ತಂಗಿ ಸುಧಾಳಿಗೆ ಗೌತಮ್ ನೀಡಿದ್ರು ಅಕ್ಕರೆಯ ಕೈತುತ್ತು, ಅಣ್ಣ ತಂಗಿ ಬಂಧ ಬಹಿರಂಗ ಯಾವಾಗ? ಅಮೃತಧಾರೆ ಧಾರಾವಾಹಿ ಸೋಮವಾರದ ಸಂಚಿಕೆ
Nov 25, 2024 10:48 AM IST
ಅಮೃತಧಾರೆ ಧಾರಾವಾಹಿ ಸೋಮವಾರದ ಸಂಚಿಕೆ
- ಅಮೃತಧಾರೆ ಧಾರಾವಾಹಿ ಸೋಮವಾರದ ಸಂಚಿಕೆ: ಜೀ ಕನ್ನಡ ವಾಹಿನಿಯ ಈ ಸೀರಿಯಲ್‌ನ ಸೋಮವಾರದ ಸಂಚಿಕೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯದೆ ಇದ್ದರೂ ಭಾವನಾತ್ಮಕವಾದ ಒಂದಿಷ್ಟು ಅಂಶಗಳಿಂದ ಗಮನ ಸೆಳೆದಿದೆ. ತನ್ನ ತಂಗಿ ಸುಧಾಳಿಗೆ ಗೌತಮ್ ಕೈತುತ್ತು ತಿನ್ನಿಸಿದ್ದಾನೆ.
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸೀರೆಗೆ ಬೆಂಕಿ ತಾಗಿದಾಗ ಸುಧಾ ಅದನ್ನು ಗಮನಿಸಿ, ಅದನ್ನು ನಂದಿಸಲು ಯತ್ನಿಸುತ್ತಾರೆ. ಇದರಿಂದ ಆಕೆಯ ಕೈಗೆ ಸ್ವಲ್ಪ ಗಾಯವಾಗಿದೆ. ಈಕೆಗೆ ಗಾಯವಾಗಿರುವ ಕುರಿತು ಭೂಮಿಕಾ ಬೇಸರ ವ್ಯಕ್ತಪಡಿಸುತ್ತಾರೆ. "ನನ್ನ ಜೀವನದಲ್ಲಿ ಆಗಿರುವ ಗಾಯಗಳ ಮುಂದೆ ಇದು ತುಂಬಾ ಚಿಕ್ಕದು" ಎಂದು ತನ್ನ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾರೆ ಸುಧಾ. ಈ ಸಮಯದಲ್ಲಿ ಗೌತಮ್ ಬರುತ್ತಾರೆ. ಅವರು ಗಾಬರಿಯಿಂದ ಆಗಮಿಸಿದ್ದಾರೆ. "ನೀವು ರೆಸ್ಟ್ ಮಾಡೋದು ಬಿಟ್ಟು ಕೆಳಗೆ ಯಾಕೆ ಹೋದ್ರಿ" ಎಂದು ಗೌತಮ್ ಬಯ್ಯುತ್ತಾರೆ. ಇದಾದ ಬಳಿಕ ಒಂದಿಷ್ಟು ಮಾತುಗಳಾಗುತ್ತವೆ. "ಈ ಘಟನೆಯ ಹಿಂದೆ ಯಾರಾದರೂ ಇದ್ದಾರ" ಎಂದು ಗೌತಮ್ ಯೋಚಿಸುತ್ತಾರೆ.
ರಾತ್ರಿ ಕೂಡ ಗೌತಮ್ ಅದೇ ರೀತಿ ಯೋಚನೆ ಮಾಡುತ್ತಿದ್ದಾರೆ. "ನನಗೆ ಭಯ ಶುರುವಾಗಿದೆ. ನಮ್ಮ ಎಲ್ಲಾ ಜಾತಕವನ್ನು ಜ್ಯೋತಿಷಿಗೆ ನೀಡಬೇಕು. ಭಯ ಹೋಗಲಾದರೂ ಜಾತಕ ನೀಡಬೇಕು. ಯಾರದರೂ ಪರಿಹಾರ ಸೂಚಿಸಿದರೆ ಒಳ್ಳೆಯದು" ಎಂದು ಗೌತಮ್ ಹೇಳುತ್ತಾರೆ. ಆ ಸಮಯದಲ್ಲಿ ಮನೆಗೆ ಹೋಗುತ್ತೇನೆ ಎಂದು ಸುಧಾ ಹೇಳಲು ಬರುತ್ತಾರೆ. "ನೀರಿನಲ್ಲಿ ಬೆಂಕಿ ಆರಿಸೋದಲ್ವ. ಕೈಯಲ್ಲಿ ಯಾರಾದರೂ ಬೆಂಕಿ ಆರಿಸ್ತಾರ" ಎಂದು ಸುಧಾಳಿಗೂ ಹೇಳುತ್ತಾರೆ. ಇಷ್ಟು ಕೈಗೆ ಗಾಯ ಮಾಡಿಕೊಂಡಿದ್ದೀರಿ, ಇವತ್ತು ಮನೆಗೆ ಹೋಗಬೇಡಿ ಎಂದು ಭೂಮಿಕಾ ಹೇಳುತ್ತಾರೆ. ಇಲ್ಲ ನಾನು ಮನೆಗೆ ಹೋಗಲೇಬೇಕು ಎಂದು ಎಷ್ಟು ಹೇಳಿದರೂ ಇವರು ಕೇಳುವುದಿಲ್ಲ. ಮನೆಯಲ್ಲಿರುವ ಮಗಳು ಮತ್ತು ತಾಯಿಯನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಲು ಆನಂದ್‌ಗೆ ಹೇಳುತ್ತೇನೆ ಎಂದು ಭೂಮಿಕಾ ಹೇಳುತ್ತಾರೆ. "ಬೇಡ ನನ್ನ ಪಕ್ಕದ ಮನೆ ಆಂಟಿಗೆ ಹೇಳುತ್ತೇನೆ" ಎಂದು ಸುಧಾ ಹೇಳುತ್ತಾರೆ.
ಪಕ್ಕದ ಮನೆಯವರಿಗೆ ಫೋನ್ ಮಾಡಿ "ಅಮ್ಮ ಮತ್ತು ಮಗಳನ್ನು ನೋಡಿಕೊಳ್ಳುವಂತೆ" ಹೇಳುತ್ತಾರೆ. "ನಿಮಗೆ ಕಷ್ಟಕೊಟ್ಟೆ" ಎಂದು ಸುಧಾ ಪಕ್ಕದ ಮನೆಯವರಿಗೆ ಹೇಳುತ್ತಾರೆ. "ನಾವು ಅಕ್ಕಪಕ್ಕದವರು ಒಬ್ಬರಿಗೊಬ್ಬರು ಸಹಾಯ ಮಾಡಬೇಕಲ್ವಮ್ಮ. ಇದರಲ್ಲಿ ದೊಡ್ಡಮಾತು, ಕಷ್ಟ ಏನು ಬಂತು" ಎಂದು ಹೇಳುತ್ತಾರೆ ಆಕೆಯ ಪಕ್ಕದ ಮನೆಯವರು. ಇದಾದ ಬಳಿಕ ಪಕ್ಕದ ಮನೆಯವರು ಸುಧಾಳ ಮಗಳನ್ನು ನೋಡಿಕೊಳ್ಳುತ್ತಾರೆ. ಮಗಳಿಗೆ ಮತ್ತು ಸುಧಾಳ ತಾಯಿಗೆ ಊಟ ತಂದುಕೊಡುತ್ತಾರೆ.
ಅಪೇಕ್ಷಾ ಪಾರ್ಥನಿಗೆ ಕಾಯುತ್ತಿದ್ದಾಳೆ. ಯಾಕೆ ಇನ್ನೂ ಬಂದಿಲ್ಲ ಎಂದು ಕಾಯುತ್ತಿದ್ದಾಳೆ. ಪಾರ್ಥ ಬಂದಾಗ ಖುಷಿಯಿಂದ "ಯಾಕೆ ಲೇಟು ಡಿಯರ್ ಗಂಡ" ಎಂದು ಕೇಳುತ್ತಾಳೆ. ಲವ್ ಅನಿವರ್ಸರಿಗೆ ಗಂಡ ನೀಡಿದ ಸರ್‌ಪ್ರೈಸ್‌ನಿಂದ ಖುಷಿಯಾಗಿದ್ದಾಳೆ. ಇದಾದ ಬಳಿಕ "ಅತ್ತಿಗೆ ಹೇಗಿದ್ದಾರೆ. ಬೆಂಕಿ ನಂದಿಸಿದ್ರಂತೆ ಕೆಲಸದವಳು. ಆಕೆಗೆ ಬ್ರೇವ್ ಅವಾರ್ಡ್ ಕೊಡಬೇಕು" ಎಂದು ಪಾರ್ಥ ಹೇಳುತ್ತಾನೆ. ಅಕ್ಕನ ವಿಷಯ ಬಂದಾಗ ಅಪೇಕ್ಷಾ ಮುಖ ಗಂಟಿಕ್ಕಿಕೊಳ್ಳುತ್ತಾಳೆ. "ಅಯ್ಯೋ ನೀರಿನಿಂದ ಆರಿಸಬೇಕಾದ ಬೆಂಕಿಯನ್ನು ಕೈಯಿಂದ ಉಜ್ಜಿ ಹೀರೋ ಆದ್ಲು. ಎಲ್ಲರೋ ಹೊಗಳಿದ್ದೇ ಹೊಗಳಿದ್ದು" ಎಂದು ಅಪೇಕ್ಷಾ ಟೀಕಿಸುತ್ತಾಳೆ. "ಮಿದುಳಿನಿಂದ ಯೋಚನೆ ಮಾಡಬೇಡಿ. ಹೃದಯದಿಂದ ಯೋಚನೆ ಮಾಡಿ. ಹೇಗೆ ಬೆಂಕಿ ಆರಿಸಿದ್ರು ಅನ್ನೋದು ಮುಖ್ಯವಲ್ಲ. ಬೆಂಕಿ ಆರಿಸಿದ್ರು ಅನ್ನೋದೇ ಮುಖ್ಯ. ಅದಕ್ಕೆ ನಾವು ಚಪ್ಪಾಳೆ ತಟ್ಟಬೇಕು" ಎಂದು ಪಾರ್ಥ ಹೇಳುತ್ತಾನೆ. "ಈ ಮನೆಗೆ ಅತ್ತಿಗೆ ತುಂಬಾ ಮುಖ್ಯವಾದವರು. ಆಕೆಯ ಸೇವ್ ಮಾಡಿದ್ದಕ್ಕೆ ಗೋಲ್ಡನ್ ಬಝರ್ ಒತ್ತಬೇಕು" ಎಂದು ಪಾರ್ಥ ಹೇಳುತ್ತಾನೆ. "ಈ ಕಾಲದಲ್ಲಿ ಯಾರನ್ನೂ ನಂಬಲು ಆಗೋದಿಲ್ಲ. ಮನೆ ಕೆಲಸದವರನ್ನು ಮನೆ ಕೆಲಸದವರ ರೀತಿ ನೋಡಬೇಕು" ಎಂದು ಹೇಳುತ್ತಾಳೆ. ಒಂದಿಷ್ಟು ಮಾತುಗಳು ನಡೆಯುತ್ತವೆ.
ತಂಗಿಗೆ ಊಟ ಬಡಿಸಿದ ಸುಧಾ
ಊಟದ ಸಮಯ. ಗೌತಮ್, ಭೂಮಿಕಾ ಮತ್ತು ಸುಧಾ ಊಟಕ್ಕೆ ರೆಡಿಯಾಗಿದೆ. ಗೌತಮ್ ಬಡಿಸುತ್ತಾರೆ. ಸುಧಾ ಸಂಕೋಚದಲ್ಲಿ ಇರುತ್ತಾಳೆ. ಆ ಸಮಯದಲ್ಲಿ ಸುಧಾಳ ಕೈ ನೋವು ಎಂದು ಗೌತಮ್ ತಿನ್ನಿಸಲು ಮುಂದಾಗುತ್ತಾರೆ. "ಅವತ್ತು ರಸ್ತೆ ಪಕ್ಕದಲ್ಲಿ ನಾನು ಆರೋಗ್ಯ ಕೆಟ್ಟಾಗ ನೀನು ಸೇವೆ ಮಾಡಿದೆ. ಆಗ ನೀನು ನನ್ನ ಮನುಷ್ಯನ ರೀತಿ ನೋಡಿದೆ. ನಮ್ಮೆಲ್ಲರ ದೇಹದಲ್ಲಿ ಒಂದೇ ರಕ್ತ ಹರಿಯುತ್ತಿದೆ. ಸಂಕೋಚಪಡಬೇಡ" ಎಂದು ಗೌತಮ್ ಹೇಳುತ್ತಾರೆ. ಗೌತಮ್ ಪ್ರೀತಿಯಿಂದ ಸುಧಾಳಿಗೆ ತುತ್ತು ತಿನ್ನಿಸುತ್ತಾರೆ. "ಗೌತಮ್ ತನ್ನ ತಂಗಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ" ಎಂದು ಭೂಮಿಕಾ ಯೋಚಿಸುತ್ತಾರೆ. ಇವರು ತನ್ನ ಅಣ್ಣಾ ಎಂದು ತಿಳಿಯದ ಸುಧಾನಿಗೆ ಅಣ್ಣನ ಪ್ರೀತಿ ಸಿಕ್ಕಿದೆ. ಈಕೆ ತನ್ನ ತಂಗಿ ಎಂದು ತಿಳಿಯದೆ ಇದ್ದರೂ ತಂಗಿಗೆ ಪ್ರೀತಿಯ ತುತ್ತು ನೀಡುತ್ತಿದ್ದಾರೆ ಗೌತಮ್. ಇದ್ಯಾವುದೂ ಗೊತ್ತಿಲ್ಲದೆ ಸುಧಾ ಈ ಮನೆಗೆ ಬೇರೆಯವರ ಅಣತಿಯಂತೆ ಬಂದಿರುತ್ತಾರೆ. ಮುಂದಿನ ಸಂಚಿಕೆಗಳಲ್ಲಿ ಅಣ್ಣಾ ತಂಗಿ ರಹಸ್ಯ ತಿಳಿಯುತ್ತ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.