logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ನಲ್ಲಿ ಬಾಸ್‌ ದರ್ಶನ್‌ ನೆನಪಿಸಿಕೊಂಡ ರಜತ್‌; ಹೆಣ್ಮಕ್ಕಳ ಕೈಹಿಡದಂತೆ ಅಲ್ಲ, ಈ ಸೆಡೆಗಳನ್ನೆಲ್ಲ... ಬುಜ್ಜಿ ಮಾತಿಗಿಲ್ಲ ಕಡಿವಾಣ

ಬಿಗ್‌ಬಾಸ್‌ನಲ್ಲಿ ಬಾಸ್‌ ದರ್ಶನ್‌ ನೆನಪಿಸಿಕೊಂಡ ರಜತ್‌; ಹೆಣ್ಮಕ್ಕಳ ಕೈಹಿಡದಂತೆ ಅಲ್ಲ, ಈ ಸೆಡೆಗಳನ್ನೆಲ್ಲ... ಬುಜ್ಜಿ ಮಾತಿಗಿಲ್ಲ ಕಡಿವಾಣ

Praveen Chandra B HT Kannada

Nov 23, 2024 11:27 AM IST

google News

Bigg Boss Kannada: ನಾನು ದರ್ಶನ್‌ ಫ್ಯಾನ್‌, ಬಾಸ್‌ ನನಗೆ ಸ್ಪೂರ್ತಿಯೆಂದ ರಜತ್‌ ಬುಜ್ಜಿ

    • Bigg Boss Kannada 11: ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ದರ್ಶನ್‌ ಕುರಿತು ಅಭಿಮಾನ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಡಿಬಾಸ್‌ ಅಭಿಮಾನಿಗಳನ್ನು ಪುಳಕಗೊಳಿಸಿದೆ. ವೈಲ್ಡ್‌ಕಾರ್ಡ್‌ ಸ್ಪರ್ಧಿ ರಜತ್‌ ಬುಜ್ಜಿ ಅವರು ನನಗೆ ಬಾಸ್‌ ಸ್ಪೂರ್ತಿ ಎಂದಿದ್ದಾರೆ.
Bigg Boss Kannada: ನಾನು ದರ್ಶನ್‌ ಫ್ಯಾನ್‌, ಬಾಸ್‌ ನನಗೆ ಸ್ಪೂರ್ತಿಯೆಂದ ರಜತ್‌ ಬುಜ್ಜಿ
Bigg Boss Kannada: ನಾನು ದರ್ಶನ್‌ ಫ್ಯಾನ್‌, ಬಾಸ್‌ ನನಗೆ ಸ್ಪೂರ್ತಿಯೆಂದ ರಜತ್‌ ಬುಜ್ಜಿ

Bigg Boss Kannada 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ವೈಲ್ಡ್‌ಕಾರ್ಡ ಎಂಟ್ರಿಯಾಗಿ ಭರ್ಜರಿ ಎಂಟ್ರಿ ನೀಡಿದ ರಜತ್‌ ಬುಜ್ಜಿ ಅವರು ಸೆಡೆ ಎಂಬ ಪದ ಬಳಸಿದ ಕಾರಣಕ್ಕೆ ಒಂದಿಷ್ಟು ಪ್ರತಿರೋಧ ಕಾಣಿಸಿಕೊಂಡಿದ್ದು, ಇದು ನಾಮಿನೇಷನ್‌ ಪ್ರಕ್ರಿಯೆಯಲ್ಲಿಯೂ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ತನ್ನನ್ನು ಕಳಪೆ ಎಂದು ಹಲವು ಸ್ಪರ್ಧಿಗಳು ಹೇಳಿದಾಗ ರಜತ್‌ ಕೆರಳಿದ್ದಾರೆ. ಕಳಪೆ ಪಟ್ಟ ದೊರಕಿರುವ ಇವರಿಗೆ ಬಿಗ್‌ಬಾಸ್‌ ಮನೆಯೊಳಗೆ ಜೈಲು ಶಿಕ್ಷೆಯಾಗಿದೆ. ಜೈಲಿನೊಳಗೆ ಹೋದಾಗಲೂ ಕೋಪಗೊಂಡ ಮದಗಜದಂತೆ ಬುಸುಗುಟ್ಟುತ್ತ ಇದ್ದ ಇವರು ಬಳಿಕ ತುಸು ಶಾಂತವಾಗಿ "ಡಿಬಾಸ್‌"ನನ್ನು ಸ್ಮರಿಸಿದ್ದಾರೆ. ಪರೋಕ್ಷವಾಗಿ ನನಗೆ ಬಾಸ್‌ ಸ್ಪೂರ್ತಿ ಎಂದಿದ್ದಾರೆ. ಸಾಂಕೇತಿಕವಾಗಿ "ಚೈತ್ರಾ ಕುಂದಾಪುರ ನನ್ನ ಬಾಸ್‌, ಅವರೇ ನನಗೆ ಸ್ಪೂರ್ತಿ" ಎಂದು ಜಾಣತನದ ಹೇಳಿಕೆ ನೀಡಿದ್ದಾರೆ.

ಬಾಸ್‌ ನನಗೆ ಸ್ಪೂರ್ತಿ ಎಂದ ರಜತ್‌ ಬುಜ್ಜಿ

"ಕರೆಕ್ಟಾಗಿ ನಾನು ಬಾಸ್‌ನ ಆಯ್ಕೆ ಮಾಡಿಕೊಂಡಿದ್ದೇನೆ. ಬಾಸ್‌ ಬಗ್ಗೆ ನನಗೆ ತುಂಬಾ, ಅಪಾರವಾದ ಗೌರವವಿದೆ. ಅವರು ಹಾಕಿದ ಹೆಜ್ಜೆಯನ್ನು ಪಾಲಿಸಿಕೊಂಡು ಹೋಗ್ತಾ ಇರುತ್ತೇನೆ. ಅಂದರೆ, ಎಷ್ಟು ತೊಂದರೆಯಾದರೂ, ಎಷ್ಟು ಮಾಡಿದ್ರೂನು ಕಂಬ್ಯಾಕ್‌ ಮಾಡ್ತಾರಲ್ವ. ನಾನು ಅವರ ಶಿಷ್ಯ. ಖಂಡಿತಾ ನಾನು ಕಂಬ್ಯಾಕ್‌ ಮಾಡ್ತಿನಿ" ಎಂದು ರಜತ್‌ ಬುಜ್ಜಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ತನ್ನ ಹೇಳಿಕೆಯನ್ನು ದರ್ಶನ್‌ ಎನ್ನದೇ "ನಾನು ಚೈತ್ರಾ ಕುಂದಾಪುರ ಅವರ ಅಭಿಮಾನಿ. ಅವರೇ, ನನ್ನ ಬಾಸ್‌" ಎಂದಿದ್ದಾರೆ. ನಟ ದರ್ಶನ್‌ ಅವರು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ಸಮಯದಲ್ಲಿಯೂ ಸೋಷಿಯಲ್‌ ಮೀಡಿಯಾದಲ್ಲಿ ರಜತ್‌ ಹೇಳಿಕೆ ನೀಡಿ ತನ್ನ ಡಿಬಾಸ್‌ ಕಡೆಗೆ ತನ್ನ ಅಭಿಮಾನ ತೋರಿಸಿದ್ದರು.

ಕಳಪೆ ಪಟ್ಟ ದೊರಕಿದ ಬಳಿಕ ಜೈಲು ಉಡುಗೆ ತೊಟ್ಟು ಆಗಮಿಸಿದ ರಜತ್‌ "ತೋರಿಸ್ತಿನಿ, ಇನ್ನು ತೋರಿಸ್ತಿನಿ. ನಾನ್ಯಾರು ಎಂದು ತೋರಿಸ್ತಿನಿ" ಎಂದುಕೊಂಡು ಬರುತ್ತಾರೆ. ಆಗ ತ್ರಿವಿಕ್ರಮ್‌ ಅವರು ರಜತ್‌ನನ್ನು ಕೂಲ್‌ ಆಗಿಸಲು ಪ್ರಯತ್ನಿಸುತ್ತ ಒಳ್ಳೆಯ ಮಾತೊಂದನ್ನು ಹೇಳುತ್ತಾರೆ. "ರಜತ್‌, ಸ್ಟಿಲ್‌ ಲಾಂಗ್‌ ವೇ ಟು ಗೋ" ಎಂದು ಹೇಳುತ್ತಾರೆ. "ಲಾಂಗ್‌ ವೇ ತೋರಿಸ್ತಿನಿ, ಇವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಹೋಗೋದು. ಅಷ್ಟು ಈಸಿಯಾಗಿ ನಾನು ಹೋಗೋಲ್ಲ" ಎಂದು ಬಿಗ್‌ಬಾಸ್‌ ಜೈಲನ್ನು ಪ್ರವೇಶಿಸುತ್ತಾರೆ.

ಈ ಸಮಯದಲ್ಲಿ ಕೋಪದಿಂದ ಬುಸುಗುಟ್ಟುತ್ತಿದ್ದ ಬುಜ್ಜಿಯನ್ನು ಕೂಲ್‌ ಮಾಡಲು ಸಾಕಷ್ಟು ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ. "ಕೂಲ್ಡೌನ್‌, ಸ್ವಲ್ಪ ನೀರು ಕುಡಿರಿ" ಎಂದೆಲ್ಲ ಸಲಹೆ ನೀಡುತ್ತಾರೆ. ಇದಾದ ಬಳಿಕ ಜೈಲಿನ ಮೆಟ್ಟಿಲಿನಲ್ಲಿ ಕುಳಿತ ರಜತ್‌ "ಈ ಸೆಡೆಗಳನ್ನೆಲ್ಲ ಕಳುಹಿಸಿಬಿಟ್ಟೇ ನಾನು ಮನೆಗೆ ಹೋಗುವುದು. ನನಗೆ ಇರಿಟೇಟ್‌ ಆಗೋದು ಏನು ಗೊತ್ತಾ, ಅಖಾಡಕ್ಕೆ ಇಳಿಯಲು ತಾಖತ್‌ ಇಲ್ಲದೆ ಇರುವವರು, ನನ್ನ ಮಕ್ಕಳೆಲ್ಲ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ... ಬರಬೇಕಿತ್ತು ಅವತ್ತು, ಅಖಾಡದಲ್ಲಿ ಇಳಿದು ಮಾತನಾಡಬೇಕಿತ್ತು... ನಾನು ಬಂದ್ರೆ ಓಡೋ ಮಕ್ಕಳೆಲ್ಲ ಇವತ್ತು ನನ್ನ ನಾಮಿನೇಟ್‌ ಮಾಡ್ತಾರೆ. ಮಾಡ್ಲಿ ತೊಂದರೆಯಿಲ್ಲ. ತೋರಿಸ್ತಿನಿ, ಪಾಪ ಇಷ್ಟು ದಿನ ಹುಡುಗೀರ ಕೈ ಹಿಡಿಕೊಂಡು ಹೋಗ್ತಾ ಇದ್ರು (ಇದು ಕೂಡ ವಿವಾದಕ್ಕೆ ಎಡೆ ಮಾಡಿದ ಮಾತು). ನೆಕ್ಸ್ಟ್‌ ನನ್ನ ಕೈ ಕೊಡ್ತಿನಿ. ಅವಾಗ ಗೊತ್ತಾಗುತ್ತದೆ ಅಖಾಡದಲ್ಲಿ" ಎಂದು ರಜತ್‌ ಹೇಳುತ್ತಾರೆ.

ಹೆಂಗಸರ ಕೈಹಿಡಿದು ಹೋಗೋದಲ್ಲ, ಅಖಾಡಕ್ಕೆ ಬರ್ಲಿ

ರಜತ್‌ ಬುಜ್ಜಿ ಹೇಳಿದ ಈ ಮಾತು ಬಿಗ್‌ಬಾಸ್‌ ಮನೆಯೊಳಗೆ ಕಿಡಿ ಹಚ್ಚಿದೆ. ಈ ಮನೆ ತುಂಬಾ ಕಲಿಸುತ್ತೆ ಎಂದು ಅಡುಗೆಮನೆಯಲ್ಲಿ ಚೈತ್ರಾ ಹೇಳುತ್ತಾರೆ. ಅದಕ್ಕೆ ಐಶ್ವರ್ಯಾ "ಅಲ್ಲಾ ಚೈತ್ರಾಕ್ಕ, ಅವರು ಹೇಳಿದ್ದೇನು... ಹುಡುಗಿಯರ ಕೈ ಹಿಡಿದು ಹೋದಂತೆ ಈಸಿಯಲ್ಲ ಅಂದ್ರೆ... ಇಲ್ಲಿ ಹುಡುಗೀರನ್ನೂ ಕೆಳಮಟ್ಟದಲ್ಲಿ ಇಳಿಸಿ ಯೋಚನೆ ಮಾಡ್ತಾರೆ... ಹುಡುಗೀರು ತುಂಬಾ ಸಾಫ್ಟ್‌ ಅನ್ನೋ ರೀತಿಯಲ್ಲಿ ಮಾತನಾಡ್ತಾರೆ.." ಎಂದು ಐಶ್ವರ್ಯಾ ಹೇಳುತ್ತಾರೆ.

ಅದಕ್ಕೆ ಮಂಜು "ಅಲ್ಲೇ ಹೇಳಬಹುದಿತ್ತು. ಅವರ ತಾಯಿನೂ ಹೆಣ್ಣು... ಅವರ ವೈಫ್‌ನೂ ಹೆಣ್ಣು, ಮಗಳೂ ಹೆಣ್ಣು... ಹುಡುಗೀ ಕೈ ಹಿಡಿದುಕೊಂಡು ಹೋಗೋದೆಂದ್ರೆ ನಾವು ಫ್ರೆಂಡ್‌ ಆಗಿ ಕೈ ಹಿಡಿಯುತ್ತೇವೆ.. ಐವತ್ತು ದಿನ ನಾವು ಹೀಗೆ ಇದ್ವಿ. ಅವರು ಹೇಳಿದ್ರು ಅಂತ ನಾವು ಹೀಗೆ ಮಾಡೋದು ಬೇಡ" ಎಂದು ಮಂಜು ಹೇಳುತ್ತಾರೆ. "ಅಫೆಂಡ್‌ ಅಲ್ಲ, ಅದು ತಪ್ಪೇ, ಹಾಗೇ ಹೇಳೋದು ತಪ್ಪೇ" ಎಂದು ಐಶ್ವರ್ಯಾ ಹೇಳಿದಾಗ ಅದನ್ನು ಮಂಜು ಒಪ್ಪುತ್ತಾರೆ. ಈ ಹೇಳಿಕೆ ಮತ್ತು ಸೆಡೆ ಹೇಳಿಕೆ ಮತ್ತು ರಜತ್‌ ಬುಜ್ಜಿಯ ಇತರೆ ವಿಚಾರಗಳಿಗೆ ಇಂದಿನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಹೇಗೆ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ