ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ಗೌತಮ್, ಮಗನ ನೆನೆದು ಭಾಗ್ಯಾ ಭಾವುಕ, ಶಾಕುಂತಲಾರ ನಿದ್ದೆ ಕಸಿದ ಅಶರೀರವಾಣಿ- ಅಮೃತಧಾರೆ ಧಾರಾವಾಹಿ
Nov 26, 2024 09:51 AM IST
ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ಗೌತಮ್, ಮಗನ ನೆನೆದು ಭಾಗ್ಯಾ ಭಾವುಕ- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ನವೆಂಬರ್ 26ರ ಸಂಚಿಕೆ: ಇಂದಿನ ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಮ್ಮನ ನೆನಪಾಗಿ ಗೌತಮ್ ಕಣ್ಣೀರಿಟ್ಟಿದ್ದಾನೆ. ಇದೇ ಸಮಯದಲ್ಲಿ ಇನ್ನೊಂದೆಡೆ ಅಮ್ಮನಿಗೂ ತನ್ನ ಮಗನ ನನೆಪಾಗಿದೆ. ಇದೇ ಸಮಯದಲ್ಲಿ ಶಾಕುಂತಲಾದೇವಿಗೆ ರಾತ್ರಿ ನಿದ್ರೆಯಲ್ಲೂ ಭಾಗ್ಯಾಳ ಮಾತು ಕೇಳಿಸುತ್ತದೆ.
ಅಮೃತಧಾರೆ ನವೆಂಬರ್ 26ರ ಸಂಚಿಕೆ: ಮಂಗಳವಾರದ ಸಂಚಿಕೆಯಲ್ಲಿ ಮಧ್ಯರಾತ್ರಿ ಭಯದಿಂದ ಲಕ್ಷ್ಮಿಕಾಂತ್ ತನ್ನ ಅಕ್ಕ ಶಕುಂತಲಾಕೊಠಡಿಗೆ ಬಂದಿದ್ದಾನೆ. "ನಮಗೆ ಏನೋ ಕಾದಿದೆ" ಎಂಬ ಭಯ ವ್ಯಕ್ತಪಡಿಸುತ್ತಾನೆ. "ನನ್ನ ಎಡಗಣ್ಣು ಅದುರುತ್ತಿದೆ, ಸಿಸ್ಟರ್, ಈ ಮನೆಯಲ್ಲಿ ಯಡವಟ್ಟು ಆಗುವುದು ಗ್ಯಾರಂಟಿ" ಎಂದು ಹೇಳುತ್ತಾನೆ. ಒಟ್ಟಾರೆ ಶಕುಂತಲಾದೇವಿಯನ್ನು ಭಯಗೊಳಿಸುತ್ತಾನೆ. ಆಕೆ ಈತನ ಎದುರು ಧೈರ್ಯವಂತೆ ರೀತಿ ವರ್ತಿಸುತ್ತಾರೆ. ಆದರೆ, ಮನಸ್ಸಿನೊಳಗೆ ಭಯ ಇದ್ದೇ ಇದೆ. ಇನ್ನೊಂದೆಡೆ ಗೌತಮ್ ದಿವಾನ್ ತನ್ನ ಗೊತ್ತಿಲ್ಲದ ಸಹೋದರಿ ಸುಧಾಳಿಗೆ ಕೈತುತ್ತು ತಿನ್ನಿಸಿದ್ದಾನೆ. ಇದೀಗ ನಿದ್ದೆ ಮಾಡುವ ಸಮಯ. ಸುಧಾಳಿಗೆ ಸುಖದ ಸುಪ್ಪತ್ತಿಗೆ ಗೊತ್ತಿಲ್ಲ. ಆ ಬೆಡ್‌ನಲ್ಲಿ ಮಲಗೋದಿಲ್ಲ ಎನ್ನುತ್ತಾಳೆ. ಭೂಮಿಕಾ ಆಕೆಯನ್ನು ಒಪ್ಪಿಸಲು ಯತ್ನಿಸುತ್ತಾರೆ. ಸುಧಾಳಿಗೆ ವಿಚಿತ್ರ ಅನಿಸುತ್ತದೆ. ಒಂದಿಷ್ಟು ಭಾವನಾತ್ಮಕ ಮಾತು ನಡೆಯುತ್ತದೆ. "ನೀವು ಗೌತಮ್ ಪ್ರಾಣ ಉಳಿಸಿದ್ದೀರಿ. ಏನೂ ಯೋಚನೆ ಮಾಡಬೇಡಿ. ನೀವು ನಮ್ಮವರಲ್ಲಿ ಒಬ್ಬರಾಗಿದ್ದೀರಿ. ಮಲಗಿ" ಎಂದು ಭೂಮಿಕಾ ಹೇಗೋ ಒಪ್ಪಿಸುತ್ತಾರೆ. ಹಾಸಿಗೆಯಲ್ಲಿ ಮಲಗುತ್ತಾರೆ. ಮಧ್ಯರಾತ್ರಿ ಎದ್ದು "ಇಷ್ಟೊಂದು ಪ್ರೀತಿ ನೀಡ್ತಾರೆ, ನಾನು ಹೇಗೆ ಇವರಿಗೆ ಕೆಟ್ಟದು ಮಾಡ್ಲಿ" ಎಂದು ಸುಧಾಳ ಸ್ವಗತ ಇರುತ್ತದೆ.
ಇನ್ನೊಂದೆಡೆ ಶಕುಂತಲಾ ನಿದ್ರೆ ಮಾಡಿದ್ದಾರೆ. ತಕ್ಷಣ ಎಚ್ಚರವಾಗುತ್ತದೆ. "ನನ್ನ ನೆಮ್ಮದಿ ಹಾಳು ಮಾಡಿ ನೀನು ಸುಖವಾಗಿ ಮಲಗಿದ್ದೇಯ ಶಾಕುಂತಲಾ" ಎಂಬ ಅಶರೀರವಾಣಿ ಕೇಳಿಸುತ್ತದೆ. ಈ ಮೂಲಕ ಈಕೆಯ ಮನದಲ್ಲಿಯೂ ಭಯ ಹೆಚ್ಚಾಗಿದೆ. ಭಯದಿಂದ ಎದ್ದು ಡೈರಿ ತೆಗೆಯುತ್ತಾರೆ. ಡೈರಿಯೊಳಗಿನ ಫೋಟೋ ತೆಗೆಯುತ್ತಾರೆ. ಅದು ಭಾಗ್ಯ ಮತ್ತು ಮಗುವಿನ ಫೋಟೋ. "ನೀನು ಹೇಗೆ ಬದುಕಿಬಿಟ್ಟೆ. ತುಂಬಾ ದಿನ ನಿನ್ನನ್ನು ಬದುಕಲು ಬಿಡೋಲ್ಲ" ಎನ್ನುತ್ತಾಳೆ.
ಮಧ್ಯರಾತ್ರಿ ಜೈದೇವ್ ಎಲ್ಲೋ ಹೊರಗೆ ಹೋಗುತ್ತಿದ್ದಾನೆ. ಆಗ ಗೌತಮ್ ಎದುರು ಸಿಗುತ್ತಾನೆ. ಈತ ಚಮಕ್‌ಚಲ್ಲೋಳನ್ನು ಮೀಟ್ ಆಗಲು ಹೋಗುತ್ತಿದ್ದಾನೆ. ಗೌತಮ್‌ಗೆ "ಗೆಳೆಯ ಬರ್ತ್‌ಡೇ ಪಾರ್ಟಿಗೆ ಹೋಗುತ್ತಿದ್ದೇನೆ" ಎಂದು ಹೇಳುತ್ತಾನೆ. ಗೌತಮ್‌ನ ಹೇಗೋ ಮ್ಯಾನೇಜ್ ಮಾಡಿ ಹೊರಗೆ ಬರುತ್ತಾನೆ. ದಿಯಾಳನ್ನು ಭೇಟಿಯಾಗುತ್ತಾನೆ. ಒಟ್ಟಾರೆ ತನ್ನ ಲವರ್‌ನ ಭೇಟಿಯಾಗುವ ಮೂಲಕ ಹಳೆ ಚಾಳಿ ಮುಂದುವರೆಸಿದ್ದಾನೆ. ಆಕೆಯ ಜತೆ ಸಾಕಷ್ಟು ಸಮಯ ಕಳೆಯುತ್ತಾನೆ.
ಬೆಳಗ್ಗೆ ಸುಧಾಳ ಮಗಳಿಗೆ ಎಚ್ಚರವಾಗಿದೆ. ಅಜ್ಜಿ ಬಿಕ್ಕಳಿಸುತ್ತಿದ್ದಾಳೆ. ಈಕೆ ನೀರು ತರ್ತಿನಿ ಅನ್ನುತ್ತಾಳೆ. ನೀರು ಖಾಲಿಯಾಗಿರುತ್ತದೆ. ನೀರು ತರಲು ಹೋಗುತ್ತಾಳೆ.
ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ಗೌತಮ್
ಇನ್ನೊಂದೆಡೆ ಗೌತಮ್ ಮಲಗಿದ್ದಾನೆ. ಆತನಿಗೆ ಅಮ್ಮನ ನೆನಪಾಗುತ್ತದೆ. "ಎದ್ದೇಳು ಗುಂಡೂ, ನಾನು ಅಮ್ಮ ಬಂದಿದ್ದೀನಿ" ಎಂಬ ಧ್ವನಿ ಕೇಳುತ್ತದೆ. ತಕ್ಷಣ ಎದ್ದೇಳುತ್ತಾರೆ. ಏನಾಯ್ತು ಎಂದು ಭೂಮಿಕಾ ಕೇಳಿದಾಗ "ಅಮ್ಮ ಕನಸಲ್ಲಿ ಬಂದಿದ್ರು. ಗುಂಡೂ ನಾನು ಬಂದಿದ್ದೇನೆ ಎಂದ್ಲು" ಎನ್ನುತ್ತಾರೆ. "ನನ್ನಮ್ಮ ಕೂಡ ಎಲ್ಲೋ ನನ್ನನ್ನು ಕನವರಿಸುತ್ತಾ ಇದ್ದಾಳೆ. ಅವಳಿಗೂ ನನ್ನ ನೆನಪಾಗಿರಬಹುದು" ಎಂದು ಹೇಳುತ್ತಾನೆ. "ಹೆತ್ತಕರಳು, ಅಮ್ಮನಿಗೆ ನೆನಪಾಗಿರಬಹುದು. ಆಕೆಯ ಪ್ರತಿ ಹೆಜ್ಜೆಯಲ್ಲೂ ನೀವು ಇರ್ತಿರ. ಅವರಿಗೆ ನೆನಪು ಆಗಿರಬಹುದು. ಅವರು ಅನುಭವಿಸುತ್ತಿರುವ ನೋವು, ನಿಮಗಿಂತ ದೊಡ್ಡದು" ಎಂದು ಹೇಳುತ್ತಾರೆ ಭೂಮಿಕಾ. "ನನ್ನ ಕೈಯಲ್ಲಿ ಆಗುತ್ತಿಲ್ಲ. ನನಗೆ ಅಮ್ಮ ಬೇಕು" ಎಂದು ಗೌತಮ್ ಭಾವುಕರಾಗಿ ಅಳುತ್ತಾರೆ. ಇದೇ ಸಮಯದಲ್ಲಿ ಭಾಗ್ಯಾ ಕೂಡ ಮತ್ತೊಂದೆಡೆ ಎದ್ದೇಳುತ್ತಾರೆ. ಅಮ್ಮನ ನೆನಪಲ್ಲಿ ಗೌತಮ್ ಅಳುವುದನ್ನು ನೋಡಿ ಭೂಮಿಕಾ ಕೂಡ ಭಾವುಕರಾಗುತ್ತಾರೆ. ಗೌತಮ್‌ಗೆ ಸಮಾಧಾನ ಮಾಡಲು ಯತ್ನಿಸುತ್ತಾರೆ.
ಮರುದಿನ ಅಪೇಕ್ಷಾ ಬಂದು ಭೂಮಿಕಾಳನ್ನು ಭೇಟಿಯಾಗುತ್ತಾಳೆ. ಸುಧಾಳನ್ನು ಮನೆಗೆ ಈ ರೀತಿ ಸೇರಿಸಬಾರದು. ಅಷ್ಟೊಂದು ಹತ್ತಿರ ಹೋಗಬಾರದು ಎಂದೆಲ್ಲ ಅಕ್ಕನಿಗೆ ಬುದ್ಧಿವಾದ ಹೇಳುತ್ತಾಳೆ. "ಆಕೆ ಕೆಲಸಕ್ಕೆ ಬಂದಿರೋದು, ಹೊಟ್ಟೆಪಾಡಿಗೆ ಬಂದಿರೋದು. ಅವಳು ನೋಡಿದ್ರೆ ತವರು ಮನೆಗೆ ಬಂದಂತೆ ಆಡ್ತಾಳೆ. ಇದು ಸ್ವಲ್ಪ ಓವರ್ ಆಗಿಲ್ಲ. ತಪ್ಪು ಅವಳದ್ದಲ್ಲ, ನಿನ್ನದು" ಎಂದು ಅಪೇಕ್ಷಾ ಹೇಳುತ್ತಾಳೆ. "ಯಾರನ್ನು ಎಲ್ಲಿಡಬೇಕೋ, ಅಲ್ಲಿಟ್ಟರೆ ಚಂದ" ಎಂಬ ಮಾತು ಹೇಳುತ್ತಾಳೆ. ಈ ಸಮಯದಲ್ಲಿ ಭೂಮಿಕಾ ಹೆಚ್ಚು ಮಾತನಾಡುವುದಿಲ್ಲ. ಆದರೆ, ಒಂದು ಪ್ರಮುಖ ಮಾತು ಹೇಳುತ್ತಾಳೆ. "ಅಪ್ಪಿ, ಯೋಗಕ್ಕೂ ಯೋಗ್ಯತೆಗೂ ತುಂಬಾ ವ್ಯತ್ಯಾಸ ಇದೆ. ನೀನು ಈ ಮನೆಗೆ ಬಂದಿರೋದು ಯೋಗದಿಂದ, ಯೋಗ್ಯತೆಯಿಂದಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ನೀನು ಆಗ ಹೇಳಿದ್ಯಲ್ಲ ಸ್ಟೇಟಸ್, ಅದು ನಮಗೆ ಸಿಕ್ಕಿರೋದು, ನಾವು ಗಳಿಸಿರೋದಲ್ಲ" ಎಂದು ಹೇಳುತ್ತಾಳೆ ಭೂಮಿಕಾ. "ಇದರಲ್ಲಿ ನಿನ್ನ ಸಾಧನೆಯೂ ಇಲ್ಲ, ನನ್ನ ಸಾಧನೆಯೂ ಇಲ್ಲ. ಅಹಂಕಾರದಿಂದ ಮೆರೆಯೋ ಹಕ್ಕು ನಿನಗೂ ಇಲ್ಲ, ನನಗೂ ಇಲ್ಲ" ಎಂದು ಭೂಮಿಕಾ ಹೇಳಿದಾಗ ಅಪೇಕ್ಷಾ ಮೌನವಾಗುತ್ತಾಳೆ. "ಮನುಷ್ಯತ್ವ ಎನ್ನುವುದು ಎಲ್ಲದಕ್ಕಿಂತ ದೊಡ್ಡ ಐಡೆಂಟೆಟಿ, ಅದನ್ನೇ ಕಳೆದುಕೊಂಡರೆ ಬದುಕಿರುವುದಕ್ಕೆ ಅರ್ಥವೇ ಇಲ್ಲ" ಎಂದು ಹೇಳುತ್ತಾಳೆ.
ಇನ್ನೊಂದೆಡೆ ಭಾಗ್ಯಾ ಎದ್ದು ಗುಂಡೂ ಗುಂಡೂ ಎಂದು ಕನವರಿಸುತ್ತಾಳೆ. ಎದ್ದು ಕುಳಿತ ಅವಳ ಕೈಯಲ್ಲಿ ಗುಂಡುವಿನ ಫೋಟೋ ಇದೆ. ಇನ್ನೊಂದೆಡೆ ಗೌತಮ್ ಕೂಡ ಎದ್ದು ಆಲ್ಬಂ ನೋಡಿ ಅಮ್ಮನ ಫೋಟೋ ನೋಡುತ್ತಾನೆ. ಒಟ್ಟಾರೆ ಅಮ್ಮ ಮಗ ಸದ್ಯದಲ್ಲಿಯೇ ಹತ್ತಿರವಾಗುವ ಸೂಚನೆಯನ್ನು ಸೀರಿಯಲ್ ಡೈರೆಕ್ಟರ್ ನೀಡಿದ್ದಾರೆ ಎಂದುಕೊಳ್ಳಬಹುದು.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ನವೆಂಬರ್ 26, 2024
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).