ಸುಧಾಳನ್ನು ಕೈಗೊಂಬೆ ಮಾಡಿಕೊಂಡಿರುವ ವ್ಯಕ್ತಿ ಯಾರು? ರಮಾಕಾಂತ್‌ಗೆ ಕನಸಲ್ಲಿ ಭಾಗ್ಯಾ ಕಾಟ; ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿಯ ನವೆಂಬರ್ 20ರ ಸಂಚಿಕೆಯಲ್ಲಿ ಭೂಮಿಕಾಳನ್ನು ಸುಧಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾಳೆ. ಇದೇ ಸಮಯದಲ್ಲಿ ಅಪರಿಚಿತ ವ್ಯಕ್ತಿಯ ಕೈಗೊಂಬೆಯಾಗಿರುವ ಕುರಿತು ಸುಧಾಳ ಮನಸ್ಸಲ್ಲಿ ಬೇಸರವಿದೆ. ಸುಧಾಳ ತಾಯಿ ಗುಂಡೂ ಗುಂಡೂ ಕನವರಿಕೆ ಹೆಚ್ಚಾಗಿದೆ.
ಅಮೃತಧಾರೆ ಧಾರಾವಾಹಿ ನವೆಂಬರ್ 20ರ ಸಂಚಿಕೆ: ಸುಧಾ ತನ್ನ ಬಗ್ಗೆ ಭೂಮಿಕಾಳಲ್ಲಿ ಮಾತನಾಡುತ್ತಿದ್ದಾಳೆ. "ಯಾರೂ ಇಲ್ಲದವರಿಗೆ ನೆಂಟ್ರು ಜಾಸ್ತಿ. ಇಡೀ ಪ್ರಪಂಚದಲ್ಲಿ ನೆಂಟ್ರು ಇರುತ್ತಾರೆ" ಎಂದು ಸುಧಾ ಹೇಳುತ್ತಾರೆ. ಒಟ್ಟಾರೆ ಭೂಮಿಕಾಳ ಮನಸ್ಸು ಗೆಲ್ಲುತ್ತಾಳೆ. "ನನ್ನನ್ನು ಕ್ಷಮಿಸಿ ಅಕ್ಕಾ, ನಾನು ಇಲ್ಲಿಗೆ ಬಂದಿರುವುದು ನಿಮ್ಮ ಹಿತೈಷಿಯಾಗಿ ಅಲ್ಲ, ಯಾರದ್ದೋ ಕೈಗೊಂಬೆಯಾಗಿ. ಅವರ ಉದ್ದೇಶ ಏನು. ಅವರು ನನ್ನನ್ನು ಇಲ್ಲಿ ಯಾಕೆ ಕಳುಹಿಸಿದ್ದಾರೆ, ಅದ್ಯಾವುದೂ ನನಗೆ ಗೊತ್ತಿಲ್ಲ. ಆದರೆ, ನನ್ನಿಂದ ನಿಮಗೆ ಏನು ಕಂಟಕ ಆಗುತ್ತದೆ ಎಂಬ ಭಯ ಮಾತ್ರ ಇದೆ" ಎಂದು ಸುಧಾಳ ಸ್ವಗತವೂ ಈ ಸಂದರ್ಭದಲ್ಲಿ ಇರುತ್ತದೆ.
ಅಪರ್ಣಾ ಮನೆಯಲ್ಲಿ ಕುಳಿತಿದ್ದಾಳೆ. "ಚಿನ್ನ ಸ್ಟ್ರಾಂಗ್ ಆಗಿ ಒಂದು ಕಾಫಿ ಮಾಡಿಕೊಡು" ಎಂದು ಆನಂದ್ ಹೇಳುತ್ತಾರೆ. ಯಾಕೆ ಏನಾಯ್ತೆ ಎಂದು ಕೇಳುತ್ತಾರೆ. "ಇಷ್ಟು ದಿನ ಸುಧಾ ಪವರ್‌ಬೂಸ್ಟರ್ ರೀತಿ ಇದ್ದಳು. ಈಗ ಅವಳು ಇಲ್ಲ. ಬೇಸರವಾಗಿದೆ" ಎಂದು ಅಪರ್ಣಾ ಹೇಳುತ್ತಾರೆ. "ನಮ್ಮ ಮನೆಗೆ ಇಷ್ಟು ವರ್ಷ ಸಾಕಷ್ಟು ಜನರು ಬಂದಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡಿ ಹೋಗ್ತಾ ಇದ್ರು. ಇವಳು ಮನಸ್ಸಿಗೆ ಎಂಟ್ರಿ ನೀಡಿದ್ದಾಳೆ. ತುಂಬಾ ಪ್ರೀತಿಯಿಂದ ಕೆಲಸ ಮಾಡಿದ್ದಾಳೆ" ಎಂದು ಆನಂದ್ ಹೇಳುತ್ತಾರೆ. "ಇವಳು ಸಂಬಳಕ್ಕಾಗಿ ಕೆಲಸ ಮಾಡಿದವಳು ಅಲ್ಲ, ಸಂಬಂಧಕ್ಕಾಗಿ ಕೆಲಸ ಮಾಡಿದವಳು" ಎಂದು ಅಪರ್ಣಾ ಹೇಳುತ್ತಾರೆ. ಒಟ್ಟಾರೆ ಇಬ್ಬರೂ ಸುಧಾಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸುಧಾಳ ಮನೆಯಲ್ಲಿ ಮಗಳು ಮಾತನಾಡುತ್ತಿದ್ದಾಳೆ. ಸುಧಾ ಖುಷಿಯಲ್ಲಿದ್ದಾಳೆ. ತಿನ್ನು ಎಂದು ಕೇಸರಿ ಬಾತ್ ನೀಡುತ್ತಾಳೆ. ಹೊಸ ಮನೆಗೆ ಕೆಲಸಕ್ಕೆ ಹೋದೆ, ಅಲ್ಲಿ ಕೊಟ್ರು ಎಂದು ಸುಧಾ ಹೇಳುತ್ತಾಳೆ. ತುಂಬಾ ದೊಡ್ಡ ಮನೆ, ದೊಡ್ಡ ಶ್ರೀಮಂತರ ಮನೆ ಎಂದು ಸುಧಾ ಹೇಳುತ್ತಾಳೆ. "ಅವರ ಹೆಸರು ಏನಮ್ಮ" ಎಂದು ಮಗಳು ಕೇಳುತ್ತಾಳೆ. "ಅವರ ಹೆಸರು ಗೌತಮ್ ದಿವಾನ್ ಅಂತ" ಎಂದು ಸುಧಾ ಹೇಳುತ್ತಾಳೆ. ಹಿನ್ನೆಲೆಯಲ್ಲಿ ಆಕೆಯ ತಾಯಿ "ಗುಂಡೂ" ಎಂದು ಕರೆಯುತ್ತಾರೆ. "ಯಾರಮ್ಮ ಆ ಗುಂಡೂ, ಯಾವಾಗಲೂ ಗುಂಡೂ ಗುಂಡೂ ಎಂದು ಕನವರಿಸ್ತಾ ಇರ್ತಿಯಲ್ವ" ಎಂದು ಸುಧಾ ಕೇಳುತ್ತಾಳೆ. ಸುಧಾ ತನ್ನ ಮಗಳಿಗೆ ಗೌತಮ್ ದಿವಾನ್ ಹೆಸರು ಹೇಳುವಾಗ ಇವರು ಗುಂಡೂ ಗುಂಡೂ ಹೇಳುವುದು ಜಾಸ್ತಿ ಆಗುತ್ತದೆ.
ಗೌತಮ್ ಮತ್ತು ಭೂಮಿಕಾ ಮಾತನಾಡುತ್ತ ಇದ್ದಾರೆ. ಗೌತಮ್‌ಗೆ ಏನೂ ಕೆಲಸವೂ ಉಳಿಸಿಲ್ಲ. ಜ್ಯೂಸ್ ಕುಡಿದೂ ಆಗಿದೆ, ಊಟ ಮಾಡಿಯೂ ಆಗಿದೆ. "ಅವಳು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನನಗೆ ಗೊತ್ತಿತ್ತು" ಎಂದು ಗೌತಮ್ ಹೇಳುತ್ತಾರೆ.
ಸುಧಾ ಮನೆಯಲ್ಲಿದ್ದಾಗ ನಿಗೂಢ ವ್ಯಕ್ತಿಯ ಕಾಲ್ ಬರುತ್ತದೆ. "ಇಷ್ಟು ಹೊತ್ತಿಗೆ ಯಾಕೆ ಕಾಲ್ ಮಾಡಿದೆ ಎಂದು ಭಯಪಡಬೇಡ. ನೀನು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿದ್ದಿ. ಮುಂದೆ ನೀನು ಏನು ಮಾಡಬೇಕು ಎಂದು ಹೇಳುತ್ತಾ ಹೋಗುತ್ತೇನೆ. ನಾನು ಹೇಳಿದ ಕೆಲಸ ಮಾಡಿದ್ರೆ ನಿನ್ನಮ್ಮ ಬದುಕಿ ಉಳಿಯುತ್ತಾರೆ, ಇಲ್ಲವಾದರೆ ನಿನ್ನನ್ನು ನಿನ್ನ ಅಮ್ಮನನ್ನು ಮಗಳನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ" ಎಂದು ಆ ವ್ಯಕ್ತಿ ಹೇಳುತ್ತಾನೆ. ಫೋನ್‌ಕಟ್ ಆದ ಬಳಿಕ ಸುಧಾ ತುಂಬಾ ಹೊತ್ತು ಬೇಸರದಲ್ಲಿ ನಿಲ್ಲುತ್ತಾಳೆ. ಒಟ್ಟಾರೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಸುಧಾ.
ಶಕುಂತಲಾ ಮಲಗಿದ್ದಾಗ ಜೋರಾಗಿ ಗೊರಕೆ ಸದ್ದು ಕೇಳುತ್ತದೆ. ಯಾರೋ ಬೆಡ್ ಶೀಟ್ ಹೊದ್ದು ಅಲ್ಲಿ ಗೊರಕೆ ಹೊಡೆಯುತ್ತಿದ್ದಾರೆ. ಯಾರೂ ಎಂದು ಭಯದಿಂದ ಕೇಳುತ್ತಾಳೆ. ಭಯದಲ್ಲಿ ಮುಸುಕು ಹಾಕಿಕೊಂಡವನು ಆಕೆಯ ಸಹೋದರ ರಮಾಕಾಂತ್. "ಏನಾಗಿದೆ ಅಣ್ಣಾ ನಿನಗೆ" ಎಂದು ಕೇಳುತ್ತಾಳೆ. "ಆ ಭಾಗ್ಯಾ ಮತ್ತೆ ಕನಸಲ್ಲಿ ಬಂದಿದ್ದಳು. ಒಂದು ದಿನವಾದ್ರೆ ಓಕೆ, ಪದೇಪದೇ ಬರ್ತಾ ಇದ್ದಾಳೆ. ಇದನ್ನು ನೋಡಿದ್ರೆ ಅವಳು ಸೀದಾ ಮನೆಗೆ ಬರ್ತಾಳೆ. ಹೆದರಿಕೆ ಆಯ್ತು. ಅದಕ್ಕೆ ಇಲ್ಲಿಗೆ ಬಂದೆ" ಎನ್ನುತ್ತಾನೆ. "ಯಾಕೆ ಇಷ್ಟೊಂದು ಹೆದರಿಕೊಳ್ತಾ ಇದ್ದೀಯ. ಕನಸು ನಿಜವಾಗಿಯೂ ನಡೆಯುವುದಿಲ್ಲ. ಹಾಗೆಲ್ಲ ಆಗೋದಾದರೆ ನಾನು ರಾಣಿಯಾಗುತ್ತಿದ್ದೆ" ಎಂದು ಶಕುಂತಲಾದೇವಿ ಹೇಳುತ್ತಾಳೆ.
"ಭಾಗ್ಯ ಬಂದು, ನಮ್ಮನ್ನು ಮನೆಯಿಂದ ಆಚೆ ಹಾಕಿದ ಕನಸು ಬಿತ್ತು" ಎಂದು ರಮಾಕಾಂತ್ ಹೇಳುತ್ತಾನೆ. "ನಮ್ಮ ವಿಷಯ ತಿಳಿದು ಗೌತಮ್ ತುಪುಕ್ ತುಪುಕ್ ಎಂದು ಹೊರಹಾಕಿದಂತೆ ಇತ್ತು" ಎನ್ನುತ್ತಾನೆ. "ಅವಳು ಇಲ್ಲಿಗೆ ಬರುವುದು ಸುಲಭವಲ್ಲ" ಎನ್ನುತ್ತಾರೆ ಶಕುಂತಲಾ. "ಬದುಕಿದ್ದಾಳೆ ಎಂದರೆ ಬರದೆ ಇರುತ್ತಾಳ" ಎನ್ನುತ್ತಾರೆ ರಮಾಕಾಂತ್. "ಅವಳು ಬಾರದೆ ಇರಲು ಏನು ಮಾಡಬೇಕೆಂದು ಗೊತ್ತು" ಎಂದು ಶಕುಂತಲಾರ ಡೈಲಾಗ್ ಇರುತ್ತದೆ.
ಧಾರಾವಾಹಿ ಹೆಸರು: ಅಮೃತಧಾರೆ
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಧಾರಾವಾಹಿ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ