Amruthadhaare: ಗೌತಮ್ ಹೇಳಿದ ಮಾನ್ಯಾಳ ಹನಿಟ್ರ್ಯಾಪ್ ಕಥೆಯಿಂದ ಭೂಮಿಕಾಗೆ ಕಳವಳ, ಧನ್ಯಾಳಿಂದ ನಿದ್ದೆ ಕಳೆದುಕೊಂಡ ಶಕುಂತಲಾದೇವಿ ಗ್ಯಾಂಗ್
Amruthadhaare serial today Episode October 30: ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಭೂಮಿಕಾಳಿಗೆ ಗೌತಮ್ ಮಾನ್ಯಾಳ ಸ್ಟೋರಿ ಹೇಳುತ್ತಾನೆ. ಆಕೆಯ ಹನಿಟ್ರ್ಯಾಪ್ ಇತಿಹಾಸ ಹೇಳುತ್ತಾನೆ. ಮಾನ್ಯಾಳ ಹನಿಟ್ರ್ಯಾಪ್ ಕಥೆಯು ಶಕುಂತಲಾದೇವಿಯ ಮಸಲತ್ತು ಎಂದು ಗೌತಮ್‌ಗೆ ಗೊತ್ತಿರುವುದಿಲ್ಲ.
Amruthadhaare serial today Episode October 30: ಚಮಕ್‌ಚಲ್ಲೋ ದಿಯಾಳಿಗೆ ಜೈದೇವ್ ಕರೆ ಮಾಡಿ ತನ್ನ ಪರಿಸ್ಥಿತಿಯನ್ನು ಹೇಳುತ್ತಾನೆ. ತನಗೆ ಇಷ್ಟು ದಿನ ಈ ಮನೆಯಲ್ಲಿ ಆದ ಎಲ್ಲಾ ತೊಂದರೆಯನ್ನೂ ಹೇಳುತ್ತಾನೆ. "ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದು, ನಾನು ಸಾಯುವ ನಾಟಕವಾಡಿದ್ದು" ಎಲ್ಲವನ್ನೂ ಹೇಳುತ್ತಾನೆ. ಸ್ವಲ್ಪ ದಿನ ಪರಿಸ್ಥಿತಿ ಸರಿಯಾದಗ ನಾನೇ ಕಾಲ್ ಮಾಡುವೆ ಎನ್ನುತ್ತಾನೆ. ಆತ ಫೋನ್ ಇಟ್ಟು ಹಿಂತುರುಗಿ ನೋಡಿದಾಗ ಅಲ್ಲಿ ಮಲ್ಲಿ ಇರುತ್ತಾಳೆ. "ಯಾರದ್ದು ಫೋನ್" ಎಂದು ಕೇಳುತ್ತಾಳೆ. "ದಿಯಾಳ ಫೋನ್. ನಾನು ಎಷ್ಟು ಹೇಳಿದ್ರೂ ಕೇಳ್ತಾ ಇಲ್ಲ. ಆನಂದ್ ಬ್ರೋ ಎಲ್ಲಾ ನೋಡಿಕೊಳ್ಳುತ್ತಾನೆ" ಎಂದು ಹೇಳುತ್ತಾನೆ. ಈ ಮೂಲಕ ತನ್ನ ತಪ್ಪು ಏನೂ ಇಲ್ಲ ಎಂದು ನಾಟಕವಾಡುತ್ತಾನೆ.
ಗೌತಮ್ ದಿವಾನ್ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಮಾನ್ಯ ಯಾರು ಎಂದು ಅವರು ಹೇಳುತ್ತಿದ್ದಾರೆ. "ಶಾಕುಂತಲದೇವಿ ಜತೆ ಕೆಲಸ ಮಾಡಲು ಬಂದಿದ್ದರು" ಎಂದು ಹೇಳುತ್ತಾರೆ. "ತುಂಬಾ ಒಳ್ಳೆಯ ಕೆಲಸಗಾರ್ತಿ. ನಾವೆಲ್ಲವೂ ಅವಳನ್ನು ನಂಬಿದ್ದೇವೆ. ಆದರೆ, ಒಂದು ದಿನ ಅವಳ ಮೊಬೈಲ್ ಚೆಕ್ ಮಾಡಿದ್ದೇವು. ಅವಳ ಮೊಬೈಲ್‌ನಲ್ಲಿ ನನ್ನ ಫೋಟೋಗಳ ಜತೆ ಅನೇಕ ಫೋಟೋಗಳು ಇದ್ದವು. ಹನಿಟ್ರ್ಯಾಪ್ ರೀತಿ ಏನೋ ಮಾಡಲು ಪ್ಲ್ಯಾನ್ ಮಾಡಿದ್ದಳಂತೆ. ಅವತ್ತು ನನ್ನ ಮೈಂಡ್ ಎಷ್ಟು ಡಿಸ್ಟರ್ಬ್ ಆಗಿತ್ತೆಂದರೆ ಇನ್ಮುಂದೆ ಯಾರನ್ನೂ ನಂಬಬಾರದು ಎಂದುಕೊಂಡೆ" ಎಂದು ಗೌತಮ್ ಹೇಳುತ್ತಾರೆ. "ಇನ್ಮುಂದೆ ಯಾರೂ ನಮ್ಮ ಮನೆ ಕಡೆ ಕಣ್ಣೆತ್ತಿ ನೋಡಬಾರದು ಎಂದಿದ್ದೆ. ಸ್ವಲ್ಪ ದಿನ ಕಳೆದು ಮತ್ತೆ ಟಾರ್ಚರ್ ಕೊಡಲು ಆರಂಭಿಸಿದಳು. ನಿಮ್ಮ ಆ ರಹಸ್ಯ ಬಹಿರಂಗ ಮಾಡ್ತಿನಿ, ಇದನ್ನು ಮಾಡ್ತಿನಿ ಎಂದು ನನ್ನ ಅಮ್ಮನಿಗೆ ಕರೆ ಮಾಡಿ ಹೇಳ್ತಾ ಇದ್ದಳು" ಎಂದು ಹೇಳುತ್ತಾರೆ. ಮಾನ್ಯಳ ಸಾವಿನ ಕುರಿತು ತಿಳಿದಾಗ ಭೂಮಿಕಾಗೆ ಏನೋ ಕಸಿವಿಸಿಯಾಗುತ್ತದೆ.
ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತಿದ್ದಾರೆ. "ನನಗೆ ತುಂಬಾ ಬೋರ್ ಆಗಿದೆ. ಈ ಮನೆ ಹೈಫೈ ಜೈಲು ತರಹ ಕಾಣಿಸ್ತಿದೆ" ಎಂದು ಅಪೇಕ್ಷಾ ಹೇಳುತ್ತಾಳೆ. "ಆಗ ನಾವಿಬ್ಬರು ಲವರ್ಸ್ ರೀತಿ ಫ್ರೀ ಇದ್ವಿ. ಈಗ ನನಗೆ ಕೆಲಸ ಇದೆ. ಕೆಲಸದ ಬಗ್ಗೆ ತುಂಬಾ ಯೋಚನೆ ಮಾಡಬೇಕು. ಈ ನಡುವೆ ನನಗೆ ಹೇಗೆ ಇರಬೇಕು ಎಂದು ಗೊತ್ತಾಗ್ತ ಇಲ್ಲ. ಕೆಲಸ ಮಾಡದೆ ಇದ್ದಾಗ ನಿಮಗೆ ಕೆಲಸ ಇಲ್ಲ ಎಂದು ಹೇಳ್ತಾ ಇದ್ದೀರಿ. ಇರುವ ಸಮಯದಲ್ಲಿ ನಾನು ಯಾರಿಗೆಲ್ಲ ಸಮಯ ನೀಡಲಿ" ಎಂದು ಪಾರ್ಥ ಹೇಳುತ್ತಾನೆ. "ನಿಮ್ಮ ಹತ್ರ ಎಷ್ಟು ಮಾತನಾಡಿದ್ರೂ ಅಷೇ" ಎಂದು ಬುಸುಗುಟ್ಟುತ್ತಾ ಹೋಗುತ್ತಾಳೆ.
ಧನ್ಯಾಳಿಂದ ನಿದ್ದೆ ಕಳೆದುಕೊಂಡಿದೆ ಶಕುಂತಲಾದೇವಿ ಗ್ಯಾಂಗ್
ಗೌತಮ್ ಯೋಚನೆ ಮಾಡುತ್ತಾರೆ. ಬಳಿಕ ಅವರೇ ಧನ್ಯಳಿಗೆ ಫೋನ್ ಮಾಡುತ್ತಾರೆ. ಈ ಸಮಯದಲ್ಲಿ ಭೂಮಿಕಾ ತುಂಬಾ ಯೋಚನೆಯಲ್ಲಿ ಕುಳಿತಿದ್ದಾರೆ. ಆಗ ಮಲ್ಲಿ ಬರುತ್ತಾರೆ. ಮಲ್ಲಿ ಜತೆ ಮಾನ್ಯಳ ವಿಚಾರ ಮಾತನಾಡುತ್ತಾರೆ. "ಪಾಪಾ ಮಾನ್ಯ ಅವರು ತುಂಬಾ ಒಳ್ಳೆಯವರಲ್ವ" ಎಂದು ಮಲ್ಲಿ ಹೇಳುತ್ತಾರೆ. "ಇಲ್ಲ ಮಲ್ಲಿ, ಅವರು ಒಳ್ಳೆಯವರು ಅಲ್ವಂತೆ. ಅವರು ಈ ಮನೆಯಲ್ಲಿ ಕೆಲಸ ಮಾಡ್ತಾ ಇದ್ರಂತೆ. ಅತ್ತೆ ಪಿಎ ತರಹ ಈ ಮನೆಯವರೇ ಆಗಿದ್ದರು. ಆಮೇಲೆ ಏನೋ ಸಂಚು ಮಾಡಿದ್ದಳು. ಅವರನ್ನು ಬಳಿಕ ಹೊರಗೆ ಹಾಕಿದ್ರು" ಎಂದೆಲ್ಲ ಭೂಮಿಕಾ ವಿವರಿಸುತ್ತಾಳೆ. ಇದಾದ ಬಳಿಕ ಧನ್ಯ ತನಗೆ ಕಾಲ್ ಮಾಡಿದ್ದಳು ಎಂದು ಹೇಳುತ್ತಾಳೆ. ಮಲ್ಲಿ ಕೂಡ ಯೋಚನೆಗೆ ಬೀಳುತ್ತಾಳೆ.
ಗೌತಮ್ ಯೋಚನೆ ಮಾಡ್ತಾ ಇದ್ದಾರೆ. ಆಗ ಅಲ್ಲಿಗೆ ಶಕುಂತಲಾದೇವಿ ಬರುತ್ತಾರೆ. ಏನು ಯೋಚನೆ ಮಾಡ್ತಾ ಇದ್ದಿ ಎಂದಾಗ "ಮಾನ್ಯಳ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ" ಎನ್ನುತ್ತಾರೆ. "ಮಾನ್ಯಳ ತಂಗಿ ಧನ್ಯ ಕಾಲ್, ಮೆಸೆಜ್ ಮಾಡ್ತಾ ಇದ್ದಾಳೆ. ಇಂಪಾರ್ಟೆಂಟ್ ವಿಷಯ ಇದೆ ಮೀಟ್ ಮಾಡಲು ಕರೆಯುತ್ತಾಳೆ. ನಾನು ಹೋಗುತ್ತಿಲ್ಲ" ಎಂದು ಗೌತಮ್ ಹೇಳುತ್ತಾರೆ. "ಬಹುಶಃ ನಿನ್ನಲ್ಲಿ ದುಡ್ಡು ಕೇಳಲು ಇರಬಹುದು" ಎನ್ನುತ್ತಾರೆ. "ನಾನು ರೆಸ್ಪಾಂಡ್ ಮಾಡಿಲ್ಲ ಎಂದು ಭೂಮಿಕಾಗೆ ಕಾಲ್ ಮಾಡಿದ್ದಾಳೆ. ಅವಳು ಪದೇಪದೇ ಯಾಕೆ ಫೋನ್ ಮಾಡ್ತಾ ಇದ್ದಾಳೆ" ಎಂದು ಗೌತಮ್ ಹೇಳುತ್ತಾರೆ. "ಇಷ್ಟು ದಿನ ಅವಳನ್ನು ನಾನು ಹ್ಯಾಂಡಲ್ ಮಾಡಿದೆ. ನಾನೇ ಇನ್ನು ಮುಂದೆಯೇ ಹ್ಯಾಂಡಲ್ ಮಾಡ್ತಿನಿ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಇವಳು ಭೂಮಿಕಾ ತನಕ ಬಂದ್ಲ. ಶೀಘ್ರ ಇದಕ್ಕೆ ಇತ್ಯರ್ಥ ಮಾಡಬೇಕು" ಎಂದು ಮನಸ್ಸಲ್ಲಿ ಯೋಚಿಸುತ್ತಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ