Lakshmi Baramma: ಲಕ್ಷ್ಮೀಯನ್ನು ಹುಚ್ಚಿ ಎಂದು ಸಾಬೀತು ಮಾಡಲು ಲಂಚ ಕೊಟ್ಟ ಕಾವೇರಿ; ಈ ಸಂಕಷ್ಟದಿಂದ ಪಾರಾಗ್ತಾಳಾ ಲಕ್ಷ್ಮೀ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಲಕ್ಷ್ಮೀಯನ್ನು ಹುಚ್ಚಿ ಎಂದು ಸಾಬೀತು ಮಾಡಲು ಲಂಚ ಕೊಟ್ಟ ಕಾವೇರಿ; ಈ ಸಂಕಷ್ಟದಿಂದ ಪಾರಾಗ್ತಾಳಾ ಲಕ್ಷ್ಮೀ

Lakshmi Baramma: ಲಕ್ಷ್ಮೀಯನ್ನು ಹುಚ್ಚಿ ಎಂದು ಸಾಬೀತು ಮಾಡಲು ಲಂಚ ಕೊಟ್ಟ ಕಾವೇರಿ; ಈ ಸಂಕಷ್ಟದಿಂದ ಪಾರಾಗ್ತಾಳಾ ಲಕ್ಷ್ಮೀ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ಅವಮಾನ ಆಗಿದೆ. ಆದರೂ ಎಚ್ಚೆತ್ತುಕೊಳ್ಳದ ಕಾವೇರಿ ಮತ್ತೆ ಮೋಸ ಮಾಡಲು ಹೊರಟಿದ್ದಾಳೆ. ಲಕ್ಷ್ಮೀಯನ್ನು ಈ ಬಾರಿ ಕಾಪಾಡಲು ಯಾರು ಬರುತ್ತಾರೆ?

 ಲಕ್ಷ್ಮೀಯನ್ನು ಹುಚ್ಚಿ ಎಂದು ಸಾಬೀತು ಮಾಡಲು ಲಂಚ ಕೊಟ್ಟ ಕಾವೇರಿ
ಲಕ್ಷ್ಮೀಯನ್ನು ಹುಚ್ಚಿ ಎಂದು ಸಾಬೀತು ಮಾಡಲು ಲಂಚ ಕೊಟ್ಟ ಕಾವೇರಿ (ಕಲರ್ಸ್‌ ಕನ್ನಡ)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ಅವಮಾನ ಆಗಿದೆ. ಅವಳನ್ನೇ ರಾವಣ ಎಂದುಕೊಂಡು ಆಶ್ರಮದಲ್ಲಿ ಇರುವವರು ಬಾಣ ಬಿಟ್ಟಿದ್ದಾರೆ. ಇದರಿಂದ ಕಾವೇರಿಗೆ ನೂವೂ ಸಹ ಆಗಿದೆ. ಆದರೆ ಅದೆಲ್ಲವನ್ನೂ ಹೊರತು ಪಡಿಸಿ ಅವಳಿಗೆ ಇಲ್ಲೊಂದಷ್ಟು ಕೆಲಸ ಆಗಬೇಕಿದೆ. ಲಕ್ಷ್ಮೀ ನಾಳೆ ಪರೀಕ್ಷೆ ಮಾಡಿದಾಗ ಹುಚ್ಚಿ ಎಂದು ಪ್ರೂವ್ ಆಗಬೇಕು ಎಂದು ಕಾವೇರಿ ಆಶ್ರಮದ ಮುಖ್ಯ ಕಾರ್ಯನಿರ್ವಾಹಕರ ಹತ್ತಿರ ಹೇಳುತ್ತಾಳೆ. ಅವರನ್ನು ಒಪ್ಪಿಸುವ ಸಲುವಾಗಿ ಒಂದಷ್ಟು ಹಣವನ್ನೂ ನೀಡುತ್ತಾಳೆ. ಆದರೆ ಇದು ಹೊರಗಿನವರಿಗೆ ತಿಳಿಯಬಾರದು ಎಂದು ಗುಟ್ಟಾಗಿ ಹೇಳುತ್ತಾಳೆ. ಅವಳ ಮಾತನ್ನು ಕೇಳಿಸಿಕೊಂಡು ಎದುರಿಗಿದ್ದವಳು ಅನುಮಾನ ಮಾಡುತ್ತಾಳೆ.

ಲಕ್ಷ್ಮೀ ಹುಚ್ಚಿ ಎಂದು ಸಾಬೀತು ಪಡಿಸಲು ಅವಳಿಗೆ ಮನಸಿದೆಯಾ ಅಥವಾ ಕೊನೆ ಕ್ಷಣದಲ್ಲಿ ಕೈಕೊಡುತ್ತಾಳಾ? ಎಂದು ಅವಳ ಮುಖ ನೋಡಿದರೆ ಅರ್ಥ ಆಗುವುದಿಲ್ಲ. ಹೀಗಿರುವಾಗ ಇತ್ತ ಲಕ್ಷ್ಮೀ ಅತ್ತೆ ನನ್ನನ್ನು ಸರಿಯಾದ ಜಾಗಕ್ಕೆ ತಂದು ಬಿಟ್ಟಿದ್ದಾರೆ ಇನ್ನು ಮುಂದೆ ಯುದ್ಧ ಆರಂಭ ಮಾಡೋದೇ ಎಂದು ಹೇಳುತ್ತಾಳೆ. ಇವರೆಲ್ಲ ಏನು ಮಾಡುತ್ತಿದ್ದಾರೆ ಎಂದು ತಿಳಿಯದೆ ವೈಷ್ಣವ್ ಮಾತ್ರ ಕಂಗಾಲಾಗಿದ್ದಾನೆ.

ಆದರೆ ಯಾವಾಗಲೂ ಲಕ್ಷ್ಮೀಯನ್ನು ಕಾಪಾಡಲು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಅದೇ ರೀತಿ ಕಾವೇರಿ ಹಣ ಕೊಟ್ಟು ಹೋಗುವ ಸಂದರ್ಭದಲ್ಲಿ ಯಾರೋ ಹಿಂದಿನಿಂದ ಬಾಣ ಬಿಟ್ಟಿದ್ದಾರೆ. ಆ ಬಾಣ ಕಾವೇರಿಗೆ ನಾಟಿದೆ. ಅವಳ ಮುಖದಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿದೆ. ಆದರೆ ಆ ಬಾಣವನ್ನು ಯಾರು ಬಿಟ್ಟಿದ್ದಾರೆ ಎಂದು ಇದುವರೆಗೆ ರಿವೀಲ್ ಮಾಡಿಲ್ಲ. ಈ ಹಿಂದೆ ಲಕ್ಷ್ಮೀ ಅಪಾಯದಲ್ಲಿದ್ದಾಗ ದುರ್ಗಾ ಬಂದು ಕಾಪಾಡಿದ್ದಳು. ಈಗಲೂ ಮತ್ಯಾರೋ ಬಂದಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.