿ ಮತ್ತು ತಂಗಿಯನ್ನು ನೋಡಲು ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಸುಧಾ ಮತ್ತು ಆಕೆಯ ತಾಯಿ ಮತ್ತು ಮಗಳು ಬಡತನದ ಜೀವನ ನಡೆಸುತ್ತಿದ್ದಾರೆ.
(3 / 8)
ಸುಧಾಳ ಕಾಲಿನಲ್ಲಿ ಮಚ್ಚೆಯ ಗುರುತು ಇದೆ. ಗೌತಮ್‌ಗೂ ತನ್ನ ತಂಗಿಯನ್ನು ಕಂಡುಹಿಡಿಯಲು "ಆಕೆಯ ಕಾಲಲ್ಲಿ ಮಚ್ಚೆ ಇದೆ" ಎಂದಿರುತ್ತಾನೆ. ಈ ಮಚ್ಚೆಯು ಇವರಿಬ್ಬರನ್ನು ಭೇಟಿಯಾಗಿಸುವ ಪ್ರಮುಖ ಅಂಶ ಆಗಿರಬಹುದು.
(4 / 8)
ಸುಧಾಳ ತಾಯಿ ಪ್ರಜ್ಞೆಯಿಲ್ಲದೆ ಮಲಗಿದ್ದಾರೆ. ಆಕೆಗೆ ಮೂರು ತಿಂಗಳಲ್ಲಿ ಆಪರೇಷನ್ ಆಗಲೇಬೇಕು. ಅದಕ್ಕೂ ಮುನ್ನ ಗೌತಮ್ ಭೇಟಿಯಾದರೆ ಆಪರೇಷನ್‌ಗೆ ವ್ಯವಸ್ಥೆಯಾಗಲಿದೆ. ಇದೇ ಸಮಯದಲ್ಲಿ ಆನಂದ್ ಮನೆಯಲ್ಲಿರುವ ಸುಧಾ ರುಚಿರುಚಿಯಾದ ಅಡುಗೆ ಮಾಡುತ್ತಾರೆ.
(5 / 8)
ಒಂದು ದಿನ ಸುಧಾ ಆಫೀಸ್‌ನವರಿಗೂ ಕೊಡಿ ಎಂದು ಸಜ್ಜಪ್ಪ ಮಾಡಿ ನೀಡುತ್ತಾರೆ. ಆ ಸಜ್ಜಪ್ಪ ಆಫೀಸ್‌ನಲ್ಲಿ ಗೌತಮ್ ಕೈಸೇರುತ್ತದೆ. ಗೌತಮ್‌ಗೆ ಆ ಸಜ್ಜಪ್ಪ ತಿಂದಾಗ ಅಮ್ಮನ ನೆನಪಾಗುತ್ತದೆ.
(6 / 8)
ನನ್ನ ಅಮ್ಮನೂ ಇದೇ ರೀತಿ ಸಜ್ಜಪ್ಪ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಈ ಮೂಲಕ ತಂಗಿ ಮತ್ತು ಸಹೋದರನ ನಡುವೆ ಒಂದು ಸವಿಯಾದ ತಿಂಡಿಯ ಲಿಂಕ್ ಮಾಡಿದ್ದಾರೆ ನಿರ್ದೇಶಕರು.
(7 / 8)
ಇದೇ ಸಮಯದಲ್ಲಿ ಸುಧಾಳನ್ನು ಯಾರೋ ಆನಂದ್ ಮನೆಗೆ ಕಳುಹಿಸಿದ್ದಾರೆ. ಆಕೆಯನ್ನು ಆದಷ್ಟು ಬೇಗ ಗೌತಮ್ ಮನೆಗೆ ಹೋಗಲು ಆ ನಿಗೂಢ ವ್ಯಕ್ತಿ ಹೇಳುತ್ತಿದ್ದಾನೆ. ಸುಧಾಳನ್ನು ಈ ರೀತಿ ಬಳಸಿಕೊಳ್ಳುತ್ತಿರುವ ವ್ಯಕ್ತಿ ಯಾರು? ಆತನ ಉದ್ದೇಶವೇನು? ಇದರ ಹಿಂದೆ ಏನಾದರೂ ಕೆಟ್ಟ ಉದ್ದೇಶ ಇರುವುದೇ? ಅಥವಾ ಆತ ಕೂಡ ಸುಧಾಳನ್ನು ಗೌತಮ್ ಮನೆಗೆ ಕಳುಹಿಸುವ ಪ್ರಯತ್ನದಲ್ಲಿದ್ದಾನ? ಎಂಬ ಸಂದೇಹವೂ ಪ್ರೇಕ್ಷಕರಲ್ಲಿ ಇದೆ.
ಇತರ ಗ್ಯಾಲರಿಗಳು