logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಭೂಮಿಕಾಳ ಲವ್‌ ಲೆಟರ್‌ ನೋಡಿ ಕರುಬಿದ ಅತ್ತಿಗೆ ಅಶ್ವಿನಿ; ಇವರಿಬ್ಬರು ಒಂದಾಗಬಾರದು ಎಂದ ಶಕುಂತಲಾದೇವಿ

Amruthadhaare: ಭೂಮಿಕಾಳ ಲವ್‌ ಲೆಟರ್‌ ನೋಡಿ ಕರುಬಿದ ಅತ್ತಿಗೆ ಅಶ್ವಿನಿ; ಇವರಿಬ್ಬರು ಒಂದಾಗಬಾರದು ಎಂದ ಶಕುಂತಲಾದೇವಿ

Praveen Chandra B HT Kannada

Mar 31, 2024 07:00 AM IST

google News

ಪ್ರೇಮ ನಿವೇದನೆ ಮಾಡಲು ಗೌತಮ್‌ ಸಿದ್ಧತೆ

    • Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಶನಿವಾರದ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ತಮ್ಮ ಪ್ರೇಮ ನಿವೇದನೆ ಮಾಡಲು ಸಿದ್ಧರಾಗುತ್ತಿದ್ದಾರೆ. ಭೂಮಿಕಾ ಬರೆದ ಪ್ರೇಮಪತ್ರ ಅಶ್ವಿನಿ ಕಣ್ಣಿಗೆ ಬೀಳುತ್ತದೆ. ಅಮ್ಮನಿಗೆ ತಿಳಿಸಬೇಕೆಂದು ಅಲ್ಲಿಂದ ಹೋಗುತ್ತಾಳೆ. ಗೌತಮ್‌ ಅವರು ಪ್ರೇಮ ನಿವೇದನೆ ಮಾಡಲು ಪ್ರ್ಯಾಕ್ಟೀಸ್‌ ಮಾಡುತ್ತಿದ್ದಾರೆ.
ಪ್ರೇಮ ನಿವೇದನೆ ಮಾಡಲು ಗೌತಮ್‌ ಸಿದ್ಧತೆ
ಪ್ರೇಮ ನಿವೇದನೆ ಮಾಡಲು ಗೌತಮ್‌ ಸಿದ್ಧತೆ

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ನಿದ್ದೆಯಲ್ಲಿದ್ದಾಗ ಬಣ್ಣ ಹಚ್ಚಿದ ಭೂಮಿಕಾಳಿಗೆ ಮರುದಿನ ಬೆಳಗ್ಗೆ ಗೌತಮ್‌ ಕೂಡ ಬಣ್ಣ ಹಚ್ಚುತ್ತಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಅಪರ್ಣ ನೋಡುತ್ತಾರೆ. ಸ್ವಲ್ಪ ಹೊತ್ತಲ್ಲಿ ಆನಂದ್‌ ಕೂಡ ಅಲ್ಲಿಗೆ ಬರುತ್ತಾರೆ. ಸ್ನೇಹಿತನನ್ನು ಕಾಡುತ್ತಾರೆ. "ನಿಮ್ಮಿಬ್ಬರ ಲೈಫ್‌ ಇದೇ ರೀತಿ ಕಲರ್‌ಫುಲ್‌ ಆಗಿರಲಿ" ಎಂದು ಆನಂದ್‌ ಹೇಳುತ್ತಾನೆ.

ದಿವಾನ್‌ ಮನೆಯಲ್ಲಿ ಎಲ್ಲರೋ ಹೋಳಿ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಪಾರ್ಥ ಮತ್ತು ಇತರರು ಹಬ್ಬದ ಮೂಡ್‌ನಲ್ಲಿದ್ದಾರೆ. ದಿವಾನ್‌ ಮನೆಯಲ್ಲೂ ನೀರನ್ನು ಹಾಳು ಮಾಡೋದು ಬೇಡ ಎಂದು ಗೌತಮ್‌ ಹೇಳುತ್ತಾನೆ. ಎಲ್ಲರೂ ಒಪ್ಪುತ್ತಾರೆ. ನೀರಿನ ಮಹತ್ವದ ಕುರಿತೂ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಸೀರಿಯಲ್‌ ಮೂಲಕ ಬರಗಾಲದಲ್ಲಿ ನೀರಿನ ಮಹತ್ವವನ್ನು ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಲಾಗಿದೆ. "ಭೂಮಿಕಾನಿಂದಾಗಿ ಗೌತಮ್‌ ಕೂಡ ಮೋರಲ್‌ ಎಂದೆಲ್ಲ ಮಾತನಾಡುತ್ತಾನೆ" ಎಂದು ಶಕುಂತಲಾ ಉರಿದುಕೊಳ್ಳುತ್ತಾರೆ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಾರೆ. ಹೋಳಿ ಹಬ್ಬದ ಪ್ರಯುಕ್ತ ರಾಮರಸದ ಪಾರ್ಟಿ ಮಾಡೋಣ ಎಂದು ಆನಂದ್‌ ಹೇಳುತ್ತಾನೆ. ಗೌತಮ್‌ಗೆ ಭೂಮಿಕಾ ಕಿಸ್‌ ಮಾಡಿದ ಆ ದಿನದ ಘಟನೆ ನೆನಪಾಗುತ್ತದೆ. ರಾಮರಸ ಕುಡಿದರೆ ಅತ್ತಿಗೆ ಮುಂದೆ ಧೈರ್ಯವಾಗಿ ಪ್ರಪೋಸ್‌ ಮಾಡಬಹುದು ಎಂದೆಲ್ಲ ಹೇಳುತ್ತಾನೆ. "ನಾನು ಇವತ್ತೇ ಪ್ರಪೋಸ್‌ ಮಾಡ್ತಿನಿ, ಪ್ರಿಪೇರ್‌ ಆಗಿದ್ದೇನೆ" ಎಂದು ಗೌತಮ್‌ ಹೇಳುತ್ತಾರೆ. ಆಮೇಲೆ ಅಲ್ಲಿಂದ ಆನಂದ್‌ ಹೋಗುತ್ತಾನೆ. ಆತ ಹೋದ ಬಳಿಕ ಗೌತಮ್‌ ಅವರು ಪ್ರ್ಯಾಕ್ಟೀಸ್‌ ಮಾಡಲು ಆರಂಭಿಸುತ್ತಾರೆ.

ಇನ್ನೊಂದೆಡೆ ಅಪರ್ಣಾ ಮತ್ತು ಭೂಮಿಕಾ ಮಾತನಾಡುತ್ತಾರೆ. ನಮ್ಮ ಡುಮ್ಮ ಸರ್‌ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಅಲ್ವ ಎಂದು ಅಪರ್ಣಾ ಹೇಳುತ್ತಾಳೆ. ಅದಕ್ಕೆ "ಇದ್ರು ಇರಬಹುದು" ಎಂದು ಭೂಮಿಕಾ ಹೇಳುತ್ತಾಳೆ. ಅಪರ್ಣಾ ಒಂದಿಷ್ಟು ಪ್ರೀತಿಯ ಮಾತುಗಳನ್ನಾಡಿ ಹೋಗುತ್ತಾರೆ. ಇದಾದ ಬಳಿಕ "ಕಾಮನಬಿಲ್ಲು ಮೂಡಿದ್ದು ನಿಜವೇ, ನನ್ನ ಮನಸ್ಸಲ್ಲಿ ಇರೋದನ್ನು ಹೇಳಲೇಬೇಕು" ಎಂದು ಭೂಮಿಕಾ ಹೇಳುತ್ತಾಳೆ. "ನೇರವಾಗಿ ಹೇಳಲಾಗದು. ಬರಹದ ರೂಪದಲ್ಲಿ ಹೇಳ್ತಿನಿ" ಎಂದು ಭೂಮಿಕಾ ತನ್ನ ಭಾವನೆಗಳನ್ನು ಬರೆಯಲು ಆರಂಭಿಸುತ್ತಾರೆ. ಅತ್ತಿಗೆ ಏನೋ ಬರೆಯುತ್ತ ಇದ್ದಾರೆ ಎಂದು ಶಕುಂತಲಾದೇವಿ ಮಗಳು ಅಶ್ವಿನಿ ನೋಡ್ತಾಳೆ. ಬರೆಯೋದಾದ್ರೆ ಡೈರಿಯಲ್ಲಿ ಬರೆಯಬಹುದಿತ್ತು. ಬಾಂಡ್‌ ಪೇಪರ್‌ನಲ್ಲಿ ಬರೆಯುತ್ತ ಇದ್ದಾರೆ ಎಂದು ಯೋಚಿಸಿ ಅಲ್ಲಿಂದ ಹೋಗುತ್ತಾಳೆ. ಭೂಮಿಕಾ ಹೋದ ಬಳಿಕ ರೂಂನೊಳಗೆ ಹೋಗಿ ಅದನ್ನು ಓದುತ್ತಾಳೆ. "ಲವ್‌ ಲೆಟರಾ? ಅಣ್ಣ ಈ ಲೆಟರ್‌ ಓದಿ ಇಂಪ್ರೆಸ್‌ ಆದ್ರೆ ಅಷ್ಟೇ, ಇದನ್ನು ಮೊದಲು ಅಮ್ಮನಿಗೆ ಹೇಳಬೇಕು" ಎಂದು ಅಲ್ಲಿಂದ ಹೋಗುತ್ತಾಳೆ.

ಇನ್ನೊಂದೆಡೆ ಗೌತಮ್‌ ಪ್ರಪೋಸ್‌ ಮಾಡಲು ಪ್ರ್ಯಾಕ್ಟೀಸ್‌ ಮಾಡುತ್ತ ಇರುತ್ತಾನೆ. ಗೌತಮ್‌ ಅವರು ಆಫೀಸ್‌ನಲ್ಲಿ ಏಕಪಾತ್ರಭಿನಯ ಮಾಡುತ್ತಿದ್ದಾರೆ. ಒಂದು ಕಡೆ ನಿಂತರೆ ಭೂಮಿಕಾ. ಇನ್ನೊಂದು ಕಡೆ ನಿಂತರೆ ಗೌತಮ್‌. "ಗೌತಮ್‌ ಅವರೇ ಏನಕ್ಕೆ ಬರೋಕ್ಕೆ ಹೇಳಿದ್ದು" "ಭೂಮಿಕಾ ಇದನ್ನು ನಿಮಗೆ ಅಂತ ತಂದಿದ್ದು" ಎಂದೆಲ್ಲ ಪ್ರಾಕ್ಟೀಸ್‌ ಮಾಡ್ತಾ ಇರ್ತಾರೆ. ಗೌತಮ್‌ ಪ್ರ್ಯಾಕ್ಟೀಸ್‌ ಮಾಡೋದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ್‌ ಅಚ್ಚರಿ ಪಡುತ್ತಾನೆ. "ಓಹ್‌ ಮೈ ಗಾಡ್‌ ನನಗೆ ರೋಸ್‌ ಅಂದರೆ ತುಂಬಾ ಇಷ್ಟ" ಎಂದು ಭೂಮಿಕಾ ಹೇಳಿದಂತೆ ಗೌತಮ್‌ ಆಕ್ಟ್‌ ಮಾಡುತ್ತಾರೆ. "ಭೂಮಿಕಾ ಅವರೇ ನೀವು ಕೂಡ ರೋಸ್‌ ರೀತಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ" "ಐ ಲವ್‌ ಯು ಭೂಮಿಕಾ" ಎಂದೆಲ್ಲ ಪ್ರಿಪೇರ್‌ ಆಗ್ತಾ ಇದ್ದಾರೆ ಗೌತಮ್‌. ಕೊನೆಗೆ ಸಂತೋಷ ತಡೆಯಲಾರದೆ ಮರೆಯಲಿದ್ದ ಆನಂದ್‌ "ಸೂಪರ್‌ ಕಣೋ" ಎಂದು ಅಭಿನಂದಿಸುತ್ತಾನೆ. ಮುಂದಿನ ಸಂಚಿಕೆಯಲ್ಲಿ ಭೂಮಿಕಾಳಿಗೆ ಪ್ರಪೋಸ್‌ ಮಾಡಲು ಆಗುತ್ತ? ಅದಕ್ಕೆ ಯಾರಾದರೂ ಅಡ್ತಿಯಾಗ್ತರೋ ಎಂದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ