logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು; ಈಗ ಶಿವು ಏನ್ಮಾಡ್ತಾನೆ?

Annayya Serial: ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು; ಈಗ ಶಿವು ಏನ್ಮಾಡ್ತಾನೆ?

Suma Gaonkar HT Kannada

Nov 06, 2024 10:19 AM IST

google News

ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು

    • ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಾರು ಮುನಿಸಿಕೊಂಡಿದ್ದಾಳೆ. ಪಾರು ಆಡಿದ ಮಾತು ಕೇಳಿ ಶಿವುಗೆ ತಾನು ಈಗ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಆದರೂ ಅವಳ ಮಾತಿಗೆ ಒಪ್ಪಿಕೊಂಡು ಮಾವನ ಮನೆಗೆ ಹೋಗಲು ರೆಡಿಯಾಗಿದ್ದಾನೆ. 
ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು
ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು (ಜೀ ಕನ್ನಡ)

ಪಾರು ಮನೆಗೆ ಬಂದು ಪಾರು ತಾಯಿ ಅವಳನ್ನು ಕರೆದಿದ್ದು ಯಾಕೋ ಪಾರುಗೆ ಇಷ್ಟ ಆಗಲಿಲ್ಲ. ಅವಳಿಗೆ ಏನೋ ಇದೆ ಸಂಚು ಎನ್ನುವುದು ಅರ್ಥ ಆಗಿದೆ. ಆ ಕಾರಣಕ್ಕಾಗಿ ಅವಳು ಎಲ್ಲವನ್ನೂ ಅನುಮಾನದಿಂದ ನೋಡುತ್ತಿದ್ದಾಳೆ. ಆದರೆ ತಾಯಿ ಬಗ್ಗೆ ಅವಳಿಗೆ ಯಾವುದೇ ಅಸಮಾಧಾನ ಇಲ್ಲ. ತಂದೆ ಮಾಡಿದ್ದು ಮಾತ್ರ ಯಾವುದೂ ಸರಿ ಇಲ್ಲ. ಯಾಕೆಂದರೆ ಪಾರು ಜೀವನವನ್ನೇ ಅವನು ಹಾಳು ಮಾಡಿದ್ದಾನೆ. ಹೀಗಿರುವಾಗ ಮತ್ಯಾಕೆ ನನ್ನ ಮನೆಗೆ ಕರಿತಾ ಇದಾನೆ? ಅನ್ನೊದು ಅವಳಿಗೆ ಬಂದ ಪ್ರಶ್ನೆ. ಇನ್ನು ಶಿವು ತುಂಬಾ ಖುಷಿಯಾಗಿದ್ದಾನೆ. ಮಾವ ಯಾವತ್ತೂ ನನ್ನ ಮುಖ ನೋಡಲ್ಲ ಅಂತ ಅಂದುಕೊಂಡಿದ್ದೆ ಆದ್ರೆ ಈಗ ಮಾವಾನೇ ಕರಿತಿದಾನೆ ಎಂದು ಖುಷಿಯಾಗಿದ್ದಾನೆ.

ಒಂದು ಕ್ಷಣ ಕೂಡ ಯೋಚನೆ ಮಾಡದೆ ಅವನು ಒಪ್ಪಿಕೊಂಡಿದ್ದಾನೆ. ನಡಿ ಅತ್ತೆ ನಾನು ಬತ್ತೀನಿ ಎಂದು ಹೇಳುತ್ತಾ ಹೊರಡಲು ಸಿದ್ಧನಾಗಿದ್ದಾನೆ. ಆದರೆ ಪಾರು ಅವನನ್ನು ತಡೆದಿದ್ದಾಳೆ. ಇಲ್ಲ ನನಗೆ ಯಾಕೋ ಅಪ್ಪನ ಮೇಲೆ ಅನುಮಾನ ಎಂದು ಹೇಳಿದ್ದಾಳೆ. ಅದೇ ದಿನ ರಾತ್ರಿ ಶಿವುನ ಕರೆದು ಅವನೊಟ್ಟಿಗೆ ಮಾತಾಡಿದ್ದಾಳೆ. “ನನಗಂತೂ ಆ ಮನೆಗೆ ಮತ್ತೆ ಕಾಲಿಡೋದಕ್ಕೆ ಒಂದು ಚೂರೂ ಇಷ್ಟ ಇಲ್ಲ. ಅಷ್ಟಿದ್ದೂ ನಿನಗೆ ಮತ್ತೆ ಅಲ್ಲಿಗೆ ಹೋಗುವ ಆಸೆ ಇದ್ದರೆ ನೀನೂ ನನ್ನ ಮಾತಿಗೆ ಒಪ್ಪಿಕೊಳ್ಳಬೇಕು” ಎಂದು ಹೇಳುತ್ತಾಳೆ.

ಅಂತದ್ದೇನಿದೆ ಎಂದು ಶಿವುಗೂ ಕುತೂಹಲ ಆಗುತ್ತದೆ. ಅವನು ಆಯ್ತು ಹೇಳು ಎನ್ನುತ್ತಾ ಅವಳು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ. ಅವಳು ತನಗೆ ಮತ್ತೆ ತವರಿಗೆ ಬರೋಕೆ ಇಷ್ಟ ಇಲ್ಲ. ಹಾಗೇನಾದ್ರೂ ನಾನು ಬರ್ಲೇಬೇಕು ಅಂದ್ರೆ ನೀನು ಅಲ್ಲಿ ಹೋಗಿ ನೆಲದ ಮೇಲೆ ಅಥವಾ ನಮ್ಮಪ್ಪನ ಕಾಲ ಕೇಳಗಡೆ ಕೂತ್ರೆ ನಂಗೆ ಇಷ್ಟ ಆಗೋದಿಲ್ಲ. ಮನೆ ಅಳಿಯ ಯಾವ ರೀತಿ ಇರ್ತಾನೋ ಅದೇ ರೀತಿ ನೀನು ಗತ್ತು ಗಾಂಭೀರ್ಯದಿಂದ ವರ್ತನೆ ಮಾಡ್ಬೇಕು ಎಂದು ಹೇಳುತ್ತಾಳೆ. ಅದನ್ನು ಕೇಳಿ ನಿಧಾನಕ್ಕೆ ಆಲೋಚಿಸಿ ನಂತರ ವಲ್ಲದ ಮನಸಿನಿಂದ ಅಣ್ಣಯ್ಯ ಒಪ್ಪಿಕೊಳ್ಳುತ್ತಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ