ಪಾಪಪುಣ್ಯ ನ್ಯಾಯನೀತಿ ನನಗೆ ಬೇಡ, ಅಮ್ಮ ಮಾತ್ರ ಸಾಕು- ಸುಧಾಳ ಸ್ವಗತ; ಗೌತಮ್ ಕಾಳಜಿಗೆ ಭೂಮಿಕಾ ಭಾವುಕ- ಅಮೃತಧಾರೆ ಸೀರಿಯಲ್
ಅಮೃತಧಾರೆ ಧಾರಾವಾಹಿಯ ಶನಿವಾರದ (ನವೆಂಬರ್ 23) ಸಂಚಿಕೆಯಲ್ಲಿ ಅಪೇಕ್ಷಾಳಿಗೆ ಪಾರ್ಥ ಲವ್ ಅನಿವರ್ಸರಿ ಪ್ರಯುಕ್ತ ಸರ್‌ಪ್ರೈಸ್ ನೀಡಿದ್ದಾನೆ. ಇನ್ನೊಂದೆಡೆ ಗೌತಮ್ ಭೂಮಿಕಾರ ಒಳ್ಳೆಯತನದ ನಡುವೆ ತಾನು ಕಟ್ಟ ಕೆಲಸ ಮಾಡುತ್ತಿದ್ದೇನೆ ಎಂಬ ಭಾವನೆ ಕಾಡುತ್ತಿದೆ.
ಅಮೃತಧಾರೆ ಧಾರಾವಾಹಿ: ಸುಧಾ ದೇವರ ಮುಂದೆ ಪ್ರಾರ್ಥಿಸುತ್ತಿದ್ದಾಳೆ. "ಜೀವನದಲ್ಲಿ ಮೊದಲ ಬಾರಿಗೆ ನನ್ನ ಮನಸ್ಸಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ನನ್ನಮ್ಮನ ಉಳಿಸಿಕೊಳ್ಳುವುದು ಒಂದೇ ದಾರಿ. ನನಗೆ ಗೌತಮ್ ಮೇಲೆ ಯಾವುದೇ ದ್ವೇಷವಿಲ್ಲ. ಈ ವ್ಯಕ್ತಿಗೆ ಏನು ದ್ವೇಷ ಗೊತ್ತಿಲ್ಲ. ನಾನು ದಾಳವಾಗಿಬಿಟ್ಟಿದ್ದೇನೆ. ಗೌತಮ್‌ಗೆ ಏನೂ ಆಗಬಾರದು. ಅದೇ ರೀತಿ ನನ್ನ ಅಮ್ಮನಿಗೂ ಏನೂ ಆಗಬಾರದು. ಅಮ್ಮ ಮತ್ತು ಗೌತಮ್‌ನಲ್ಲಿ ನನ್ನ ಆಯ್ಕೆ ಅಮ್ಮನೇ. ಯಾಕೆ ದೇವರೇ ಹೀಗೆ ಮಾಡಿದೆ. ಎಲ್ಲಾ ಗೊತ್ತಿದ್ದೂ ನನ್ನನ್ನೂ ಆ ಮನೆಗೆ ಯಾಕೆ ಸೇರಿಸಿದೆ. ದಯವಿಟ್ಟು ನನ್ನನ್ನು ಆ ಇಕ್ಕಟ್ಟಿನಿಂದ ಪಾರು ಮಾಡು. ನನ್ನನ್ನು ಯಾಕೆ ಇಷ್ಟು ಪರೀಕ್ಷೆ ಮಾಡುತ್ತಿದ್ದೀಯ. ನೀನು ಇದ್ದೀಯ ಎನ್ನುವುದನ್ನು ಈಗಲಾದರೂ ತೋರಿಸು. ನನ್ನನ್ನು ಈ ಸಂಕಷ್ಟದಿಂದ ಪಾರು ಮಾಡು. ಪಾಪ ಪುಣ್ಯ ನ್ಯಾಯ ನೀತಿ ನನಗೆ ಯಾವುದೂ ಕಾಣಿಸುತ್ತಿಲ್ಲ, ನನಗೆ ಕಾಣಿಸುತ್ತಿರುವುದ ನನ್ನಮ್ಮ ಮಾತ್ರ. ನನ್ನ ಕ್ಷಮಿಸಿಬಿಡು" ಎಂದೆಲ್ಲ ಸುಧಾ ದೇವರ ಮುಂದೆ ತನ್ನ ಸಂಕಟವನ್ನು ಹೇಳಿಕೊಳ್ಳುತ್ತಾಳೆ. ಈಕೆಗೆ ತಾನು ಹೋಗಿರುವುದು ತನ್ನ ಸಹೋದರನ ಮನಗೆ ಎಂದು ಗೊತ್ತಿಲ್ಲ. ತಾನು ಆಗುಂತಕನ ಮಾತು ಕೇಳಿದರೆ ತೊಂದರೆ ಆಗುವುದು ತನ್ನ ಅಣ್ಣನಿಗೆ ಎನ್ನುವುದೂ ಗೊತ್ತಿಲ್ಲ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ನವೆಂಬರ್ 23, 2024
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಸುಧಾ ಯಾಕೆ ಬಂದಿಲ್ಲ ಎಂದು ಮಾತನಾಡುತ್ತಿದ್ದಾರೆ. ಗೌತಮ್ ತನ್ನ ಪತ್ನಿಯ ಕಾಳಜಿ ವಹಿಸುತ್ತಾನೆ. ಆತನೇ ಆಕೆಯನ್ನು ಬಾತ್ ರೂಂಗೆ ಕಳುಹಿಸುತ್ತಾನೆ. ಮುಖ ತೊಳೆಯುತ್ತಾನೆ. ಕಾಫಿ ತಂದುಕೊಡುತ್ತಾನೆ. ಒಟ್ಟಾರೆ ಪ್ರೀತಿಯ ಗಂಡನಾಗಿ ಎಲ್ಲಾ ಸೇವೆ ಮಾಡುತ್ತಿದ್ದಾರೆ ಡುಮ್ಮಸರ್. ಭೂಮಿಕಾಳ ಕೈ ರಿಕವರಿ ಆಗಿದೆ. ಇನ್ನೊಂದೆಡೆ ಜೈದೇವ್ ರೆಡಿಯಾಗುತ್ತಿದ್ದಾನೆ. ಮಲ್ಲಿ ಆಕೆಯ ಕೂದಲು ಕಟ್ ಮಾಡಿ ಎನ್ನುತ್ತಾಳೆ. ಕೂದಲು ಶಾರ್ಟ್ ಮಾಡಿ ಎನ್ನುತ್ತಾಳೆ. ಇನ್ನು ಎರಡು ವಾರ ಬಿಟ್ಟುಕೊಂಡು ಕಟ್ಟಿಂಗ್ ಮಾಡುತ್ತೇನೆ ಎನ್ನುತ್ತಾನೆ. ಈ ಸಮಯದಲ್ಲಿ ಈತನಿಗೆ ಕಾಲ್ ಬರುತ್ತದೆ. ಮಲ್ಲಿಯನ್ನು ಕಾಫಿ ಮಾಡಲು ಕಳುಹಿಸಿ ಚಮಕ್‌ಚಲ್ಲೋ ಜತೆ ಮಾತನಾಡುತ್ತಾನೆ. "ನಿಮ್ಮ ಮನೆಯಲ್ಲಿ ಏನೆಲ್ಲ ಆಗಿದೆ, ನನಗೆ ಯಾಕೆ ಹೇಳಿಲ್ಲ" ಎಂದು ಅವಳು ಕೇಳುತ್ತಾನೆ. "ನಿನಗೆ ಹೇಗೆ ಗೊತ್ತಾಯ್ತು" ಎಂದು ಕೇಳುತ್ತಾನೆ. "ಇವತ್ತು ಬೆಂಗಳೂರಿಗೆ ಬಂದಿದ್ದೇನೆ. ನನ್ನನ್ನು ಭೇಟಿಯಾಗಿ" ಎನ್ನುತ್ತಾಳೆ. ಆಗ ಮಲ್ಲಿ ಬರುತ್ತಿದ್ದಾಳೆ ಎಂದುಕೊಂಡು ಆಫೀಸ್‌ನವರಲ್ಲಿ ಮಾತನಾಡುವಂತೆ ನಾಟಕ ಮಾಡುತ್ತಾನೆ.
ಸುಧಾ ಎಂದಿನಂತೆ ಕೆಲಸಕ್ಕೆ ಬಂದಿದ್ದಾಳೆ. ಗೌತಮ್ ದೇವರಿಗೆ ಕೈ ಮುಗಿಯುತ್ತ ಇದ್ದಾರೆ. ಆ ಸಮಯದಲ್ಲಿ ಆಕೆ ಅಡಗಿಕೊಳ್ಳುತ್ತಾಳೆ. "ನಿನ್ನೆಯೇ ಹೇಳಿದ್ದೇನೆ. ವಿಧವೆ ಎಂದೆಲ್ಲ ಮೂಢನಂಬಿಕೆ ಪಾಲಿಸಬೇಡ. ನಿನ್ನ ಜೀವನದಲ್ಲಿ ಏನೆಲ್ಲ ಆಗಿದೆ ಅದಕ್ಕೆ ನೀನು ಕಾರಣ. ಈ ಮನೆಯಲ್ಲಿ ಮೂಢ ನಂಬಿಕೆ ಯಾರೂ ನಂಬೋದಿಲ್ಲ" ಎಂದು ಹೇಳುತ್ತಾರೆ ಗೌತಮ್. "ನಿನ್ನ ಮನೆ ಅಂದುಕೋ. ನನ್ನನ್ನು ಅಣ್ಣಾ ಎನ್ನುತ್ತಿ, ಭೂಮಿಕಾರನ್ನು ಅತ್ತಿಗೆ ಎನ್ನುತ್ತಿ" ಎಂದೆಲ್ಲ ಹೇಳಿದಾಗ ಸುಧಾಳ ಮನಸ್ಸಲ್ಲಿ ಏನೆಲ್ಲ ಆಲೋಚನೆ. "ಇವರು ನನಗೆ ಮನೆಯವರ ಸ್ಥಾನ ನೀಡಿದ್ದಾರೆ. ಇಷ್ಟು ಒಳ್ಳೆಯ ಮನಸ್ಸು ಇರುವವರಿಗೆ ನಾನು ಮೋಸ ಮಾಡುತ್ತಿದ್ದೇನೆ" ಎಂದು ಸುಧಾ ಅಂದುಕೊಳ್ಳುತ್ತಾಳೆ. ಎಂದಿನಂತೆ ಭೂಮಿಕಾಳ ಕೆಲಸ ಮಾಡುತ್ತಾಳೆ. ಭೂಮಿಕಾಳ ತಲೆಗೆ ಲೋಬಾನ ನೀಡುತ್ತಾಳೆ. ಇಬ್ಬರು ಸಾಕಷ್ಟು ಮಾತನಾಡುತ್ತಾರೆ. ಭೂಮಿಕಾಳಿಗೆ ಸುಧಾ ತುಂಬಾ ಇಷ್ಟವಾಗಿದ್ದಾಳೆ. ತುಂಬಾ ಮಾತನಾಡಿದ ಬಳಿಕ ಮನಸ್ಸಲ್ಲಿ "ಇವರೆಲ್ಲ ಇಷ್ಟು ಪ್ರೀತಿ ಕೊಡ್ತಾರೆ. ನಾನು ಇವರಿಗೆಲ್ಲ ಮೋಸ ಮಾಡಬೇಕ" ಎಂದು ಸುಧಾಳ ಸ್ವಗತ ಇರುತ್ತದೆ. ಇನ್ನೊಂದೆಡೆ ಆನಂದ್ ಮತ್ತು ಗೌತಮ್ ಮಾತನಾಡುತ್ತಾರೆ. ಅಲ್ಲೂ ಸುಧಾಳನ್ನು ಹೊಗಳುತ್ತಿದ್ದಾರೆ.
ಅಪೇಕ್ಷಾಗೆ ಸರ್‌ಪ್ರೈಸ್ ನೀಡಿದ ಪಾರ್ಥ
ಪಾರ್ಥ ಅಪೇಕ್ಷಾಳ ಕಣ್ಣಿಗೆ ಕೈ ಹಿಡಿದುಕೊಂಡು ಕರೆದುಕೊಂಡು ಬರುತ್ತಿದ್ದಾನೆ. ಅವಳಿಗೆ ಅಚ್ಚರಿಯಾಗುತ್ತದೆ. ಕಣ್ಣು ತೆರೆದಾಗ ಅಲ್ಲಿ ಕೇಕ್ ಇರುತ್ತದೆ. ತಮ್ಮ ಲವ್ ಅನಿವರ್ಸರಿಗೆ ಪಾರ್ಥ ಹೀಗೆ ಅಚ್ಚರಿ ನೀಡಿದ್ದಾನೆ. ಸಹಜವಾಗಿ ಅಪೇಕ್ಷಾಳಿಗೆ ತುಂಬಾ ಖುಷಿಯಾಗಿದೆ. ಹಳೆಯ ಆ ದಿನಗಳು ನೆನಪಾಗುತ್ತವೆ. ಮೊದಲು ಪ್ರಪೋಸ್ ಮಾಡಿದ ದಿನ, ಆ ಪ್ರೀತಿಯ ಕ್ಷಣಗಳಲ್ಲಿ ಇಬ್ಬರೂ ರೋಮಾಂಚನಗೊಳ್ಳುತ್ತಾರೆ. "ಈ ಸರ್‌ಪ್ರೈಸ್ ನಾನು ನಿರೀಕ್ಷಿಸಿರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ" ಎಂದು ಅಪೇಕ್ಷಾ ಹೇಳುತ್ತಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ