logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣ ಹಾಕಿದ ಗೆರೆನ ಜೀವ ಹೋದ್ರು ದಾಟದ ತಂಗಿಯರಿಗೆ ಕಷ್ಟ ಕೊಡೋದು ಸರಿನಾ? ಅಣ್ಣಯ್ಯನನ್ನು ಪ್ರಶ್ನೆ ಮಾಡಿದ ಪಾರು

Annayya Serial: ಅಣ್ಣ ಹಾಕಿದ ಗೆರೆನ ಜೀವ ಹೋದ್ರು ದಾಟದ ತಂಗಿಯರಿಗೆ ಕಷ್ಟ ಕೊಡೋದು ಸರಿನಾ? ಅಣ್ಣಯ್ಯನನ್ನು ಪ್ರಶ್ನೆ ಮಾಡಿದ ಪಾರು

Suma Gaonkar HT Kannada

Oct 29, 2024 02:34 PM IST

google News

ಅಣ್ಣಯ್ಯನನ್ನು ಪ್ರಶ್ನೆ ಮಾಡಿದ ಪಾರು, ತಂಗಿಯರ ಪರ ನಿಂತ ಪಾರು

    • ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಾರು ತಂಗಿಯರ ಪರ ನಿಂತಿದ್ದಾಳೆ. ಅಣ್ಣಯ್ಯ ಯಾಕೆ ತಂಗಿಯರಿಗೆ ತುಂಬಾ ಕಟ್ಟಳೆಗಳನ್ನು ಹಾಕುತ್ತಾನೆ ಎಂದು ಪ್ರಶ್ನೆ ಮಾಡಿದ್ದಾಳೆ. ಅಣ್ಣಯ್ಯ ಈ ರೀತಿ ಮಾಡುತ್ತಿರುವುದು ಸರಿ ಅಲ್ಲ ಎಂದಿದ್ದಾಳೆ. 
 ಅಣ್ಣಯ್ಯನನ್ನು ಪ್ರಶ್ನೆ ಮಾಡಿದ ಪಾರು, ತಂಗಿಯರ ಪರ ನಿಂತ ಪಾರು
ಅಣ್ಣಯ್ಯನನ್ನು ಪ್ರಶ್ನೆ ಮಾಡಿದ ಪಾರು, ತಂಗಿಯರ ಪರ ನಿಂತ ಪಾರು (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಾರು ಮಾತು ಕೇಳಿ ಅಣ್ಣಯ್ಯ ಬದಲಾಗಿದ್ದಾನೆ. ಇಷ್ಟು ದಿನ ತಂಗಿಯರಿಗೆ ಬರಿ ನಿಯಮಗಳನ್ನು ಹಾಕಿ ಅವರಿಷ್ಟದಂತೆ ಬದುಕಲು ಯಾಕೆ ಬಿಟ್ಟಿಲ್ಲ ಎಂದು ಪಾರು ಪ್ರಶ್ನೆ ಮಾಡಿದ್ದಾಳೆ. ಅಣ್ಣಯ್ಯ ಮನೆಯಲ್ಲಿ ಇಲ್ಲದಿರುವ ಸಂದರ್ಭದಲ್ಲಿ ಮಾತ್ರ ತಂಗಿಯರು ಟಿವಿ ನೋಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಅವನು ಇಲ್ಲದ ಸಮಯದಲ್ಲಿ ಮಾತ್ರ ಮೊಬೈಲ್‌ ಬಳಕೆ ಮಾಡುತ್ತಾರೆ. ಇದೆಲ್ಲವನ್ನೂ ಪಾರು ಮನೆಯಲ್ಲೇ ಇರುವುದರಿಂದ ಕಂಡುಕೊಂಡಿರುತ್ತಾಳೆ. ಹಾಗಾಗಿ ಅವಳಿಗೆ ಇಷ್ಟೆಷ್ಟ ನಿಯಮಗಳನ್ನು ಪಾಲಿಸುತ್ತಾ ಇವರು ಬದುಕುತ್ತಿರುವುದು ಸರಿ ಅಲ್ಲ ಎಂದು ಅನಿಸುತ್ತದೆ.

ಆದರೆ ಅಣ್ಣಯ್ಯನಿಗೆ ಇವರು ಟಿವಿ ನೋಡುವ ಅಥವಾ ಮೊಬೈಲ್‌ ಬಳಕೆ ಮಾಡುವ ಯಾವ ವಿಷಯಗಳೂ ತಿಳಿದಿರುವುದಿಲ್ಲ. ಆದರೆ ಮಡಿಕೆಯಲ್ಲಿ ಮೊಬೈಲ್ ರಿಂಗ್ ಆದ ತಕ್ಷಣ ಅವನಿಗೆ ಗೊತ್ತಾಗುತ್ತದೆ. ಹೋಗಿ ಮೊಬೈಲ್ ಇರುವ ಜಾಗವನ್ನು ಹುಡುಕಿ ನೋಡುತ್ತಾನೆ. ನೋಡಿದಾಗ ಮೊಬೈಲ್ ಸಿಗುತ್ತದೆ. ಆ ನಂತರದಲ್ಲಿ ಎಲ್ಲರನ್ನೂ ಕರೆದು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಬೈಯ್ಯಲು ಆರಂಭಿಸುತ್ತಾನೆ. ಇದು ಪಾರುಗೆ ಇಷ್ಟ ಆಗುವುದಿಲ್ಲ. ಅವಳು ಅಣ್ಣಯ್ಯನಿಗೆ ತಿರುಗುತ್ತರ ನೀಡುತ್ತಾಳೆ. ಈಗ ತಂಗಿಯರಿಗೂ ಅತ್ತಿಗೆ ಅಂದ್ರೆ ಅಚ್ಚುಮೆಚ್ಚಾಗಿದ್ದಾಳೆ.

ಯಾಕೆ ಮಾವ ಅವರು ಮೊಬೈಲ್ ಬಳಕೆ ಮಾಡ್ಬಾರ್ದಾ? ಈಗ ಜಗತ್ತು ಎಷ್ಟೊಂದು ಮುಂದುವರೆದಿದೆ. ಆದ್ರೆ ನೀನು ಮಾತ್ರ ಇವರನ್ನು ಕೂಡಾಕಿದೀಯಾ. ಪ್ರಪಂಚ ನೋಡೋಕೆ ಬಿಡ್ತಾ ಇಲ್ಲ. ನೀನು ಮಾಡ್ತಾ ಇರೋದು ಸರಿಯಲ್ಲ ಎಂದು ಹೇಳುತ್ತಾಳೆ. ಆಗ ಅಣ್ಣಯ್ಯನಿಗೆ ಪಾರು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ಸರಿ ಅನಿಸಿದರೂ ಪೂರ್ತಿಯಾಗಿ ಒಪ್ಪಿಕೊಳ್ಳುವುದಿಲ್ಲ. ನಂತರ ನಿನ್ನ ತಂಗಿಯರು ಇದುವರೆಗೂ ಯಾವ ತಪ್ಪನ್ನೂ ಮಾಡಿಲ್ಲ. ಎಷ್ಟು ಒಳ್ಳೆಯವರು ಅಂತವರಿಗೆ ನೀನು ಈ ರೀತಿ ಶಿಕ್ಷೆ ಕೊಡೋದು ಸರಿನಾ? ಎಂದುಉ ಪ್ರಶ್ನೆ ಮಾಡುತ್ತಾನೆ.

ಅದನ್ನು ಕೇಳಿದ ನಂತರ ಶಿವುಗೆ ಹೌದಲ್ಲ ಎಂದು ಅನಿಸುತ್ತದೆ. ತನ್ನ ತಂಗಿಯರು ಒಳ್ಳೆಯವರು ಎನ್ನೋದು ಅವನಿಗೆ ಮೊದಲಿನಿಂದಲೇ ತಿಳಿದಿದ್ದರೂ ಯಾರಾದರೂ ಹೇಳಿದರೆ ಅವನು ಇನ್ನಷ್ಟು ಭಾವುಕನಾಗುತ್ತಾನೆ. ಅದೇ ರೀತಿ ಈಗಲೂ ಆಗಿದೆ. ನಂತರ ತನ್ನ ತಂಗಿಯರ ಹತ್ತಿರ ಹೋಗಿ ಕ್ಷಮೆ ಕೇಳುತ್ತಾನೆ. “ಈ ದಡ್ಡನಿಗೆ ಇದೆಲ್ಲ ಅರ್ಥಾನೇ ಆಗಿಲ್ಲ. ಒಬ್ಬೊಬ್ಬರಿಗೂ ಒಂದೊಂದು ಮೊಬೈಲ್‌ ಕೊಡಸ್ತೀನಿ ನಾನು” ಎಂದು ಹೇಳುತ್ತಾನೆ. ಆಗ ದೊಡ್ಡ ತಂಗಿ ರತ್ನ ಹೇಳುತ್ತಾಳೆ “ಇಲ್ಲ ಅಣ್ಣ ನಮಗೆ ಅದರ ಅವಶ್ಯಕತೆ ಇಲ್ಲ. ಇದೊಂದು ಮೊಬೈಲ್ ಸಾಕು” ಎನ್ನುತ್ತಾಳೆ.

"ಇನ್ನು ಅದಾದ ನಂತರದಲ್ಲಿ ಅತ್ಗೆ ಬರೋವರ್ಗು ಮಾತ್ರ ಅಣ್ಣನ್ ಹವಾ. ಇನ್ನು ಅತ್ಗೆ ಬಂದ್ಮೇಲೆ ಅವ್ರದ್ದೇ ಹವಾ" ಎಂದು ರಶ್ಮಿ ಹೇಳುತ್ತಾಳೆ. ಎಲ್ಲರೂ ಖುಷಿಯಿಂದ ನಗ್ತಾರೆ.

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ