logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಗೌತಮ್‌-ಭೂಮಿಕಾ ಒಂದೇ ಹಾಸಿಗೆಯಲ್ಲಿ ಮಲಗಿದ್ರು, ಕರೆಂಟ್‌ ಹೋಯ್ತು; ಬೆಳಗ್ಗಿನ ತನಕ ಬಿಡಲೇ ಇಲ್ಲ ಡುಮ್ಮ ಸರ್‌

Amruthadhaare: ಗೌತಮ್‌-ಭೂಮಿಕಾ ಒಂದೇ ಹಾಸಿಗೆಯಲ್ಲಿ ಮಲಗಿದ್ರು, ಕರೆಂಟ್‌ ಹೋಯ್ತು; ಬೆಳಗ್ಗಿನ ತನಕ ಬಿಡಲೇ ಇಲ್ಲ ಡುಮ್ಮ ಸರ್‌

Praveen Chandra B HT Kannada

Jun 02, 2024 06:30 AM IST

google News

ಅಮೃತಧಾರೆ ಧಾರಾವಾಹಿ ಕಥೆ

    • Amruthadhaare Serial Yesterday Episode: ಅಮೃತಧಾರೆ ಧಾರಾವಾಹಿಯ ಶನಿವಾರ ಸಂಚಿಕೆಯಲ್ಲಿ ಅಜ್ಜಮ್ಮನಿಗೆ ಹೆದರಿ ಗೌತಮ್‌ ಮತ್ತು ಭೂಮಿಕಾ ಒಂದೇ ಹಾಸಿಗೆಯಲ್ಲಿ ಮಲಗಿದ್ದಾರೆ. ರಾತ್ರಿ ಇಬ್ಬರು ಕೈ ಕೈ ಹಿಡಿದುಕೊಂಡು ಮಲಗಿದ್ದಾರೆ. ಒಲವ ಪ್ರೇಮಧಾರೆಗೆ ಮುನ್ನುಡಿ ಬರೆದಿದ್ದಾರೆ.
 ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿ ಕಥೆ

Amruthadhaare Serial Yesterday Episode: ಗೌತಮ್‌ ಮತ್ತು ಭೂಮಿಕಾ ಒಟ್ಟಿಗೆ ಮಲಗುತ್ತಿಲ್ಲ. ಭೂಮಿಕಾ ನೆಲದ ಮೇಲೆ ಚಾಪೆಯಲ್ಲಿ ಮಲಗುತ್ತಾರೆ. ಗೌತಮ್‌ ಹಾಸಿಗೆ ಮೇಲೆ ಮಲಗುತ್ತಾರೆ. ಈ ಸತ್ಯ ಆನಂದ್‌ ಮೂಲಕ ಅಜ್ಜಮ್ಮನಿಗೆ ಗೊತ್ತಾಗಿದೆ. ಇವರಿಬ್ಬರು ಜೊತೆಯಾಗಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಈ ವಿಷಯ ಗೌತಮ್‌ ಮತ್ತು ಭೂಮಿಕಾರಿಗೆ ಸೂಚ್ಯವಾಗಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಗೌತಮ್‌ ಭೂಮಿಕಾರಿಗೆ ನೀವು ಹಾಸಿಗೆಯ ಮೇಲೆ ಮಲಗಿ ಎನ್ನುತ್ತಾನೆ. "ನಿಮಗೇನೂ ಅಭ್ಯಂತರ ಇಲ್ವ?" ಎಂದು ಭೂಮಿಕಾ ಕೇಳುತ್ತಾಳೆ. "ಇಲ್ಲ, ನಿಮಗೂ ಅಭ್ಯಂತರ ಇಲ್ಲ ತಾನೇ" ಎನ್ನುತ್ತಾನೆ. ಈ ಮೂಲಕ ಒಂದೇ ಹಾಸಿಗೆಯಲ್ಲಿ ಮಲಗುತ್ತಾರೆ. ಗೌತಮ್‌ ಆ ಕಡೆ ಮುಖ ಮಾಡಿ ಮಲಗುತ್ತಾರೆ. ಸಡನ್‌ ಕರೆಂಟ್‌ ಹೋಗುತ್ತಾರೆ. ಭಯದಿಂದ ಭೂಮಿಕಾಳ ಕೈ ಹಿಡಿದುಕೊಳ್ಳುತ್ತಾರೆ ಡುಮ್ಮ ಸಾರ್‌. ಹಿಡಿದ ಕೈಯನ್ನು ಭೂಮಿಕಾ ಸವರುತ್ತಾರೆ. ಸ್ವಲ್ಪ ಹೊತ್ತಲ್ಲಿ ಭೂಮಿಕಾಳಿಗೆ ನಿದ್ದೆ ಬರುತ್ತದೆ. ಕೈ ಬಿಡಿಸಿಕೊಳ್ಳಲು ಗೌತಮ್‌ ಪ್ರಯತ್ನಿಸಿದರೂ ಆಗೋದಿಲ್ಲ. ಸೋ ಮಗ್ಗಲು ಬದಲಾಯಿಸಲಾಗದೆ ಕಷ್ಟಪಡುತ್ತಾರೆ ಗೌತಮ್‌. ಕೈಬಿಡಿಸುವಲ್ಲಿ ಯಶಸ್ಸಾದರೂ ಮತ್ತೆ ಭೂಮಿಕಾಳ ಕೈ ಹಿಡಿಯುತ್ತಾರೆ. ಅದೇ ರೀತಿ ನಿದ್ದೆ ಮಾಡುತ್ತಾರೆ.

ಮರುದಿನ ಬೆಳಗ್ಗೆ ಮನೆ ಹಾಳ ಮಾವ ಶಕುಂತಲಾದೇವಿ ಕಡೆಗೆ ಓಡೋಡಿ ಬರುತ್ತಾನೆ. "ಗೌತಮ್‌ ಮತ್ತು ಭೂಮಿಕಾರನ್ನುಅಜ್ಜಿ ಒಂದು ಮಾಡುವ" ವಿಷಯ ಹೇಳುತ್ತಾರೆ ರಮಾಕೃಷ್ಣ. ಕೆಲಸದಾಕೆ ನೀಡಿದ ಮಾಹಿತಿ ಪ್ರಕಾರ ಅವರು ಒಂದೇ ರೂಂನಲ್ಲಿ ಒಂದೇ ಹಾಸಿಗೆಯಲ್ಲಿ ಮಲಗುತ್ತಾರೆ ಎಂಬ ಮಾಹಿತಿಯನ್ನೂ ನೀಡುತ್ತಾರೆ. ಸಹಜವಾಗಿ ಶಕುಂತಲಾದೇವಿ ಕೋಪಗೊಳ್ಳುತ್ತಾರೆ. ಈ ಮೂಲಕ ಶಕುಂತಲಾದೇವಿಯ ವಿಲನ್‌ ಕ್ಯಾರೆಕ್ಟರ್‌ ಅನ್ನು ಜೀವಂತವಾಗಿಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಬೆಳಗ್ಗಿನ ತನಕ ಕೈ ಹಿಡಿದೇ ಮಲಗಿದ ದಂಪತಿ

ಬೆಳಗ್ಗೆ ಭೂಮಿಕಾ ನಿದ್ದೆಯಿಂದ ಎದ್ದಾಗ ಕೈ ಗೌತಮ್‌ ಕೈಯಲ್ಲಿರುತ್ತದೆ. ಡುಮ್ಮ ಸರ್‌ ಅನ್ನು ಪ್ರೀತಿಯಿಂದ ನೋಡುತ್ತ ಇರುತ್ತಾರೆ. ಗೌತಮ್‌ ಕೂಡ ನಿದ್ದೆಯಿಂದ ಎದ್ದೇಳುತ್ತಾರೆ. ಕೈ ಬಿಡಿಸಿ ಸಾರಿ ಕೇಳುತ್ತಾರೆ. ರಾತ್ರಿ ಚೆನ್ನಾಗಿ ನಿದ್ದೆ ಬಂತಾ ಎಂದು ಕೇಳುತ್ತಾರೆ. "ತುಂಬಾ ದಿನಗಳ ನಂತರ ತುಂಬಾ ಚೆನ್ನಾಗಿ ನಿದ್ದೆ ಬಂತು" ಅಂತಾರೆ ಭೂಮಿಕಾ. "ನನಗೂ ಅಷ್ಟೇ" ಎನ್ನುತ್ತಾರೆ ಗೌತಮ್‌. "ಅಜ್ಜಿ ನಿನ್ನೆ ಮಾಡಿದ ಅವಾಂತರ ನೋಡಿ ಭಯವಾಗಿದೆ. ನಿಮಗೆ ಅಭ್ಯಂತರ ಇಲ್ಲಾಂದ್ರೆ ಯಾವಾಗಲೂ ಇಲ್ಲೇ ಮಲಗಿ" ಎನ್ನುತ್ತಾರೆ. "ನನಗೆ ಯಾವ ಅಭ್ಯಂತರನೂ ಇಲ್ಲ, ನಿಮಗೆ" ಎನ್ನುತ್ತಾರೆ ಭೂಮಿಕಾ. ಸೋ ಇನ್ಮುಂದೆ ನೆಲದ ಮೇಲೆ ಮಲಗುವ ಸೀನ್‌ ಇಲ್ಲ.

ಪಾರ್ಥನ ಭೇಟಿಯಾದ ಅಪ್ಪಿ ಖುಷಿಯಾಗಿದ್ದಾಳೆ. ಆ ಮದುವೆ ಕ್ಯಾನ್ಸಲ್‌ ಆಯ್ತು ಎನ್ನುತ್ತಾಳೆ. ಅಕ್ಕ ಹೇಳಿದ್ದಕ್ಕೆ ಅಮ್ಮ ಏನೂ ಹೇಳದೆ ಒಪ್ಪಿಕೊಂಡ್ರು ಅನ್ನುತ್ತಾಳೆ. ನಾನೇ ಅಕ್ಕನಿಗೆ ಹೇಳಿದ್ದು ಎಂಬ ವಿಚಾರ ಹೇಳೋದಿಲ್ಲ. ಯಾಕೆಂದರೆ, ಅಕ್ಕನಿಗೆ ಲವ್‌ ಸ್ಟೋರಿ ಗೊತ್ತಿಲ್ಲ ಎಂದುಕೊಂಡಿದ್ದಾಳೆ ಅಪ್ಪಿ. "ನೀನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಅಕ್ಕ ಕೇಳಿದ್ಲು. ನಾನು ನಿಮ್ಮನ್ನೇ ಮನಸ್ಸಲ್ಲಿಟ್ಟುಕೊಂಡು ಹೇಳಿದೆ" ಎನ್ನುತ್ತಾಳೆ.

ಅಜ್ಜಮ್ಮ ಡೌಟ್‌ನಲ್ಲಿದ್ದಾರೆ. ಆಪ್ತಮಿತ್ರ ಆ ರೀತಿ ಹೇಳಿದ್ದಾರೆ. ಇಲ್ಲಿ ಇವರಿಬ್ಬರು ಒಟ್ಟಿಗೆ ಮಲಗಿದ್ದಾರೆ ಎಂದುಕೊಂಡು ಅಜ್ಜಮ್ಮ ಆನಂದ್‌ಗೆ ಕಾಲ್‌ ಮಾಡುತ್ತಾರೆ. "ನೀವು ಬಾಗಿಲು ತಟ್ಟಿರ್ತಿರಿ. ಅವರಿಬ್ಬರು ನಿಜ ಅನ್ನೋ ರೀತಿ ಜತೆಗೆ ಮಲಗಿರುತ್ತಾರೆ. ನೀವು ಅದನ್ನೇ ನಿಜ ಅಂದುಕೊಳ್ಳುವಿರಿ" ಎಂದು ಆನಂದ್‌ ಪಿಟ್ಟಿಂಗ್‌ ಇಡುತ್ತಾನೆ. "ಭೂಮಿಕಾಳಿಗೆ ಅಂತ ಗೌತಮ್‌ ಮಲ್ಲಿಗೆ ಹೂವು ತಂದಿದ್ದನ್ನ ನೋಡಿದೆ" ಎಂದು ಅಜ್ಜಿ ಹೇಳಿದಾಗ ಆನಂದ್‌ಗೆ ಇನ್ನಷ್ಟು ಅಚ್ಚರಿಯಾಗುತ್ತದೆ. ಇದಾದ ಬಳಿಕ ಆನಂದ್‌ ಗೌತಮ್‌ನನ್ನು ವಿಚಾರಿಸುತ್ತಾನೆ. ಮನೆಯಲ್ಲಿ ಏನು ನಡೀತಾ ಇದೆ. ದಂಪತಿ ಒಟ್ಟಿಗೆ ಮಲಗಿದ್ರಂತೆ, ಮಲ್ಲಿಗೆ ಹೂವು ತಂದು ಕೊಟ್ರಂತೆ ಎನ್ನುತ್ತಾನೆ. "ಅಜ್ಜಿ ಜತೆ ಶಾಮೀಲು ಆಗಿದೆಯ" ಎಂದು ಕೇಳುತ್ತಾನೆ.

ಮನೆಯಲ್ಲಿ ಅಜ್ಜಮ್ಮ ಭೂಮಿಕಾರನ್ನು ವಿಚಾರಿಸುತ್ತಾರೆ. ಗುಂಡು ಏನು ಗಿಫ್ಟ್‌ ಕೊಟ್ಟ ಎಂದು ಕೇಳುತ್ತಾರೆ. "ಜೀವನದಲ್ಲಿ ಮರೆಯಲಾಗದ ಗಿಫ್ಟ್‌ ಕೊಟ್ರು. ನಂಗೆ ಒಂಥರ ಸಂಕೋಚ ಆಗುತ್ತದೆ" ಎಂದು ನಾಚಿಕೆ ತೋರ್ಪಡಿಸಿ ಓಡುತ್ತಾಳೆ ಭೂಮಿಕಾ. ಗುಂಡುನೇ ಕೇಳ್ತಿನಿ ಎಂದು ಅಜ್ಜಮ್ಮ ಗೌತಮ್‌ಗೆ ಕಾಲ್‌ ಮಾಡುತ್ತಾರೆ. "ನಿಮ್ಮಿಬ್ಬರ ನಡುವೆ ಏನೂ ನಡೆದೇ ಇಲ್ಲಂತೆ. ಅದಕ್ಕೆ ಅಲ್ಲಿಗೆ ಹೋದ್ರ" ಎಂದು ಅಜ್ಜಮ್ಮ ಸುಳ್ಳು ಹೇಳುತ್ತಾರೆ. ಈ ಸಮಯದಲ್ಲಿ ಕೆಮ್ಮಿನ ನಾಟಕವಾಡಿ ಗೌತಮ್‌ ಫೋನ್‌ ಕಟ್‌ ಮಾಡುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ